ಗ್ರಾಮ ಒನ್ ಕೇಂದ್ರ ಪ್ರಾಂಚೈಸಿಗೆ ಅರ್ಜಿ ಆಹ್ವಾನಿಸಲಾಗಿದೆ; ಹೀಗೆ ಅರ್ಜಿ ಸಲ್ಲಿಸಿ

Gram One Franchise

ಗ್ರಾಮ್ ಒನ್ ಕೇಂದ್ರ ಈಗ ಎಲ್ಲ ತಾಲೂಕು ಮಟ್ಟದ ಹಾಗೂ ಗ್ರಾಮ ಮಟ್ಟದಲ್ಲಿ ಇದೆ. ಯಾವುದೇ ಸರ್ಕಾರಿ ಯೋಜನೆಗೆ ಅಥವಾ ಯಾವುದೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಗ್ರಾಮ್ ಒನ್ ಕೇಂದ್ರಕ್ಕೆ ಭೇಟಿ ನೀಡುವುದು ಈಗ ಸಾಮಾನ್ಯ. ಸರ್ಕಾರ ಮತ್ತು ಜನರ ನಡುವೆ ಸಮರ್ಪಕ ಮಾಹಿತಿ ಒದಗಿಸುವ ಕೇಂದ್ರ ಎಂದರೆ ಅದು ಗ್ರಾಮ್ ಒನ್. ಭಾರತದಾದ್ಯಂತ ಹಲವಾರು ಕಡೆ ಗ್ರಾಮ್ ಒನ್ ಸೇವಾ ಕೇಂದ್ರ ಇದೆ. ಜನರಿಗೆ ನೆರವಾಗುವ ನಿಟ್ಟಿನಲ್ಲಿ ಗ್ರಾಮ್ ಒನ್ ಕೇಂದ್ರ ತೆರೆಯಲು ಇಚ್ಚಿಸುವವರು ಅರ್ಜಿ ಸಲ್ಲಿಸಬಹುದು. ಸ್ವಂತ ಉದ್ಯಮ ಮಾಡಲು ಬಯಸುವ ಯುವಕರಿಗೆ ಇದು ಒಂದು ಒಳ್ಳೆಯ ಅವಕಾಶ ಆಗಿದೆ. ಪ್ರಾಂಚೈಸಿಗಳಿಗೆ ಸರ್ಕಾರದಿಂದ ತರಬೇತಿ, ಮಾರ್ಗದರ್ಶನ ಮತ್ತು ಆರ್ಥಿಕ ಸಹಾಯ ಸಿಗುತ್ತದೆ. ಹಾಗಾದರೆ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಜಿ ಸಲ್ಲಿಸಲು ರೂಲ್ಸ್ ಗಳು ಏನೇನು ಇವೆ ಎಂಬುದನ್ನು ತಿಳಿಯೋಣ. ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಅರ್ಜಿ ಸಲ್ಲಿಸುವಾಗ ನೀಡಬೇಕಾದ ದಾಖಲೆಗಳು :- ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ಮಾಹಿತಿ, ಪ್ರಾಂಚೈಸಿ ಆರಂಭಿಸಿಲು ಉದ್ದೇಶಿಸಿರುವ ಸ್ಥಳದ ಬಗ್ಗೆ ಮಾಹಿತಿ, ಗಣಕಯಂತ್ರ, ಜೆರಾಕ್ಸ್ ಮಶೀನ್, ಪ್ರಿಂಟರ್, ಹಾಗೂ ಇನ್ನಿತರ ಉಪಕರಣಗಳು.

ಪ್ರಾಂಚೈಸಿ ನಿರ್ಮಿಸುವ ಸ್ಥಳಗಳು:- ನಿಟ್ಟೂರು, ಕೆ.ಬಡಗ, ಬಿ.ಶೆಟ್ಟಿಗೇರಿ, ಕಿರುಗೂರು, ಬಲ್ಯಮಂಡೂರು, ಪೊನ್ನಂಪೇಟೆಯ ನಾಲ್ಕೇರಿ, ಬೆಟ್ಟದಳ್ಳಿ, ಸೋಮವಾರಪೇಟೆಯ ಗರ್ವಾಲೆ ಕಾಕೋಟು ಪರಂಬು, ಬೇಟೋಳಿ, ಮಡಿಕೇರಿಯ ಹೊಕ್ಕೇರಿ ಹಾಕತ್ತೂರು ಮತ್ತು ಕರಿಕೆ ಗ್ರಾಮಗಳಲ್ಲಿ ಪ್ರಾಂಚೈಸಿ ತೆರೆಯಬಹುದು.

ಅರ್ಜಿ ಸಲ್ಲಿಸುವುದು ಹೇಗೆ?: ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ವೆಬ್ಸೈಟ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ. ಗ್ರಾಮ ಒನ್ ಫ್ರಾಂಚೈಸಿ ತೆರೆಯಲು ಅರ್ಜಿ ಭರ್ತಿ ಮಾಡಿ ಸೂಕ್ತ ದಾಖಲೆಗಳನ್ನು ನೀಡಬೇಕು.

ಗ್ರಾಮ ಒನ್ ಕೇಂದ್ರವನ್ನೂ ಸರ್ಕಾರ ಆರಂಭಿಸಿದ ಉದ್ದೇಶಗಳು ಏನು?

  • ಗ್ರಾಮೀಣ ಮಟ್ಟದಲ್ಲಿ ಎಲ್ಲಾ ನಾಗರಿಕರಿಗೆ ಒಂದೇ ಕಡೆಯಲ್ಲಿ ಸರ್ಕಾರಿ ಸೇವೆಗಳು ಸಿಗುವಂತೆ ಮಾಡುವುದು.
  • ಸರ್ಕಾರಿ ಕೆಲಸಗಳಿಗೆ ಜಿಲ್ಲೆ, ತಾಲ್ಲೂಕು, ಹೋಬಳಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲದೆ ಸ್ಥಳೀಯವಾಗಿ ಸೇವೆಗಳನ್ನು ಒದಗಿಸುವುದು.
  • ಮಧ್ಯವರ್ತಿಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ಭ್ರಷ್ಟಾಚಾರ ತಡೆಯಲು.
  • ತರಬೇತಿ ಪಡೆದ ಸಿಬ್ಬಂದಿಗಳ ಮೂಲಕ ಜನರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುವುದು.
  • ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಉತ್ತೇಜನ ನೀಡುವುದು.

ಗ್ರಾಮ ಒನ್ ಕೇಂದ್ರಗಳಲ್ಲಿ ಪಡೆಯಬಹುದಾದ ಸೇವೆಗಳು: 750 ಕ್ಕೂ ಹೆಚ್ಚು ಸರ್ಕಾರಿ ಸೇವೆಗಳನ್ನು ಪಡೆಯಬಹುದು. ಸಕಾಲದಲ್ಲಿ ಜನನ, ಮರಣ ಮದುವೆ ಪ್ರಮಾಣಪತ್ರ ಸಿಗುತ್ತದೆ. ಯಾವುದೇ ಆಸ್ತಿ ಕಚೇರಿ , ಯಾವುದೇ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ. ರಾಜ್ಯ ಅಥವಾ ಕೇಂದ್ರ ಮಂತ್ರಿಗಳ ಕಚೇರಿಗೆ ದೂರು ಸಲ್ಲಿಸಬಹುದು. ಅಷ್ಟೇ ಅಲ್ಲದೆ ಯಾವುದೇ ಸ್ಕೀಮ್ ನ ಹಣ ತಾಂತ್ರಿಕ ದೋಷದಿಂದ ಬಾರದೆ ಇದ್ದರೆ ಸಮಸ್ಯೆಯ ಪರಿಹಾರ ಶೀಘ್ರ ಆಗಲಿದೆ. ಗ್ರಾಮ್ ಒನ್ ಕೇಂದ್ರವು ಈಗಾಗಲೇ ನಿಮ್ಮ ಸ್ಥಳದ ಹತ್ತಿರವೂ ಇರುತ್ತದೆ. ನಿಮ್ಮ ಯಾವುದೇ ಸರಕಾರಿ ಸಂಬಂಧಿತ ಸಮಸ್ಯೆಗಳಿಗೆ ಗ್ರಾಮ್ ಒನ್ ಕೇಂದ್ರಕ್ಕೆ ಭೇಟಿ ನೀಡಿ.

ಇದನ್ನೂ ಓದಿ: ಸರಳ ವಿವಾಹ ಯೋಜನೆ ಅಡಿಯಲ್ಲಿ 50,000 ರೂಪಾಯಿ ಸಿಗಲಿದೆ.

ಇದನ್ನೂ ಓದಿ: ಸುಮಾರು 13000 ರೂಪಾಯಿಗಳ ರಿಯಾಯಿತಿಯೊಂದಿಗೆ Flipkart ನಲ್ಲಿ Apple iPhone 15 ನ ವಿಶೇಷತೆಯನ್ನು ನೀವೇ ನೋಡಿ