ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅಂದ್ರು ಮೆಸೇಜ್ ಬಂದಿದ್ಯ? ಸೂಕ್ತ ದಾಖಲೆ ಕೊಟ್ಟಿದ್ರು ಹಣ ಯಾಕೆ ಬರುತ್ತಿಲ್ಲ

ಗೃಹಲಕ್ಷ್ಮಿ ಯೋಜನೆ(Gruha lakshmi Scheme) ಇದೀಗ ರಾಜ್ಯದ ಮಹಿಳೆಯ ಪಾಲಿಗೆ ಕಗಂಟಾಗಿ ಪರಿಣಮಿಸಿದೆ. ಎಲ್ಲ ಸರಿ ಇದ್ರು ಹಣ ಬರ್ತಿಲ್ವಲ್ಲ ಅಂತ ಸಾಕಷ್ಟು ಜನ ಬೇಸರ ಹೊರ ಹಾಕಿದ್ದಾರೆ. ಆದ್ರೆ ಸರ್ಕಾರ ಎಲ್ಲದಕ್ಕೂ ಕೂಡ ತಾಂತ್ರಿಕ ಸಮಸ್ಯೆಯ ನೆಪ ಹೊಡ್ದಿ ಜಾರಿಕೊಳ್ಳುವ ಪ್ರಯತ್ನ ಮಾಡ್ತಿದೆ. ಹೌದು ಕಾಂಗ್ರೆಸ್​​ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ಚಾಲನೆ ನೀಡಿದ್ದು, ಆ ಮೂಲಕ ಮಹಿಳಾ ಸಬಲೀಕರಣಕ್ಕೆ ಮೊದಲ ಆದ್ಯತೆಯನ್ನು ನೀಡಿದೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವ ಉದ್ದೇಶವನ್ನು ಹೊಂದಿದ್ದು, ಈಗಾಗಲೇ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಪಡೆದುಕೊಂಡಿರುವ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಈ ನಡುವೆ ಹಲವು ಮಹಿಳೆಯರಿಗೆ ಇನ್ನೂ ಗೃಹಲಕ್ಷ್ಮಿ ಹಣ ಸಂದಾಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಹಲವರಲ್ಲಿ ಗೊಂದಲ ಮೂಡಿದೆ. ಈ ನಡುವೆ ಹಣ ಸಂದಾಯ ಬಗ್ಗೆ ಸ್ಪಷ್ಟನೆ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​, ಶೀಘ್ರವೇ ಹಣ ಸಂದಾಯವಾಗದ ಖಾತೆಗೆ ಹಣ ಸೇರಲಿದೆ ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now

ಈ ನಡುವೆ ಹಣ ಖಾತೆಗೆ ಸಂದಾಯ ಆಗದಿರಲು ಕಾರಣವೇನು? ಇಲ್ಲಿವರೆಗೂ ಎಷ್ಟು ಜನರಿಗೆ ಹಣ ಬಂದಿದೆ? ಇನ್ನೂ ಎಷ್ಟು ಜನರಿಗೆ ಹಣ ಬರಬೇಕಿದೆ? ಹಣ ಬರಲು ತಡವಾಗುತ್ತಿರೋದಕ್ಕೆ ಕಾರಣವೇನು? ಈಗಾಗಲೇ ಹಣ ಬಂದಿರುವ ಖಾತೆಗೆ ಪ್ರತಿ ತಿಂಗಳು ಯಾವ ತಾರೀಖಿಗೆ ಹಣ ಬರುತ್ತೆ? ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ನಾವು ಕೊಡ್ತೀವಿ. ಗೃಹಲಕ್ಷ್ಮಿ ಯೋಜನೆಗೆ(Gruha lakshmi Scheme) ಆಗಸ್ಟ್​ 30ರಂದು ಮೈಸೂರಿನಲ್ಲಿ ರಾಹುಲ್​ ಗಾಂಧಿ ಚಾಲನೆ ನೀಡಿದ್ದರು. ಈ ನಡುವೆ ಯೋಜನೆ ಚಾಲನೆ ನೀಡಿದರೂ ನಿಧಾನವಾಗಿ ಮನೆಯೊಡತಿಯರ ಬ್ಯಾಂಕ್ ಖಾತೆಗೆ ಹಣ ಸಂದಾಯ ಆಗುತ್ತಿತ್ತು. ಈಗಾಗಲೇ ಮೆಸೇಜ್ ಬಂದಿದ್ದರೂ ಹಣ ಮಾತ್ರ ಖಾತೆಗೆ ಬಂದಿಲ್ಲ ಅಂತ ಹಲವು ಮಹಿಳೆಯರು ಪ್ರಶ್ನೆ ಮಾಡ್ತಿದ್ದಾರೆ. ಇದಕ್ಕೆ ಕಾರಣ ಏನು ಅಂದ್ರೆ ಎಲ್ಲದಕ್ಕೂ ತಾಂತ್ರಿಕ ಸಮಸ್ಯೆ ಅಂತಿದ್ದಾರೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಎಲ್ಲದಕ್ಕೂ ತಾಂತ್ರಿಕ ದೋಷವೇ ಕಾರಣಾನ?

ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ(Gruha lakshmi Scheme) ಸಂದಾಯ ಮಾಡಬೇಕಾದ ಹಣವನ್ನು ಡಿಬಿಟಿ(DBT) ಮೂಲಕ ಬಿಡುಗಡೆ ಮಾಡಿದೆ. ಬರೋಬ್ಬರಿ ಎರಡು ತಿಂಗಳಿಗೆ ನೀಡಬೇಕಾದ ಹಣವನ್ನು ಈಗಾಗಲೇ ಸರ್ಕಾರ ಬಿಡುಗಡೆ ಮಾಡಿದೆ. ಹಣ ಬಿಡುಗಡೆಯಾಗಿದ್ದರೂ ಜನರಿಗೆ ಯಾಕೆ ತಲುಪಿಲ್ಲ ಎಂಬ ಪ್ರಶ್ನೆ ಎಲ್ಲರಲ್ಲೂ ಶುರುವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಹಣವನ್ನು ನೇರ ನಗದು ವರ್ಗಾವಣೆ ಮೂಲಕ ಮೊದಲ ಬಾರಿಗೆ ಜನರಿಗೆ ನೋಡುತ್ತಿದ್ದೇವೆ. ಇದು ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಯಾಗುತ್ತಿದ್ದು, ಇದಕ್ಕೆ ಆರ್​ಬಿಐ(RBI) ಮೂಲಕ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಬೇಕು. ಪರಿಣಾಮ ಮೊದಲ ತಿಂಗಳು ಮಾತ್ರ ಇದು ತಡ ಆಗಬಹುದು ಎಂದಿದ್ದಾರೆ.

1.20 ಕೋಟಿ ಅರ್ಜಿಗಳಲ್ಲಿ ಸುಮಾರು 63 ಲಕ್ಷ ಮನೆಯೊಡತಿಯರ ಖಾತೆಗೆ ಹಣ ಸಂದಾಯವಾಗಿದೆ. ಇನ್ನುಳಿದ ಶೇಕಡಾ 45 ಅರ್ಜಿಗಳಿಗೆ ಹಣ ಸಂದಾಯವಾಗುವ ಪ್ರಕ್ರಿಯೆ ನಡೆಯುತ್ತಿದೆ. ಎರಡನೇ ತಿಂಗಳಿನಿಂದ ಇಂತಹ ಸಮಸ್ಯೆ ಇರೋದಿಲ್ಲ. ಇದರ ಜೊತೆಗೆ ಅನ್ನಭಾಗ್ಯ ಯೋಜನೆಯ ಸಂಬಂಧ ರೇಷನ್ ಕಾರ್ಡ್​​ಗಳ ಬದಲಾವಣೆಗೂ ಅನುಮತಿ ನೀಡಲಾಗಿತ್ತು. ಅವರು ಅರ್ಜಿ ಸಲ್ಲಿಕೆ ಮಾಡಬಹುದು. ಮುಂದಿನ ತಿಂಗಳಿನಿಂದ ಗೃಹಲಕ್ಷ್ಮಿ ಹಣ ತಿಂಗಳ 15ನೇ ತಾರೀಖಿನ ಒಳಗೆ ಸಂದಾಯ ಆಗಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಂತ್ರಿಕ ಕಾರಣದಿಂದ 25 ಸಾವಿರ ಮನೆಯೊಡತಿಯರಿಗೆ ಹಣ ವರ್ಗಾವಣೆ ಮಾಡಲು ಆಗುತ್ತಿಲ್ಲ. ರಾಜ್ಯದಲ್ಲಿ ಒಂದು ಕೋಟಿ 28 ಲಕ್ಷ ಮನೆಯೊಡತಿಯರು ಗೃಹಲಕ್ಷ್ಮಿ ಯೋಜನೆಗೆ(Gruha lakshmi Scheme) ಅರ್ಜಿ ಸಲ್ಲಿಕೆ ಮಾಡಲು ಅರ್ಹರಾಗಿದ್ದು, ಇದುವರೆಗೂ ಸುಮಾರು 1.20 ಕೋಟಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಇನ್ನು ಯಾರು ಅರ್ಜಿ ಸಲ್ಲಿಕೆ ಮಾಡಿಲ್ಲ ಅವರಿಗೆ ಜಾಗೃತಿ ಮೂಡಿಸುವ ಕೆಲಸ ಆಗ್ತಿದೆಯಂತೆ. ಇನ್ನು, ಅರ್ಜಿ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ನಿಮ್ಮ ಅರ್ಜಿಯ ಸ್ಟೇಟಸ್​ ನಲ್ಲಿ ಅರ್ಜಿ ಸಲ್ಲಿಕೆ ಆಗಿಲ್ಲ ಎಂದಾದರೆ, ಸ್ಥಳೀಯರು ಅಂಗನವಾಡಿ ಕಾರ್ಯಕರ್ತರ ನೆರವು ಪಡೆದುಕೊಳ್ಳಬಹುದು. ಅಲ್ಲದೇ ಅಲ್ಲಿಯೂ ಮಾಹಿತಿ ಸಿಗದಿದ್ದರೆ ತಾಲೂಕು ಮಟ್ಟದಲ್ಲಿ ಮಹಿಳಾ ಕಲ್ಯಾಣ ಇಲಾಖೆ ಸಿಡಿಪಿಓ ಅಧಿಕಾರಿಯನ್ನು ಪಡೆದುಕೊಳ್ಳಬಹುದು.

ಅಲ್ಲದೇ, ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಇದಕ್ಕೂ ಮುನ್ನ ನಿಮ್ಮ ಬ್ಯಾಂಕ್​​ ಖಾತೆಗೆ ಆಧಾರ್ ಕಾರ್ಡ್ ಲಿಂಕ್​ ಆಗಿದೆಯಾ ಅಂತ ಖಚಿತಪಡಿಸಿಕೊಳ್ಳಿ. ಅಲ್ಲದೇ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇದೆಯಾ ಅಂತ ಪರಿಶೀಲನೆ ಮಾಡಿ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 5 ಕೆಜಿ ಅಕ್ಕಿ ಬದಲಿಗೆ 170 ರೂಪಾಯಿಯನ್ನು ಸರ್ಕಾರ ಈಗಾಗಲೇ ನೀಡುತ್ತಿದ್ದು, ರೇಷನ್ ಕಾರ್ಡ್​ನಲ್ಲಿ ಮನೆ ಯಜಮಾನಿ ಯಾರು ಇರ್ತಾರೆ ಅವರ ಖಾತೆಗೆ ಹಣ ಜಮೆ ಆಗ್ತಿದೆ ಅಂತ ಸಚಿವೆ ತಿಳಿಸಿದ್ದಾರೆ. ಆದ್ರೆ ಇದು ಕೂಡ ಇಷ್ಟ ಮಟ್ಟಿಗೆ ವರ್ಕ್ ಆಗುತ್ತೋ ಇಲ್ವೋ ಕಾದು ನೋಡಬೇಕಿದೆ.

ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್; ಶುಚಿ ಯೋಜನೆಯಡಿ ಉಚಿತ ಸ್ಯಾನಿಟರಿ ಪ್ಯಾಡ್ ಹಂಚಿಕೆ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram