ಪದವಿ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಜೊತೆಗೆ 17,000 ಸಂಬಳ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

Graduate Students internship

ಪದವಿ ವಿದ್ಯಾರ್ಥಿಗಳಿಗೆ ಇಲ್ಲಿಯ ವರೆಗೆ ಇಂಟರ್ನ್ಶಿಪ್ ಎಂಬ ಆಪ್ಷನ್ ಇರಲಿಲ್ಲ. ಇಂಜಿನಿಯರ್ ಡಿಗ್ರೀ ಹೊರತು ಪಡಿಸಿ ಉಳಿದ ಎಲ್ಲಾ ಡಿಗ್ರೀ ವಿದ್ಯಾರ್ಥಿಗಳು ಡಿಗ್ರೀ ಮುಗಿದ ನಂತರ ಡೈರೆಕ್ಟ್ ಆಗಿ ಉದ್ಯೋಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಉದ್ಯೋಗದ ಬಗ್ಗೆ ಯಾವುದೇ ರೀತಿಯ ಮಾಹಿತಿ ಇರುವುದಿಲ್ಲ. ಆದಕಾರಣ ಪದವಿ ವಿದ್ಯಾರ್ಥಿಗಳು ಉದ್ಯೋಗಕ್ಕೆ ಹೋದಾಗ ಕಡಿಮೆ ಸಂಬಳ ನೀಡಲಾಗುತ್ತದೆ. ಇದನ್ನು ಪರಿಗಣಿಸಿದ ಸರ್ಕಾರ ಇನ್ನೂ ಮುಂದೆ ಬಿಕಾಂ, ಬಿಎ, ಬಿಎಸ್ಸಿ ಅಂತಹ ಪದವಿ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಜಾರಿಗೆ ತರುವ ಬಗ್ಗೆ ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂ, ಸಿ ಸುಧಾಕರ್ ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now

ಇಂಟರ್ನ್ಶಿಪ್ ನಲ್ಲಿ ಸಿಗುವ ಸಂಬಳ :- ಇಂಟರ್ನ್ಶಿಪ್ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ 11 ಸಾವಿರ ರೂಪಾಯಿಯಿಂದ 17 ಸಾವಿರ ಸಂಬಳ ನೀಡಲಾಗುವುದು ಎಂದು ಸಚಿವರು ತಿಳಿಸಲಾಗಿದೆ. ತರಬೇತಿಯ ಅವಧಿಯಲ್ಲಿ ಕೌಶಲ್ಯದ ಬಗ್ಗೆ ಕಲಿಕೆ ಸಾಧ್ಯ. ಹಾಗೂ ಮುಂದಿನ ಜೀವನಕ್ಕೆ ಒಂದು ಉತ್ತಮ ಅಡಿಪಾಯ ಸಿಗಲಿದೆ. ಎಇಡಿಪಿ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ನಡೆಸಲಾಗುವುದು. ಇದರ ಜೊತೆಗೆ ಉನ್ನತ ಶಿಕ್ಷಣದಲ್ಲಿ ಹಲವು ಬದಲಾವಣೆ ತರಲು ಇಲಾಖೆಯು ನಿರ್ಧಾರ ಮಾಡಿದೆ. ಹಾಗೂ ಬೋಧಕರಿಗೆ ಉನ್ನತ ಮಟ್ಟದ ತರಬೇತಿಯನ್ನು ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂ, ಸಿ ಸುಧಾಕರ್ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪ್ರತಿ ತಿಂಗಳು ಹೆಚ್ಚಿನ ಆದಾಯ ಪಡೆಯಲು SBI ನ ವಾರ್ಷಿಕ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು

ಇಂಟರ್ನ್ಶಿಪ್ ಮಾಡುವುದರಿಂದ ಏನು ಲಾಭಗಳು

  • ಇಂಟರ್ನ್ಶಿಪ್ ನಿಮಗೆ ನಿಮ್ಮ ಕ್ಷೇತ್ರದಲ್ಲಿ ಕೆಲಸದ ಅನುಭವವನ್ನು ಪಡೆಯಲು ಅವಕಾಶ ನೀಡುತ್ತದೆ. ಈ ಅನುಭವವು ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ನಿಮ್ಮ ರೆಸ್ಯೂಮ್ ಅನ್ನು ಬಲಪಡಿಸಲು ಸಹಾಯ ಮಾಡುತ್ತದೆ.
  • ಇಂಟರ್ನ್ಶಿಪ್ ನಿಮಗೆ ನಿಮ್ಮ ಕ್ಷೇತ್ರದಲ್ಲಿನ ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ನೀಡುತ್ತದೆ. ಇದರಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳು ಉದ್ಯೋಗಾವಕಾಶಗಳಿಗೆ ಕಾರಣವಾಗಬಹುದು.
  • ಇಂಟರ್ನ್ಶಿಪ್ ನಿಂದ ನಿಮಗೆ ನಿಮ್ಮ ವೃತ್ತಿಜೀವನದ ಗುರಿಗಳನ್ನು ಪರಿಶೀಲಿಸಲು ಅವಕಾಶ ನೀಡುತ್ತದೆ. ನಿಮಗೆ ಯಾವ ರೀತಿಯ ಕೆಲಸವು ಇಷ್ಟವಾಗಿದೆ ಮತ್ತು ಯಾವುದು ಇಷ್ಟವಿಲ್ಲ ಎಂಬುದನ್ನು ಅರಿಯಲು ನಿಮಗೆ ಸಹಾಯ ಆಗುತ್ತದೆ.
  • ಇಂಟರ್ನ್ಶಿಪ್‌ಗಳು ವೇತನವನ್ನು ನೀಡುವುದರಿಂದ ಇದು ನಿಮ್ಮ ಶಿಕ್ಷಣ ವೆಚ್ಚಗಳನ್ನು ಭರಿಸಲು ಅಥವಾ ನಿಮ್ಮ ಜೀವನ ವೆಚ್ಚಗಳನ್ನು ಭರಿಸಲು ಸಹಾಯ ಮಾಡುತ್ತದೆ.
  • ಇಂಟರ್ನ್ಶಿಪ್ ವಿದ್ಯಾರ್ಥಿಗಳಿಗೆ ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು ನಿಮ್ಮ ಪ್ರಸ್ತುತ ಕೌಶಲ್ಯಗಳನ್ನು ಸುಧಾರಿಸಲು ಅವಕಾಶ ನೀಡುತ್ತದೆ.
  • ಕೌಶಲ್ಯ ತರಬೇತಿಗೆ ಎಂದು ಸಾವಿರಾರು ರೂಪಾಯಿಗಳನ್ನು ವ್ಯಯ ಮಾಡುವುದು ತಪ್ಪಿಸಬಹುದು.
  • ಡಿಗ್ರೀ ಮುಗಿದ ನಂತರ ಕೋರ್ಸ್ ಗಳಿಗೆ ಜಾಯಿನ್ ಆಗಿ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಬಹುದಾಗಿದೆ.
  • ಇಂಟರ್ನಲ್ ಶಿಪ್ ಜಾಯಿನ್ ಆಗುವುದರಿಂದ ಕಂಪನಿಯಲ್ಲಿ ಕೆಲಸ ಮಾಡುವ ರೀತಿ ನಿಮ್ಮ ಕಾನ್ಫಿಡೆನ್ಸ್ ಹೆಚ್ಚಾಗುತ್ತದೆ. ಉನ್ನತ ಕಂಪನಿಗಳಲ್ಲಿ ಇಂಟರ್ವ್ಯೂ ಸಂದರ್ಭದಲ್ಲಿ ನಿಮ್ಮ ರೆಸ್ಯುಮ್ ಗೆ ಹೆಚ್ಚಿನ ಪ್ರಾಧಾನ್ಯತೆ ಸಿಗಬಹುದು. ನೀತಿಗಳು ನಿಮಗೆ ಅರ್ಥವಾಗುತ್ತದೆ.

ಇದನ್ನೂ ಓದಿ: ಕರ್ನಾಟಕ ಲೋಕಸೇವಾ ಆಯೋಗ ಕರ್ನಾಟಕ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ 97 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ

ಇದನ್ನೂ ಓದಿ: ಇನ್ನು ಮುಂದೆ ನೀವು ಪೇಮೆಂಟ್ ಗಳನ್ನು ಮಾಡಲು ಚಿಂತಿಸಬೇಕಾಗಿಲ್ಲ, ಬರುತ್ತಿದೆ ಹೊಸ Flipkart UPI