ಗಣೇಶ ಹಬ್ಬವನ್ನ ಯಾವ ಸಮಯದಲ್ಲಿ ಆಚರಿಸಬೇಕು; ಪಾಲಿಸಬೇಕಾದ ನಿಯಮಗಳೇನು? ಯಾವ ತಪ್ಪುಗಳನ್ನ ಮಾಡಬಾರದು?

ಯುವಕರಲ್ಲಿ, ಪುಟ್ಟ ಪುಟ್ಟ ಮಕ್ಕಳಲ್ಲೂ ಉತ್ಸಾಹದ ಚಿಲುಮೆ ಹುಟ್ಟಿಕೊಳ್ಳುವ ಹಬ್ಬ ಅಂದ್ರೆ ಗಣೇಶ ಹಬ್ಬ. ಗಣಪತಿ ಬಪ್ಪಾ ಮೊರಿಯಾ ಅಂತ ಜೈಕಾರಗಳನ್ನ ಕೂಗುತ್ತ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗಣೇಶನಿಗೆ ಭರ್ಜರಿ ಎಂಟ್ರಿ ಕೊಟ್ಟು, ಇಷ್ಟಾನುಸಾರ ಒಂದಷ್ಟು ದಿನಗಳ ಕಾಲ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪಿಸಿ ಗಣೇಶನಿಗೆ ಪೂಜೆ ಸಲ್ಲಿಸಿ, ಪ್ರಸಾದ ವಿನಿಯೋಗ ಮಾಡಿ ಊರಿನವರೆಲ್ಲ ಒಗ್ಗಟ್ಟಾಗಿ ಕೂಡಿ ಹಬ್ಬವನ್ನ ಮಾಡ್ತಾರೆ. ಇನ್ನು ಗಣೇಶ ಚತುರ್ಥಿಯು ಮಹಾರಾಷ್ಟ್ರದಲ್ಲಿ 12 ನೇ ಶತಮಾನದಲ್ಲಿ ಹುಟ್ಟಿಕೊಂಡಿದೆ ಎನ್ನುವ ನಂಬಿಕೆಯಿದೆ. ಈ ಹಬ್ಬವನ್ನು ಮರಾಠ ರಾಜ ಶಿವಾಜಿ ಮಹಾರಾಜರು ಜನಪ್ರಿಯಗೊಳಿಸಿದರು. ತಮ್ಮ ಜನರನ್ನು ಒಗ್ಗೂಡಿಸಲು ಮತ್ತು ಹಿಂದೂ ಸಂಸ್ಕೃತಿಯನ್ನು ಉತ್ತೇಜಿಸಲು ಈ ಹಬ್ಬವನ್ನು ಬಳಸಿದರು. ಆರಂಭದಲ್ಲಿ ಇದನ್ನು ಮಹಾರಾಷ್ಟ್ರದಲ್ಲಿ ಮಾತ್ರ ಆಚರಿಸಲಾಯಿತು ಆದರೆ ನಂತರ ಭಾರತ ಮತ್ತು ಪ್ರಪಂಚದ ಇತರ ಭಾಗಗಳಿಗೆ ಹರಡಿತು. ಭಾರತ, ನೇಪಾಳ, ಮಾರಿಷಸ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಈಗ ಹಬ್ಬವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ.

WhatsApp Group Join Now
Telegram Group Join Now

ಗಣೇಶ ಚತುರ್ಥಿಯು(Ganesha Chaturthi) ಹಿಂದೂ ಧರ್ಮದ ಪ್ರಮುಖ ಹಬ್ಬವಾಗಿದೆ. ಗಣೇಶ ಚತುರ್ದಶಿ, ವಿನಾಯಕ ಚತುರ್ದಶಿ ಅಥವಾ ಗಣೇಶ ಚತುರ್ಥಿ ಎಂದು ಕರೆಯಲ್ಪಡುವ ಈ ಹಬ್ಬವು ದೇಶದ ಪ್ರಮುಖ ರಜಾದಿನಗಳಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಭಾರತವು ಈ ಹಬ್ಬವನ್ನು ಅತ್ಯಂತ ವೈಭವದಿಂದ ಮತ್ತು ಉತ್ಸಾಹದಿಂದ ಆಚರಿಸುತ್ತದೆ. ಇನ್ನು ಈ ವರ್ಷ, ಗಣೇಶ ಚತುರ್ಥಿ ಸೆಪ್ಟೆಂಬರ್ 19 ರಿಂದ 28 ರವರೆಗೆ ನಡೆಯಲಿದೆ. ಕೆಲವೆಡೆ ಸೆಪ್ಟೆಂಬರ್‌ 18 ರಂದು ಕೂಡ ಹಬ್ಬ ಆಚರಿಸುತ್ತಾರೆ. ಹತ್ತು ದಿನಗಳ ಕಾಲ ನಡೆಯುವ ಈ ಹಬ್ಬವು ಗಣೇಶನ ಜನ್ಮವನ್ನು ಸುಂದರವಾಗಿ ಸ್ಮರಿಸುತ್ತದೆ ಮತ್ತು ಜನರು ಬುದ್ಧಿವಂತಿಕೆ, ಸಮೃದ್ಧಿ, ಅದೃಷ್ಟ ಮತ್ತು ಶುಭ ಫಲಕ್ಕಾಗಿ ಗಣೇಶನ ಆಶೀರ್ವಾದವನ್ನು ಕೋರಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಹಾಗದ್ರೆ 2023 ರ ಗಣೇಶ ಚತುರ್ಥಿ ಪೂಜೆಗೆ ಶುಭ ಮುಹೂರ್ತ ಯಾವುದು, ಪೂಜೆ ವಿಧಾನ, ಮಹತ್ವ, ನೈವೇದ್ಯಾ, ಆಚರಿಸುವ ವಿಧಾನಗಳ ಕುರಿತು ತಿಳಿದುಕೊಳ್ಳೋಣ.

ಹೌದು ಬುದ್ಧಿವಂತಿಕೆ, ಸಮೃದ್ಧಿ ಮತ್ತು ಅದೃಷ್ಟದ ದೇವರಾದ ಆನೆಯ ತಲೆಯುಳ್ಳ ಗಣೇಶನ ಜನ್ಮವನ್ನು ಗುರುತಿಸಲು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಗಣೇಶನು ಅಡೆತಡೆಗಳನ್ನು ನಿವಾರಿಸುತ್ತಾನೆ ಮತ್ತು ಅದೃಷ್ಟವನ್ನು ತರುತ್ತಾನೆ ಅನ್ನೋ ನಂಬಿಕೆಯ ಜೊತೆಗೆ ಈ ಹಬ್ಬವು ಹಿಂದೂಗಳು ಒಗ್ಗೂಡಲು ಹಾಗೂ ಅವರ ಸಂಸ್ಕೃತಿ ಮತ್ತು ಪರಂಪರೆಯನ್ನು ಆಚರಿಸಲು ಉತ್ತಮ ದಿನವಾಗಿದೆ. ಇನ್ನು ಈ ವರ್ಷ ಗಣೇಶ ಚತುರ್ಥಿ ಆರಂಭ ಆಗೋದು, 2023 ರ ಸೆಪ್ಟೆಂಬರ್ 18 ರಂದು ಮಧ್ಯಾಹ್ನ 12:39 ಕ್ಕೆ ಆರಂಭ ಆಗುತ್ತೆ. ಇನ್ನು ಗಣೇಶ ಚತುರ್ಥಿ 2023 ಮುಕ್ತಾಯದ ಸಮಯ ನೋಡೋದಾದ್ರೆ 2023 ರ ಸೆಪ್ಟೆಂಬರ್ 19 ರಂದು ಮಧ್ಯಾಹ್ನ 1:43 ಕ್ಕೆ ಮುಕ್ತಾಯಗೊಳ್ಳುತ್ತೆ. ಇನ್ನು ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲು ಶುಭ ಸಮಯ ನೋಡೋದಾದ್ರೆ, ಸೆಪ್ಟೆಂಬರ್ 19 ರಂದು ಮಧ್ಯಾಹ್ನ 11:01 ರಿಂದ ಸಂಜೆ 5:00 ರವರೆಗೆ ಒಳ್ಳೆ ಸಮಯ ಇದೆ. ಇನ್ನು ಚಂದ್ರ ದರ್ಶನ ನಿಷೇಧಿತ ಸಮಯ ಯಾವಾಗಪ್ಪ ಅಂದ್ರೆ 2023 ರ ಸೆಪ್ಟೆಂಬರ್ 18 ರಂದು ಮಧ್ಯಾಹ್ನ 1:00 ರಿಂದ ರಾತ್ರಿ 8:44 ರವರೆಗೆ ಇರುತ್ರೆ.

ನೈವೇದ್ಯ, ಮಂತ್ರ, ಮತ್ತು ಧರಿಸುವ ವಸ್ತ್ರ ಹೇಗಿರಬೇಕು?

ಇನ್ನು ನಿಮ್ಮ ಮನೆಗೆ ಬಂದು ಆಶೀರ್ವದಿಸುವಂತೆ ಗಣೇಶನನ್ನು ಆಹ್ವಾನಿಸುವ ಮೂಲಕ ಪೂಜೆಯನ್ನ ಆರಂಭಿಸಿ, ವಿಗ್ರಹದ ಮೇಲೆ ಸ್ವಲ್ಪ ನೀರು ಚಿಮುಕಿಸಿ ಮತ್ತು ಹೂವುಗಳನ್ನು ಅರ್ಪಿಸಿ. ಗಣೇಶ ಮಂತ್ರಗಳನ್ನು ಪಠಿಸುವಾಗ ಹೂವುಗಳು, ಧೂಪ ಮತ್ತು ದೀಪವನ್ನು ಅರ್ಪಿಸಿಬೇಕು, ಪೂಜೆಯ ಸಮಯದಲ್ಲಿ ಅವನ ಉಪಸ್ಥಿತಿಯನ್ನು ಸೂಚಿಸುವ ಭಗವಾನ್ ಗಣೇಶನಿಗೆ ಆಸನವನ್ನು ಅರ್ಪಿಸಿ, ಸ್ವಾಗತದ ಸೂಚಕವಾಗಿ ವಿಗ್ರಹದ ಪಾದಗಳನ್ನು ತೊಳೆಯಲು ನೀರನ್ನು ಅರ್ಪಿಸಿ, ಗಣೇಶನಿಗೆ ಕೈ ತೊಳೆಯಲು ನೀರನ್ನು ಅರ್ಪಿಸಿ, ವಿಗ್ರಹವನ್ನು ನೀರು, ಹಾಲು, ಮೊಸರು, ಜೇನುತುಪ್ಪ ಮತ್ತು ತುಪ್ಪದಿಂದ ಅಭಿಷೇಕ ಮಾಡಿ. ವಿಗ್ರಹವನ್ನು ಸ್ವಚ್ಛವಾಗಿ ಒರೆಸಿ, ವಿಗ್ರಹಕ್ಕೆ ಹೊಸ ಬಟ್ಟೆಗಳನ್ನು ಅರ್ಪಿಸಿ. ನಂತರ ವಿಗ್ರಹವನ್ನು ಹೂವುಗಳು, ಹೂಮಾಲೆಗಳು ಮತ್ತು ಆಭರಣಗಳಿಂದ ಅಲಂಕರಿಸಬೇಕು. ನಂತರ ಗಣೇಶನಿಗೆ ಆತಿಥ್ಯದ ಸಂಕೇತವಾಗಿ ಹಣ್ಣುಗಳು, ಸಿಹಿತಿಂಡಿಗಳು ಮತ್ತು ಇತರ ಭಕ್ಷ್ಯಗಳನ್ನು ಅರ್ಪಿಸುವುದು ಸೂಕ್ತ.

ಸ್ನೇಹಿತರೆ ಈ ವರ್ಷದ ಗಣೇಶ ಹಬ್ಬ ಸೋಮವಾರದ ದಿನ ಬಂದಿರೋದ್ರಿಂದ ನೀವು ಗಣೇಶನಿಗೆ ಬಿಳಿಯ ಹೂವುಗಳನ್ನ ಅರ್ಪಿಸೋದು ಬಹಳಷ್ಟು ಶ್ರೇಷ್ಠ ಅಂತ ಹೇಳಲಾಗುತ್ತಿದೆ ಅದರ ಜೊತೆಗೆ ಗಣೇಶನಿಗೆ ಬಹಳ ಪ್ರಿಯವಾದ ಕೆಂಪು ಹೂವುಗಳನ್ನು ಕೂಡ ಅರ್ಪಿಸಬೇಕಾಗುತ್ತದೆ ಏನು ಪೂಜೆ ಮಾಡುವವರು ಸಹ ಬಿಳಿಯ ಬಣ್ಣದ ವಸ್ತ್ರಗಳನ್ನು ತೊಟ್ಟು ಪೂಜೆಯನ್ನು ಸಲ್ಲಿಸಿದರೆ ನಿಮಗೆ ಅತಿ ಬೇಗನೆ ಫಲ ಸಿಗುತ್ತೆ ಅದರ ಜೊತೆಗೆ ಗಣೇಶನಿಗೆ ನೀವು ನೈವೇದ್ಯವಾಗಿ ಅರ್ಪಿಸ್ತಕಂತ ವಸ್ತುಗಳು ಕೂಡ ಬಿಳಿ ಬಣ್ಣದಿಂದ ಕೂಡಿದ್ರೆ ಅತ್ಯುತ್ತಮ ಫಲ ನಿಮ್ಮದಾಗುತ್ತೆ.

ಹಾಲುತುಪ್ಪದಿಂದ ಮಾಡಿದ ನೈವೇದ್ಯವನ್ನು ಗಣೇಶನಿಗೆ ನೀವು ಅರ್ಪಿಸುವುದು ಬಹಳಷ್ಟು ಶ್ರೇಷ್ಠ. ಇದರ ಜೊತೆಗೆ ನೀವು ಯಾವುದೇ ನೈವೇದ್ಯವನ್ನು ಮಾಡಿದರೂ ಕೂಡ ಪ್ರಥಮ ಪೂಜೆಗೆ ಬಿಳಿ ಬಣ್ಣದ ನೈವೇದ್ಯವನ್ನ ಅರ್ಪಿಸುವುದರಿಂದ ಗಣೇಶ ಬಹಳ ಬೇಗ ಪ್ರಸನ್ನನಾಗಿ ನಿಮಗೆ ಒಲಿ ತಾನೆ ಅಂತ ಹೇಳಲಾಗುತ್ತಿದೆ. ಹೀಗಾಗಿ ಗಣೇಶ ಚತುರ್ಥಿಯ ಈ ದಿನದಂದು ನೀವು ಬಹಳ ಶುಭ್ರವಾಗಿ ವಿನಮ್ರವಾಗಿ ಬಿಳಿಯ ಬಣ್ಣದ ವಸ್ತ್ರವನ್ನ ತೊಟ್ಟು ಗಣೇಶನಿಗೆ ಭಕ್ತಿ ಭಾವದಿಂದ ಪೂಜೆ ಮಾಡಿ ಪ್ರಸಾದವನ್ನು ಸಮರ್ಪಿಸಿದರೆ ಗಣೇಶ ಪ್ರಸನ್ನನಾಗಿ ನಿಮಗೆ ಒಲಿತಾನೆ ಅನ್ನುವ ನಂಬಿಕೆ ಇದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಇದನ್ನೂ ಓದಿ: ವೀಕೆಂಡ್ ನಲ್ಲಿ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ? ಈರುಳ್ಳಿ, ಟೊಮೆಟೊ, ಮೆಣಸಿನಕಾಯಿ ಬೆಲೆ ಇಳಿಕೆ

ಇದನ್ನೂ ಓದಿ: ಹೆಂಡತಿ ಕಾಟಕ್ಕೆ ಮನನೊಂದು ಮೆಟ್ರೋ ಎಂಜಿನಿಯರ್ ಸೂಸೈಡ್; ಸಾವಿಗೂ ಮುನ್ನ ಪೊಲೀಸರಿಗೆ ಹೇಳಬೇಡಿ ಅಂದುದ್ಯಾಕೆ ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram