ವಿನಾಯಕ ಚತುರ್ಥಿ ಸಮಯದಲ್ಲಿ ಈ ತಪ್ಪನ್ನ ಮಾಡಬೇಡಿ; ಅಪ್ಪಿ ತಪ್ಪಿಯು ಈ ತಪ್ಪನ್ನ ಮಾಡಿದ್ದೆ ಆದಲ್ಲಿ ಅಪಾಯ!

ಗೌರಿ-ಗಣೇಶ ಹಬ್ಬಕ್ಕೆ ನಮ್ಮ ಸಂಪ್ರದಾಯದಲ್ಲಿ ಬಹಳ ಪ್ರಾಮುಖ್ಯತೆ ಇದೆ. ಈ ದಿನ ಗಣೇಶನ ಪೂಜೆ ಮಾಡಿದರೆ ನಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಅನ್ನೊ ನಂಬಿಕೆಯಿಂದ ಗಣೇಶನಿಗೆ ವಿಶೇಷ ಪೂಜೆ ಪುನಸ್ಕಾರಗಳು ನೆರವೇರುತ್ತೆ. ಹೌದು ಈಗಾಗೆಲೆ ಗಣೇಶ ಹಬ್ಬದ ಆಚರಣೆಗೆ ಭಕ್ತರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ, ಈಗಾಗಲೇ ಮಾರುಕಟ್ಟೆಯಲ್ಲಿ ಗಣೇಶ ಗೌರಿ ಮೂರ್ತಿ ಖರೀದಿ ಭರದಿಂದ ಸಾಗಿದೆ. ವಿವಿಧ ರೀತಿಯ ಗಣೇಶ ಮೂರ್ತಿಗಳು ಮಾರುಕಟ್ಟೆಯಲ್ಲಿ ಜಗಮಗಿಸುತ್ತಿದೆ. ಜನರು ಸಹ ಇತರ ವಸ್ತುಗಳ ಖರೀದಿಯನ್ನ ಆರಂಭಿಸಿದ್ದಾರೆ. ಸದ್ಯ ಇಡೀ ದೇಶವೇ ಹಬ್ಬದ ಸಂಭ್ರಮದಲ್ಲಿದ್ದು, ಗಣೇಶನ ಸ್ವಾಗತ ಮಾಡಲು ಖುಷಿಯಿಂದ ಕಾಯುತ್ತಿದ್ದಾರೆ. ಹಬ್ಬದಂದು ಗಣೇಶನಿಗೆ ವಿಶೇಷ ನೈವೇದ್ಯ ಮಾಡಲಾಗುತ್ತದೆ. ಅಲ್ಲದೇ ಷೋಡಶೋಪಚಾರ ಸಹ ಮಾಡಲಾಗುತ್ತದೆ.

WhatsApp Group Join Now
Telegram Group Join Now

ಇನ್ನು ಗಣೇಶನಿಗೆ ಗರಿಕೆ ಎಂದರೆ ಬಹಳ ಇಷ್ಟ. ಹಾಗಾಗಿ ಹಬ್ಬದ ದಿನ ಸಾಮಾನ್ಯವಾಗಿ 11, 21 ಅಥವಾ 51 ಗರಿಕೆಯನ್ನ ಅರ್ಪಣೆ ಮಾಡಲಾಗುತ್ತದೆ. ನಂತರ ಗಣೇಶನ ಬಳಿ ಕಷ್ಟಗಳನ್ನ ನಿವಾರಣೆ ಮಾಡಿ, ಆಸೆಯನ್ನು ಈಡೇರಿಸುವಂತೆ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಆದರೆ ಈ ದಿನ ನಾವು ಕೆಲವೊಂದು ತಪ್ಪುಗಳನ್ನ ಮಾಡಿದರೆ ಸಮಸ್ಯೆಗಳಾಗುತ್ತದೆ. ವರ್ಷ ಪೂರ್ತಿ ವಿಘ್ನಗಳು ನಮ್ಮ ಬೆನ್ನಿಗೆ ಅಂಟಿಕೊಳ್ಳುತ್ತವೆ ಹಾಗಾದ್ರೆ ಈ ದಿನ ಮಾಡಬಾರದ ಕೆಲಸಗಳು ಯಾವುವು? ಆ ತಪ್ಪುಗಳಿಂದ ಏನಾಗುತ್ತೆ ನೋಡೋಣ ಬನ್ನಿ.

ಹೌದು ಗಣಪತಿಯ ಪೂಜೆ ಮಾಡುವುದರಿಂದ ಜೀವನದಲ್ಲಿನ ಎಲ್ಲಾ ಸಂಕಷ್ಟಗಳಿಂದ ಪರಿಹಾರ ಸಿಗುತ್ತದೆ ಅನ್ನೋ ನಂಬಿಕೆ. ಇನ್ನು ಗಣೇಶ ಚತುರ್ಥಿಯ ದಿನ ಕೆಲ ವಸ್ತುಗಳನ್ನ ನಾವು ಗಣೇಶನಿಗೆ ಅರ್ಪಣೆ ಮಾಡಬಾರದು. ಹೌದು ತುಳಸಿಯನ್ನು ಗಣೇಶನಿಗೆ ಅರ್ಪಣೆ ಮಾಡಬಾರದು. ತುಳಸಿಯನ್ನು ಯಾವಾಗಲೂ ವಿಷ್ಣುವಿಗೆ ಅರ್ಪಿಸಬೇಕು. ಪುರಾಣಗಳ ಪ್ರಕಾರ ತುಳಸಿ ಒಮ್ಮೆ ಗಣೇಶನ ಕಂಡು ಮದುವೆ ಆಗುವ ಆಸೆ ವ್ಯಕ್ತಪಡಿಸಿದ್ದಳು. ಆದರೆ ಅದನ್ನ ಗಣೇಶ ತಿರಸ್ಕರಿಸಿದನು. ಅದರ ನಂತರ ತುಳಸಿ ಗಣೇಶನಿಗೆ ಶಾಪ ಕೊಟ್ಟಿದ್ದಳು. ಹೀಗಾಗಿ ತನ್ನ ಯಾವ ಪೂಜೆ ತುಳಿಸಿಯನ್ನ ಬಳಸದಂತೆ ಗಣೇಶ ಹೇಳಿದ್ದರಿಂದ ತುಳಿಸಿಯನ್ನ ಯಾವುದೇ ಕಾರಣಕ್ಕೂ ಗಣೇಶ ಪೂಜೆಯಲ್ಲಿ ಬಳಸಬಾರದು.

ಇನ್ನು ಗಣೇಶ ಹಬ್ಬದಂದು(Ganesha Chaturthi) ಚಂದ್ರನನ್ನು ಯಾವುದೇ ರೀತಿಯಲ್ಲಿ ನೋಡಬೇಡಿ. ಇದು ನಿಮ್ಮ ಜೀವನದಲ್ಲಿ ಸಂಕಷ್ಟಗಳನ್ನು ತಂದೊಡ್ಡುತ್ತದೆ. ಗೊತ್ತಿದ್ದೋ ಗೊತ್ತಿಲ್ಲಡೆಯೋ ಮಾಡೋ ಈ ತಪ್ಪಿನಿಂದ ಇಲ್ಲಸಲ್ಲದ ಅಪವಾದಗಳನ್ನ ನೀವು ಎದುರಿಸಬೇಕಾಗುತ್ತದೆ. ವಿನಾಕಾರಣ ಕಳ್ಳತನಾದ ಆರೋಪವನ್ನ ಎದುರಿಸಬೇಕಾಗುತ್ತೆ, ಇನ್ನೊಂದಷ್ಟು ಅಪವಾದಗಳನ್ನ ನಿಮ್ಮ ಮೇಲೆ ಒರಿಸುತ್ತಾರೆ, ಜಾಗೃತಿ ಇರಲಿ. ಇನ್ನು ಪ್ರತೀಕಾರದ ಆಹಾರ ಅಂದ್ರೆ ಮಾಂಸಾಹಾರ, ಮದ್ಯಪಾನ ಮಾಡಬೇಡಿ. ಇದು ಜೀವನದಲ್ಲಿ ದೊಡ್ಡ ತೊಂದರೆ ತರಬಹುದು ಹೀಗಾಗಿ ಸಾಧ್ಯವಾದಷ್ಟು ಶುದ್ಧವಾಗಿ ಶಾಂತಿಯುತ ಮನಸ್ಸಿನಿಂದ ಪೂಜೆ ಮಾಡಿ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಹಬ್ಬದ ದಿನ ಏನೆಲ್ಲಾ ಮಾಡಬೇಕು?

ಇನ್ನು ಚೌತಿಯ ದಿನ ಮುಂಜಾನೆ ಸೂರ್ಯೋದಯಕ್ಕೂ ಮೊದಲು ಎದ್ದು ಪೂಜೆಯನ್ನು ಮಾಡುವುದು ಅತ್ಯುತ್ತಮ. ಹೌದು ಗಣೇಶ ಚತುರ್ಥಿಯ ದಿನ ಯಾವುದೇ ಕಾರಣಕ್ಕೂ ಜಾಸ್ತಿ ಹೊತ್ತು ಹಾಸಿಗೆ ಮೇಲೆ ಮಲಗಬಾರದು ಮುಂಜಾನೆಯ ಬೇಗ ಎದ್ದು ಮನೆಯನ್ನ ಶುಚಿಗೊಳಿಸಿ ದೇವರ ಪೂಜೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಜಾಸ್ತಿ ಹೊತ್ತು ನಿದ್ದೆ ಮಾಡೋದನ್ನು ಮಾಡೋದಕ್ಕೆ ಹೋಗಬೇಡಿ. ಇದರಿಂದ ಈ ವರ್ಷವಿಡಿ ನಿಮ್ಗೆ ವಿಘ್ನಗಳು ಬೆನ್ನಿಗೆ ಹತ್ತುತ್ತೆ. ಹೀಗಾಗಿ ಅನಾರೋಗ್ಯ ಪೀಡಿತರನ್ನ ಹೊರತುಪಡಿಸಿ ಆರೋಗ್ಯವಾಗಿರತಕ್ಕಂಥವರು ಬೆಳಿಗ್ಗೆ ಬೇಗನೆ ಎದ್ದು ಗಣೇಶನಿಗೆ ವಿಶೇಷ ಪೂಜೆಯನ್ನು ಸಲ್ಲಿಸಬೇಕು. ಇನ್ನು ಗಣೇಶನನ್ನ ಮನೆಯಲ್ಲಿ ಪ್ರತಿಷ್ಠಾಪನೆ ಮಾಡತಕ್ಕಂಥವರು ಗಣೇಶನ ಮನೆಗೆ ತರುವಾಗ ಎಚ್ಚರಿಕೆಯನ್ನು ವಹಿಸಬೇಕು ಮುಕ್ಕಾದ ಗಣೇಶನನ್ನು ಮನೆಗೆ ತರುವುದು ಅಪರಾಧ.

ಇದರ ಜೊತೆಗೆ ಸಾವಿನ ಸೂತಕ ಇರತಕ್ಕಂತವರು ಮುಟ್ಟಾಗಿರತಕ್ಕಂತವರು ಬೇರೆಯವರ ಮನೆಯಲ್ಲಿ ಮಾಡುವ ಗಣೇಶ ವ್ರತದಲ್ಲಿ ಪಾಲ್ಗೊಳ್ಳಬಾರದು ಇದರಿಂದ ಕಷ್ಟಗಳು ಕೂಡ ಈ ವರ್ಷವಿಡಿ ನಿಮ್ಮನ್ನ ಭಾದಿಸುತ್ತವೆ. ಏನು ಚೌತಿಯ ದಿನ ಆಗಿರಬಹುದು ಅಥವಾ ವರ್ಷದ 365 ದಿನಗಳೇ ಆಗಿರಬಹುದು ಯಾವುದೇ ಕಾರಣಕ್ಕೂ ಗುರುಹಿರಿಯರನ್ನ ಮಹಿಳೆಯರನ್ನ ಮಕ್ಕಳನ್ನ ನಿಂದಿಸಬಾರದು. ಅದರಲ್ಲೂ ಚೌತಿಯ ದಿನ ಮಾತ್ರ ಹೆಣ್ಣು ಮಕ್ಕಳನ್ನು ನಿಂದಿಸಲೇಬಾರದು ಇದರಿಂದ ಗಣೇಶನ ಅವಕೃತಿಗೆ ನೀವು ಪಾತ್ರರಾಗಬೇಕಾಗುತ್ತದೆ. ಹೀಗಾಗಿ ಗಣೇಶ ಜಯಂತಿಯ ದಿನ ಸಾಕಷ್ಟು ಎಚ್ಚರಿಕೆಯಿಂದ ಒಳ್ಳೆಯ ಮನಸ್ಸಿನಿಂದ ನೀವು ಪೂಜೆಯನ್ನು ಮಾಡಬೇಕಾಗುತ್ತದೆ ಗಣೇಶನ ನೀವು ಭಕ್ತಿಯಿಂದ ಪ್ರಾರ್ಥಿಸಿದರೆ ಸರ್ವ ಕಾರ್ಯದಲ್ಲೂ ಕೂಡ ನಿಮಗೆ ಸಿದ್ಧಿಯನ್ನು ಪ್ರಾಪ್ತಿಯಾಗುವಂತೆ ಗಣೇಶ ಮಾಡ್ತಾನೆ ಹೀಗಾಗಿ ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಲು ಹೋಗ್ಬೇಡಿ.

ಇದನ್ನೂ ಓದಿ: ಗಣೇಶ ಹಬ್ಬದಂದು ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ?

ಇದನ್ನೂ ಓದಿ: ಗೃಹಲಕ್ಷ್ಮೀ ಹಣ ಬಂದಿಲ್ಲ ಅಂದ್ರೆ, ಹಣ ಯಾವಾಗ ಬರುತ್ತೆ? ಹಣ ಜಮಾವಣೆ ಬಗ್ಗೆ ಲಕ್ಷ್ಮೀ ಹೆಬಾಳ್ಕರ್ ಅವ್ರು ಹೇಳಿದ್ದೇನು?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram