ಕನ್ನಡ ಕಿರುತೆರೆಯ ಕ್ಯೂಟ್ ನಟಿ ಪ್ರಿಯಾ ಜೆ ಆಚಾರ್ ಮತ್ತು ಹ್ಯಾಂಡ್ಸಮ್ ನಟ ಸಿದ್ದು ಮೂಲಿಮನಿ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದು ನಿಮ್ಮೆಲ್ಲರಿಗೂ ಗೊತ್ತಿದೆ ಆದ್ರಿಗ ಹೊಸ ವಿಚಾರ ಏನ್ ಗೊತ್ತಾ? ಸಿದ್ದು ಮೂಲಿ ಮನಿ ಹೊಸ ಲುಕ್ ಗೆ ಪ್ರಿಯಾ ಬೇಜಾರಾಗಿದ್ದಾರಂತೆ… ಹಾಗಾದ್ರೆ ಸಿದ್ದು ಹೊಸ ಲುಕ್ ಹೇಗಿದೆ.
ಕಳೆದ ಎರಡ್ಮೂರು ವರ್ಷಗಳಿಂದ ಪ್ರೀತಿ ಮಾಡ್ತಿದ್ದ ಈ ಜೋಡಿ ಇದೆ ಫೆಬ್ರವರಿ 12ರಂದು ಗುರುಹಿರಿಯರ ಸಮ್ಮುಖದಲ್ಲಿ ಕುಟುಂಬದವರನ್ನ ಒಪ್ಪಿಸಿ ಮದುವೆ ಆಗುವ ಮೂಲಕ ಹೊಸ ಜೀವನ ಆರಂಭಿಸಿದರು. ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಈ ‘ಕಿರುತೆರೆ ಲವ್ ಬರ್ಡ್ಸ್’ ಮದುವೆ ನಡೆದಿತ್ತು. ಕಳೆದ ನವೆಂಬರ್‌ನಲ್ಲಿ ಮನೆಯವರ ಒಪ್ಪಿಗೆ ಪಡೆದುಕೊಂಡು ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದ ಈ ಜೋಡಿ ವಿವಾಹದ ನಂತರ ಸಿನಿಮಾ ಹಾಗೂ ಕಿರುತರೆ ಲೋಕದಲ್ಲಿ ಸಖತ್ ಬ್ಯುಸಿ ಅಂಡ್ ಅಷ್ಟೇ ಆಕ್ಟಿವ್ ಆಗಿದ್ದಾರೆ.
ಗಟ್ಟಿಮೇಳ ಧಾರಾವಾಹಿ ಮೂಲಕ ಪ್ರಿಯಾ ಫೇಮಸ್ ಆದಂತಹ ಕಲಾವಿದೆ.. ಆದ್ರೆ ಅದಕ್ಕೂ
ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕ ಪ್ರಿಯಾ ಆಚಾರ್ ಪರಿಚಿತರಾದವರು. ನಂತರ ಗಟ್ಟಿಮೇಳ ಧಾರಾವಾಹಿಯಲ್ಲಿ ಅದಿತಿ ಪಾತ್ರ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಇದರಲ್ಲಿ ಅದಿತಿ ಪಾತ್ರ ಪ್ರಿಯಾ ಅವ್ರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ಆನಂತರ ‘ಆನಂದರಾಗಂ’ ಎಂಬ ತೆಲುಗು ಧಾರಾವಾಹಿಯಲ್ಲೂ ಪ್ರಿಯಾ ನಟಿಸಿದ್ದಾರೆ. ಜೊತೆಗೆ ‘ಧಮಾಕಾ’ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಸ್ಯಾಂಡಲ್‌ವುಡ್‌ಗೂ ಅವರು ಕಾಲಿಟ್ಟಿದ್ದಾರೆ. ವಿಶೇಷವೆಂದರೆ, ‘ಧಮಾಕಾ’ ಸಿನಿಮಾದಲ್ಲಿ ಸಿದ್ದು ಮೂಲಿಮನಿಗೆ ಪ್ರಿಯಾ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ರಿಯಲ್ ಲೈಫ್‌ನಲ್ಲೂ ಜೋಡಿಯಾಗಿದ್ದಾರೆ.
ಇನ್ನು, ಸಿದ್ದು ಮೂಲಿಮನಿ ಪಾರು ಧಾರವಾಹಿಯಲ್ಲಿ ಮಾಡಿದ್ದ ಪ್ರೀತಮ್ ಪಾತ್ರ ಎಲ್ಲರಿಗೆ ತುಂಬಾ ಇಷ್ಟ.. ಅಲ್ದೆ ಸ್ಯಾಂಡಲ್‌ವುಡ್‌ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಇವರು ಕಳೆದ ವರ್ಷ ನಟಿಸಿದ್ದ ‘ವಿಕ್ರಾಂತ್ ರೋಣ’, ‘ಓ’, ‘ಧರಣಿ ಮಂಡಲ ಮಧ್ಯದೊಳಗೆ’ ಮುಂತಾದ ಸಿನಿಮಾಗಳು ತೆರೆಕಂಡಿದ್ದವು. ಅದರಲ್ಲೂ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾದಲ್ಲಿನ ಸಿದ್ದು ನಟನೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯ ಅವರ ನಟನೆಯ ‘ಓಮಿನಿ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ‘ಧಮಾಕಾ’ ಸಿನಿಮಾದಲ್ಲಿ ಪ್ರಿಯಾ ಮತ್ತು ಸಿದ್ದು ಒಟ್ಟಿಗೆ ಕಾಣಿಸಿಕೊಂಡಿದ್ದ ‘ನಾನು ಹೋಗೋಕು ಮೊದ್ಲು..’ ಹಾಡು ಸಖತ್ ಹಿಟ್ ಆಗಿತ್ತು.ಇನ್ನು ಇದೀಗ ಸಿನಿಮಾ ದಲ್ಲಿ ಬ್ಯುಸಿ ಆಗಿರುವ ಸಿದ್ದು ಹೊಸ ಲುಕ್ ಪ್ರಿಯಾಗೇ ಇಷ್ಟವಿಲ್ವಂತೆ.
ಇದನ್ನು ಓದಿ : ದೊಡ್ಮನೆ ಅಭಿಮಾನಿಗಳಿಗೆ ಗುಡ್ ನ್ಯೂಸ್
ಆದ್ರೂ ಹೆಣ್ಮಕ್ಳುಗೆ ಮೀಸೆ ದಾಡಿ ಬಿಟ್ರೆ ಇಷ್ಟ ಆಗೋದು
ಹೌದು ಸಿದ್ದು ಇದೀಗ ಅಜ್ಞಾತವಾಸಿ ಅನ್ನೋ ಸಿನಿಮಾ ಚಿತ್ರೀಕರಣಕ್ಕಾಗಿ ತಮ್ಮ ಗಡ್ಡ ಹಾಗು ಮಿಸೆಯನ್ನ ತೆಗಿಸಿದ್ದು, ಆಗ ತೆಗೆದಿರುವ ಫೋಟೋ ಒಂದನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಪ್ರಿಯಾ ಕೂಡ ಫೋಸ್ ಕೊಟ್ಟಿದ್ದು, ಬಿಫೋರ್ ಆಫ್ಟರ್ ಎಂಬಂತೆ ಎರಡು ಫೋಟೋಗಳನ್ನ ಕೊಲಾಜ್ ಮಾಡಿ ಹಾಕಿದ್ದಾರೆ.. ಇದರಲ್ಲಿ ಗಂಡ ಮೀಸೆ ಇರುವಾಗ ಪ್ರಿಯ ಕ್ಯೂಟ್ ಸ್ಮೈಲ್ ಕೊಟ್ಟಿದ್ದು, ಗಡ್ಡ ಮೀಸೆ ತೆಗೆದ ನಂತರ ಅಳುವಂತೆ ಫೋಸ್ ಕೊಟ್ಟಿದ್ದಾರೆ.. ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ
ಒಟ್ಟಿನಲ್ಲಿ ಜೀವನದಲ್ಲಿ ತುಂಬಾ ಬೇಗ ಮದುವೆ ಅದ ಜೋಡಿ ಅಷ್ಟೇ ಬೇಗ ಚಂದನವನದಲ್ಲೂ ಅಷ್ಟೇ ಬೇಗ ಗುರುತಿಸಿಕೊಳ್ಳುತ್ತಿದ್ದೂ, ಹೀಗೆ ಇವ್ರ ಜೀವನ ಖುಷಿಯಾಗಿ ಯಶಸ್ವಿಯಾಗಿರಲಿ ಅನ್ನೋದು ಎಲ್ಲರ ಆಸೆ.
ಇದನ್ನು ಓದಿ : ಮುಕೇಶ್ ಅಂಬಾನಿಯ ಫ್ರೀ ಐಪಿಎಲ್ ಹಿಂದಿನ ಕರಾಳ ರಹಸ್ಯ