ಕೊಪ್ಪಳ ಜಿಲ್ಲೆಯ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ

Gram Panchayat Recruitment 2024 Koppal

ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆಗಳಲ್ಲಿ ಆಸಕ್ತಿ ಇರುವ ಕೊಪ್ಪಳ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ನೇರವಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿಯ ಸಲ್ಲಿಸುವ ವಿಧಾನ ಹಾಗೂ ಅಧಿಸೂಚನೆಯ ನಿಯಮಗಳ ಬಗ್ಗೆ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಹುದ್ದೆಯ ಬಗ್ಗೆ ಪೂರ್ಣ ವಿವರ:-

ಕೊಪ್ಪಳದ ಸರಕಾರಿ ಗ್ರಂಥಾಲಯದಲ್ಲಿ 21 ಗ್ರಂಥಾಲಯದ ಮೇಲ್ವಿಚಾರಕ ಹುದ್ದೆಗಳು ಖಾಲಿ ಇದ್ದೂ ಆಯ್ಕೆಯಾದ ಅಭ್ಯರ್ಥಿಗಳಿಗೆ 15196.72 ರೂಪಾಯಿ ವೇತನ ನೀಡಲಾಗುವುದು. ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಇಲಾಖೆಯ ಅಧಿಸೂಚನೆಯ ಪ್ರಕಾರ ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ದ್ವಿತೀಯ ಪಿಯುಸಿ ಉತ್ತಿರ್ಣವಾಗಿರಬೇಕು ಹಾಗೂ ಗ್ರಂಥಾಲಯ ವಿಜ್ಞಾನದಲ್ಲಿ ಪ್ರಮಾಣೀಕರಣ ಕೋರ್ಸ್ ಅನ್ನು ಪೂರ್ಣಗೊಳಿಸಿರಬೇಕು.

ಅರ್ಜಿದಾರರ ವಯೋಮಿತಿಯು ನಿಯಮದ ಪ್ರಕಾರ Apr 03 2024 ಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ. ಸರ್ಕಾರದ ವಯೋಮಿತಿ ಸಡಿಲಿಕೆ ಯ ನಿಯಮದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಮತ್ತು Cat-I ಅಭ್ಯರ್ಥಿಗಳಿಗೆ 05 ವರ್ಷ ಹಾಗೂ 2ಎ ಹಾಗೂ 2ಬಿ ಹಾಗೂ 3ಎ ಹಾಗೂ 3ಬಿ ಅಭ್ಯರ್ಥಿಗಳಿಗೆ 03 ವರ್ಷ ಹಾಗೂ PWD ಅಥವಾ ವಿಧವೆ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ಇದೆ. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹುದ್ದೆಯ ಆಯ್ಕೆ ಪ್ರಕ್ರಿಯೆ :-

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮೆರಿಟ್ ಲಿಸ್ಟ್ ಪ್ರಕಾರ ನಡೆಸಲಾಗುವುದು. ವಿದ್ಯಾರ್ಹತೆ ಮತ್ತು ವಯೋಮಿತಿ ಹಾಗೂ ಅನುಭವ ಹಾಗೂ ಜಾತಿ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ :- ಆಫ್ಲೈನ್ ಮೂಲಕ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಹೆಸರು ವಿದ್ಯಾರ್ಹತೆ ನಿಮ್ಮ ವಿಳಾಸ ನಿಮ್ಮ ಮೊಬೈಲ್ ಮತ್ತು ಇಮೇಲ್ ವಿಳಾಸ ಹಾಗೂ ವಿದ್ಯಾರ್ಹತೆಯ ಸರ್ಟಿಫಿಕೇಟ್ ನಿಮ್ಮ resume copy ಎಲ್ಲವನ್ನೂ ಸೇರಿಸಿ ಕೆಳಕಂಡ ವಿಳಾಸಕ್ಕೆ ಕಳುಹಿಸಿ. ಅಂಚೆ ಮೂಲಕ ಅಥವಾ ಸ್ವತಃ ನೀವೇ ಹೋಗಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ :- ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ್, ಜಿಲ್ಲಾ ಆಡಳಿತ ಭವನ, ಹೊಸಪೇಟೆ ರೋಡ್, ಕೊಪ್ಪಳ.

ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 9144 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ..

ಅರ್ಜಿ ಸಲ್ಲಿಸುವಾಗ ಅನುಸರಿಸುವ ಮುನ್ನೆಚ್ಚರಿಕೆ ಕ್ರಮಗಳು:-

  • ಅರ್ಜಿ ಸಲ್ಲಿಸುವ ಇಲಾಖೆಯ ಅಧಿಸೂಚನೆಯನ್ನು ಗಮನಿಸಿ ನೀವು ಹುದ್ದೆಗೆ ಅರ್ಹರು ಅಥವಾ ಇಲ್ಲ ಎಂಬುದನ್ನು ನೋಡಿಕೊಂಡು ಅರ್ಜಿ ಸಲ್ಲಿಸಬೇಕು.
  • ಅರ್ಜಿ ನಮೂನೆಯಲ್ಲಿ ನಿಮ್ಮ ಹೆಸರು ವಿಳಾಸ ಎಲ್ಲವನ್ನೂ ಸರಿಯಾಗಿ ಭರ್ತಿ ಮಾಡಬೇಕು. ನಿಮ್ಮ ಹೆಸರು ವಿಳಾಸ ತಪ್ಪಿದ್ದರೆ ನಿಮ್ಮ ಅರ್ಜಿ ತಿರಸ್ಕಾರ ಆಗುವ ಸಾಧ್ಯತೆ ಇರುತ್ತದೆ.
  • ನಿಮ್ಮ ಅರ್ಜಿ ನಮೂನೆಯಲ್ಲಿ ವಿದ್ಯಾರ್ಹತೆ ಬಗ್ಗೆ ಸ್ಪಷ್ಟವಾಗಿ ತಿಳಿಸಿ.
  • ಅರ್ಜಿ ಸಲ್ಲಿಸುವಾಗ ಕೊನೆಯ ದಿನಾಂಕದ ಬಗ್ಗೆ ಗಮನ ಇರಲಿ. ಅರ್ಜಿ ಸಲ್ಲಿಸುವಾಗ ಕೊನೆಯ ದಿನಾಂಕದ ಒಳಗೆ ಅರ್ಜಿ ಇಲಾಖೆಯ ವಿಳಾಸಕ್ಕೆ ಕಳುಹಿಸಿ.

ಇನ್ನೂ ಅರ್ಜಿ ಸಲ್ಲಿಸುವ ದಿನಾಂಕ :-

  • ಆರಂಭಿಸುವ ದಿನಾಂಕ : 04 -03-2024.
  • ಕೊನೆಯ ದಿನಾಂಕ : 03-04-2024.

ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಉತ್ತಮ ಮೈಲೇಜ್ ಹಾಗೂ ಶಕ್ತಿಯುತ ಎಂಜಿನ್ ಹೊಂದಿರುವ ಹೋಂಡಾ ಶೈನ್ 125 ಯ ನಿರ್ವಹಣೆ ಈಗ ಬಹಳ ಸುಲಭ