ಗೃಹ ಜ್ಯೋತಿ ಯೋಜನೆಯಲ್ಲಿ ಈಗಾಗಲೇ ರಾಜ್ಯದ ಹಲವಾರು ಮನೆಗಳಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿದೆ. ಕಳೆದ ಜೂನ್ ಇಂದ ಆರಂಭವಾದ ಈ ಯೋಜನೆಯಲ್ಲಿ ಲಕ್ಷಾಂತರ ಜನ ಈ ಯೋಜನೆಯ ಫಲಾನುಭವಿಗಳು ಆಗಿದ್ದಾರೆ. ಸಿಎಂ ಸಿದ್ಧರಾಮಯ್ಯ ಅವರು ಈ ಯೋಜನೆಯಲ್ಲಿ ಕೆಲವು ಬದಲಾವಣೆ ಮಾಡಬೇಕು ಎಂದು ಸಚಿವರ ಸಚಿವರ ಸಭೆಯಲ್ಲಿ ನಿರ್ಧರಿಸಿದ್ದಾರೆ. ಈ ಹೊಸ ಬದಲಾವಣೆ ಏನು ಎಂಬುದನ್ನು ಈಗಲೇ ತಿಳಿಯಿರಿ.
ಏನಿದು ಹೊಸ ಬದಲಾವಣೆ?: ಗೃಹ ಜ್ಯೋತಿ ಯೋಜನೆಯನ್ನು ಈಗಾಗಲೇ ರಾಜ್ಯದಲ್ಲಿ ಬಿಡುಗಡೆ ಆಗಿ 6 ತಿಂಗಳು ಕಳೆದಿದೆ. ಈಗ ಹೊಸ ಬದಲಾವಣೆಗೆ ಸರ್ಕಾರ ಮುಂದಾಗಿದೆ. ಈ ಹೊಸ ಬದಲಾವಣೆಯ ಬಗ್ಗೆ ಮಾತನಾಡಿದ ಇಂಧನ ಸಚಿವ ಕೆ ಜಿ ಜಾರ್ಜ್ ಅವರು ಈ ಹಿಂದೆ 48 ಯೂನಿಟ್ ಕಿಂತ ಕಡಿಮೆ ಯೂನಿಟ್ ಬಳಸುವ ಗ್ರಾಹಕರಿಗೆ ಉಚಿತವಾಗಿ 10 ಪರ್ಸೆಂಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುತ್ತಿತ್ತು . ಆದರೆ ಅದರಲ್ಲಿ ಸ್ವಲ್ಪ ಬದಲಾವಣೆ ಮಾಡಿ 10 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಯಾರೂ ಯಾರಿಗೆ 10 ಯೂನಿಟ್ ಕರೆಂಟ್ ಫ್ರೀ?: ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಚುನಾವಣೆಯ ಪ್ರಚಾರದ ವೇಳೆಗೆ ನಾವು ಅಧಿಕಾರಕ್ಕೆ ಬಂದಲ್ಲಿ ರಾಜ್ಯದ ಪ್ರತಿ ಮನೆಗಳಿಗೆ 200 ಯೂನಿಟ್ ಫ್ರೀ ಕರೆಂಟ್ ನೀಡುತ್ತೇವೆ ಘೋಷಣೆ ಮಾಡಿತ್ತು ಅದರಂತೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ತಾನು ಹೇಳಿದ ಗ್ಯಾರೆಂಟಿ ಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ಪ್ರತಿ ತಿಂಗಳು ಬಳಸುವ ವಿದ್ಯುತ್ ಮೇಲೆ ಶೇಕಡಾ 10 ರಷ್ಟು ಹೆಚ್ಚುವರಿ ಯೂನಿಟ್ ಗೆ ಫ್ರೀ ವಿದ್ಯುತ್ ನೀಡುತ್ತೇವೆ ಎಂದು ಹೇಳಿದರು. ಹಾಗೆಯೇ ಹೆಚ್ಚಿನ ಬಳಕೆಯ ಯೂನಿಟ್ ಗಳಿಗೆ ಹಣ ಪಾವತಿಸಬೇಕು ಎಂಬ ನಿಯಮ ಮಾಡಿತು. ಅದರಂತೆ ಡಿಸೆಂಬರ್ ತನಕ ಉಚಿತ ವಿದ್ಯುತ್ ನೀಡುತ್ತಾ ಬಂದಿದೆ. ಆದರೆ ಈಗ ಧಿಡೀರ್ ಮತ್ತೊಂದು ಬದಲಾವಣೆ ಮಾಡಬೇಕು ಎಂಬ ತೀರ್ಮಾನಕ್ಕೆ ಬಂದಿದೆ . ಅದರಂತೆಯೇ ಈಗಾಗಲೇ 48 ಯೂನಿಟ್ ಕರೆಂಟ್ ಉಚಿತವಾಗಿ ನೀಡಿದರು ಕಡಿಮೆ ಯೂನಿಟ್ ಬಳಸುವ ಗ್ರಾಹಕರಿಗೆ 10 ಯೂನಿಟ್ ಫ್ರೀ ಕರೆಂಟ್ ಸಿಗಲಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 421 KM ಮೈಲೇಜ್ ನೊಂದಿಗೆ ಕೇವಲ 10.99 ಲಕ್ಷಕ್ಕೆ ಹೊಸ ಟಾಟಾ ಪಂಚ್ ಇವಿಯನ್ನು ಖರೀದಿಸಬಹುದು.
ಈ ಯೋಜನೆಗೆ ಏಷ್ಟು ಹೆಚ್ಚುವರಿ ಹಣವನ್ನು ಮೀಸಲಿಟ್ಟಿದೆ?
ಈಗಾಗಲೇ ಉಚಿತ ಕರೆಂಟ್ ನೀಡುತ್ತಿದ್ದು ಅದು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಆಗುತ್ತಿದೆ. ಆದರೆ ನುಡಿದಂತೆ ನಡೆಯಬೇಕು ಎಂದು ಮುಖ್ಯಮಂತ್ರಿಗಳು ಹೆಚ್ಚುವರಿಯಾಗಿ 500 ರಿಂದ 600 ಕೋಟಿಗಳನ್ನು ಈ ಯೋಜನೆಗೆ ವಿನಿಯೋಗ ಮಾಡುತ್ತಿದ್ದಾರೆ. ಸರ್ಕಾರವು ಈಗಾಗಲೇ ಸಾಲದ ಸುಳಿಯಲ್ಲಿ ಇದೆ ಆದರೆ ಕೆಲವು ಉಚಿತ ಯೋಜನೆಗಳನ್ನು ನೀಡುವ ಭರವಸೆ ನೀಡಿದ್ದೇವೆ . ಅದರಿಂದ ನಿಭಾಯಿಸಬೇಕು ಎಂಬುದು ಸರ್ಕಾರದ ಉದ್ದೇಶ.
ಯಾವಾಗಿನಿಂದ ಜಾರಿಯಾಗಲಿದೆ ಈ ಬದಲಾವಣೆ?: ಜನವರಿ 18 ರಂದು ನಡೆದ ಸಭೆಯಲ್ಲಿ ನಿರ್ಣಯವಾದ ಈ ಬದಲಾವಣೆಯೂ ಈ ತಿಂಗಳಿಂದ ಆರಂಭ ಆಗಲಿದೆ ಎಂದು ತಿಳಿಸಿದ್ದಾರೆ.
ಏನಿದು ವಿವಾದ?: ಕರ್ನಾಟಕ ವಿದ್ಯುತ್ ನಿಗಮ ಮಂಡಳಿ ಪಡೆದಿದ್ದ 4,450 ಕೋಟಿ ರೂಪಾಯಿಯ ಸಾಲಕ್ಕೆ ಸರ್ಕಾರದಿಂದ ಶ್ಯುರಿಟಿ ನೀಡಬೇಕು ಎಂದು ಮಂಡಳಿ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು . ಅದರ ಬಗ್ಗೆ ಚರ್ಚೆಗಳು ನಡೆದ ಬಳಿಕ ಶ್ಯುರಿಟಿ ನೀಡುವ ಬಗ್ಗೆ ಒಪ್ಪಿದ್ದೇನೆ ಎಂದು ಸಚಿವ hk patil ತಿಳಿಸಿದ್ದಾರೆ.
ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಾವೇರಿ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನ..