ರಾಜ್ಯ ಸರಕಾರವು ಬಜೆಟ್ ನಲ್ಲಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಎರಡು ಸಿಹಿ ಸುದ್ದಿಯನ್ನು ನೀಡಿದೆ.

Anna bhagya Yojana

ಅನ್ನಭಾಗ್ಯ ಯೋಜನೆಯಲ್ಲಿ(Anna bhagya Yojana) ಈಗಾಗಲೇ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ನೀಡುವ 5 ಕೆ.ಜಿ ಅಕ್ಕಿಯ ಜೊತೆಗೆ ಕುಟುಂಬದ ಯಜಮಾನನ ಖಾತೆಗೆ 5 ಕೆ.ಜಿ ಯ ಹಣವನ್ನು ನೀಡುತ್ತಿದೆ. ರೇಷನ್ ಅಕ್ಕಿಯನ್ನು ಪಡೆಯಬೇಕು ಎಂದರೆ ರೇಷನ್ ಅಂಗಡಿಗೆ ಹೋಗಿ ಕ್ಯೂ ನಲ್ಲಿ ನಿಂತು ನಮ್ಮ ಸರತಿ ಬಂದಾಗ ರೇಷನ್ ಕಾರ್ಡ್ ನೀಡಿ ಅಕ್ಕಿಯನ್ನು ತೆಗೆದುಕೊಂಡು ಬರಬೇಕು. ರೇಷನ್ ಅಂಗಡಿ ಗೆ ಹೋದರೆ ಒಂದು ದಿನ ಅದಕ್ಕೆ ಮೀಸಲು ಇಡಬೇಕು. ಒಂದು ಎರಡು ತಾಸುಗಳ ಕಾಲ ಕಾಯುವುದು ಹಿರಿಯ ನಾಗರಿಕರಿಗೆ ಬಹಳ ಕಷ್ಟ ಆಗುತ್ತದೆ. ಅಂತಹ ವ್ಯಕ್ತಿಗಳು ಅನ್ನಭಾಗ್ಯ ಯೋಜನೆಯಿಂದ(Anna bhagya Yojana) ವಂಚಿತರಾಗುತ್ತಾರೆ. ಇದನ್ನು ಪರಿಗಣಿಸಿದ ಸರ್ಕಾರವು ಹೊಸದಾಗಿ ಅನ್ನ ಸುವಿಧಾ ಯೋಜನೆಯನ್ನು ಜಾರಿಗೊಳಿಸಿದೆ. ಹಾಗೂ ಹೊಸದಾಗಿ ರೇಷನ್ ಕಾರ್ಡ್ ಮಾಡುವವರಿಗೆ ಸಹ ಸಿಹಿ ಸುದ್ದಿಯನ್ನು ನೀಡಿದೆ.

WhatsApp Group Join Now
Telegram Group Join Now

ಅನ್ನ ಸುವಿಧಾ ಯೋಜನೆಗೆ ಯಾರು ಅರ್ಹರು: ಈ ಯೋಜನೆಯನ್ನು ಕೇವಲ 80 ವರ್ಷ ಮೇಲ್ಪಟ್ಟ ನಾಗರಿಕರಿಗೆ ಮಾತ್ರ ಲಭ್ಯವಿದೆ. 80 ವರ್ಷದ ಒಳಗಿನವರು ರೇಷನ್ ಪಡೆಯಲು ಮೊದಲಿನಂತೆ ರೇಷನ್ ಅಂಗಡಿಗೆ ತೆರಳಿ ರೇಷನ್ ಪಡೆಯಬೇಕು. ಇದು ಯಾವಾಗ ಜಾರಿಗೆ ಬರಲಿದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಈ ಯೋಜನೆಯ ಬಗ್ಗೆ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ. ಈ ಹಿಂದೆಯೇ ಇದರ ಬಗ್ಗೆ ಹಲವರು ಚರ್ಚೆಗಳು ನಡೆದಿದ್ದವು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿರುವವರಿಗೆ ಮಾರ್ಚ್ 31 ರ ಒಳಗೆ ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು. ಹೊಸದಾಗಿ ಏಪ್ರಿಲ್ ಒಂದರ ನಂತರ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಸಿರುವವರ ಸಂಖ್ಯೆ 3 ಲಕ್ಷಕ್ಕೂ ಅಧಿಕ.

ಇದನ್ನೂ ಓದಿ: ಹಿರಿಯರಿಗೆ ಗುಡ್ ನ್ಯೂಸ್, SBI bank ನಲ್ಲಿ 10 ಲಕ್ಷ ಹೂಡಿಕೆ ಮಾಡಿದರೆ 21ಲಕ್ಷ ಆದಾಯವನ್ನು ಪಡೆಯಬಹುದು

ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಏನೇನು ನಿಯಮಗಳು ಇವೆ?

  • ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಕುಟುಂಬದ ಆದಾಯವನ್ನು ಮೊದಲು ನೀಡಬೇಕು. ಬಿಪಿಎಲ್ ಕಾರ್ಡ್ ಪಡೆಯಲು ಕುಟುಂಬದ ವಾರ್ಷಿಕ ಆದಾಯ 1,20,000 ರೂಪಾಯಿಗಿಂತ ಹೆಚ್ಚು ಇರಬಾರದು. ಅದಕ್ಕೂ ಹೆಚ್ಚು ಆದಾಯ ಇದ್ದರೆ ನೀವು ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು.
  • ಬಿಪಿಎಲ್ ಕಾರ್ಡ್ ಮಾಡಿಸಲು ನಿಮ್ಮ ಆದಾಯ ಪ್ರಮಾಣ ಪತ್ರ ಮತ್ತು ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ನೀಡಬೇಕು. ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕೇವಲ ಆಧಾರ್ ಕಾರ್ಡ್ ಸಲ್ಲಿಸಿದರೆ ಸಾಕು.
  • ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮನೆಯಲ್ಲಿ ವೈಟ್ ಬೋರ್ಡ್ ಹೊಂದಿದ ಕಾರ್ ಇರಬಾರದು. ಎಲ್ಲೋ ಬೋರ್ಡ್ ಕಾರ್ ಅಂದರೆ ಬಾಡಿಗೆಗೆ ಓಡಿಸುವ ವಾಹನವನ್ನು ಹೊಂದಿದ್ದರೆ ನೀವು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಒಟ್ಟಾರೆ ನಾಲ್ಕು ಚಕ್ರದ ವಾಹನವನ್ನು ಹೊಂದಿರುವ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ. ಅವರು ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು.
  • ನೀವು 3 ಹೆಕ್ಟೇರ್( 7 ರಿಂದ 7.5 ಎಕರೆ) ಜಮೀನು ಹೊಂದಿದ್ದರೆ ನೀವು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅನರ್ಹರು.
  • ನಗರ ಪ್ರದೇಶಗಳಲ್ಲಿ ವಾಸಿಸುವ ಜನರ ಮನೆ 1000 sqare feet ಗಿಂತ ಜಾಸ್ತಿ ಇದ್ದರೆ ಅಂತವರು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅನರ್ಹರು. ಒಂದು ವೇಳೆ ಅರ್ಜಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದರೆ ನಿಮ್ಮ ಅರ್ಜಿ ರಿಜೆಕ್ಟ್ ಆಗುತ್ತದೆ. ಅದರ ಬದಲು ನೀವು ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.
  • ಮನೆಯ ಯಾರಾದರೂ ಸರಕಾರಿ ಹುದ್ದೆಯಲ್ಲಿ ಇದ್ದರೆ ಅವರು ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. contractor ನಲ್ಲಿ ಸರ್ಕಾರಿ ಕೆಲಸ ಮಾಡುವವರು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.
  • tax pay ಮಾಡುತ್ತಿದ್ದರೆ ನೀವು ಎಪಿಎಲ್ ಕಾರ್ಡ್ ಗೆ ಸಲ್ಲಿಸಬಹುದು.

ಇದನ್ನೂ ಓದಿ: ರೈತರಿಗೆ 50% ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ನೀಡುವ ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ಸತ್ಯಾಂಶ ತಿಳಿಸಿದ ಸರ್ಕಾರ..