ರಾಜ್ಯ ಸರ್ಕಾರದ ಹಲವು ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯು ಕೂಡ ಒಂದಾಗಿದೆ. ಇದರಲ್ಲಿ ಪ್ರತಿ ತಿಂಗಳು ಬಿಪಿಎಲ್ ಕಾರ್ಡ್(BPL Card) ಹೊಂದಿದ ಸದಸ್ಯರೆಲ್ಲರಿಗೂ ಕೂಡ ಕುಟುಂಬದಲ್ಲಿ ಪ್ರತಿಯೊಬ್ಬರಿಗೂ ತಲಾ 5 ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಆದರೆ ಈಗ ಅಕ್ಕಿಯ ಸರಬರಾಜಿನ ಅಭಾವದಿಂದ ರಾಜ್ಯ ಸರ್ಕಾರವು ಅಕ್ಕಿಯ ಬದಲು ಎಲ್ಲರ ಖಾತೆಗೂ ಅಕಿಯ ಮೊತ್ತವನ್ನು ಜಮಾವಣೆ ಮಾಡುವುದಾಗಿ ತಿಳಿಸಿದೆ. ಆದರೆ ಅದು ಕೂಡ ಸಾಧ್ಯವಾಗುತ್ತಿರಲಿಲ್ಲ ಕೆಲವರ ಖಾತೆಗೆ ಹಣ ಜಮಾ ಆದರೆ ಇನ್ನೂ ಕೆಲವರ ಖಾತೆಗೆ ಜಮಾ ಆಗುತ್ತಿಲ್ಲ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಮಹಿಳೆಯರ ಸಬಲೀಕರಣಕ್ಕಾಗಿ ಹಾಗೂ ಬಡವರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೂ ಕೂಡ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಆದರೆ ಯೋಜನೆಗಳಿಂದ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಯೋಜನೆಯ ಫಲ ತಲುಪುತ್ತಿಲ್ಲ. ಇದರಿಂದಾಗಿ ಹಲವರು ಆಕ್ಷೇಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಶಕ್ತಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯನ್ನು ವಿತರಿಸುವುದಾಗಿ ಹೇಳಿತ್ತು. ಆದರೆ ಅದು ಸಾಧ್ಯವಾಗದೇ ಇದ್ದಲ್ಲಿ ಅಕ್ಕಿಯ ಬದಲು ಅಕ್ಕಿಯ ಮೊತ್ತವನ್ನು ನೀಡುವುದಾಗಿ ಘೋಷಿಸಿತ್ತು. ಆದರೆ ಅದನ್ನು ಕೂಡ ಈಗ ಸಮಯಕ್ಕೆ ಸರಿಯಾಗಿ ತಲುಪಿಸಲು ಸಾಧ್ಯವಾಗುತ್ತಿಲ್ಲ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ವಾ? ತಪ್ಪದೆ ಈ ಕೆಲಸ ಮಾಡಿ; 3ತಿಂಗಳ ಹಣ ಒಟ್ಟಿಗೆ ನಿಮ್ಮ ಖಾತೆಗೆ ಜಮೆ ಆಗುತ್ತೆ
ಹಾಗಾದರೆ ಸಮಯಕ್ಕೆ ಸರಿಯಾಗಿ ಫಲಾನುಭವಿಗಳಿಗೆ ಯೋಜನೆಯ ಫಲವನ್ನು ಅನುಭವಿಸಲು ಸರ್ಕಾರ ಕೈಗೊಂಡ ಕ್ರಮಗಳೇನು?
ಇದನ್ನರಿತ ಸರ್ಕಾರ ಇನ್ನು ಮುಂದೆ ನಿಗದಿತ ವೇಳೆಗೆ ಸಮಯಕ್ಕೆ ಸರಿಯಾಗಿ ತಲುಪಿಸುವ ವ್ಯವಸ್ಥೆಯನ್ನು ಕೈಗೊಂಡಿದೆ ಅನ್ನಭಾಗ್ಯ ಯೋಜನೆ ಇರಬಹುದು ಅಥವಾ ಗೃಹಲಕ್ಷ್ಮಿ ಯೋಜನೆ ಇರಬಹುದು ಜೊತೆಗೆ ಇನ್ನೂ ಹಲವಾರು ಸಾಮಾಜಿಕ ಭದ್ರತಾ ಅಡಿಯಲ್ಲಿ ಆಯೋಜಿಸಿರುವ ಯೋಜನೆಗಳ ಅನುಕೂಲಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸಲು ಒಂದು ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ.
ಫಲಾನುಭವಿಗಳು ಸಮಯಕ್ಕೆ ಸರಿಯಾಗಿ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಲು ಡಿ.ಡಿ.ಓ, ಡಿ.ಬಿ.ಟಿ ಹಾಗೂ ಯಾವುದೇ ತಾಂತ್ರಿಕ ತೊಂದರೆಯಾದರೂ ಕೂಡ ಅದನ್ನು ತಕ್ಷಣ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ಮಾಡಿದೆ. ಇದರಿಂದಾಗಿ ಇನ್ನು ಮುಂದೆ ಯಾವುದೇ ತಾಂತ್ರಿಕ ದೋಷವಿರಲಿ ಏನು ಸಮಸ್ಯೆ ಆದರೂ ಕೂಡ ಅದನ್ನು ತಕ್ಷಣ ಬಗೆಹರಿಸಿ ಸಮಯಕ್ಕೆ ಸರಿಯಾಗಿ ಖಾತೆಗೆ ಹಣವನ್ನು ವರ್ಗಾವಣೆ ಮಾಡಲು ಸಹಾಯವಾಗುತ್ತದೆ.
ಇದನ್ನೆಲ್ಲಾ ಮ್ಯಾನೇಜ್ ಮಾಡುವ ಸಲುವಾಗಿ ಖಜಾನೆ ಆಯುಕ್ತರನ್ನು ನೇಮಕ ಮಾಡಿದೆ. ಇನ್ನು ಮುಂದೆ ಎಲ್ಲ ಫಲಾನುಭವಿಗಳಿಗೆ ಕಲ್ಯಾಣ ಯೋಜನೆಗಳ ಅಥವಾ ಕೆಲವೊಂದು ಸಬ್ಸಿಡಿಗಳ(Subsidy) ಮೊತ್ತವನ್ನು ನೇರವಾಗಿ ಫಲಾನುಭವಿಗಳ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಿದೆ. ಈ ಹಂತದಲ್ಲಿ ಡಿ ಬಿ ಟಿ ಮತ್ತು ಖಜಾನೆ-2 ಹಣವನ್ನು ನೇರವಾಗಿ ನಿಮ್ಮ ಖಾತೆಗಳಿಗೆ ಸಮಯಕ್ಕೆ ಸರಿಯಾಗಿ ವರ್ಗಾವಣೆ ಮಾಡಲಾಗುತ್ತದೆ. ಇದರಿಂದ ಫಲಾನುಭವಿಗಳು ಯಾವುದೇ ತೊಂದರೆ ಇಲ್ಲದೆ ಸಮಯಕ್ಕೆ ಸರಿಯಾಗಿ ಎಲ್ಲ ಯೋಜನೆಯ ಫಲಗಳನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ: ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಆಗಿ ರಾಯಲ್ ಎನ್ ಫೀಲ್ಡ್ ಬೈಕ್ ಕೊಟ್ಟ ಉದ್ಯಮಿ
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp