Gruha Lakshmi Scheme: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಈಗಾಗಲೇ ನೊಂದಣಿ ಪ್ರಕ್ರಿಯೆಯನ್ನ ಮುಗಿಸಿದ್ದಾರೆ. ಆದರೂ ಕೂಡ ಇವರಿಗೆ ಇನ್ನೂ 2,000 ಖಾತೆಗೆ ಜಮಾ ಆಗಿಲ್ಲ. ಮೊದಲನೇ ಕಂತು ಬಿಡುಗಡೆಯಾಗಿ ಹಲವರ ಖಾತೆಗೆ ಆಗಲೇ ಹಣವು ಜಮಾ ಆಗಿದೆ. ಆದರೆ ಇನ್ನೂ ಕೆಲವರ ಖಾತೆಗೆ ಹಣವು ಇನ್ನೂ ಬಂದಿಲ್ಲ. ಹಣ ಬಾರದೆ ಇರುವುದಕ್ಕೆ ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸುಮಾರು 9,00,000 ಮಹಿಳೆಯರಿಗೆ ಹಣವು ಇನ್ನೂ ಬಂದಿಲ್ಲ. ಯಾರ್ಯಾರಿಗೆ ಹಣ ಬಂದಿಲ್ಲವೋ ಅವರ್ನೆಲ್ಲ ಪಟ್ಟಿಯಲ್ಲಿ ಸೇರಿಸಿಕೊಂಡು ಅವರ ಖಾತೆಗೆ ಹಣವನ್ನು ವರ್ಗಾವಣೆ ಮಾಡಲು ಸರ್ಕಾರ ಬಹಳ ಪ್ರಯತ್ನಿಸುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಹಿಡಿದು ಅಂಗನವಾಡಿ ಕಾರ್ಯಕರ್ತೆಯರನ್ನು ಕೂಡ ಬಳಸಿಕೊಂಡು ಗೊಂದಲ ಆಗಿರುವವರ ಖಾತೆಯನ್ನ ಸರಿಪಡಿಸುವ ಕೆಲಸವೂ ಕೂಡ ನಡೆದಿದೆ.
ಹಣವನ್ನ ಪಡೆಯಲು ಏನು ಮಾಡಬೇಕು?
ಕೆಲವರಿಗೆ ಗೃಹಲಕ್ಷ್ಮಿಯ ಹಣ ಬರದೆ ಇರಲು ಕಾರಣ ಅಂತಂದ್ರೆ ಅವರ ಆಧಾರ ಕಾರ್ಡ್ ಲಿಂಕ್ ಆಗದೆ ಇರುವುದು ಅಥವಾ ಅವರ ಖಾತೆಯು ತಾತ್ಕಾಲಿಕವಾಗಿ ಬಂದ್ ಆಗಿರುವುದು ಇರಬಹುದು, ಹಾಗೂ ಇನ್ನೂ ಏನೋ ತಾಂತ್ರಿಕ ದೋಷಗಳಿಂದಾಗಿ ಹಣ ವರ್ಗಾವಣೆ ಮಾಡಲು ಸಾಧ್ಯವಾಗದೇ ಇರಬಹುದು. ಒಟ್ಟಾರೆಯಾಗಿ ಯಾವುದೋ ಒಂದು ಸಮಸ್ಯೆಯಿಂದ ಹಣ ಇವರಿಗೆ ತಲುಪುತ್ತಿಲ್ಲ.
ಮಹಿಳೆಯರೇ, ನೀವೇನು ಮಾಡಬೇಕು ಅಂತ ಅಂದ್ರೆ, ಮೊದಲು ನಿಮ್ಮ ಆಧಾರ್ ಕಾರ್ಡನ್ನು ಲಿಂಕ್ ಮಾಡಿಕೊಳ್ಳಿ, ನಿಮ್ಮ ಬ್ಯಾಂಕ್ ಖಾತೆಯು ತಾತ್ಕಾಲಿಕವಾಗಿ ಬಂದಾಗಿದೆಯೋ ಅಥವಾ ಆಕ್ಟಿವ್ ಇದೆಯೋ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ. ನೀವು ಡಿ ಬಿ ಟಿ ಗೆ ಯಾವ ಬ್ಯಾಂಕ್ ಖಾತೆಯನ್ನು ಜೋಡಿಸಿದ್ದೀರಾ ಎನ್ನುವುದನ್ನು ಪರಿಶೀಲಿಸಿಕೊಳ್ಳಿ. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿದ್ದಲ್ಲಿ ಯಾವ ಖಾತೆಯನ್ನು ನೀವು ಜೋಡಿಸಿದ್ದೀರಾ ಎನ್ನುವುದನ್ನು ಪರಿಶೀಲನೆ ಮಾಡಿಕೊಳ್ಳಿ. ಈ ರೀತಿಯ ದೋಷ ಇದ್ದವರು ಮೊದಲು ನಿಮ್ಮ ಖಾತೆಯನ್ನು ಸರಿಪಡಿಸಿಕೊಳ್ಳಿ. ಒಂದು ವೇಳೆ ನೀವು ಸರಿಪಡಿಸಿಕೊಂಡಿಲ್ಲ ಅಂತಾದಲ್ಲಿ ನಿಮಗೆ ಗೃಹಲಕ್ಷ್ಮಿಯ ಹಣ ಪಡೆಯಲು ಸಾಧ್ಯವಾಗುವುದಿಲ್ಲ.
ಇದೀಗಲೇ ಒಂದು ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗೆ ಎರಡು ಸಾವಿರ ರೂಪಾಯಿ ಜಮಾ ಆಗಿದೆ. ಉಳಿದ ಒಂಬತ್ತು ಲಕ್ಷ ಮಹಿಳೆಯರ ಖಾತೆಗೆ ಮಾತ್ರ ಬಾಕಿ ಇದೆ. ಇನ್ನು ಕೆಲವರಿಗೆ ಖಾತೆಯ ಸಮಸ್ಯೆ ಬಗ್ಗೆ ಹರಿದಿದೆ ಅವರಿಗೆ ಈ ಎರಡನೇ ಕಂತಿನ ಹಣದ ಜೊತೆ ಮೊದಲನೇ ಕಂತಿನ ಹಣವು ಕೂಡ ಜಮಾ ಆಗುತ್ತದೆ ಎಂದು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟಪಡಿಸಿದ್ದಾರೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಹಾಗಾದ್ರೆ ಎರಡನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ?
ಎರಡನೇ ಕಂತಿನ ಹಣವು ಕೂಡ ಸ್ವಲ್ಪ ವಿಳಂಬವಾಗುತ್ತಿದೆ ಕೆಲವು ಜಿಲ್ಲೆಗಳಲ್ಲಿ ವರ್ಗಾವಣೆಯಾಗಿದ್ದು ಇನ್ನೂ ಕೆಲವು ಜಿಲ್ಲೆಗಳಿಗೆ ತಲುಪುವವರೆಗೆ ಸ್ವಲ್ಪ ವಿಳಂಬವಾಗಬಹುದು. ಆರ್ ಬಿ ಐ (RBI) ಸೂಚನೆಯ ಪ್ರಕಾರವೇ ನಡೆಯಬೇಕಾಗುತ್ತದೆ. ನಮ್ಮ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಲಿಮಿಟ್ ಹೊಂದಿದೆ. ದಿನಾಲು ಇಂತಿಷ್ಟೇ ಹಣವನ್ನ ಅದು ಬಿಡುಗಡೆ ಮಾಡುತ್ತದೆ. ಸ್ವಲ್ಪ ಸ್ವಲ್ಪ ಹಣವನ್ನ ಬಿಡುಗಡೆ ಮಾಡಿ, ಎಲ್ಲರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ.
ಒಂದೇ ಬಾರಿಗೆ ಎಲ್ಲಾ ಹಣವನ್ನು ಕೂಡ ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ, ಹಂತ ಹಂತವಾಗಿ ಪ್ರತಿಯೊಂದು ಜಿಲ್ಲೆಗೂ ಕೂಡ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ. ಆದ್ದರಿಂದ ಎರಡನೇ ಕಂತಿನ ಹಣವು ಕೂಡ ಸ್ವಲ್ಪ ವಿಳಂಬವಾಗಿಯೇ ನಿಮಗೆ ಸಿಗುತ್ತದೆ. ನಿಮ್ಮ ದಾಖಲೆಗಳು ಎಲ್ಲಾ ಸರಿಯಾಗಿದ್ದು ನಿಮಗೆ ಹಣ ಸಿಕ್ಕಿಲ್ಲ ಅಂತಂದ್ರೆ ನೀವು ನಿಮ್ಮ ಹತ್ತಿರವಿರುವ ಗ್ರಾಮವನ್, ಕರ್ನಾಟಕ ಒನ್ ಭೇಟಿ ಮಾಡಿ, ನಿಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
ಇದನ್ನೂ ಓದಿ: Jio 5G Unlimited Data ಪಡೆಯುವುದು ಹೇಗೆ? ಒಳ್ಳೆ ಆಫರ್ ಈಗಾಲೇ ಬಳಸಿಕೊಳ್ಳಿ
ಇದನ್ನೂ ಓದಿ: ಲೋಕಸಭಾ ಚುನಾವಣೆಗೂ ಮುಂಚೆಯೇ ₹2000 ಏರಿಕೆಯಾದ ಪಿಎಂ ಕಿಸಾನ್ ಹಣ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram