Geetha Bharathi Bhat: ಮತ್ತೆ ತೂಕ ಇಳಿಸಿಕೊಂಡ ಗುಂಡಮ್ಮ! ಗುರುತೆ ಸಿಗದಷ್ಟು ತೆಳ್ಳಗಾಗಿದ್ದಾರೆ ಗೀತಾ ಭಾರತಿ ಭಟ್..

Geetha Bharathi Bhat: ಗೀತಾ ಭಾರತಿ ಭಟ್‌, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಬ್ರಹ್ಮಗಂಟು’ ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರಿಗೆ ಪರಿಚಿತರಾದ ನಟಿ. ಗುಂಡಮ್ಮ ಎಂಬ ಪಾತ್ರದ ಹೆಸರಿಗೆ ತಕ್ಕಂತೆ ಗೀತಾ ಚಬ್ಬಿಯಾಗಿದ್ದರು. ಒಂದು ರೀತಿ ಅವ್ರು ಓವರ್ ವೇಟ್ ಇದದ್ದು ಅವ್ರಿಗೆ ಕಿರುತೆರೆಯಲ್ಲಿ ಅವಕಾಶ ಸಿಗುವಂತೆ ಮಾಡಿತ್ತು. ಹೀಗಾಗಿ ಗುಂಡಮ್ಮನ ಪಾತ್ರಕ್ಕೆ ಜೀವ ತುಂಬಿ ನಟಿಸಿ ಎಲ್ಲರಿಂದಲೂ ಶಹಬಾಷ್ ಅನ್ನಿಸಿಕೊಂಡಿದ್ರು. ಆದ್ರೂ ಎಲ್ಲೋ ಒಂದು ಕಡೆ ತಾವು ಅತಿಯಾದ ತೂಕ ಇರೋದೇ ತಮ್ಮ ಬೆಳವಣಿಗೆಗೆ ಮಾರಕವಾಗಬಹುದಾ ಅನ್ನೋ ಆಲೋಚನೆ ಕೂಡ ಭಾರತಿ ಅವ್ರನ್ನ ಕಾಡಿತ್ತು. ಹೌದು ಚಿತ್ರರಂಗ, ಕಿರುತೆರೆ ಎಲ್ಲಿ ನೋಡಿದರೂ ನಟಿಯರು ಹೆಚ್ಚಾಗಿ ಬಾಡಿ ಶೇಮಿಂಗ್‌ಗೆ ಒಳಗಾಗುತ್ತಲೇ ಇದ್ದಾರೆ. ಹಾಗೇ ಗೀತಾ ಕೂಡಾ ಸಾಕಷ್ಟು ಬಾರಿ ಬಾಡಿ ಶೇಮಿಂಗ್‌ಗೆ ಒಳಗಾಗಿದ್ದರು ಆದರೆ ಯಾವುದೇ ಪ್ರಯೋಜನವಾಗಿಲ್ಲ.

WhatsApp Group Join Now
Telegram Group Join Now

ಇದಕ್ಕೆ ಕಾರಣವನು ಇಷ್ಟೇ ತಮಗಾದ ಅವಮಾನ. ಇದರಿಂದ ನೊಂದ ಗೀತಾ, ಹೇಗಾದರೂ ಮಾಡಿ ತೂಕ ಇಳಿಸಲೇಬೇಕೆಂಬ ನಿರ್ಧಾರಕ್ಕೆ ಬರುತ್ತಾರೆ. ನಂತರ ಜಿಮ್‌ಗೆ ಸೇರಿ ಎಕ್ಸರ್ಸೈಸ್‌ ಮಾಡಿ ಬೆವರು ಸುರಿಸಿದರು, ಜೊತೆಗೆ ಡಯಟ್‌ ಮಾಡಿ ಈಗ ತೂಕ ಇಳಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಪ್ರತಿಯೊಂದರ ಬಗ್ಗೆ ಆಗಾಗ ಗೀತಾ ಭಾರತಿ ಭಟ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಶೂಟ್‌ ಮಾಡಿಸಿ ತಮ್ಮ ಪರಿಶ್ರಮದ ಬಗ್ಗೆ ಹಂಚಿಕೊಳ್ಳುತ್ತಿರುತ್ತಾತೆ. ಹೌದು ಈಗ ಗುಂಡಮ್ಮ ಸಣ್ಣಮ್ಮ ಆಗಿರೋದನ್ನ ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಹೌದು ಗೀತಾ ಈಗ ಸಾಕಷ್ಟು ಬದಲಾಗಿದ್ದಾರೆ. ಮೊದಲಿಗಿಂತ ಬಹಳ ಸಣ್ಣ ಆಗಿದ್ದಾರೆ.

ಇದನ್ನೂ ಓದಿ: ಗಟ್ಟಿಮೇಳ ವಿಕ್ರಾಂತ್ ಪಾತ್ರ ಅಂತ್ಯ! ಕೊನೆಯ ದಿನದ ಶೂಟಿಂಗ್ ನಲ್ಲಿ ಭಾವುಕರದ ಗಟ್ಟಿಮೇಳ ತಂಡ

ಗುಂಡಮ್ಮ ಇಷ್ಟು ಬೇಗ ಸಣ್ಣಮ್ಮ ಆಗಿದ್ದೇಗೆ ಗೊತ್ತಾ

ಹೌದು ಗೀತಾ ಭಾರತಿ ಭಟ್‌(Geetha Bharathi Bhat) ಉಡುಪಿ ಮೂಲದವರು. ತಾವು ಚಿಕ್ಕಂದಿನಲ್ಲಿ ಶಾಲೆಯ ಸ್ಪೋರ್ಟ್ಸ್‌ ಕಾಂಪಿಟೇಶನ್‌ ಒಂದರಲ್ಲಿ ಸ್ಪರ್ದಿಸಿದ್ರೂ, ಆಗ ಅಚಾನಕ್ಕಾಗಿ ಬಿದ್ದು, ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದ ನಂತರ ದಪ್ಪ ಆಗಲು ಶುರುವಾದ್ರಂತೆ ಇದರ ಬಗ್ಗೆ ಸಾಕಷ್ಟು ಬಾರಿ ಗೀತಾ ಹೇಳಿಕೊಂಡಿದ್ದಾರೆ. ಈ ಹಿಂದೆ ಅಂದ್ರೆ ಸಂಕ್ರಾಂತಿ ಸಮಯದಲ್ಲಿ ಗೀತಾ ಭಾರತಿ ಭಟ್‌ ಬರೋಬ್ಬರಿ 25 ಕೆಜಿಯಷ್ಟು ತೂಕ ಇಳಿಸಿಕೊಂಡಿದ್ರು. ಆಗ ಇನ್ನು ಅರ್ಧದಷ್ಟು ತೂಕ ಇಳಿಸಬೇಕೆಂಬ ಪಣ ತೊಟ್ಟಿದ ಗೀತಾ, ಮತ್ತೆ ಜಿಮ್‌ನಲ್ಲಿ ವರ್ಕೌಟ್‌ ಆರಂಭಿಸಿದ್ದರು, ಆದರೆ ಸತತವಾಗಿ ಪರಿಶ್ರಮದಿಂದ ಗುರಿಯನ್ನ ಬಿಡದ ಗೀತಾ ಈಗ ಮತ್ತಷ್ಟು ಸಣ್ಣ ಆಗಿದ್ದಾರೆ. ಹೌದು ಕಿರುತೆರೆ ಜೊತೆಗೆ ಕೆಲವೊಂದು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿರುವ ಗೀತಾ ಭಾರತಿ ಭಟ್‌, ಸ್ಯಾಂಡಲ್‌ವುಡ್‌ ಚಿತ್ರವೊಂದರಲ್ಲಿ ನಾಯಕಿಯಾಗಿ ನಟಿಸಲು ಆಯ್ಕೆ ಆಗಿದ್ದಾರೆ.

ಈ ಚಿತ್ರದಲ್ಲಿ ಗೀತಾ ಜೊತೆಗೆ ಪದ್ಮಜಾ ರಾವ್, ಕೃಷ್ಣಮೂರ್ತಿ ಕವತಾರ್, ಸಂಪತ್ ಮೈತ್ರೇಯ, ರಘು ಪಾಂಡೇಶ್ವರ್, ಖುಷಿ ಆಚಾರ್, ಮೀನಾ ಹಾಗೂ ಇನ್ನಿತರರು ನಟಿಸುತ್ತಿದ್ದಾರೆ. ಇನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಚಿತ್ರದ ಮುಹೂರ್ತ ನೆರವೇರಿತ್ತು, ಆದ್ರೆ ಟೈಟಲ್ ಫೈನಲ್‌ ಮಾಡದ ಈ ಚಿತ್ರಕ್ಕೆ ಸಂತೋಷ್‌ ಕೊಡಂಕೇರಿ, ಚಿತ್ರಕಥೆ ಬರೆದು ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಈ ಚಿತ್ರದಲ್ಲಿ ತೋರಿಸಲಾಗುವುದು ಅಂತ ಹೇಳಲಾಗಿತ್ತು, ಹೀಗಾಗಿಯೇ ಗೀತಾ, ನಾಯಕಿಯಾಗಿ ನಟಿಸುತ್ತಿರುವ ಮೊದಲ ಕನ್ನಡ ಸಿನಿಮಾದಲ್ಲಿ ತಾವು ಹೀಗೆ ಕಾಣಿಸಿಕೊಳ್ಳಬೇಕು ಅಂತ ಬಹಳ ಕಷ್ಟ ಪಟ್ಟು ಬೆವರಿಳಿಸಿ ಅಂದುಕೊಂಡಂತೆ ಮತ್ತಷ್ಟು ತೂಕ ಕಳೆದುಕೊಂಡಿದ್ದು, ಇದೀಗ ಗೀತಾ ಶೇರ್ ಮಾಡಿಕೊಂಡಿರುವ ಫೋಟೋಗಳು ಎಲ್ಲರಿಗೂ ಶಾಕ್ ನೀಡಿವೆ.

ಗುಂಡಮ್ಮನ ಪರಿಶ್ರಮಕ್ಕೆ ಫಿಧಾ ಆದ ನೆಟ್ಟಿಗರು ವಾವ್ ಅಂತಿದ್ದಾರೆ

ಹೌದು ಗುಂಡಮ್ಮನ ಪಾತ್ರದ ಮೂಲಕ ಜೀವ ತುಂಬಿ ನಟಿಸಿ ಗೀತಾ ಅಭಿಮಾನಿಗಳ ಮನ ಗೆದ್ದಿದ್ದರು. ಅಲ್ಲದೇ ಬಿಗ್ ಬಾಸ್ ಅಂಗಳಕ್ಕೆ ಕಾಲಿಟ್ಟು ಅಲ್ಲಿಂದಲೂ ಜನರಿಗೆ ಮತ್ತಷ್ಟು ಚಿರಪರಿಚಿತರಾದ್ರು. ಆಗಲೇ ಹೇಳಿದಂತೆ ಗೀತಾ ಭಟ್ ಕೆಲ ತಿಂಗಳುಗಳ ಹಿಂದೆ 25-30 ಕೆಜಿ ತೂಕ ಇಳಿಸಿಕೊಂಡಿದ್ದು ಸುದ್ದಿಯಾಗಿತ್ತು. ಆದ್ರೆ ಮತ್ತೆ ಈ ನಟಿ ತೂಕ ಇಳಿಸಿಕೊಂಡು ಸಣ್ಣ ಆಗಿದ್ದಾರೆ. ಇವರೇನಾ ನಮ್ಮ ಗುಂಡಮ್ಮ ಎಂದು ಫ್ಯಾನ್ಸ್ ಕೇಳುವಷ್ಟು ಗೀತಾ ಸಂಪೂರ್ಣ ಬದಲಾಗಿರುವಂತೆ ಕಾಣ್ತಿದ್ದಾರೆ. ಹೌದು ಸದ್ಯ ನಟಿ ಗೀತಾ ಭಾರತಿ ಭಟ್ ಸಾಮಾಜಿಕ ಜಾಲತಾಣದಲ್ಲಿ ಕೆಲ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ದಪ್ಪ ಕಾಣ್ತಾ ಇಲ್ಲ. ಅಲ್ಲದೇ ಗೀತಾ ಅವ್ರ ಫೋಟೋಗಳಿಗೆ 16 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಎಷ್ಟೊಂದು ಸಣ್ಣ ಆಗಿದ್ದೀರಿ, ನಂಬೋಕೆ ಆಗ್ತಾ ಇಲ್ಲ, ಇದು ನೀವೇನಾ?, ಫೋಟೋ ಎಡಿಟ್ ಮಾಡಿಲ್ಲ ತಾನೇ, ನಿಮ್ಮ ಡಯಟ್ ಗೆ ನಮ್ಮ ಸಲಾಂ ಅಂತೆಲ್ಲಾ ನೆಟ್ಟಿಗರು ಮತ್ತು ಫ್ಯಾನ್ಸ್ ಕಾಮೆಂಟ್ ಹಾಕಿದ್ದಾರೆ.

ಇದಕ್ಕೆ ಉತ್ತರಿಸಿರುವ ನಟಿ ಗೀತಾ ಅವರು ತಮ್ಮ ಡಯಟ್ ಬಗ್ಗೆ ಹೇಳಿಕೊಂಡಿದ್ದಾರೆ, ಪ್ರೋಟೀನ್ ಮತ್ತು ಫೈಬರ್ ಅಂಶ ಇರುವ ಆಹಾರ ಹೆಚ್ಚಿಗೆ ಸೇವಿಸಬೇಕು. ದಿನಕ್ಕೆ 4 ರಿಂದ 5 ಲೀಟರ್ ನೀರು ಕುಡಿಯಬೇಕು. ತಪ್ಪದೆ 7-8 ಗಂಟೆ ನಿದ್ರೆ ಮಾಡಬೇಕು. ಡಯಟ್ ಪ್ಲ್ಯಾನ್ ಮಾಡಿದ ಮೇಲೆ ಅದನ್ನು ತಪ್ಪದೇ ಪಾಲಿಸಬೇಕು. ಮೊದ ಮೊದಲು ಜೋಶ್ ಇರುತ್ತೆ. ಆಮೇಲೆ ಬೇಸರವಾಗುತ್ತೆ. ಅದನ್ನೆಲ್ಲಾ ಮೆಟ್ಟಿ ನಿಂತು ಡಯಟ್ ಮಾಡಬೇಕು. ಜಿಮ್‍ಗೆ ಹೋಗಿ ವರ್ಕೌಟ್ ಮಾಡಬಹುದು. ಆದ್ರೆ ಡಯಟ್ ಮಾಡೋದು ಕಷ್ಟ. ಎಲ್ಲರೂ ಪಾನಿಪೂರಿ, ಬಜ್ಜಿ ತಿಂತಾ ಇದ್ರೆ, ಅಯ್ಯೋ ನಾವು ಇವನ್ನೆಲ್ಲಾ ಬಿಟ್ಟು ಇನ್ನೂ ಬದುಕಿರಬೇಕಾ ಎನ್ನಿಸುತ್ತೆ. ಆ ಆಸೆಯನ್ನು ಬದಿಗಿಟ್ಟು ನಮ್ಮ ಡಯಟ್ ಮುಂದುವರಿಸಬೇಕು ಎಂದು ಗೀತಾ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಎಲ್ಲದಕ್ಕೂ ಸಾಧಿಸುವ ಛಲ ಇರಬೇಕು ಆಗ ಮಾತ್ರ ಸಾಧನೆ ಸಾಧ್ಯ ಅನ್ನೋದು ಗುಂಡಮ್ಮ ಆಗಿದ್ದ ಭಾರತಿ ಭಟ್ ಈಗ ಸಣ್ಣಮ್ಮ ಆಗಿರೋದೇ ಸಾಕ್ಷಿ.

ಇದನ್ನೂ ಓದಿ: ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ನಟ ಪ್ರಥಮ್.. ಹುಡುಗಿ ಯಾರು ನೋಡಿ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram