ನಮ್ಮ ವಯಕ್ತಿಕ ಖರ್ಚುಗಳಿಗೆ ನಾವು ಹಲವು ಬಾರಿ ಬ್ಯಾಂಕ್ ಗೆ ಹೋಗಿ ಇಲ್ಲ ಯಾವುದಾದರೂ ಲೋನ್ ಕೊಡುವ ಸಂಸ್ಥೆಗೆ ಹೋಗಿ ಪರ್ಸನಲ್ ಲೋನ್ ಪಡೆಯುತ್ತೇವೆ. ಆದರೆ ಇಂದು ಎಲ್ಲ ವ್ಯವಹಾರಗಳು ಆನ್ಲೈನ್ ಅಪ್ಲಿಕೇಶನ್ ಮೂಲಕ ನಡೆಯುತ್ತಿವೆ. ಈಗಾಗಲೇ ನಾವು ಸ್ನೇಹಿತರಿಗೆ ಅಥವಾ ಯಾವುದೇ ಅಂಗಡಿಗೆ ಹೋಗಿ ಹಣ ನೀಡಬೇಕು ಎಂದರೆ ನಾವು ಗೂಗಲ್ ಪೇ ಬಳಸುತ್ತೇವೆ. ಅದರ ಜೊತೆಗೆ ಈಗ ಹೊಸದಾಗಿ ಲೋನ್ ಪಡೆಯುವ ಸೌಲಭ್ಯ ಗೂಗಲ್ ಪೇ ಹೊಂದಿದೆ. ಹಾಗಾದರೆ ಗೂಗಲ್ ಪೇ ನಲ್ಲಿ ಪರ್ಸನಲ್ ಲೋನ್ ಪಡೆಯುವುದು ಹೇಗೆ ಎಂಬುದು ತಿಳಿಯೋಣ.
ಗೂಗಲ್ ಪೇ ಅಪ್ಲಿಕೇಶನ್ ನಿಂದ ಸಾಲ ಪಡೆಯಲು ಅರ್ಹತೆ ಏನೇನು?: ಗೂಗಲ್ ಪೇ ಅಪ್ಲಿಕೇಶನ್ ಮೂಲಕ ಸಾಲ ಪಡೆಯಲು ಅರ್ಜಿ ಸಲ್ಲಿಸಲು ಮೊದಲು ಭಾರತೀಯ ನಾಗರೀಕರು ಆಗಿರಬೇಕು. ಕನಿಷ್ಠ ವಯಸ್ಸು 18 ವರ್ಷ. ಕಡ್ಡಾಯವಾಗಿ ಪಾನ್ ಕಾರ್ಡ್ ಹೊಂದಿರಬೇಕು. ಯಾವುದೇ ಒಂದು ಸ್ಥಿರ ಆದಾಯದ ಮೂಲ ಹೊಂದಿರಬೇಕು.
ಗೂಗಲ್ ಪೇ ಮೂಲಕ ಸಾಲ ಪಡೆಯುವ ವಿಧಾನ :-
Google Pay ಮೂಲಕ ಸಾಲ ಪಡೆಯಲು ಮೊದಲು ನಿಮ್ಮ ಗೂಗಲ್ ಪೇ ಅಪ್ಲಿಕೇಶನ್ ಯಾವ ವರ್ಶನ್ ನಲ್ಲಿ ಇದೆ ಎಂಬುದನ್ನು ಪರಿಶೀಲಿಸಿ. ನಂತರ ಗೂಗಲ್ ಪೇ ಅಪ್ಲಿಕೇಶನ್ ಓಪನ್ ಮಾಡಿ “ಸಾಲಗಳು(Financial Services ಅಥವಾ go to a loan) ಎಂಬ ಆಪ್ಷನ್ ಆಯ್ಕೆ ಮಾಡಿ. ನಂತರ ನೀವು 8 ಲಕ್ಷದ ವರೆಗೆ ಸಾಲ ಪಡೆಯಬಹುದು. ಅಪ್ಲೈ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಮೇಲ್ ಐಡಿ ಮತ್ತು ಕಾಂಟ್ಯಾಕ್ಟ್ ಡೀಟೈಲ್ಸ್ ವಿವರಗಳನ್ನು ಭರ್ತಿ ಮಾಡಿ ನಂತರ ನಿಮ್ಮ ವಿಳಾಸದ ಪಿನ್ ಕೋಡ್ ಹಾಕಬೇಕು.
ನಂತರ ನಿಮ್ಮ ಹೆಸರು ಪಾನ್ ಕಾರ್ಡ್ ನಂಬರ್ ಹಾಕ್ಬೇಕು. ನಂತರ ಯಾವ ಲೋನ್ ಪಡೆಯುತ್ತೀರಿ ಎಂಬ ಬಗ್ಗೆ ಮಾಹಿತಿ ನೀಡಬೇಕು. ನಂತರ ನಿಮ್ಮ ಉದ್ಯೋಗದ ಮಾಹಿತಿ ಹಾಗೂ ನಿಮ್ಮ ವಿಳಾಸದ ವಿವರಗಳು ಹಾಗೂ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಗಳನ್ನು ಫಿಲ್ ಮಾಡಿ. ನಂತರ ನಿಮಗೆ ಎಷ್ಟು ಹಣ ಬೇಕು ಎಂಬುದನ್ನು ನೀಡಿ. ನಂತರ ಲೋನ್ ಅಪ್ರೂವ್ ಆಗಲು ಸ್ವಲ್ಪ ಸಮಯ ಕಾಯಬೇಕು.ಲೋನ್ ಅಪ್ರೂವ್ ಆದ ಬಳಿಕ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ಜಮಾ ಮಗಿತ್ತದೆ. ಜೊತೆಗೆ ಹಣ ಮರುಪಾವತಿಯನ್ನು ಸಹ ಸುಲಭವಾಗಿ ಮಾಡಲು ಸಾಧ್ಯವಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಗೂಗಲ್ ಪೇ ಲೋನ್ ನಿಂದ ಏನು ಉಪಯೋಗ?
- ನೀವು ಇರುವ ಸ್ಥಳದಲ್ಲಿಯೇ ನಿಮಗೆ ಬಹಳ ಕಡಿಮೆ ಸಮಯದಲ್ಲಿ ಲೋನ್ ಸಿಗುತ್ತದೆ.
- ಯಾವುದೇ ಬ್ಯಾಂಕ್ ಅಥವಾ ಆಫೀಸ್ ಗೆ ಹತ್ತಾರು ಬಾರಿ ಲೋನ್ ಪಡೆಯಲು ಅಲೆಯಬೇಕು ಎಂಬುದಿಲ್ಲ.
- ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಸಾಲ ಮರುಪಾವತಿಯ ಅವಧಿಯನ್ನು ನಿರ್ಧರಿಸಲು ಸಾಧ್ಯವಾಗುತ್ತದೆ.
- ಸಾಲ ಪಡೆಯುವಾಗ ಸ್ಕ್ಯಾಮ್ ಇರಬಹುದು ಎಂಬ ಭಯ ಇರುವುದಿಲ್ಲ.
- ನೇರವಾಗಿ ಹಣ ಖಾತೆಗೆ ಜಮ ಆಗುತ್ತದೆ.
- ಸಾಲದ ಮರುಪಾವತಿ EMI ಆಪ್ಷನ್ ಲಭ್ಯವಿದೆ.
- ಸ್ನೇಹಿತರ ಬಳಿ ಅಥವಾ ನೆಂಟರ ಬಳಿಗೆ ಸಾಲ ಕೇಳುವ ಅಗತ್ಯ ಇರುವುದಿಲ್ಲ.
ಇದನ್ನೂ ಓದಿ: 50MP ಕ್ಯಾಮೆರಾ ಮತ್ತು 6,000mAh ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್ Motorola G64 5G ಯ ಮಾರಾಟದ ಮೊದಲ ದಿನ ಇಂದು!
ಇದನ್ನೂ ಓದಿ: SSLC ನಂತರ ಮುಂದೇನು ಎಂಬ ಯೋಚನೆಯೇ? ಇಲ್ಲಿದೆ ಕೆಲವು ಸಲಹೆಗಳು