ಹಿಂದಿನ ಕಾಲದ ಹಾಗೆ ಹೆಣ್ಣು ಮನೆಯಲ್ಲಿ ಇರುಬೇಕು ಗಂಡು ಮಾತ್ರ ಶಿಕ್ಷಣ ಅಥವಾ ಉನ್ನತ ಹುದ್ದೆಯಲ್ಲಿ ಇರಬೇಕು ಎಂಬ ಹಳೆಯ ರೂಢಿಗಳು ಈಗ ಇಲ್ಲ. ಈಗ ಹೆಣ್ಣು ಸ್ವಾವಲಂಬಿಯಾಗಿ ತನ್ನ ಬದುಕನ್ನು ಕಟ್ಟಿಕೊಳ್ಳಲು ಎಲ್ಲಾ ಸಾಮರ್ಥ್ಯ ಹೊಂದಿದ್ದಾಳೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಎಂದೇ ಸರಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗಾದರೆ ಪ್ರಮುಖ ಯೋಜನೆಗಳ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.
ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಇರುವ ಪ್ರಮುಖ ಯೋಜನೆಗಳು:-
1) ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ: ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರು 2015 ರಲ್ಲಿ ಲಿಂಗ ಸಮಾನತೆ ಮತ್ತು ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಪ್ರಾರಂಭಿಸಿದ ಯೋಜೆನೆಯೇ ‘ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಈ ಯೋಜನೆಯು l ಲಿಂಗ ಆಧಾರಿತ ತಾರತಮ್ಯವನ್ನು ನಿರ್ಮೂಲನೆ ಮಾಡುವ ಹಾಗೂ ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಜಿಲ್ಲಾ ಮಟ್ಟದಲ್ಲಿ ಲಿಂಗ-ಸಮಾನ ಉಪಕ್ರಮಗಳಿಗೆ ಆರ್ಥಿಕ ಬೆಂಬಲವನ್ನು ಮತ್ತು ಲಿಂಗ ಆಧಾರಿತ ಗರ್ಭಪಾತ ತಡೆಯುವಲ್ಲಿ ಹಾಗೂ ಸುರಕ್ಷತೆ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಪ್ರಚಾರದಂತಹ ಚಟುವಟಿಕೆಗಳಿಗೆ ಉತ್ತೇಜನ ನೀಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
2) ಸಿಬಿಎಸ್ಇ ಉಡಾನ್ ಯೋಜನೆ:- ಇದು ಸಹ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಯೋಜನೆ ಆಗಿದೆ. ಈ ಯೋಜನೆಯ ಪ್ರಮುಖ ಅಂಶಗಳು ಇಲ್ಲಿವೆ :-
- 11 ಮತ್ತು 12 ನೇ ತರಗತಿಯ ಹೆಣ್ಣುಮಕ್ಕಳು ಉದ್ದೇಶ: ತಂತ್ರಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಶಿಕ್ಷಣ ಮತ್ತು ವೃತ್ತಿಜೀವನಕ್ಕೆ ಪ್ರೋತ್ಸಾಹ ನೀಡುವುದು.
- ಉಚಿತ ಶೈಕ್ಷಣಿಕ ಸಾಮಗ್ರಿಗಳ ವಿತರಣೆ, ಆನ್‌ಲೈನ್ ತರಗತಿಗಳು, ವೃತ್ತಿಪರ ಮಾರ್ಗದರ್ಶನ ನೀಡುವುದು ಈ ಯೋಜನೆಯ ಉದ್ದೇಶ ಆಗಿದೆ.
ಅರ್ಹತೆ: 10ನೇ ತರಗತಿಯಲ್ಲಿ ವಿಜ್ಞಾನ ಮತ್ತು ಗಣಿತದಲ್ಲಿ ಕನಿಷ್ಠ 70% ಅಂಕಗಳು.
3) ಬಾಲಿಕಾ ಸಮೃದ್ಧಿ ಯೋಜನೆ: ಭಾರತದ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಬಾಲಿಕಾ ಸಮೃದ್ಧಿ ಯೋಜನೆಯನ್ನೂ 2018 ರಲ್ಲಿ ಭಾರತ ಸರ್ಕಾರದ ಆರಂಭಿಸಿತ್ತು. ದೇಶದ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಸಬಲೀಕರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಹೆಣ್ಣು ಮಕ್ಕಳಿಗೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳನ್ನು ಒದಗಿಸುವ ಮೂಲಕ ಅವರ ಸಾಮರ್ಥ್ಯವನ್ನು ಪೂರ್ಣವಾಗಿ ವಿಕಸನಗೊಳಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಮುಖ್ಯವಾಗಿ ಜನನದ ಸಮಯದಲ್ಲಿ ನಗದು ಹಸ್ತಾಂತರ ಮಾಡುತ್ತಾರೆ ಹಾಗೂ 18 ವರ್ಷದವರೆಗೆ ವಾರ್ಷಿಕ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: BMTC 2500 ಕಂಡಕ್ಟರ್ ಹುದ್ದೆಗಳ ನೇಮಕಾತಿಗೆ ಅಪ್ಲಿಕೇಶನ್ ಲಿಂಕ್ ಬಿಡುಗಡೆ ಮಾಡಿದೆ.
4) ಸುಕನ್ಯಾ ಸಮೃದ್ಧಿ ಯೋಜನೆ :-
ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಭಾರತ ಸರ್ಕಾರದಿಂದ ಉತ್ತಮ ಯೋಜನೆ ಆಗಿದ್ದು, ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಮತ್ತು ವಿವಾಹದ ವೆಚ್ಚಗಳಿಗೆ ಹಣಕಾಸು ನೆರವು ನೀಡುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಲು ಸಹಾಯ ಮಾಡುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತವು ಸೆಕ್ಷನ್ 80 ಸಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ. ಹೆಣ್ಣು ಮಗುವಿನ ಜನನದ ನಂತರ 10 ವರ್ಷಗಳೊಳಗೆ ಯಾವುದೇ ಸಮಯದಲ್ಲಿ ಖಾತೆಯನ್ನು ತೆರೆಯಬಹುದಾಗಿದೆ. ಖಾತೆ ತೆರೆಯುವಾಗ ಕನಿಷ್ಠ 250 ರೂಪಾಯಿ ಹೂಡಿಕೆ ಮಾಡಬೇಕು. ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ 250 ರೂಪಾಯಿ ಹಾಗೂ ಗರಿಷ್ಠ 1,50,000 ಲಕ್ಷ ರೂಪಾಯಿ ಠೇವಣಿ ಮಾಡಬಹುದಾಗಿದೆ.
5) ಮಾಧ್ಯಮಿಕ ಶಿಕ್ಷಣದ ಬಾಲಕಿಯರಿಗೆ ರಾಷ್ಟ್ರೀಯ ಪ್ರೋತ್ಸಾಹಕ :- ಶಿಕ್ಷಣ ವಂಚಿತ ಹುಡುಗಿಯರ ಶಿಕ್ಷಣವನ್ನು ಉತ್ತೇಜಿಸುವ ಈ ಯೋಜನೆಯು 10ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ 3,000 ರೂಪಾಯಿ ಸ್ಥಿರ ಠೇವಣಿಯನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅವಿವಾಹಿತರಾಗಿರಬೇಕು ಹಾಗೂ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳು ಹಾಗೂ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ನೋಂದಾಯಿಸಿಕೊಳ್ಳಬೇಕು ಎಂಬ ನಿಯಮ ಇದೆ.
ಇದನ್ನೂ ಓದಿ: ಆಂಪಿಯರ್ ನೆಕ್ಸಸ್ EV ಸ್ಕೂಟರ್, ಅತ್ಯುತ್ತಮ ಮೈಲೇಜ್ ನೊಂದಿಗೆ ಶಕ್ತಿಯುತ ಸವಾರಿ!