ಕೆಲವೊಮ್ಮೆ ಜೀವನದಲ್ಲಿ ನಂಬಲಾಗಿಲ್ಲ ಅಂದ್ರು ಅಚ್ಚರಿಯ ವಿಷಯಗಳು ಕಣ್ಣ ಮುಂದೆಯೇ ಇದ್ದು ಸಾಬೀತಾಗಿಬಿಡುತ್ತವೆ. ಪ್ರತ್ಯಕ್ಷವಾಗಿ ನೋಡೊದರು ಅಯ್ಯೋ ಇದು ನಿಜಾನಾ ಅನ್ನೋ ಭಾವನೆ ಉಂಟಾಗಿಬಿಡುತ್ತದೆ. ಇಂತದ್ದೇ ಒಂದು ಘಟನೆ ಇದೀಗ ವೈದ್ಯರನ್ನೇ ಅಚ್ಚರಿ ಪಡಿಸಿದ್ದು ಇದು ನಿಜಾನಾ ಅಂತ ಒಂದು ಕ್ಷಣ ಎಲ್ಲರು ಬಾಯಿಯ ಮೇಲೆ ಬೆರಲಿಟ್ಟರೆ ಮತ್ತು ಕೆಲವರು ದೇವರ ಪವಾಡ ಅಂತಿದ್ದಾರೆ. ಹೌದು ರಾಜಸ್ಥಾನದ(Rajasthan) ಭರತ್‌ಪುರದ ಆಸ್ಪತ್ರೆಯಲ್ಲಿ ಮಹಿಳೆಯೋರ್ವರು 26 ಬೆರಳುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆಯೊಂದು ನಡೆದಿದೆ. ಮಗುವಿಗೆ ಇಷ್ಟೊಂದು ಬೆರಳುಗಳಿರುವುದನ್ನು ನೋಡಿ ನಿಜಕ್ಕೂ ಆಸ್ಪತ್ರೆಯ ವೈದ್ಯರು, ದಾದಿಯರು ಆಶ್ಚರ್ಯಚಕಿತರಾಗಿದ್ದಾರೆ.
ಇನ್ನು ಮಗುವಿನ ಕೈಯಲ್ಲಿ 7-7 ಬೆರಳುಗಳು, ಮತ್ತು ಕಾಲುಗಳಲ್ಲಿ 6-6 ಬೆರಳುಗಳಿವೆ. ಈ ಘಟನೆ ಜಿಲ್ಲೆಯ ಕಮಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಹಿತಿ ಪ್ರಕಾರ, ಶನಿವಾರ ಸಂಜೆ 8 ತಿಂಗಳ ಗರ್ಭಿಣಿಯೊಬ್ಬರು ಸಾಮಾನ್ಯ ತಪಾಸಣೆಗಾಗಿ ಕಮಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸಿಎಚ್‌ಸಿಗೆ ಬಂದಿದ್ದರು. ತಪಾಸಣೆ ವೇಳೆಯೇ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಬಳಿಕ ಮಹಿಳೆ ರಾತ್ರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇನ್ನು ಮಗುವಿನ ಜನನದ ನಂತರ ಮಗುವನ್ನ ನೋಡಿದ ಪ್ರತಿಯೊಬ್ಬರೂ ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಹೌದು ಮೊನ್ನೆ ರಾತ್ರಿ ಘಟನೆ ನಡೆದಿದೆ. ಅಂದ್ರೆ ಭಾನುವಾರ ರಾತ್ರಿ ಕಮನ್ ಸಮುದಾಯ ಆಸ್ಪತ್ರೆಯಲ್ಲಿ ಸರ್ಜು ದೇವಿ ಎಂಬುವವರಿಗೆ ಈ ಮಗು ಜನಿಸಿದೆ. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯ ಸೋನಿ ದೀಪಕ್ ಹೇಳಿದ್ದಾರೆ. ಈ ಮಗುವಿನ ಆಗಮನದಿಂದ ನಮ್ಮ ಮನೆಗೆ ಲಕ್ಷ್ಮಿ ಬಂದಂತಾಗಿದೆ ಎಂದು ಮಗುವಿನ ಚಿಕ್ಕಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ಈಕೆಯು ದೇವತೆಯಂತೆ ನಮ್ಮ ಮನೆಗೆ ಬಂದಿದ್ದಾಳೆ. ನಮ್ಮ ಮನೆಯಲ್ಲಿ ಲಕ್ಷ್ಮಿಯ ಜನನವಾಗಿರುವುದಕ್ಕೆ ನಾವು ಪುಣ್ಯ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಅಪರೂಪದ ರೂಪ ಕಂಡು ಬೆರಗಾದ ಸ್ಥಳೀಯರು
ಇನ್ನು 26 ಬೆರಳುಗಳನ್ನು ಹೊಂದಿರುವ ಹೆಣ್ಣು ಮಗ ಜನಿಸಿರೋದಕ್ಕೆ, ಮಗುವಿನ ಕುಟುಂಬದವರು ಆಕೆ ದೇವಿಯ ಪ್ರತೀಕವೆಂದು ನಂಬಿದ್ದಾರೆ. ಇನ್ನು ರಾಜಸ್ಥಾನದ(Rajasthan) ಡೀಗ್ ಜಿಲ್ಲೆಯಲ್ಲಿ ಈ ರೀತಿ 26 ಬೆರಳುಗಳನ್ನು ಹೊಂದಿದ್ದ ಅಪರೂಪದ ಮಗು ಜನಿಸಿದೆ. 26 ಬೆರಳುಗಳನ್ನು ಹೊಂದಿರುವ ಹೆಣ್ಣು ಮಗುವೊಂದು ರಾಜಸ್ಥಾನದಲ್ಲಿ ಜನಿಸಿದ್ದು, ಮಗುವಿನ ಕುಟುಂಬದವು ಆಕೆ ದೇವಿಯ ಪ್ರತೀಕವೆಂದು ನಂಬಿದ್ದಾರೆ. ಈ ರೀತಿ 26 ಬೆರಳುಗಳನ್ನು ಹೊಂದಿದ್ದ ಅಪರೂಪದ ಮಗು ಜನಿಸಿದೆ. ಈ ಮಗುವಿನ ಕೈ ಕಾಲುಗಳ ಬೆರಳುಗಳನ್ನು ಲೆಕ್ಕ ಹಾಕಿದಾಗ ಒಟ್ಟು 26 ಬೆರಳುಗಳಿರುವುದು ಬೆಳಕಿಗೆ ಬಂದಿದೆ. ಇನ್ನು ಪ್ರತಿ ಕೈನಲ್ಲಿ ಹೆಚ್ಚುವರಿ ಎರಡು ಬೆರಳುಗಳಿದ್ದು ಹಾಗೂ ಕಾಲಿನಲ್ಲಿ ಒಂದು ಹೆಚ್ಚುವರಿ ಬೆರಳಿದ್ದು ಎಲ್ಲವೂ ಸೇರಿ ಒಟ್ಟು 26 ಬೆರಳುಗಳಿವೆ ಎಂದು ವೈದ್ಯರು ಹೇಳಿದ್ದಾರೆ.
ಇನ್ನು ಎಲ್ಲಾ ಕಡೆ ಈ ಸುದ್ದಿ ಹಬ್ಬಿದ ನಂತರ ಜನರು ಮಗು ನೋಡಲು ಆಸ್ಪತ್ರೆಗೆ ಸೇರಿದ್ದರು. ಇದೀಗ ಈ ಮಗುವಿನ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಮಗುವಿನ ತಾಯಿಯ ಹೆಸರು ಸರಜು, ಗೋಪನಾಥ್ ಬಡಾವಣೆಯ ನಿವಾಸಿ. ಸರಜೂ ಅವರ ಪತಿ ಗೋಪಾಲ್ ಭಟ್ಟಾಚಾರ್ಯ ಸಿಆರ್‌ಪಿಎಫ್‌ನಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಅಲ್ದೇ ಈ ರೀತಿಯ ಪ್ರಕರಣವನ್ನು ಪಾಲಿಡಾಕ್ಟಿಲಿ ಎಂದು ಕರೆಯಲಾಗುತ್ತದೆ. ಇಂತಹ ಪ್ರಕರಣಗಳು ಬಹಳ ವಿರಳವಾಗಿ ಕಂಡುಬರುತ್ತವೆ ಎಂದು ಡಾಕ್ಟರ್‌ಗಳು ಹೇಳಿದ್ದಾರೆ. ಆದಾಗ್ಯೂ, ಇದರಿಂದ ಮಗುವಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಡಾಕ್ಟರ್ ಹೇಳಿದ್ದಾರೆ.
ಹೌದು ಹೆಚ್ಚುವರಿ ಬೆರಳುಗಳು ಅನುವಂಶೀಯ ಅಸ್ವಸ್ಥತೆಯಿಂದ ಬಂದಿದೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ. ಈ ಹೆಚ್ಚುವರಿ ಬೆರಳುಗಳಿಂದ ಮಗುವಿನ ಆರೋಗ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ವೈದ್ಯೆ ಡಾ. ಸೋನಿ ಹೇಳಿದ್ದಾರೆ. ಜೊತೆಗೆ ಕಮನ್‌ನಲ್ಲಿರುವ ಸಮುದಾಯ ಆಸ್ಪತ್ರೆಯಲ್ಲಿ ಈ ವಿಶೇಷ ಮಗು ಜನಿಸಿದ್ದು, ಈಗ ಮಗುವಿಗಿರುವ ಈ ಹೆಚ್ಚುವರಿ ಬೆರಳುಗಳಿಂದ ಕುಟುಂಬದವರು ಮಗುವಿಗೆ ಆಧ್ಯಾತ್ಮಿಕ ಆಯಾಮ ನೀಡಿದ್ದಾರೆ. ತಾವು ಪೂಜಿಸುವ ದೋಲಗರ್ ದೇವಿಯ ಕೃಪೆ ಇದು ಎಂದು ಕುಟುಂಬದವರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮೀ ಹಣ ಬಂದಿಲ್ಲ ಅಂದ್ರೆ, ಹಣ ಯಾವಾಗ ಬರುತ್ತೆ? ಹಣ ಜಮಾವಣೆ ಬಗ್ಗೆ ಲಕ್ಷ್ಮೀ ಹೆಬಾಳ್ಕರ್ ಅವ್ರು ಹೇಳಿದ್ದೇನು?
ಇದನ್ನೂ ಓದಿ: ಹೆಂಡತಿ ಕಾಟಕ್ಕೆ ಮನನೊಂದು ಮೆಟ್ರೋ ಎಂಜಿನಿಯರ್ ಸೂಸೈಡ್! ಸಾವಿಗೂ ಮುನ್ನ ಪೊಲೀಸರಿಗೆ ಹೇಳಬೇಡಿ ಅಂದುದ್ಯಾಕೆ ಗೊತ್ತಾ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram