ಈಗಾಗಲೇ ಸರ್ಕಾರ ಎಲ್ಲ ತೆರಿಗೆಗಳನ್ನು ಏರಿಸಿದೆ ಎಂಬ ಆರೋಪ ಎದುರಿಸುತ್ತಿರುವ ರಾಜ್ಯ ಸರ್ಕಾರವು ಈಗ ಸರಿಯಾದ ಸಮಯಕ್ಕೆ ತೆರಿಗೆ ಪಾವತಿ ಮಾಡಿದರೆ ರಿಯಾಯಿತಿ ಪಡೆಯಿರಿ ಎಂದು ರಾಜ್ಯದ ಜನರಿಗೆ ಗುಡ್ ನ್ಯೂಸ್ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ. 5 ರಷ್ಟು ರಿಯಾಯಿತಿ ಪಡೆಯಿರಿ ಎಂದು ಘೋಷಣೆ ಮಾಡಿರುವುದು ಸಂತಸ ತಂದಿದೆ.
ಯಾರು ಈ ಲಾಭವನ್ನು ಪಡೆಯಬಹುದು: ಈ ವಿಶೇಷ ರಿಯಾಯಿತಿಯನ್ನು ಗ್ರಾಮ್ ಪಂಚಾಯಿತಿಯಲ್ಲಿ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಿಗೆ ಪಂಚಾಯತ್ ರಾಜ್ ವಿಧಿಸುವ ತೆರಿಗೆಯನ್ನು ಪಾವತಿಸುವವರು ಈ ಲಾಭವನ್ನು ಪಡೆಯಬಹುದು.
ಯಾವ ಸಮಯದಲ್ಲಿ ತೆರಿಗೆ ಪಾವತಿಸಬೇಕು?: ಹಿಂದಿನ ಆರ್ಥಿಕ ವರ್ಷ ಮಾರ್ಚ್ 31 2024 ರಂದು ಕೊನೆಗೊಂಡಿದೆ ಈಗ ಹೊಸ ಆರ್ಥಿಕ ವರ್ಷ ಏಪ್ರಿಲ್ 1, 2024 ರಿಂದ ಆರಂಭ ಆಗುತ್ತದೆ. ಆರ್ಥಿಕ ವರ್ಷ ಆರಂಭ ಆಗುವ ಮೂರು ತಿಂಗಳು ಅಂದ್ರೆ ಏಪ್ರಿಲ್ ತಿಂಗಳಿಂದ ಜೂಲೈ ತಿಂಗಳ ಅಂತ್ಯದ ಒಳಗೆ ತೆರಿಗೆ ಪಾವತಿ ಮಾಡಿದರೆ ಮಾತ್ರ ಈ ಯೋಜನೆಯ ಲಾಭ ಪಡೆಯಲು ಸಾಧ್ಯ.
ತೆರಿಗೆ ಪಾವತಿಗೆ ಈಗ ಆನ್ಲೈನ್ ವ್ಯವಸ್ಥೆ :- ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಬರುವ ಆಸ್ತಿ ಮತ್ತು ಮನೆ ತೆರಿಗೆಗಳನ್ನು ಇನ್ನು ಮುಂದೆ ಆನ್ಲೈನ್ ಮೂಲಕ ಪಾವತಿಸಬಹುದು. ನೀವು ಪಂಚಾಯತ್ ರಾಜ್ ಇಲಾಖೆಯ ಅಧಿಕೃತ ವೆಬ್ಸೈಟ್ https://bsk.karnataka.gov.in/BSK/csLOgin/loginpage ತೆರಳಿ ನಿಮ್ಮ ಮಾಹಿತಿಯನ್ನು ಫಿಲ್ ಮಾಡಿ ನಂತರ ನಿಮ್ಮ ಬ್ಯಾಂಕ್ ಅಕೌಂಟ್ ಇಂದ ಆನ್ಲೈನ್ ಮೂಲಕ ತೆರಿಗೆ ಪಾವತಿಸಬಹುದು. ಈ ಯೋಜನೆಯಿಂದ ತೆರಿಗೆ ಪಾವತಿಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಸಾಧ್ಯವಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಪಾರದರ್ಶಕತೆ ತರಲು ಇನ್ನು ಮುಂದೆ ಪಹಣಿ ಗೆ ಆಧಾರ್ ಲಿಂಕ್ ಕಡ್ಡಾಯ ಗೊಳಿಸಿದೆ.
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಈಗಾಗಲೇ ಆನ್ಲೈನ್ ತೆರಿಗೆ ಪಾವತಿ, ಆನ್ಲೈನ್ ನಲ್ಲಿ ಆಸ್ತಿಗಳ ಬಗ್ಗೆ ಮಾಹಿತಿ ಪಡೆಯಲು ಹಾಗೂ ನಮ್ಮ ಆಸ್ತಿಗಳ ಪೂರ್ಣ ವಿವರಗಳ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತಿದೆ. ಅದರಂತೆಯೇ ಈಗ ಹೊಸದಾಗಿ ಕಂದಾಯ ಇಲಾಖೆಯು ಪಹಣಿ ಗೆ ಆಧಾರ್ ಜೋಡಣೆಯನ್ನು ಕಡ್ಡಾಯ ಗೊಳಿಸಿದೆ. ಇದರಿಂದ ಅಸ್ತಿಗಳಲ್ಲಿ ಇನ್ನಷ್ಟು ಪಾರದರ್ಶಕತೆ ತರಲು ಸಾಧ್ಯವಿದೆ. ಆಸ್ತಿಯ ಮಾಲೀಕರ ಬಳಿಯೇ ಅವರ ಆಸ್ತಿ ಉಳಿಯುತ್ತದೆ. ಒತ್ತವರಿ ಮಾಡಿಕೊಂಡು ಆಸ್ತಿ ಬಳಸುವವರಿಗೆ ಕಡಿವಾಣ ಹಾಕಲು ಇದು ಉತ್ತಮ ಮಾರ್ಗ ಆಗಿದೆ. ಈಗಾಗಲೇ ಗ್ರಾಮ ಅಧಿಕಾರಿಗಳು ಆಧಾರ್ ಲಿಂಕ್ ಮಾಡಿಸುವ ಕಾರ್ಯ ಮಾಡುತ್ತಿದ್ದಾರೆ. ಆದಾಗ್ಯೂ ನೀವು ಕಂದಾಯ ಇಲಾಖೆಗೆ ಭೇಟಿ ನೀಡಿ ಪಹಣಿ ಗೆ ಆಧಾರ್ ಜೋಡಣೆ ಮಾಡಿಸಲು ಸಾಧ್ಯವಿದೆ.
ಆನ್ಲೈನ್ ಮೂಲಕ ನಿಮ್ಮ ಆಸ್ತಿ ಮತ್ತು ಮನೆಯ ವಿವರಗಳನ್ನು ಪಡೆಯಲು ಸಾಧ್ಯವಿದೆ :- ನೀವು ಪಂಚಾಯತ್ ರಾಜ್ ಅಧಿಕೃತ ವೆಬ್ಸೈಟ್ ಗೆ ತೆರಳಿ ನಿಮ್ಮ ಆಸ್ತಿಯ ವಿಸ್ತೀರ್ಣ ನಿಮ್ಮ ಮನೆಯ ವಿಸ್ತೀರ್ಣ ಹಾಗೂ ಕೃಷಿ ಭೂಮಿ ಆಗಿದ್ದರೆ ಮಣ್ಣಿನ ಫಲವತ್ತತೆ ಬೆಳೆಯಬಹುದಾದ ಬೆಳೆಗಳ ಮಾಹಿತಿಗಳು, ನಾವು ಕಟ್ಟಿರುವ ತೆರಿಗೆ ಮಾಹಿತಿ, ಮನೆ ಕರ ಕಟ್ಟಿರುವ ಮಾಹಿತಿ, NA ಆಗಿರುವ ಸ್ಥಳದ ಮಾಹಿತಿ ಇದ್ದರೆ, ಸರ್ಕಾರದ ಯಾವುದೇ ಸ್ಕೀಮ್ ನಲ್ಲಿ ಯಾವುದೇ ಕೆಲಸಗಳು ನಡೆದಿದ್ದರೆ ಅಂತಹ ಎಲ್ಲಾ ಮಾಹಿತಿಗಳನ್ನು ಈಗ ಆನ್ಲೈನ್ ಮೂಲಕವೇ ಪಡೆಯಲು ಸಾಧ್ಯ.
ಇದನ್ನೂ ಓದಿ: ಕರ್ನಾಟಕ ರೈತರ ಗಮನಕ್ಕೆ; ಪಹಣಿಗೆ ಇನ್ಮುಂದೆ ಆಧಾರ್ ಲಿಂಕ್ ಕಡ್ಡಾಯ.
ಇದನ್ನೂ ಓದಿ: ಈ ಕೆಲಸ ಮಾಡದೆ ಇದ್ದರೆ ರೈತರಿಗೆ ಬರ ಪರಿಹಾರದ ಹಣ ಬರುವುದಿಲ್ಲ.