Chandraprabha Wedding: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾಸ್ಯ ಕಾರ್ಯಕ್ರಮ ‘ಮಜಾಭಾರತ’ ಮೂಲಕ ಕನ್ನಡಿಗರ ಮನೆ ಮಾತಾದ ಕಾಮಿಡಿ ಕಲಾವಿದ ಚಂದ್ರಪ್ರಭು. ತಮ್ಮದೇ ವಿಶಿಷ್ಠ ಶೈಲಿಯ ಡ್ಯಾನ್ಸ್ ಮೂಲಕ ಚಿರಪರಿಚಿತರಾದ್ರು. ನಂತರ ಗಿಚ್ಚಿ ಗಿಲಿಗಿಲಿ ಹಾಗೂ ಗಿಚ್ಚಿ ಗಿಲಿಗಿಲಿ ಸೀಸನ್ 2 ಕಾರ್ಯಕ್ರಮಗಳಲ್ಲಿ ಹಾಸ್ಯದ ಹೊನಲನ್ನು ಹರಿಸುತ್ತಿರುವ ಚಂದ್ರಪ್ರಭ ದಾಂಪತ್ಯ ಜೀವನಕ್ಕೆ ಕಾಲಿತ್ತಿದ್ದಾರೆ ಹೌದು ಬಹಳ ಗೌಪ್ಯವಾಗಿಯೇ ಚಂದ್ರಪ್ರಭಾ ಮದುವೆಯಾಗಿದ್ರು. ನಂತರ ಅಭಿಮಾನಿಗಳು ಹಾಗೂ ಆಪ್ತರಿಗೂ ಇದು ನಿಜಾನಾ ಅಂತ ಒಮ್ಮೆಲೇ ಅಚ್ಚರಿಯು ಕೂಡ ಆಯ್ತು ಹೌದು ಅದಕ್ಕೆ ಕಾರಣ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಂತಹ ಫೋಟೋಗಳು. ಚಂದ್ರಪ್ರಭ ಅವರ ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಭಾರತಿ ಪ್ರಿಯಾ ಅನ್ನುವವರನ್ನು ಚಂದ್ರಪ್ರಭ ಮದುವೆಯಾಗಿದ್ದಾರೆ ಅನ್ನೋದು ಗೊತ್ತಾಗಿದೆ. ಅಲ್ಲದೇ ಮದುವೆಯ ಫೋಟೋಗಳನ್ನ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಭಾರತಿ ಪ್ರಿಯಾ ಅವ್ರೆ ಹಂಚಿಕೊಂಡಿದ್ದರು ಹೀಗಾಗಿ ಚಂದ್ರಪ್ರಭಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಖಾತರಿ ಆಯ್ತು. ಇನ್ನು ಇದೀಗ ಮತ್ತೊಂದು ಇಂಟರ್ಸ್ಟ್ಟಿಂಗ್ ವಿಷಯ ಏನಪ್ಪಾ ಅಂದ್ರೆ ಚಂದ್ರಪ್ರಭಾ ಹಾಗೂ ಭಾರತಿ ಪ್ರಿಯಾ ಮತ್ತೊಮ್ಮೆ ಮದುವೆಯಾಗಿದ್ದಾರೆ ಅದು ಕೂಡ ಗಿಚ್ಚಿ ಗಿಲಿ ಗಿಲಿ ವೇದಿಕೆಯಲ್ಲಿ. ಹೌದು ಇದೀಗ ಈ ಮದುವೆಯ ಕುರಿತಾ ಪ್ರೋಮೊ ಒಂದು ಔಟ್ ಆಗಿದ್ದು ಸಾಕಷ್ಟು ವೈರಲ್ ಕೂಡ ಆಗ್ತಿದೆ. ಆ ಪ್ರೋಮೊದಲ್ಲಿ ಒಂದು ವಿಚಾರವನ್ನ ಹೇಳುತ್ತಲೇ ಚಂದ್ರಪ್ರಭಾ ಕಣ್ಣಾಲೆ ನೀರು ತುಂಬಿಕೊಂಡು ಭಾವುಕಾರಾಗಿದ್ದಾರೆ.
ಚಂದ್ರಪ್ರಭಾ ಅವರಿಗೆ ಮದುವೆಗೆ ಮೀರಿ ವಯಸ್ಸಾಗಿತ್ತು,ಮದುವೆ ಮಾಡಿಕೊಳ್ಳುವ ಯುವಕರ ವಯಸ್ಸು ದಾಟಿದ್ದರು, ಹುಡುಗಿ ಸಿಗುತ್ತಿಲ್ಲ ಅನ್ನೋ ಕಾರಣಕ್ಕೆ ಚಂದ್ರಪ್ರಭಾ ಮದುವೆಯಾಗದೆ ಆಗೇ ಉಳಿದಿದ್ರು.ಇನ್ನು ಮದುವೆ ತಡವಾಗ್ತಿರೋದು ಆರಂಭದಲ್ಲಿ ಸೀರಿಯಸ್ ವಿಚಾರವಾದ್ರೂ ಕಾಮಿಡಿ ವೇದಿಕೆಯಲ್ಲಿ ಮಾತನಾಡಲು ಒಂದು ವಿಚಾರ ಆಯ್ತು..ಅಲ್ಲದೇ ಕೊನೆ ಕೊನೆಯಲ್ಲಿ ಮಾಡುವ ಕಾಮಿಡಿ ಸ್ಕಿಟ್‌ನಲ್ಲಿ ಇದೂ ಒಂದು ಕಾಮಿಡಿ ಆಯ್ತು. ಎಷ್ಟರ ಮಟ್ಟಕ್ಕೆ ಕಾಮಿಡಿ ಅಂದ್ರೆ ಚಂದ್ರಪ್ರಭಾ ಮದುವೆ ಮಾಡಿಕೊಂಡಿಲ್ಲ ಹುಡುಗಿ ಬೇಕು ಅನ್ನೋ ವಿಚಾರ ಪುಟ್ಟ ಮಕ್ಕಳಿಗೂ ಗೊತ್ತಾಗಲೂ ಶುರುವಾಯ್ತು. ಚಂದ್ರಣ್ಣ ಮದುವೆ ಆದ್ರೆ ಸಾಕು ಅಂತ ಕಾಯುತ್ತಿದ್ದವರಿಗೆ ಚಂದ್ರಪ್ರಭ ಗುಡ್ ನ್ಯೂಸ್ ಕೊಟ್ಟಿದ್ರು. ಹೌದು ಚಂದ್ರಪ್ರಭ ಕೆಲವು ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಭಾರತಿ ಪ್ರಿಯಾ ಅವ್ರ ಕೈ ಹಿಡಿದು ಎಲ್ಲರಿಗೂ ಶಾಕ್ ಕೊಡುವುದರ ಜೊತೆಗೆ ಖುಷಿ ಪಡಿಸಿದ್ರು.
ಇದನ್ನೂ ಓದಿ: ಚಂದನವನಕ್ಕೆ ಗುಡ್ ಬೈ ಹೇಳಿದ್ರ ಜೆ.ಕೆ, ಇಂಡಸ್ಟ್ರಿ ಸಹವಾಸ ಸಾಕು ಅಂತ ಹೇಳಿದ್ದೇಕೆ
ಮತ್ತೊಮ್ಮೆ ಮದುವೆಯಾದ ಚಂದ್ರಪ್ರಭಾ ಹಾಗೂ ಭಾರತಿ ಪ್ರಿಯಾ
ಇನ್ನು ಮದುವೆಯನ್ನ ಬಹಳ ಸಿಂಪಲ್ ಆಗಿ ಯಾರಿಗೂ ಸುಳಿವು ಸಿಗದ ಆಗೇ ಮಾಡಿಕೊಂಡಿದ್ರು ಹೀಗಾಗಿ ಗಿಚ್ಚಿ ಗಿಲಿಗಿಲಿ ಸೀಸನ್ 2ರ ಗ್ರ್ಯಾಂಡ್ ಫಿನಾಲೆ ದಿನ ವೇದಿಕೆ ಮೇಲೆ ಮತ್ತೊಮ್ಮೆ ನವ ಜೋಡಿಗಳನ್ನು ಕರೆಸಿ ಮತ್ತೊಮ್ಮೆ ಮದುವೆ ಮಾಡಿಸಿ ನೂರಾರು ಕೋಟಿ ಜನರ ಆಶೀರ್ವಾದ ಪಡೆಯುವ ಅವಕಾಶವನ್ನ ಕಲರ್ಸ್ ಕನ್ನಡ ವೇದಿಕೆ ಮಾಡಿಕೊಟ್ಟಿದೆ. ಈ ವೇದಿಕೆಯಲ್ಲಿ ಮಾತನಾಡಿರುವ ಚಂದ್ರಪ್ರಭ ನಾನು ಇಷ್ಟ ಪಟ್ಟಿರುವ ಹುಡುಗಿ ಅಂತ ಹೇಳಿಕೊಳ್ಳುವುದಕ್ಕಿಂತ ನನ್ನನ್ನು ಹೆಚ್ಚಿಗೆ ಇಷ್ಟ ಪಡುವ ವ್ಯಕ್ತಿ ಭಾರತಿ ಅಂತ ಹೇಳಿಕೊಳ್ಳಲು ಖುಷಿಯಾಗುತ್ತದೆ. ಇವ್ರನ್ನ ಕಣ್ಣೀರು ಹಾಕಿಸದಂತೆ ನೋಡಿಕೊಳ್ಳಬೇಕು ಅನ್ನೋದು ನನ್ನ ಆಸೆ’ ಅಂತ ಭಾರತಿ ಅವ್ರ ಕೈ ಹಿಡಿದುಕೊಂಡು ಚಂದ್ರಪ್ರಭಾ ಹೇಳಿದ್ದಾರೆ. ಹೌದು ವೇದಿಕೆ ಮೇಲೆ ಇಡೀ ಗಿಚ್ಚಿ ಗಿಲಿಗಿಲಿ ಟೀಂ ಮತ್ತು ಚಂದ್ರಪ್ರಭಾ ಕುಟುಂಬ ಭಾಗಿಯಾಗಿದ್ದರು. ಇನ್ನು ಈ ವೇಳೆ ಮಾತನಾಡಿದ ಚಂದ್ರಪ್ರಭಾ ಅವ್ರ ತಾಯಿ,ಜೀವನದಲ್ಲಿ ಖುಷಿಯಾಗಿರಲಿ ಅನ್ನೋದು ನನ್ನ ಆಸೆ ಅಂತ ಹೇಳಿ ಆಶೀರ್ವಾದ ಮಾಡಿದ್ದಾರೆ.
ಇನ್ನು ಈ ವೇದಿಕೆ ಮೇಲೆ ಯಾರನ್ನ ಮಿಸ್ ಮಾಡಿಕೊಳ್ಳುತ್ತಿರ ಅವ್ರುಗೆನು ಹೇಳಲು ಬಯಸುತ್ತೀರಾ ಅಂತ ಕೇಳಿದ್ದಕ್ಕೆ, ಈ ಸಂದರ್ಭದಲ್ಲಿ ಚಂದ್ರಪ್ರಭಾ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಹೌದು ನಮ್ಮ ತಂದೆ ಈ ಸಮಯದಲ್ಲಿ ಇರಬೇಕಿತ್ತು ಅವ್ರು ನನ್ನ ಮದುವೆ ನೋಡಬೇಕಿತ್ತು. ನನ್ನ ಮದುವೆ ನೋಡಿ ಸಾಯಬೇಕು ಅನ್ನೋದು ಅವರ ಮನಸ್ಸಿನಲ್ಲಿ ಇತ್ತು ಎಂದು ಚಂದ್ರಪ್ರಭಾ ಕಣ್ಣೀರಿಟ್ಟಿದ್ದಾರೆ. ಅಂದ್ರೆ ಚಂದ್ರಪ್ರಭಾ ಈ ಸಮಯದಲ್ಲಿ ಅವ್ರ ತಂದೆಯನ್ನ ಬಹಳಷ್ಟು ಮಿಸ್ ಮಾಡಿಕೊಂಡಿದ್ದಾರೆ. ಅಲ್ದೇ ಮದುವೆ ಬೇಗ ಆಗಿದ್ರೆ ತಮ್ಮ ಮದುವೆ ನೋಡಿ ಅವ್ರ ತಂದೆ ಬಹಳ ಖುಷಿಪಟ್ಟು ಆಮೇಲೆ ಖುಷಿಯಿಂದ ಕಣ್ಣು ಮುಚ್ಚುತ್ತಿದ್ರು ಆದ್ರೆ ಅವ್ರ ಆಸೆಯನ್ನ ಈಡೇರಿಸಲು ಆಗಲಿಲ್ಲ ಅಂತ ಚಂದ್ರಪ್ರಭಾ ತಮ್ಮ ನೋವನ್ನ ಹಂಚಿಕೊಂಡಿದ್ದಾರೆ. ಇನ್ನು ನಿಮಗೆಲ್ಲ ಗೊತ್ತಿರುವ ಆಗೇ ಚಂದ್ರಪ್ರಭಾ ಮದುವೆಯಾಗಿರುವ ಹುಡುಗಿ ಹೆಸರು ಭಾರತಿ ಪ್ರಿಯಾ ಅಂತ ಆದರೆ ಭಾರತಿ ಪ್ರಿಯಾ ಅವರ ವೃತ್ತಿ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ ಆದರೆ ಅವ್ರು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿರುತ್ತಾರೆ. ಹೇಳಬೇಕು ಅಂದ್ರೆ ತಮ್ಮ ಮದುವೆ ವಿಚಾರವನ್ನು ರೀಲ್ಸ್ ಮೂಲಕ ಭಾರತಿ ಪ್ರಿಯಾ ಅವ್ರೆ ರಿವೀಲ್ ಮಾಡಿದ್ದು. ಒಟ್ಟಿನಲ್ಲಿ ಮದುವೆಯಾಗಿಲ್ಲ ಅಂತ ಹೀಯಾಳಿಸಿ ನಗುತ್ತಿದ್ದವರಿಗೆ ಈಗ ಕೆಲಸ ಇಲ್ಲದಂತಾಗಿದ್ದು ಕೊನೆಗೂ ಚಂದ್ರಪ್ರಭಾ ಮದುವೆಯಾಗಿರುವುದು ಖುಷಿಯ ವಿಚಾರವೇ ಸರಿ.
ಇದನ್ನೂ ಓದಿ: ಅಂಬಿ ಮನೆಯಲ್ಲಿ ಅಭಿ ಮದುವೆ ಸಂಭ್ರಮ, ಅರಿಶಿಣ ಶಾಸ್ತ್ರದಲ್ಲಿ ಅಂಬಿ ಪುತ್ರನ ಮಸ್ತ್ ಲುಕ್ ಹೇಗಿತ್ತು ಗೊತ್ತಾ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram