ನಿಮ್ಮ ಸ್ವಂತ ಮನೆ ನನಸಾಗಬೇಕಾ? ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರದದಿಂದ ಗುಡ್ ನ್ಯೂಸ್

ಸ್ವಂತ ಮನೆನ್ನ ಕಟ್ಟಿಕೊಳ್ಳಬೇಕು ನಮ್ಮ ಕನಸು ನನಸಾಗಬೇಕು ಎನ್ನುವ ಇಚ್ಛೆ ಎಲ್ಲರದು. ಸ್ವಂತ ಸೂರಿನಲ್ಲಿ ನೆಲೆಸಬೇಕು ಎನ್ನುವ ಕನಸನ್ನ ಎಲ್ಲರೂ ಕಾಣುತ್ತಿರುತ್ತಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಎಲ್ಲರಿಗೂ ಇದು ಅವಕಾಶವಾಗುವುದಿಲ್ಲ ನಗರಗಳಲ್ಲಂತೂ ಅದು ದೂರದ ಮಾತು ಎಂದೇ ಹೇಳಬಹುದು. ಈ ಕನಸನ್ನ ನನಸು ಮಾಡಲು ನರೇಂದ್ರ ಮೋದಿಯವರು ಹೊಸ ಒಂದು ಯೋಜನೆಯನ್ನ ಜಾರಿಗೊಳಿಸಿದ್ದಾರೆ. ಇದು ಬಡ ಮತ್ತು ಮಧ್ಯಮ ವರ್ಗದವರೆಗಾಗಿ ಸುಮಾರು 60 ಸಾವಿರ ಕೋಟಿ ರೂಪಾಯಿಗಳ ಸಬ್ಸಿಡಿಯನ್ನು ಒದಗಿಸಲಿದ್ದಾರೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಕೂಡ ಇದಕ್ಕೆ ಅನುಮೋದನೆ ಸಿಕ್ಕಿದೆ. ಈ ಯೋಜನೆಯ ಅಡಿಯಲ್ಲಿ 50 ಲಕ್ಷದವರೆಗಿನ ಗೃಹ ಸಾಲಕ್ಕೆ ಶೇಕಡ ಮೂರರಿಂದ ಆರು ರಷ್ಟು ಬಡ್ಡಿ ದರವನ್ನು ನಾವು ತೆರಬೇಕಾಗುತ್ತದೆ. ಐದು ವರ್ಷದವರೆಗೆ ಜಾರಿಯಲ್ಲಿರುತ್ತದೆ. ಈ ಬಗ್ಗೆ ಇನ್ನೂ ಅಧಿಕೃತ ಪ್ರತಿಕ್ರಿಯೆ ಕೇಳಿ ಬಂದಿಲ್ಲ ಆದ್ದರಿಂದ ಶೀಘ್ರದಲ್ಲಿ ಇದರ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಮೋದಿಯವರು ಹೇಳಿದ್ದಾರೆ.

WhatsApp Group Join Now
Telegram Group Join Now

ಇನ್ನೇನು ಚುನಾವಣೆ ಹತ್ತಿರ ಬರ್ತಾ ಇದೆ. ಚುನಾವಣೆಗೂ ಮುನ್ನ ಹೊಸ ಹೊಸ ಯೋಜನೆಗಳನ್ನ ತಂದಿಡುತ್ತಿದೆ ಸರ್ಕಾರ. ಅದೇನೇ ಇರಲಿ ಆದರೆ ಈ ಯೋಜನೆಯಿಂದ ಜನರಿಗಂತು ಒಳ್ಳೆಯದೇ ಆಗ್ತಿದೆ. ಸ್ವಂತ ಮನೆಯ ಬಗ್ಗೆ ನರೇಂದ್ರ ಮೋದಿಯವರು 77ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮಾತನಾಡುವಾಗ ಈ ಯೋಜನೆಯ ಬಗ್ಗೆ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಸ್ವಂತ ಮನೆಗಳಿಲ್ಲದೆ ಬಾಡಿಗೆ ಮನೆಯಲ್ಲಿ ಜನಗಳು ಪರದಾಡುವಂಥಾಗಿದೆ. ಈ ರೀತಿ ಆಗಬಾರದು ಜನರಿಗೆ ಸ್ವಂತ ಸೂರನ್ನು ಕಲ್ಪಿಸಿ ಕೊಡಬೇಕು ಎಂದು ಮೋದಿಯವರು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಭಾಷಣ ಮಾಡುವಾಗ ಈ ಮಾತನ್ನು ಕೂಡ ಹೇಳಿದ್ದಾರೆ. ಇನ್ನು ಬಾಡಿಗೆ ಮನೆಯಲ್ಲಿ ವಾಸಿಸುವರಿಗೆ ಒಂದು ಲಕ್ಷ ರೂಪಾಯಿಗಳವರೆಗಿನ ಬಡ್ಡಿ ಸಾಲವನ್ನು ನೀಡುವುದರೊಂದಿಗೆ, ಬಡವರಿಗೆ ಹಾಗೂ ಮಾಧ್ಯಮ ವರ್ಗದವರಿಗೆ ಸ್ವಂತ ಸೂರನ್ನೂ ಕಲ್ಪಿಸಿ ಕೊಡುವುದಾಗಿ ಹೇಳಿದ್ದಾರೆ. ಈಗಾಗಲೇ ಕೆಲವು ಮನೆಗಳು ಮಂಜೂರಾಗಿದ್ದು ಇನ್ನೂ ಕೆಲವು ಉಳಿದುಕೊಂಡಿವೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಸ್ವಂತ ಮನೆ ನಿರ್ಮಾಣದ ಉದ್ದೇಶ

ಕೆಲವೊಂದು ಆದರದ ಮೇಲೆ ಪಾಲುದಾರಿಕೆಯಲ್ಲಿ ಕೈಗೆ ಎಟುಕುವ ದರದಲ್ಲಿ ಒಂದು ಮನೆ ಹಾಗೂ ಸ್ಲಂಗಳ ಪುನರ್ ನಿರ್ಮಾಣ ಕಾರ್ಯಕ್ರಮ ಮತ್ತು ಸಬ್ಸಿಡಿ ಯೋಜನೆಯ ಜಾರಿಗೊಳಿಸಲಾಗಿದೆ. ರಾಜ್ಯಗಳು ಪ್ರಸ್ತಾಪಿಸಿದ ಈ ಎಲ್ಲಾ ಪ್ರಸ್ತಾವನೆಗಳನ್ನ ಸಚಿವಾಲಯ ಪರಿಗಣಿಸಿದೆ. ತಮ್ಮ ಇಡೀ ಜೀವನವನ್ನು ಮನೆಗಾಗಿ ದುಡಿಯುತ್ತಾರೆ. ಹಣವನ್ನು ಪಾವತಿ ಮಾಡಿದ ನಂತರವೂ ಕೂಡ ಮನೆಗಳು ಸಿಗುತ್ತವೆ ಎಂದು ಖಾತರಿ ಇರುವುದಿಲ್ಲ. ಆದ್ದರಿಂದ ಮಧ್ಯಮ ವರ್ಗದವರಿಗೆ ಮತ್ತು ಬಡ ಕುಟುಂಬದವರಿಗೆ ಮನೆಯನ್ನ ನಿರ್ಮಿಸುವುದು ಅದು ಕೂಡ ನಗರಗಳಲ್ಲಿ ಇದು ತುಂಬಾ ಕಷ್ಟ ಅಂತ ಹೇಳಿದ್ದಾರೆ. 

ಅದಕ್ಕಾಗಿಯೇ ಯೋಜನೆಯನ್ನು ಜಾರಿಗೆ ತರಲಿದ್ದು ಪ್ರತಿಯೊಬ್ಬರಿಗೂ ಒಂದೊಂದು ಸ್ವಂತ ಮನೆಯಿಂದ ಕಟ್ಟಿಕೊಡುವ ಒಂದು ಪ್ರಯತ್ನವನ್ನು ಮಾಡುತ್ತಿದ್ದಾರೆ. ಇನ್ನು ಇಂದೂರಿನಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳನ್ನು ರಿಪ್ಯಾ ಬ್ರಿಗೇಟೆಡ್ ಸ್ಯಾಂಡ್ ವಿಚ್ ಪ್ಯಾನಲ್ ವ್ಯವಸ್ಥೆಯಿಂದ ನಿರ್ಮಿಸಲಾಗ್ತಾ ಇದೆ ಮತ್ತು ರಾಜ್ಕೋಟ್ ನಲ್ಲಿ ಫ್ರಾನ್ಸ್ ನ ಏಕಶಿಲೆಯ ಕಾಂಕ್ರೀಟ್ ನಲ್ಲಿ ಮನೆಯು ನಿರ್ಮಾಣ ಆಗ್ತಾ ಇದೆ. ಚೆನ್ನೈನಲ್ಲಿ ಅಮೆರಿಕನ್ ಮತ್ತು ಫಿನಿಷ್ ಫ್ರೀ ಕಾಸ್ಟ್ ಕಾಂಕ್ರೀಟ್ ಸಿಸ್ಟಮ್ ಅನ್ನ ಉಪಯೋಗಿಸಲಾಗುತ್ತಿದೆ. ಇನ್ನು ರಾಂಚಿಯಲ್ಲಿ ಜರ್ಮನಿ ತ್ರೀಡಿ ನಿರ್ಮಾಣ ವ್ಯವಸ್ಥೆಯನ್ನು ಬಳಸಲಾಗುತ್ತಿದೆ.

ಮುಂಬರುವ 12 ತಿಂಗಳಿನಲ್ಲಿ ಅಂದರೆ ಒಂದು ವರ್ಷದೊಳಗಡೆ ಒಂದು ಸಾವಿರ ಮನೆಯನ್ನು ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಹಂಚುವ ವ್ಯವಸ್ಥೆಯನ್ನು ನಮ್ಮ ಮೋದಿ ಸರ್ಕಾರ ಮಾಡುತ್ತಿದೆ. ಎಲ್ಲ ರಾಜ್ಯದ ಮುಖ್ಯಮಂತ್ರಿಗಳು ಕೂಡ ಇದಕ್ಕೆ ಸಾತ್ ನೀಡಿದ್ದಾರೆ. ಈ ರೀತಿ ಯೋಜನೆಗಳನ್ನು ರೂಪಿಸುವುದರಿಂದ ಹಲವು ಜನರಿಗೆ ಉದ್ಯೋಗವು ಕೂಡ ದೊರೆಯುತ್ತಿದೆ. ಒಟ್ಟಿನಲ್ಲಿ ನಮ್ಮ ಕೇಂದ್ರ ಸರ್ಕಾರ ಜನರಿಗಾಗಿ ತುಂಬಾ ಶ್ರಮಿಸುತ್ತಿದೆ. ಸ್ವಂತ ಮನೆಯ ಕನಸು ಎಷ್ಟು ಜನರಿಗೆ ನನಸಾಗುತ್ತದೆ ಎಂದು ಕಾದು ನೋಡಬೇಕಿದೆ. 

ಇದನ್ನೂ ಓದಿ: ಮಹಿಳೆಯರಿಗೆ ಗುಡ್ ನ್ಯೂಸ್; ಕೇಂದ್ರ ಸರ್ಕಾರದಿಂದ 3 ಲಕ್ಷ ಸಾಲ ಕೊಡಲಾಗುತ್ತದೆ, ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ನೋಡೋಣ. 

ಇದನ್ನೂ ಓದಿ: ಪಿ.ಎಂ ವಿಶ್ವಕರ್ಮ ಯೋಜನೆ ಮಾಹಿತಿ ಮತ್ತು ಅರ್ಜಿ ಸಲ್ಲಿಕೆಯ ಸಂಪೂರ್ಣ ವಿಧಾನ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram