ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗೀತಾ ಧಾರಾವಾಹಿ ನಟ ಧನುಷ್ ಗೌಡ.

Geetha Serial actor Dhanush Gowda Marriage

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಗೀತಾ ಕೂಡ ಒಂದು. ಕೆಲವು ತಿಂಗಳುಗಳ ಹಿಂದೆ ಅಷ್ಟೇ ಗೀತಾ ಧಾರಾವಾಹಿ ಮುಗಿದಿದೆ. ಆದರೂ ಸಹ ಗೀತಾ ಧಾರಾವಾಹಿಯ ನಟ ನಟಿಯರಿಗೆ ಇರುವ ಕ್ರೇಜ್ ಕಡಿಮೆ ಆಗಲಿಲ್ಲ. ಹಿಂದೆ ಗೀತಾ ಧಾರಾವಾಹಿಯ ನಟ ಧನುಷ್ ಅವರು ಅದ್ಧೂರಿಯಾಗಿ engegement ಮಾಡಿಕೊಂಡಿದರು. ಈಗ ಏಪ್ರಿಲ್ 26 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

WhatsApp Group Join Now
Telegram Group Join Now

ನಟ ಧನುಷ್ ಮದುವೆ ಆಗುತ್ತಿರುವ ಹುಡುಗಿ ಯಾರು?

ಎಲ್ಲಾರೂ ಗೀತಾ ಸಿರಿಯಲ್ ನಲ್ಲಿ ಗೀತಾ ಪಾತ್ರ ಮಾಡಿರುವ ಭವ್ಯ ಗೌಡ ಅವರು ಮತ್ತು ಧನುಷ್ ಅವರು ಮದುವೆ ಆಗುತ್ತಾರೆ ಎಂದು ಅಂದುಕೊಂಡಿದ್ದರು. ಹಲವು ಮಾಧ್ಯಮಗಳ ಇಂಟರ್ವ್ಯೂ ನಲ್ಲಿಯೂ ನಾವು ಸ್ನೇಹಿತರು ಎಂಬ ಮಾತನ್ನು ಹೇಳಿದ್ದರು. ಅದರಂತೆಯೇ ನಟ ಧನುಷ್ ಅವರು ಮನೆಯಲ್ಲಿ ನೋಡಿದ ಅವರ ಸೋದರ ಅತ್ತೆ ಮಗಳನ್ನು ಮದುವೆ ಆಗಿದ್ದರೆ. ಅವರ ಹೆಸರು ಸಂಜನಾ. ಸಂಜನಾ ಅವರು ಯಾವ ವೃತ್ತಿ ಮಾಡುತ್ತಾ ಇದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

ನಟ ಧನುಷ್ ಮದುವೆಯಲ್ಲಿ ನಡೆದ ಶಾಸ್ತ್ರಗಳು ಯಾವುವು?: 

ನಟ ಧನುಷ್ ಅವರ ಮದುವೆಯ ಶಾಸ್ತ್ರಗಳು ಬಹಳ ಅದ್ದೂರಿಯಾಗಿ ನಡೆದಿವೆ.. ಸಂಜನಾ ಅವರು ಪಿಂಕ್ ಬಣ್ಣದ ಗೌನ್ ತೊಟ್ಟು ಮಿಂಚಿದ್ದಾರೆ. ಧನುಷ್ ಅವರು ಸಹ ಸಂಜನಾ ಉಡುಗೆಗೆ ಮ್ಯಾಚ್ ಆಗುವಂತೆ ಡ್ರೆಸ್ ಮಾಡಿಕೊಂಡಿದ್ದಾರೆ. ಬಾಳೆ ಶಾಸ್ತ್ರ ಅರಿಶಿನ ಶಾಸ್ತ್ರ ಗೌರಿ ಪೂಜೆ ಹೀಗೆ ಎಲ್ಲ ಶಾಸ್ತ್ರಗಳು ಬಹಳ ಅದ್ದೂರಿಯಾಗಿ ನಡೆದಿದೆ.

ಮದುವೆ ನಡೆದ ಸ್ಥಳ ಯಾವುದು?

ಧನುಷ್ ಮತ್ತು ಸಂಜನಾ ಅವರ ಮದುವೆ ಬೆಂಗಳೂರಿನ ಬೆಂಗಳೂರಿನಲ್ಲಿ ಬಹಳ ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದಾರೆ. ಇವರ ವಿವಾಹಕ್ಕೆ ಚಿತ್ರರಂಗದ ಹಲವಾರು ಗಣ್ಯರು ಸಿರಿಯಲ್ ನಟ ನಟಿಯರು ಆಗಮಿಸಿ ನೂತನ ವಧು ವರರಿಗೆ ಶುಭಾಶಯ ಕೋರಿದ್ದಾರೆ.

ಗ್ರ್ಯಾಂಡ್ ರೆಸಿಪ್ಷನ್ 

ನಿನ್ನೆ ರಿಸೆಪ್ಷನ್ ನಲ್ಲಿ ಧನುಷ್ ಮತ್ತು ಸಂಜನಾ ಹಳದಿ ಬಣ್ಣದ ಕಾರ್ ನಲ್ಲಿ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಧನುಷ್ ಅವರು ಕಲ್ಲಿ ಬ್ಯಾಡ ಶರ್ಟ್ ಮತ್ತು ಕೋಟ್ ಧರಿಸಿದ್ದಾರೆ. ಸಂಜನಾ ಅವರು ಕೆಂಪು ಬಣ್ಣದ ಗೌನ್ ಹಾಕಿಕೊಂಡಿದ್ದರು. ಗೀತಾ ಸಿರಿಯಲ್ ಹಾಗೂ ಕಲರ್ಸ್ ಕನ್ನಡದ ಬೇರೆ ಬೇರೆ ಸೀರಿಯಲ್ ನಟ ನಟಿಯರು ಆಗಮಿಸಿದ್ದರು.

ಇದನ್ನೂ ಓದಿ: ಅತ್ಯುನ್ನತ ಮೈಲೇಜ್ ಅನ್ನು ಹೊಂದಿರುವ ನಾಲ್ಕು ಪೆಟ್ರೋಲ್ ವಾಹನಗಳು ಕೇವಲ 4 ಲಕ್ಷದಿಂದ ಪ್ರಾರಂಭ!

ಈಗ ಧನುಷ್ ಅವರು ಏನು ಮಾಡುತ್ತಿದ್ದಾರೆ.

ಗೀತಾ ಸೀರಿಯಲ್ ಮೂಲಕ ಮನೆ ಮಾತಾದ ಧನುಷ್ ಅವರು ಗೀತಾ ಸೀರಿಯಲ್ ಮುಗಿದ ಬಳಿಕ ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಮದುವೆಯ ಬಳಿಕ ಮತ್ತೆ ಸೀರಿಯಲ್ ನಲ್ಲಿ ನಟಿಸಬಹುದು ಎಂಬ ಮಾಹಿತಿ ಇದೆ. ಸೀರಿಯಲ್ ಗಳಲಿ ಪಾತ್ರ ಮಾಡುವ ನಟ ನಟಿಯರು ಮದುವೆ ಆಗುತ್ತಾರೆ. ಇವರ ಮಧ್ಯ ಪ್ರೇಮ ಇದೆ ಎಂಬ ಮಾತುಗಳು ಸದಾ ಕೇಳಿ ಬರುತ್ತವೆ. ಆದರೆ ಅದು ಅವರ ವೃತ್ತಿ ಅಷ್ಟೇ ಆಗಿರುತ್ತದೆ. ವೃತ್ತಿ ಜೀವನದಲ್ಲಿ ಇರುವಂತೆಯೇ ವೈಯಕ್ತಿಕ ಬದುಕಿನಲ್ಲಿ ಇರಲು ಸಾಧ್ಯವಿಲ್ಲ. ಈ ಹಿಂದೆಯೂ ಹಲವಾರು ಸೀರಿಯಲ್ ನಲ್ಲಿ ಆಕ್ಟ್ ಮಾಡುವ ನಟ ನಟಿಯರು ಪ್ರೇಮಿಸುತ್ತ ಇದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಅದು ಕೇವಲ ಪರದೆಯ ಮುಂದೆ ಅಷ್ಟೇ ಎಂದು ನಟ ನಟಿಯರು ಹೇಳಿದರು ಸಹ ಸುಳ್ಳು ಸುದ್ದಿಗಳು ಹಬ್ಬುವುದು ನಿಲ್ಲುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಗಳ ಮಾಹಿತಿ ಇಲ್ಲಿದೆ