ಎಲೆಕ್ಟ್ರಿಕಲ್ ವಾಹನ ಖರೀದಿಸುವವರಿಗೆ ಭರ್ಜರಿ ಗುಡ್ ನ್ಯೂಸ್; 20ಲಕ್ಷಕ್ಕಿಂತ ಹೆಚ್ಚು ಬೆಲೆಯ ವಾಹನಗಳಿಗೆ ತೆರಿಗೆ ರದ್ಧತಿ

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕೆಲವೊಂದಷ್ಟು ಮಹತ್ವದ ಹಾಗೂ ಜನಸ್ನೇಹಿ ನಿರ್ಧಾರಗಳನ್ನ ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿದ್ದೂ, ವಿರೋಧ ಪಕ್ಷಗಳ ಬೇಡಿಕೆ ಜೊತೆಗೆ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆಗಳ ಅನುಷ್ಠಾನ ಮತ್ತು ತಿದ್ದುಪಡಿ ಸೇರಿದಂತೆ ಸಾಕಷ್ಟು ವಿಚಾರಗಳನ್ನ ಕೈಗೆಟ್ಟುಕೊಂಡಿದೆ. ಹೌದು ಇದೀಗ ಎಲೆಕ್ಟ್ರಿಕಲ್ ವಾಹನಗಳನ್ನ ಖರೀದಿ ಮಾಡಬೇಕು ಅಂದುಕೊಂಡಿದ್ದವರಿ ಇದು ಭರ್ಜರಿ ಗುಡ್ ನ್ಯೂಸ್ ಅಂತಲೇ ಹೇಳಬಹುದು. ಹೌದು ತೆರಿಗೆ ರದ್ದು ಮಾಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಎಲೆಕ್ಟ್ರಿಕಲ್ ವಾಹನ ಪ್ರಿಯರಿಗೆ ಇದು ಸಖತ್ ಖುಷಿ ಕೊಡುವ ವಿಚಾರ ಅಂತಲೇ ಹೇಳಬಹುದು. ಇನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಸಲಹೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 20 ಲಕ್ಷ ರೂ.ಗಳಿಗಿಂತ ಹೆಚ್ಚಿನ ಮೊತ್ತದ ವಿದ್ಯುತ್ ಚಾಲಿತ ವಾಹನಗಳ ಮೇಲೆ ವಿಧಿಸಲು ಉದ್ದೇಶಿಸಿದ್ದ ಶೇ.10ರಷ್ಟು ತೆರಿಗೆ ಪ್ರಸ್ತಾವನೆಯನ್ನು ವಿಧೇಯಕದಿಂದ ಕೈ ಬಿಡಲು ಸರಕಾರ ನಿರ್ಧರಿಸಿದೆ.

WhatsApp Group Join Now
Telegram Group Join Now

ವಿಧಾನಸಭೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಂಡಿಸಿದ 2023ನೇ ಸಾಲಿನ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ವಿಧೇಯಕದಲ್ಲಿ 20 ಲಕ್ಷ ರೂ.ಗಳಿಗಿಂತ ಹೆಚ್ಚಿನ ಮೊತ್ತದ ವಿದ್ಯುತ್ ಚಾಲಿತ ವಾಹನಗಳಿಗೆ ಶೇ.10ರಷ್ಟು ತೆರಿಗೆ ವಿಧಿಸಲು ಉದ್ದೇಶಿಸಲಾಗಿತ್ತು. ಆಗ ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಹಾಗೂ ಪರಿಸರವನ್ನು ಸಂರಕ್ಷಿಸುವ ಉದ್ದೇಶದಿಂದ ಬಳಕೆ ಮಾಡುತ್ತಿರುವ ವಿದ್ಯುತ್ ಚಾಲಿತ ವಾಹನಗಳನ್ನು ಜನಸಾಮಾನ್ಯರ ಕೈಗೆಟುವ ರೀತಿಯಲ್ಲಿ ರಿಯಾಯಿತಿಗಳನ್ನು ನೀಡಿ ಪೋತ್ಸಾಹಿಸಬೇಕೇ ಹೊರತು ತೆರಿಗೆಗಳನ್ನು ಹೆಚ್ಚಿಸಿ ವಾಹನಗಳನ್ನು ಮತ್ತಷ್ಟು ದುಬಾರಿಯನ್ನಾಗಿಸಬಾರದು ಎಂದು ಬಿಜೆಪಿ ಸದಸ್ಯ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಲಹೆ ನೀಡಿದರು. ಹೀಗಾಗಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಅವುಗಳ ಜೀವಿತಾವಧಿವರೆಗೆ ಶೇ 20ರ ತೆರಿಗೆ ವಿಧಿಸುವ ಪ್ರಸ್ತಾವವನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Electric Vehicle
Image Credit: Original Source

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಎಲೆಕ್ಟ್ರಿಕಲ್ ವಾಹನಗಳಿಗೆ ತೆರಿಗೆ ಕೈ ಬಿಡಲು ಒಪ್ಪಿದರೆ ರಾಜ್ಯ ಸರ್ಕಾರ

ಹೌದು ಅಧಿವೇಶನದಲ್ಲಿ ಕೇವಲ ಬಿಜೆಪಿಯವರು ಮಾತ್ರವಲ್ಲ ಕಾಂಗ್ರೆಸ್ ನವರು ಕೂಡ ಪಕ್ಷತೀತವಾಗಿ ಧ್ವನಿಗುಡಿಸಿ ತೆರಿಗೆ ರದ್ಧತಿ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಹಿರಿಯ ಸದಸ್ಯ ಆರ್.ವಿ.ದೇಶಪಾಂಡೆ, ರಾಜ್ಯಕ್ಕೆ ಹೂಡಿಕೆ ಬರುತ್ತಿದೆ. ನಾವು ಬೇರೆ ಬೇರೆ ಸಂಸ್ಥೆಗಳನ್ನು ನಮ್ಮ ರಾಜ್ಯಕ್ಕೆ ಆಕರ್ಷಿಸಬೇಕಿದೆ. ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಳದಿಂದ ಪರಿಸರ ಮಾಲಿನ್ಯ ತಡೆಗಟ್ಟಲು ಸಹಕಾರಿಯಾಗುತ್ತದೆ. ಆದ್ದರಿಂದ ಉದ್ದೇಶಿತ ತೆರಿಗೆಯನ್ನು ಕೈಬಿಡಬೇಕು ಎಂದು ಕೋರಿದರು. ಹೀಗಾಗಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಅವುಗಳ ಜೀವಿತಾವಧಿವರೆಗೆ ಶೇ 20ರ ತೆರಿಗೆ ವಿಧಿಸುವ ಪ್ರಸ್ತಾವವನ್ನು ಕೈಬಿಟ್ಟಿರುವುದಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಇನ್ನು ಆಡಳಿತಾರೂಢ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಶಾಸಕರ ಒತ್ತಾಯದ ನಂತರ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ಮಸೂದೆಯ ಪ್ರಕಾರ, 10 ಲಕ್ಷದಿಂದ 15 ಲಕ್ಷ ಮೌಲ್ಯದ ಹಳದಿ ಬೋರ್ಡ್ ಕಾರುಗಳು ಮತ್ತು 1,500-12,000 ಕೆಜಿ ಸಾಮರ್ಥ್ಯದ ಉತ್ತಮ ವಾಹನಗಳ ಮೇಲೆ ಸರ್ಕಾರವು ಜೀವಿತಾವಧಿಯ ತೆರಿಗೆ ವಿಧಿಸುವುದಿಲ್ಲ ಎಂದು ರೆಡ್ಡಿ ತಿಳಿಸಿದ್ದಾರೆ. ಪಕ್ಷಾತೀತವಾಗಿ ಶಾಸಕರಿಂದ ವ್ಯಕ್ತವಾದ ಅಭಿಪ್ರಾಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉದ್ದೇಶಿತ ತೆರಿಗೆ ಪ್ರಸ್ತಾವನೆಯನ್ನು ಕೈ ಬಿಡುವಂತೆ ಸಾರಿಗೆ ಸಚಿವರಿಗೆ ಸೂಚನೆ ನೀಡಿದರು. ಅದರಂತೆ, ತಿದ್ದುಪಡಿಯೊಂದಿಗೆ ಸಚಿವ ರಾಮಲಿಂಗಾರೆಡ್ಡಿ ಮಂಡಿಸಿದ 2023ನೇ ಸಾಲಿನ ಮೋಟಾರು ವಾಹನಗಳ ತೆರಿಗೆ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ಸಿಕ್ಕಿದೆ.

ಹೌದು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಈಗ ಎಲೆಕ್ಟ್ರಿಕ್‌ ವಾಹನಗಳದ್ದೇ ಸದ್ದು. ವರ್ಷದಿಂದ ವರ್ಷಕ್ಕೆ ರಸ್ತೆಗಿಳಿಯುತ್ತಿರುವ ಇ-ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಇನ್ನು ರಾಜ್ಯದಲ್ಲಿ ಇ-ವಾಹನಗಳ ಸಂಖ್ಯೆ 2.36 ಲಕ್ಷ ದಾಟಿದೆ. ಪೆಟ್ರೋಲ್‌, ಡೀಸೆಲ್‌ ಚಾಲಿತ ವಾಹನಗಳ ಸಂಖ್ಯೆ ಕಡಿಮೆ ಮಾಡುವ ಸಲುವಾಗಿಯೇ ‘ವಿದ್ಯುತ್‌ ಚಾಲಿತ ವಾಹನ ಮತ್ತು ಇಂಧನ ಸಂಗ್ರಹ ನೀತಿ’ಯನ್ನು 2016ರಲ್ಲಿ ಜಾರಿಗೆ ತರಲಾಯಿತು. ಈ ನೀತಿಯನ್ನು ರೂಪಿಸಿದ ದೇಶದ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೂ ರಾಜ್ಯ ಪಾತ್ರವಾಯಿತು. ಸದ್ಯ ಇವಿಗಳ ಜೀವಿತಾವಧಿಗೆ ಶೇ 20ರ ತೆರಿಗೆ ವಿಧಿಸುವುದರಿಂದ ಎಲೆಕ್ಟ್ರಿಕ್ ವಾಹನ ಖರೀದಿಗೆ ಜನರ ಆಸಕ್ತಿ ಕಡಿಮೆಯಾಗಬಹುದು. ಹೀಗಾಗಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಶೇ 20 ರ ತೆರಿಗೆ ವಿಧಿಸದಂತೆ ಮಾಜಿ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮತ್ತು ಇತರರು ಸಚಿವರನ್ನು ಒತ್ತಾಯಿಸಿದ್ದರು ಹೀಗಾಗಿ ಇದೀಗ ತೆರಿಗೆ ರದ್ದತಿಗೆ ಅನುಮೋದನೆ ಸಿಕ್ಕಿದ್ದು ಜನಸಾಮಾನ್ಯರು ಖುಷಿ ಪಡಬಹುದಾಗಿದೆ.

ಇದನ್ನೂ ಓದಿ: ಹೋಂಡಾ ಶೈನ್ 125 ನವೀಕರಿಸಿದ ವೈಶಿಷ್ಟ್ಯಗಳೊಂದಿಗೆ, ಹೆಚ್ಚಿನ ಮೈಲೇಜ್ ಜೊತೆಗೆ ಮಾರುಕಟ್ಟೆಯಲ್ಲಿ ಒಂದು ಕೋಲಾಹಲವನ್ನು ಉಂಟುಮಾಡುತ್ತಿದೆ.