ಕೇಂದ್ರ ಸರ್ಕಾರವು 7ನೇ ವೇತನ ಆಯೋಗದ ಶಿಫಾರಸಿನ ಸರ್ಕಾರಿ ನೌಕರರಿಗೆ ಮೂಲ ವೇತನದ ಮೇಲೆ 3% ರಷ್ಟು ಎಚ್‌ಆರ್‌ಎ (ಮನೆ ಬಾಡಿಗೆ ಭತ್ಯೆ) ಹೆಚ್ಚಿಗೆ ಮಾಡುವ ನಿರೀಕ್ಷೆ ಇದೆ. ಈಗಾಗಲೇ ತುಟ್ಟಿ ಭತ್ಯೆ ಹೆಚ್ಚಿಸುವ ಬಗ್ಗೆ ಈಗಾಗಲೇ ಖಚಿತ ಪಡಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಮಾರ್ಚ್ ತಿಂಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಆಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ತುಟ್ಟಿ ಭತ್ಯೆ 50% ಹೆಚ್ಚಾದ ನಂತರ HRA ಭತ್ಯೆ ಸಹ ಹೆಚ್ಚಾಗುತ್ತದೆ. ನಗರಗಳಲ್ಲಿ ವಾಸಿಸುವ ಬಾಡಿಗೆ ಮನೆಯಲ್ಲಿ ಇರುವ ನೌಕರರಿಗೆ ಈ ಭತ್ಯೆಯನ್ನು ನೀಡಲಾಗುತ್ತದೆ.
ಸರ್ಕಾರ HRA ಹೇಗೆ ಲೆಕ್ಕ ಹಾಕುತ್ತದೆ?: ಸರ್ಕಾರವು ಮನೆ ಬಾಡಿಗೆಯ ಭತ್ಯೆಯನ್ನು ಒಂದೊಂದು ಪ್ರದೇಶಕ್ಕೆ ಒಂದೊಂದು ರೀತಿಯಲ್ಲಿ ನೀಡುತ್ತದೆ. ನಗರ, ಪಟ್ಟಣ, ಮೆಟ್ರೋ ನಗರ ಹೀಗೆ ಬೇರೆ ಬೇರೆ ಪ್ರದೇಶಗಳಿಗೆ ಬೇರೆ ಬೇರೆ ರೀತಿಯ ಭತ್ಯೆಯ ಮೊತ್ತವನ್ನು ನೀಡುತ್ತದೆ. ಹಾಗಾದರೆ ಯಾವ ಯಾವ ನಗರಗಳಿಗೆ ಏಷ್ಟು ಭತ್ಯೆ ಸಿಗುತ್ತದೆ ಎಂದು ತಿಳಿಯೋಣ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
HRA ಭತ್ಯೆ ನೀಡಲು ಮೂರು ವರ್ಗಗಳಾಗಿ ವಿಂಗಡನೆ ಮಾಡಲಾಗಿದೆ. ಅವು ಯಾವುದು ಎಂದರೆ
- X ವರ್ಗ – ಈ ವರ್ಗದಲ್ಲಿ ಕೆಲವು ನಗರಗಳನ್ನು ಸೇರ್ಪಡಿಸಲಾಗಿದೆ. ಅವು ಯಾವುದು ಎಂದರೆ ದೆಹಲಿ, ಅಹಮದಾಬಾದ್, ಬೆಂಗಳೂರು, ಮುಂಬೈ, ಪುಣೆ, ಚೆನ್ನೈ ಮತ್ತು ಕೋಲ್ಕತ್ತಾ. ಈ ಪ್ರದೇಶಗಳಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರು ಮೂಲ ವೇತನದ 27% ಎಚ್‌ಆರ್‌ಎ ಭತ್ಯೆ ಪಡೆಯುತ್ತಾರೆ.
- Y ವರ್ಗ – ಈ ವರ್ಗದಲ್ಲಿ ಸೇರ್ಪಡೆಯಾದ ನಗರಗಳು ಯಾವುದು ಎಂದರೆ ವಿಜಯವಾಡ, ಪಾಟ್ನಾ, ರಾಂಚಿ, ಇಂದೋರ್, ಕೊಲ್ಹಾಪುರ, ರೂರ್ಕೆಲಾ, ಲಕ್ನೋ, ವಿಶಾಖಪಟ್ಟಣಂ, ಬರೇಲಿ, ಶ್ರೀನಗರ, ಗುಂಟೂರು, ಗುವಾಹಟಿ, ಚಂಡೀಗಢ, ರಾಯ್‌ಪುರ, ರೂರ್ಕೆಲಾ, ಜಾಮ್‌ನಗರ, ವಡೋದರಾ, ಸಹರಾನ್‌ಪುರ, ಸೂರತ್, ಫರಿದಾಬಾದ್, ಘಾಜಿಯಾಬಾದ್, ಗುರ್ಗಾಂವ್, ನೋಯ್ಡಾ, ಜಮ್ಮು, ಗ್ವಾಲಿಯರ್, ಭೋಪಾಲ್, ಜಬಲ್‌ಪುರ,ಲುಧಿಯಾನ, ಉಜ್ಜೈನ್ ಔರಂಗಾಬಾದ್, ನಾಗ್ಪುರ್, ಸಾಂಗ್ಲಿ, ಸೋಲಾಪುರ್, ನಾಸಿಕ್, ನಾಂದೇಡ್, ಭಿವಾಡಿ, ಅಮರಾವತಿ, ಕಟಕ್, ಭುವನೇಶ್ವರ್, ಜೈಪುರ, ಅಮೃತಸರ, ಜಲಂಧರ್, ಬಿಕಾನೇರ್, ಜೋಧ್‌ಪುರ, ಕೋಟಾ, ಅಜ್ಮೀರ್, ಮೊರಾದಾಬಾದ್, ಮೀರತ್, ಅಲಿಘರ್, ಅಲಿಘರ್ ಕಾನ್ಪುರ, ಝಾನ್ಸಿ, ಗೋರಖ್‌ಪುರ, ಫಿರೋಜಾಬಾದ್, ವಾರಣಾಸಿ. ಈ ನಗರಗಳಲ್ಲಿ ವಾಸಿಸುವ ಸರ್ಕಾರಿ ನೌಕರರಿಗೆ ಮೂಲ ವೇತನದ 18% ಎಚ್‌ಆರ್‌ಎ ಭತ್ಯೆಯನ್ನು ನೀಡಲಾಗುತ್ತದೆ.
- Z ವರ್ಗ:- ಮೇಲೆ ಹೇಳಿದ x ವರ್ಗ ಮತ್ತು Y ವರ್ಗಗಳ ಪ್ರದೇಶಗಳನ್ನು ಹೊರತು ಪಡಿಸಿ ಉಳಿದ ನಗರಗಳಲ್ಲಿ ಕೆಲಸ ಮಾಡುವ ನೌಕರರನ್ನು z ವರ್ಗಕ್ಕೆ ಸೇರಿಸಲಾಗಿದೆ. ಇವರಿಗೆ ಮೂಲ ವೇತನದ 9% ಎಚ್‌ಆರ್‌ಎ ಭತ್ಯೆಯನ್ನು ನೀಡಲಾಗುತ್ತದೆ.
ತುಟ್ಟಿಭತ್ಯೆ ಹೆಚ್ಚಾದರೆ HRA ನೀಡುವ ಹಣ ಹೇಗೆ ಹೆಚ್ಚಾಗುತ್ತದೆ.?
ನಿಯಮದ ಪ್ರಕಾರ ತುಟ್ಟಿಭತ್ಯೆ 50% ಹೆಚ್ಚಾದಂತೆ HRA 30% ಏರಿಕೆ ಆಗುತ್ತದೆ. ಉದಾಹರಣೆಗೆ ಸಂಬಳ 10,000 ರೂಪಾಯಿ ಇದ್ದರೆ ಈಗ ನಿಮಗೆ 27% ಅಂದ್ರೆ 2,700 ರೂಪಾಯಿ HRA ಸಿಗುತ್ತಿತ್ತು ಅದು 300 ರೂಪಾಯಿ ಹೆಚ್ಚಾಗಿ 3,000 ರೂಪಾಯಿ HRA ಸಿಗಲಿದೆ. X ವರ್ಗಕ್ಕೆ 30%, Y ವರ್ಗಕ್ಕೆ 20%, ಹಾಗೂ z ವರ್ಗಕ್ಕೆ 10% HRA ಹೆಚ್ಚಾಗುತ್ತದೆ.
ಇದನ್ನೂ ಓದಿ: ಡ್ರೈವಿಂಗ್ ಲೈಸೆನ್ಸ್ ಮುಗಿದ ತಕ್ಷಣ ಇದೊಂದು ಕೆಲಸವನ್ನು ಮಾಡಿ, ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ಪಡೆಯುವ ಸಲಹೆಗಳು
ಇದನ್ನೂ ಓದಿ: ಆಶಾಕಿರಣ ಯೋಜನೆ ಅಡಿಯಲ್ಲಿ ಸಿಗಲಿದೆ ಉಚಿತ ಕಣ್ಣಿನ ಚಿಕಿತ್ಸೆ ಹಾಗೂ ಕನ್ನಡಕ