ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ಘೋಷಣೆ ಮಾಡಿರುವಂತೆ ಈಗಾಗಲೇ ಗೃಹ ಜ್ಯೋತಿ ಯೋಜನೆಯನ್ನು(Gruha Jyothi scheme) ಜಾರಿಗೊಳಿಸಿದೆ. ರಾಜ್ಯದ ಪ್ರತಿ ಮನೆಗೆ ವಿದ್ಯುತ್ ನೀಡುತ್ತೇವೆ ಎಂಬ ಆಶ್ವಾಸನೆಯನ್ನು ನೀಡಿ ಗೆದ್ದು ಬಂದಿರುವ ಸರಕಾರ ಕೆಲವೇ ಕೆಲವು ಷರತ್ತು ವಿಧಿಸಿ ಈ ಯೋಜನೆಯನ್ನು ಜಾರಿ ಗೊಳಿಸಿತ್ತು. ಗೃಹ ಜ್ಯೋತಿ ಸ್ವಂತ ಮನೆ ಇರುವವರಿಗೆ ಹಾಗೂ ಬಾಡಿಗೆ ಮನೆ ಹೊಂದಿರುವವರಿಗೆ ಲಭ್ಯವಿದೆ. ಆದರೆ ಬಾಡಿಗೆ ಗೆ ಜನರು ಒಂದೇ ಮನೆಯಲ್ಲಿ ಇರುವುದಿಲ್ಲ ಮೂಲ ಸೌಲಭ್ಯಗಳ ಕೊರತೆ ಅಥವಾ ಬಹಳ ವರುಷಗಳ ಕಾಲ ಒಂದೇ ಮನೆಯಲ್ಲಿ ಇದ್ದು ಬೇಸರ ಆಗಿದೆ ಅಥವಾ ಬೇರೆ ಕಡೆ ಉದ್ಯೋಗ ಸಿಕ್ಕಿತ್ತು ಎಂಬೆಲ್ಲ ಕಾರಣಗಳಿಗೆ ಮನೆ ಬದಲಾಯಿಸುವುದು ಸಾಮಾನ್ಯ. ಆದರೆ ಮನೆ ಬದಲಾಯಿಸಿದ ಮೇಲೆ ನಮಗೆ ಗೃಹ ಜ್ಯೋತಿ ಯೋಜನೆ ಸಿಗುತ್ತದೆ ಅಥವಾ ಇಲ್ಲ ಎಂಬ ಗೊಂದಲವೂ ಎಲ್ಲಾ ಬಾಡಿಗೆದಾರರಲ್ಲಿ ಇರುವುದು ಸಾಮಾನ್ಯ. ಆದರೆ ಈಗ ಸರ್ಕಾರ ಅದಕ್ಕೆ ಪರಿಹಾರ ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಸರ್ಕಾರ ನೀಡಿರುವ ಸಿಹಿ ಸುದ್ದಿ ಏನು?
ಬಾಡಿಗೆ ದಾರರು ಮನೆ ಬದಲಾಯಿಸುವ ವೇಳೆಯಲ್ಲಿ ಅಥವಾ ಬೇರೆ ಮನೆಗೆ ಹೋದ ತಕ್ಷಣದಲ್ಲಿ ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ಖಾತೆಗೆ ಅಡ್ರೆಸ್ ಚೇಂಜ್ ಮಾಡಿಸಲು ಆಗುವುದಿಲ್ಲ. ಅದಕ್ಕೆ ಸ್ವಲ್ಪ ಸಮಯ ತಗುಲುತ್ತದೆ. ಆದರೆ ಆ ಸಮಯದ ತನಕ ನಾವು ಕರೆಂಟ್ ಬಿಲ್ ಕಟ್ಟಬೇಕಾಗುತ್ತದೆ ಎಂದು ಯೋಚಿಸುವ ಅಗತ್ಯ ಇಲ್ಲ. ನಿಮ್ಮ ಹತ್ತಿರದ ವಿದ್ಯುತ್ ಕಚೇರಿ ( ಬೆಸ್ಕಾಂ , ಹೆಸ್ಕಾಂ ಇತ್ಯಾದಿ ) ತೆರಳಿ ನೀವು ಈಗಿರುವ ಬಾಡಿಗೆ ಮನೆಯನ್ನು ಖಾಲಿ ಮಾಡುತ್ತೇವೆ ಎಂಬ ಮಾಹಿತಿಯನ್ನು ನೀಡಬೇಕು. ಆಗ ನೀವು ಈಗ ವಾಸ ಮಾಡುತ್ತಿರುವ ಬಾಡಿಗೆ ಮನೆಯ ಗೃಹ ಜ್ಯೋತಿ(Gruha Jyothi scheme) ರದ್ದಾಗುತ್ತದೆ. ನಂತರ ನೀವು ರದ್ದಾದ ಬಳಿಕ ಸೇವಾ ಸಿಂಧು ಪೋರ್ಟಲ್ ಗೆ ತೆರಳಿ ನೀವು D-Link ಎಂಬ ಆಯ್ಕೆ ಮಾಡಿದ ನಂತರ ನಿಮ್ಮ ಹೊಸ ಬಾಡಿಗೆ ಮನೆಯ ವಿಳಾಸ ಮತ್ತು ಮನೆಯ ನಂಬರ್ ನಮೂದಿಸಬೇಕು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈಗಾಗಲೇ ಸರ್ಕಾರದ ನಿಯಮಗಳ ಪ್ರಕಾರ ಹಿಂದಿನ ಬಿಲ್ ನಲ್ಲಿ ನೀವು ಬಳಸಿದ ವಿದ್ಯುತ್ ಯೂನಿಟ್ ಗಿಂತ 10% ಹೆಚ್ಚಿನ ಯೂನಿಟ್ ಗಳಿಗೆ ಸರ್ಕಾರವು ಹಣ ಪಾವತಿ ಮಾಡುತ್ತದೆ. ಉಳಿದ ಹಣವನ್ನು ಪಾವತಿ ಮಾಡಬೇಕು. ನೀವು ಅರ್ಜಿ ಸಲ್ಲಿಸುವಾಗ ನೀಡಿದ ವಿದ್ಯುತ್ ಬಿಲ್ ನ 10% ಹೆಚ್ಚಿನ ಯೂನಿಟ್ ಗಳಿಗೆ ಮಾತ್ರ ಸರಕಾರ ಹಣ ಪಾವತಿ ಮಾಡುತ್ತದೆ. ಇದೇ ನಿಯಮ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಸಹ ಇದೆ. ಆಗಸ್ಟ್ ಒಂದರಿಂದ ಈ ಯೋಜನೆಯನ್ನು ರಾಜ್ಯದ 2 ಕೋಟಿಗೂ ಅಧಿಕ ಮಂದಿ ಪಡೆದಿದ್ದಾರೆ. ಅರ್ಜಿ ಸಲ್ಲಿಸುವಾಗ ನೀವು ಆಧಾರ್ ಕಾರ್ಡ್ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ನಿಮ್ಮ ಹಳೆಯ ವಿದ್ಯುತ್ ಬಿಲ್ ಪ್ರತಿಯನ್ನು ನೀಡಬೇಕು.
ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರ ಬೆಂಗಳೂರು ಒನ್ ಕೇಂದ್ರ ಅಥವಾ ನಿಮ್ಮ ಹತ್ತಿರದ ಬಾಪೂಜಿ ಕೇಂದ್ರ ಹಾಗೂ ವಿದ್ಯುತ್ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಇಲ್ಲವೇ ಉಚಿತ ಗ್ರಾಹಕ ಸೇವಾ ಸಂಖ್ಯೆ 1912 ಗೆ ಕರೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.
ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆಯ ಒಂದು ಕಂತಿನ ಹಣವೂ ಜಮಾ ಆಗದೆ ಇದ್ದಾರೆ ಸರ್ಕಾರವು ಹೊಸ ಮಾರ್ಗವನ್ನು ತಿಳಿಸಿದೆ.
ಇದನ್ನೂ ಓದಿ: boAt AMOLED ಡಿಸ್ಪ್ಲೇಯೊಂದಿಗೆ IP68 ರೇಟಿಂಗ್ ನ ಅಲ್ಟಿಮಾ ಸೆಲೆಕ್ಟ್ ಸ್ಮಾರ್ಟ್ ವಾಚ್, ಹೆಚ್ಚಿನ ಮಾಹಿತಿಯನ್ನು ತಿಳಿಯಿರಿ