ಸರ್ಕಾರಿ ಶಾಲೆಗಳು ಎಂದರೆ ಕನ್ನಡ ಮಾಧ್ಯಮ ಇರುತ್ತದೆ. ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಇಂಗ್ಲಿಷ್ ಬಹಳ ಮುಖ್ಯ ಎಂದು ಯೋಚಿಸುವ ಪಾಲಕರಿಗೆ ಈಗ ಒಂದು ಸಿಹಿ ಸುದ್ದಿ ನೀಡುತ್ತಿದೆ ನಮ್ಮ ರಾಜ್ಯ ಸರ್ಕಾರ. ಇನ್ನು ಮುಂದೆ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳ ಮುಂದಿನ ಭವಿಷ್ಯದ ಸಲುವಾಗಿ ಸ್ಪೋಕನ್ ಇಂಗ್ಲೀಷ್ ಕ್ಲಾಸ್ ಆರಂಭ ಮಾಡುವ ಬಗ್ಗೆ ಈಗಾಗಲೇ ಶಿಕ್ಷಣ ಇಲಾಖೆ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದೆ.
ಸ್ಪೋಕನ್ ಇಂಗ್ಲಿಷ್ ಕ್ಲಾಸ್ ಹೇಗಿರಲಿದೆ :- ಶಿಕ್ಷಣ ಇಲಾಖೆ ಸರಕಾರಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಹಾಗೂ ಉನ್ನತ ಶಿಕ್ಷಣದಲ್ಲಿ ಇಂಗ್ಲಿಷ್ ಭಾಷೆ ಅರಿವು ಇರುವ ಕಾರಣದಿಂದ ಈಗ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಆರಂಭಿಸುತ್ತಿದೆ. ಪ್ರತಿ ಶನಿವಾರ ಸ್ಪೋಕನ್ ಇಂಗ್ಲಿಷ್ ತರಗತಿ ಇರಲಿದ್ದು. 40 ನಿಮಿಷಗಳ ಕಾಲ ಇಂಗ್ಲಿಷ್ ನಲ್ಲಿ ವಾಕ್ಯ ರಚಿಸುವುದು, ಇಂಗ್ಲಿಷ್ ಪದಬಳಕೆ ಕ್ರಮಗಳು ಹಾಗೂ ಇಂಗ್ಲಿಷ್ ಸ್ಪೀಚ್ ಹೀಗೆ ಇಂಗ್ಲಿಷ್ ಭಾಷೆಯ ಬಗ್ಗೆ ಜ್ಞಾನ ಮತ್ತು ಇಂಗ್ಲೀಷ್ ಭಾಷೆಯನ್ನು ಮಾತನಾಡುವುದು ಹೇಗೆ ಎಂಬುದನ್ನು ಕಲಿಯಬಹುದಾಗಿದೆ.
ಇಂಗ್ಲಿಷ್ ಭಾಷೆಯ ಕಲಿಕೆ ಏಕೆ ಮುಖ್ಯ?: ಇಂದಿನ ದಿನಗಳಲ್ಲಿ ಪ್ರತಿಯೊಂದು documents ಗಳು ಹೆಚ್ಚಾಗಿ ಇಂಗ್ಲಿಷ್ ನಲ್ಲಿ ಇರಲಿದೆ ಹಾಗೂ ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಎಲ್ಲ ವಿಷಯಗಳು ಇಂಗ್ಲಿಷ್ ಭಾಷೆಯಲ್ಲಿ ಇರುವ ಕಾರಣದಿಂದ ಇಂಗ್ಲಿಷ್ ಭಾಷೆಯ ಕಲಿಕೆ ಬಹಳ ಮುಖ್ಯ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಸ್ಪೋಕನ್ ಇಂಗ್ಲಿಷ್ ಕ್ಲಾಸ್ ನಲ್ಲಿ ಏನೇನು ಕಲಿಯಬಹುದು?
- ಪರಿಚಯ ಕಲಿಸುವುದು:- ವಿದ್ಯಾರ್ಥಿಗಳ ಗುಂಪನ್ನು ರಚಿಸಿ, ವಿದ್ಯಾರ್ಥಿಗಳು ಶಾಲೆಯ ಸಂಪೂರ್ಣ ಪರಿಚಯವನ್ನು ಇಂಗ್ಲಿಷ್ ಭಾಷೆಯಲ್ಲಿ ವಿವರಣೆ ನೀಡುವುದನ್ನು ಕಲಿಸುವುದು. ಇಂದು ಮುಂದೆ ವಿದ್ಯಾರ್ಥಿಗಳು ಸಂದರ್ಶಕ್ಕೆ ಹೋದಾಗ ಇಂಟರ್ವ್ಯೂ ನಡೆಸುವವರ ಎದುರು ತಮ್ಮ ಪರಿಚಯ ಹೇಳಲು ಈಗಲೇ ಟ್ರೈನಿಂಗ್ ಸಿಕ್ಕಿದಾಗ ಆಗುತ್ತದೆ. ಜೊತೆಗೆ ಒಂದು ವಿಷಯದ ಬಗ್ಗೆ ಇಂಗ್ಲಿಷ್ ನಲ್ಲಿ ಪರಿಚಯ ಮಾಡುವುದು ಹೇಗೆ ಎಂಬುದನ್ನು ತಿಳಿಯಬಹುದು.
- ನಿರೂಪಣೆ :- ಶಾಲೆಗಳಲ್ಲಿ ಯಾವುದೇ ಕಾರ್ಯಕ್ರಮ ಇದ್ದರೂ ವಿದ್ಯಾರ್ಥಿಗಳಿಂದ ಇಂಗ್ಲಿಷ್ ಭಾಷೆಯಲ್ಲಿ ಕಾರ್ಯಕ್ರಮದ ನಿರೂಪಣೆ ಮಾಡಿಸುವುದು. ಇದು ಮಕ್ಕಳಿಗೆ ಇಂಗ್ಲಿಷ್ ಭಾಷೆಯ ಬಗ್ಗೆ ಇನ್ನಷ್ಟು ಆಳವಾಗಿ ಕಲಿಯಲು ಸಾಧ್ಯವಾಗುತ್ತದೆ.
- ಅನುಭವ ಹೇಳುವುದು :- ಕ್ಲಾಸ್ ನಲ್ಲಿ ತಮ್ಮ ಯಾವುದೇ ಸನ್ನಿವೇಶ ಅಥವಾ ತಮಗೆ ಆಗಿರುವ ಕೆಟ್ಟ ಅಥವಾ ಒಳ್ಳೆಯ ಘಟನೆಯ ಅನುಭವದ ಬಗ್ಗೆ ಇಂಗ್ಲಿಷ್ ನಲ್ಲಿ ಮಾತನಾಡುವುದು ಹೇಳಿಕೊಡುವುದು.
- ಚಿತ್ರ ಗುರುತಿಸುವುದು :- LKG ಹಾಗೂ ನಲಿ ಕಲಿ ತರಗತಿಯ ಮಕ್ಕಳಿಗೆ ಪ್ರಾಣಿಗಳು, ಪಕ್ಷಿಗಳು, ಹಣ್ಣು, ತರಕಾರಿ, ಹಾಗೂ ಮಾನವನ ದೇಹಗಳು ಹೀಗೆ ಇಂಗ್ಲಿಷ್ ಚಾರ್ಟ್ ರಚಿಸಿ ಮಕ್ಕಳಿಗೆ ಇಂಗ್ಲಿಷ್ ನಲ್ಲಿಯೇ ಅವುಗಳನ್ನು ಗುರುತಿಸಲು ಹೇಳುವುದು.
ಸ್ಪೋಕನ್ ಇಂಗ್ಲಿಷ್ ಕ್ಲಾಸ್ ಆರಂಭ ಮಾಡುವುದರಿಂದ ಸರಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯ ಮಕ್ಕಳು ಬರುವ ಸಾಧ್ಯತೆ ಇದೆ. ಜೊತೆಗೆ ಕನ್ನಡ ಭಾಷಾ ಕಲಿಕೆಯ ಜೊತೆಗೆ ಇಂಗ್ಲಿಷ್ ಭಾಷೆಯ ಬಳಕೆಯನ್ನು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದ ಕಲಿಸಿದರೆ ಮುಂದಿನ ಅವರ ಭವಿಷ್ಯಕ್ಕೆ ಹಾಗೂ ದೇಶದ ಅಭಿವೃದ್ದಿಗೆ ಇದು ಉತ್ತಮ ಕೊಡುಗೆ ಆಗುತ್ತದೆ. ಇಂಗ್ಲಿಷ್ ಭಾಷೆಯನ್ನು ಮಕ್ಕಳಿಗೆ ಸುಲಭವಾಗಿ ಕಲಿಯುವಂತೆ ಮಾಡಲು ಈ ಯೋಜನೆ ರೂಪಿಸಲಾಗಿದೆ.
ಇದನ್ನೂ ಓದಿ: ಜನ್-ಧನ್ ಖಾತೆಯಿಂದ 10,000 ರೂ. ಓವರ್‌ಡ್ರಾಫ್ಟ್ ಸೇರಿದಂತೆ ಅನೇಕ ಲಾಭಗಳು! ಈಗಲೇ ತೆರೆಯಿರಿ!