ಭರ್ಜರಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಕೊಂಚ ಇಳಿಕೆ! ಹೀಗಿದೆ ಇಂದಿನ ಚಿನ್ನ, ಬೆಳ್ಳಿ ದರ

gold and silver price

ದಿನೇ ದಿನೇ ಚಿನ್ನದ ದರ ಏರುತ್ತಲೇ ಇದೆ. ಯುಗಾದಿ ಹಬ್ಬದ ಬಳಿಕ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣಬಹುದು ಎಂಬ ನಿರೀಕ್ಷೆಯಲ್ಲಿ ಇದ್ದ ಜನತೆಗೆ ಕೊಂಚ ಸಂತಸ ಆಗಿದೆ. ಏಕೆಂದರೆ ನಿನ್ನೆಯ ದರಕ್ಕಿಂತ ಇಂದು ಕೊಂಚ ಇಳಿಕೆ ಕಂಡಿದ್ದು ಬಂಗಾರ ಖರೀದಿ ಮಾಡಲು ಇಂದೆ ಮಳಿಗೆಗಳಿಗೆ ಭೇಟಿ ನೀಡಿ.

WhatsApp Group Join Now
Telegram Group Join Now

ಏರಿಕೆ ಕಾಣುತ್ತಾ ಇರುವ ಬಂಗಾರ:- ಲಾಕ್ ಡೌನ್ ನಲ್ಲಿ 50,000 ಗಡಿ ದಾಟಿದ್ದ ಬಂಗಾರ ಇಳಿಕೆ ಕಾಣುತ್ತದೆ ಎಂದು ಅಂದುಕೊಂಡ ಜನತೆಗೆ ದಿನೇ ದಿನೇ ಬಂಗಾರದ ದರ ಏರಿಕೆ ಆಗುತ್ತಲೇ ಇದೆ. ಎರಡು ವರ್ಷಗಳಲ್ಲಿ ಬರೋಬ್ಬರಿ 20,000 ರೂಪಾಯಿ ಬಂಗಾರದ ದರ ಹೆಚ್ಚಾಗಿದೆ. 

ನಿನ್ನೆಗಿಂತ ಕೊಂಚ ಇಳಿಕೆ ಕಂಡ ಬಂಗಾರ: ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಾ ಇರುವ ಬಂಗಾರದ ಬೆಲೆ ನಿನ್ನೆಗಿಂತ ಇಂದು ಕೊಂಚ ಇಳಿಕೆ ಕಂಡಿದೆ. ಭಾರತದಲ್ಲಿ 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರವು 73,310 ರೂಪಾಯಿ ಆಗಿದ್ದು ಇಂದು ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು ಬರೋಬ್ಬರಿ 710 ರೂಪಾಯಿ ದರ ಇಳಿಕೆ ಕಂಡಿದೆ. ಇದರಂತೆಯೇ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ಬೆಲೆ 700 ರೂಪಾಯಿ ಕುಸಿತ ಕಂಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಒಂದು ವಾರದಲ್ಲಿ ಏರಿಳಿತ ಕಂಡ ಬಂಗಾರ :-

ಕಳೆದ ಒಂದು ವಾರದಲ್ಲಿ ಒಂದು ದಿನ ಬಂಗಾರ ಏರಿಕೆ ಕಂಡರೆ ಮರುದಿನ ಇಳಿಕೆ ಕಾಣುತ್ತಿದೆ. ಏಪ್ರಿಲ್ 4 ರಂದು 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರವು 70,470 ಆಗಿತ್ತು. ಹಾಗೆ ಏಪ್ರಿಲ್ 5 ರಂದು 490 ರೂಪಾಯಿ ಇಳಿಕೆ ಕಂಡು 69,980 ರೂಪಾಯಿ ಆಯಿತು. ಏಪ್ರಿಲ್ 6 ರಂದು ಬರೋಬ್ಬರಿ 1310 ಏರಿಕೆ ಕಂಡಿತು. ಏಪ್ರಿಲ್ 7 ರಂದು ಯಾವುದೇ ಬದಲಾವಣೆ ಇರಲಿಲ್ಲ. ಏಪ್ರಿಲ್ 8 ಕ್ಕೆ 330 ರೂಪಾಯಿ ಏರಿಕೆ ಕಂಡು 71,620 ರೂಪಾಯಿ ಆಗಿತ್ತು. ಏಪ್ರಿಲ್ 9 ರಿಂದ ಏಪ್ರಿಲ್ 12 ರ ವರೆಗೆ ದಿನವೂ ಬಂಗಾರದ ದರ ಏರಿಕೆ ಕಂಡಿದೆ. ಕೊಂಚ ನಿರಾಳ ಎಂಬಂತೆ ಇಂದು ಬಂಗಾರದ ದರವು ಇಳಿಕೆ ಕಂಡಿದೆ.

ಬೆಳ್ಳಿಯ ದರ ಹೇಗಿದೆ?:

ಬಂಗಾರದ ದರ ಇಳಿಕೆ ಕಂಡರೆ ಇಲ್ಲಿ ಬೆಳ್ಳಿಯ ದರವು ಹೆಚ್ಚಾಗಿದೆ. ಒಂದು ಕೆ.ಜಿ ಬೆಳ್ಳಿಯ ದರ ನಿನ್ನೆಗಿಂತ ಇಂದು ಬರೋಬ್ಬರಿ 2,000 ರೂಪಾಯಿ ಜಾಸ್ತಿ ಆಗಿದೆ. ಇದು ಬೆಳ್ಳಿಯ ಮೇಲೆ ಹೂಡಿಕೆ ಮಾಡಲು ಬಯಸಿದ ಜನರಿಗೆ ಕೊಂಚ ನಿರಾಸೆ ಆಗಿದೆ. ನಿನ್ನೆ ಇಂದು ಕೆ.ಜಿ ಬಂಗಾರದ ಬೆಲೆ 84,250 ರೂಪಾಯಿ ಇದ್ದಿತ್ತು. ಆದರೆ ಇಂದಿನ ಬೆಳ್ಳಿಯ ಬೆಲೆ 86,250 ರೂಪಾಯಿ ಆಗಿದೆ. ಈ ದರವು ಸರಾಸರಿ ದರವಾಗಿದ್ದು ಭಾರತದ ವಿವಿಧ ಸ್ಥಳಗಳಲ್ಲಿ ಬೇರೆ ಬೇರೆ ರೀತಿಯ ದರಗಳು ಇವೆ.

ಬೆಳ್ಳಿಯ ಮತ್ತು ಬಂಗಾರದ ಮೇಲೆ ಹೂಡಿಕೆ ಮಾಡುವವರಿಗೆ ಈ ಸಮಯವೂ ಬಹಳ ಕಷ್ಟ ಆಗಿದೆ. ಯಾಕೆಂದರೆ ಒಂದು ದಿನ ಇದ್ದ ದರವು ಇನ್ನೊಂದು ದಿನ ಇರುವುದಿಲ್ಲ. ಇಂದು ಬೆಲೆ ಇಳಿಕೆ ಕಂಡಿದೆ ಎಂದು ನಾಳೆ ನೀವು ಮಾರುಕಟ್ಟೆಗೆ ಹೋದರೆ 100 ರಿಂದ ಸಾವಿರ ರೂಪಾಯಿಯ ವರೆಗೆ ಏರಿಕೆ ಕಾಣುತ್ತಿದೆ. ಇದು ಹೂಡಿಕೆದಾರರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಪಿಎಂ ಆವಾಸ್ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 5000 mAh ಬ್ಯಾಟರಿ ಮತ್ತು 50MP ಕ್ಯಾಮೆರಾ ಹೊಂದಿರುವ IQOO Z9 5G ಫೋನ್ ಬೆಲೆಯಲ್ಲಿ ಭರ್ಜರಿ ಡಿಸ್ಕೌಂಟ್.