ಡಿಪ್ಲೋಮಾ ಹಾಗೂ ಪದವೀಧರರಿಗೆ ಸಿಹಿ ಸುದ್ದಿ ಯುವನಿಧಿ ಯೋಜನೆ ಜಾರಿಗೆ ಮೂಹೂರ್ತ ಫಿಕ್ಸ್

ಭಾರತದಲ್ಲಿ ನಿರುದ್ಯೋಗದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶಿಕ್ಷಣ ಮುಗಿಸಿಯೂ ಕೂಡ ಮನೆಯಲ್ಲೇ ಇರುವಂತಹ ಪರಿಸ್ಥಿತಿ ಎದುರಾಗುತ್ತಿದೆ. ಕೆಲಸಕ್ಕಾಗಿ ಹುಡುಕಾಟ ಜಾಸ್ತಿಯಾಗಿದೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರಿಗಾಗಲಿ, ವೃದ್ಧರಿಗೆ, ಬಡ ರೇಖೆಗಳಿಗಿಂತ ಕೆಳಗಡೆ ಇರುವವರಿಗೆ ಹಾಗೂ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಹೀಗೆ ಇನ್ನು ಅನೇಕ ರೀತಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದೆ. ಹಾಗೆಯೇ ನಿರುದ್ಯೋಗಿಗಳಿಗೂ ಕೂಡ ಒಂದು ಯೋಜನೆಯನ್ನು ಜಾರಿಗೊಳಿಸಿದೆ ಅದೇ “ಯುವ ನಿಧಿ” ಯೋಜನೆ(Yuva Nidhi Yojana). ಈ ಯೋಜನೆಯಲ್ಲಿ ಶಿಕ್ಷಣ ಮುಗಿಸಿ ಎಲ್ಲಿಯೂ ಕೆಲಸ ಸಿಗದೇ ಮನೆಯಲ್ಲೇ ಕುಳಿತುಕೊಂಡಿರುವ ಅಭ್ಯರ್ಥಿಗಳಿಗೆ ಡಿಪ್ಲೋಮಾ ಹಾಗೂ ಪದವೀಧರರಿಗೆ ತಲಾ 1500 ಹಾಗೂ 3000 ರೂಪಾಯಿಗಳ ಮಾಸಿಕ ಬಗ್ಗೆಯನ್ನು ನೀಡುತ್ತಿದೆ.

WhatsApp Group Join Now
Telegram Group Join Now

ಈ ಯೋಜನೆಯನ್ನು 2024 ಜನವರಿ ತಿಂಗಳಿನಿಂದ ಆರಂಭಗೊಳಿಸುವುದಾಗಿ ಮಧು ಬಂಗಾರಪ್ಪ ಅವರು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಮಧು ಬಂಗಾರಪ್ಪ ಅವರು ಜನವರಿಯಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು ಡಿಪ್ಲೋಮಾ ಮುಗಿದವರಿಗೆ 1500 ರೂಪಾಯಿಗಳು ಹಾಗೂ ಪದವೀಧರರಿಗೆ ತಲಾ 3000 ರೂಪಾಯಿಗಳನ್ನು ಪ್ರತಿ ತಿಂಗಳು ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಮುಗಿಸಿ ಆರು ತಿಂಗಳುಗಳ ಕಾಲ ಮನೆಯಲ್ಲಿ ಉಳಿದಿರುವ ಅಭ್ಯರ್ಥಿಗಳಿಗೆ ಈ ಯೋಜನೆಯ ಫಲವು ಸಿಗಲಿದೆ. ಆರು ತಿಂಗಳ ಒಳಗಾಗಿ ಅವರು ಕೆಲಸವನ್ನು ಹುಡುಕಿಕೊಳ್ಳಬೇಕು. ಅಲ್ಲಿಯತನಕ ಅವರಿಗೆ ಮಾಸಿಕ ಭತ್ಯೆಯನ್ನು ವಿತರಿಸುವುದಾಗಿ ಹೇಳಿದ್ದಾರೆ.

“ಯುವನಿಧಿ” ಯೋಜನೆಯ(Yuva Nidhi Yojana) ಉದ್ದೇಶಗಳು: ವಯಸ್ಸಿಗೆ ಬಂದ ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಬೇಕು. ಉದ್ಯೋಗ ಸಿಗದೇ ತಂದೆ ತಾಯಿಗೆ ಭಾರವಾಗಬಾರದೆಂದು, ಕೆಲವು ಸಣ್ಣಪುಟ್ಟ ಖರ್ಚುಗಳನ್ನು ನಿಭಾಯಿಸಿಕೊಳ್ಳಲು ಹಾಗೂ ಇನ್ನಿತರ ಚಟುವಟಿಕೆಗಳಿಗೆ ಸಹಾಯವಾಗಲೆಂದು ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡು ಈ ಯೋಜನೆಯನ್ನು ಜಾರಿಗೊಳಿಸಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಈ ಯೋಜನೆಯ ಷರತ್ತುಗಳು

ಈ ಯೋಜನೆಯ ಅಡಿಯಲ್ಲಿ ಶಿಕ್ಷಣ ಮುಗಿಸಿ ಆರು ತಿಂಗಳುಗಳ ಕಾಲ ಮನೆಯಲ್ಲಿ ಉಳಿದವರು ಇದರ ಲಾಭವನ್ನು ಪಡೆಯಬಹುದು. ಈ ಯೋಜನೆಯನ್ನು ಪಡೆಯುವವರು ಕರ್ನಾಟಕದಲ್ಲಿ ವಾಸಿಸುತ್ತಿರಬೇಕು ನೆರೆಯ ರಾಜ್ಯಗಳಲ್ಲಿ ವಾಸಿಸುವವರಿಗೆ ಈ ಯೋಜನೆಯ ಫಲ ದೊರಕುವುದಿಲ್ಲ. ಈ ಯೋಜನೆಯು ಎರಡು ವರ್ಷಗಳವರೆಗೆ ಮಾತ್ರ ಮೀಸಲಾಗಿರುತ್ತದೆ ಒಂದು ವೇಳೆ ಎರಡು ವರ್ಷದ ಒಳಗಡೆ ಕೆಲಸ ಸಿಕ್ಕಿದಲ್ಲಿ ಈ ಯೋಜನೆಯು ಸ್ಥಗಿತಗೊಳ್ಳುತ್ತದೆ.

ಪ್ರತಿ ತಿಂಗಳು DBT ಮೂಲಕ ಹಣವನ್ನು ವರ್ಗಾವಣೆ ಮಾಡಲಾಗುವುದು. ನೀವು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಒಂದು ವೇಳೆ ಉದ್ಯೋಗ ಸಿಕ್ಕಿದರೂ ಕೂಡ ನೀವು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದರೆ ನಿಮಗೆ ದಂಡವನ್ನು ವಿಧಿಸಲಾಗುತ್ತದೆ ಆದ್ದರಿಂದ ಉದ್ಯೋಗ ಸಿಕ್ಕಿದ ನಂತರ ಸರಕಾರಕ್ಕೆ ತಿಳಿಸಬೇಕಾಗುತ್ತದೆ.

ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆ ಹೆಸರು ಬರಲು ಕಾರಣವೇನು? ಆ ಹೆಸರಿನ ಹಿಂದಿನ ಶ್ರಮ ಎಷ್ಟು ಅಂತ ಕೇಳುದ್ರೆ ಅಚ್ಚರಿ ಪಡ್ತಿರಾ!

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದವರು ಈ ಕೆಳಗಿನ ದಾಖಲಾತಿಯನ್ನು ಹೊಂದಿರಬೇಕಾಗುತ್ತದೆ

Degree / Diploma ಸರ್ಟಿಫಿಕೇಟ್ಗಳು, ಮತದಾರರ ಗುರುತಿನ ಚೀಟಿ, ಆಧಾರ ಖಾತೆ ಹಾಗೂ ಬ್ಯಾಂಕ್ ಖಾತೆಯ ವಿವರಗಳು ಇದಿಷ್ಟು ಮಾಹಿತಿಗಳನ್ನು ಹೊಂದಿದ್ದಲ್ಲಿ ನೀವು ಯುವ ನಿಧಿ ಯೋಜನೆಯ ಫಲಾನುಭವಿಗಳು ಆಗಬಹುದು. ಒಂದು ವೇಳೆ ನೀವು ಸ್ವಂತ Business ಪ್ರಾರಂಭಿಸಿದ್ದರೆ ಈ ಯೋಜನೆಯ ಅಡಿಯಲ್ಲಿ ನಿಮಗೆ ಅವಕಾಶವಿರುವುದಿಲ್ಲ. ಒಟ್ಟಿನಲ್ಲಿ ಸರ್ಕಾರವು ಎಲ್ಲ ರೀತಿಯಲ್ಲೂ ಎಲ್ಲ ಜಾತಿಯ ಜನರಿಗೂ ಕೂಡ ಯಾವ ಬೇದ ಭಾವವು ಇಲ್ಲದೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಇದರಿಂದ ಜನತೆ ಅಪಾರವಾದ ಲಾಭವನ್ನು ಪಡೆಯಬಹುದಾಗಿದೆ. ಇದು ಜನತೆಯ ಅಭಿವೃದ್ಧಿಯನ್ನು ಸೂಚಿಸುವ ಒಂದು ಮಾರ್ಗವಾಗಿದೆ.

ಇದನ್ನೂ ಓದಿ: 5 ಸ್ಟಾರ್ ಹೋಟೆಲ್ ನಂತಹ ಐಷಾರಾಮಿಯನ್ನು ಹೊಂದಿರುವ ಕಿಯಾ ಕಾರ್ನಿವಲ್ ಫೇಸ್ ಲಿಫ್ಟ್ ಬಗ್ಗೆ ಒಂದಷ್ಟು ಮಾಹಿತಿಗಳು

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram