Gruha lakshmi Scheme: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಚುನಾವಣೆಗೂ ಪೂರ್ವದಲ್ಲಿ ನೀಡಿದ್ದ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿ ಜಾರಿಗೆ ತರುತ್ತಿದ್ದು ಇದೀಗ ನಾಲ್ಕು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುವುದರ ಮೂಲಕ ರಾಜ್ಯದ ಕೋಟ್ಯಾಂತರ ಮಹಿಳೆಯರಿಗೆ ಈ ಯೋಜನೆಯ ಸಹಾಯಧನವನ್ನು ನೀಡಲಾಗುತ್ತಿದೆ. ಇದೀಗ ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣವನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದ್ದು ಈ ಯೋಜನೆಗೆ ಸಂಬಂಧಿಸಿದಂತೆ ಯಾರೆಲ್ಲಾ ಈ ಹಣವನ್ನು ಪಡೆದಿದ್ದಾರೆ? ಒಂದಷ್ಟು ಜನರ ಖಾತೆಗೆ ಯಾಕಿನ್ನು ಹಣ ಜಮೆ ಆಗಿಲ್ಲ ಅನ್ನೊ ಚರ್ಚೆ ಶುರುವಾಗಿದೆ. ಹೌದು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದು ಈ ಗೃಹಲಕ್ಷ್ಮಿ ಯೋಜನೆಯ ಸಹಾಯಧನವನ್ನು ರಾಜ್ಯದ ಕೋಟ್ಯಂತರ ಮಹಿಳೆಯರು ಪಡೆಯುತ್ತಿದ್ದಾರೆ.
ಶೇಕಡ 80ರಷ್ಟು ಮಹಿಳೆಯರು ಮೊದಲನೇ ಕಂತಿನಲ್ಲಿ, ಮತ್ತು ಶೇಕಡ 90% ಮಹಿಳೆಯರಿಗೆ ಎರಡನೇ ಕಂತಿನಲಿ ಹಣವನ್ನು ಪಡೆದಿದ್ದಾರೆ. ಇದೀಗ ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣವನ್ನು ಸಹ ವರ್ಗಾವಣೆ ಮಾಡಲು ರಾಜ್ಯ ಸರ್ಕಾರವು ಯೋಚಿಸುತ್ತಿದ್ದು ಈ ಬಾರಿ ನೂರಕ್ಕೆ ನೂರರಷ್ಟು ಎಲ್ಲಾ ಫಲಾನುಭವಿಗಳಿಗೆ ಈ ಯೋಜನೆಯ ಹಣ ತಲುಪಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೂ ಶ್ರಮಪಡುತ್ತಿದೆ ಆದ್ರೆ ಹೇಳಿದ ದಿನದೊಂದೇ ಫಲಾನುಭವಿಗಳ ಖಾತೆಗೆ ಹಣ ತಲುಪುತ್ತಾ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ಯಾಕಂದ್ರೆ ಇಲಾಖೆ ಭರವಸೆ ಕೊಟ್ಟಂತೆ ಪ್ರತಿ ತಿಂಗಳ 20ನೇ ತಾರೀಖಿನ ಒಳಗೆ ಹಣೆ ಜಮೆ ಆಗುತ್ತೆ ಅಂತ ಹೇಳಿತ್ತು. ಹೀಗಾಗಿ ಇನ್ನೆರಡು ದಿನದಲ್ಲಿ ಹಣ ಬರುತ್ತಾ ಅಂತ ಮಹಿಳೆಯರು ಯೋಚನೆಯಲ್ಲಿದ್ದಾರೆ.
ಹೌದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇಲಾಖೆಯ ಅಧಿಕಾರಿಗಳೊಂದಿಗೆ ಗೃಹಲಕ್ಷ್ಮಿ ಯೋಜನೆಯ ಪರಿಶೀಲನೆ ಸಭೆಯನ್ನು ನಡೆಸಿ ಯೋಜನೆಯ ಫಲಾನುಭವಿಗಳಿಗೆ ಹಣವನ್ನು ತಲುಪಿಸುವಂತೆ ಸೂಚಿಸಿದ್ದಾರೆ. ಅಲ್ದೇ ಗೃಹಲಕ್ಷ್ಮಿ ಯೋಜನೆ ಕುರಿತು ಅನೇಕ ಕ್ರಮಗಳನ್ನು ಈ ಸಂದರ್ಭದಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದ್ದು, ಗೃಹಲಕ್ಷ್ಮಿ ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಸಿದ್ದರೂ, ಇದುವರೆಗೂ ಹಣವನ್ನು ಪಡೆಯದಿದ್ದರೆ ಅವರು ಮೂರನೇ ಕಂತಿನ ವೇಳೆಗೆ ಒಟ್ಟಿಗೆ ಹಣವನ್ನು ಅಂದರೆ ಆರು ಸಾವಿರ ರೂಪಾಯಿಗಳನ್ನುಪಡೆಯಲಿದ್ದಾರೆ. ಇಲಾಖೆ ಅಧಿಕಾರಿಗಳು ಮತ್ತು ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ಭೇಟಿ ನೀಡಿ ಸರ್ವೆ ನಡೆಸಿ ಯಾರಿಗೆಲ್ಲ ಹಣ ಪಡೆಯಲು ಸಮಸ್ಯೆ ಆಗಿದೆಯೋ ಅವರಿಗೆ ಪರಿಹಾರವನ್ನು ಸೂಚಿಸಿದ್ದಾರೆ. ಅಧಿಕಾರಿಗಳಿಗೆ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಆದೇಶ ನೀಡಲಾಗಿದೆ ಅಂತ ಹೇಳಲಾಗಿತ್ತು.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಯಾವಾಗ ಸಿಗುತ್ತೆ ಗೊತ್ತಾ 3ನೇ ಕಂತಿನ ಹಣ
ಇನ್ನು ನವೆಂಬರ್ 15ನೇ ತಾರೀಕಿನಂದು ಗೃಹಲಕ್ಷ್ಮಿ ಯೋಜನೆ(Gruha lakshmi Scheme) ಮೂರನೇ ಕಂತಿನ ಹಣವನ್ನು ರಾಜ್ಯ ಸರ್ಕಾರವು ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದು, ಹಂತ ಹಂತವಾಗಿ ಮೂರನೇ ಕಂತಿನ ಹಣವನ್ನು ಸರ್ಕಾರವು ಎಲ್ಲರಿಗೂ ಬಿಡುಗಡೆ ಮಾಡುತ್ತಿದ್ದು ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ತಲುಪಲಿದೆ. ಇನ್ನು ಯಾವುದೇ ಮಾನದಂಡವನ್ನು ಅಥವಾ ಜಿಲ್ಲಾವಾರು ಮಾನದಂಡವನ್ನು ಸರ್ಕಾರ ತೆಗೆದುಕೊಂಡಿಲ್ಲ ಆದ್ರೆ ಮಹಿಳೆಯರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಿದೆ. ಇನ್ನು ಫಲಾನುಭವಿಗಳ ಸಂಖ್ಯೆ ಹೆಚ್ಚಿರುವ ಕಾರಣ ಈ ಯೋಜನೆಯನ್ನು ಸಂಪೂರ್ಣವಾಗಿ ಎಲ್ಲರಿಗೂ ತಲುಪಿಸಲು ಕೆಲ ಸಮಯ ಹಿಡಿಯಬಹುದು. ಹೀಗಾಗಿ ಒಂದು ನಿಗದಿತ ದಿನಾಂಕದಂದು ಗೃಹಲಕ್ಷ್ಮಿ ಯೋಜನೆಯ ಹಣವು ಬಿಡುಗಡೆ ಮಾಡಲು ಸರ್ಕಾರವು ಚಿಂತನೆ ನಡೆಸಿತ್ತು.
ಹೌದು ಮಹಿಳೆಯರು ಗೃಹಲಕ್ಷ್ಮಿ ಯೋಜನೆ(Gruha lakshmi Scheme) ಹಣ ಬಿಡುಗಡೆ ಆದಾಗ ಬಂದಿದೆ ಇಲ್ಲವೇ ಎಂಬುದರ ಗೊಂದಲಕ್ಕೆ ಒಳಗಾಗಿದ್ದು ಬ್ಯಾಂಕುಗಳ ಮುಂದೆ ಅದನ್ನು ಚೆಕ್ ಮಾಡಿಸಲು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದರು. ಈ ಸಮಸ್ಯೆಯನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಒಂದು ನಿಗದಿತ ದಿನಾಂಕವನ್ನು ಗೊತ್ತು ಪಡಿಸಿ ಬಿಡುಗಡೆ ಮಾಡಿದರೆ ಅನುಕೂಲವಾಗುತ್ತದೆ ಎಂದು ಯೋಚಿಸಲಾಗಿದ್ದು, ಸಂಪೂರ್ಣವಾಗಿ ಪ್ರತಿ ತಿಂಗಳ 15ರಿಂದ 20ರ ಒಳಗೆ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ತಲುಪಿಸುವುದಾಗಿ ಹೇಳಿತ್ತು, ಆದ್ರಿಗ ಅದು ಕೂಡ ಡೌಟ್ ಅನ್ನುವಂತಾಗಿದ್ದು, ಇನ್ನು ಯಾರಿಗೂ ಕೂಡ ಹಣ ಬಂದಿಲ್ಲ.
ಆದ್ರೆ ಇದೀಗ ಸರ್ಕಾರದಿಂದ ಒಂದು ಅಪ್ಡೇಟ್ ಬಂದಿದ್ದು ಯಾರು ಕೂಡ ಚಿಂತಿಸುವ ಅಗತ್ಯ ಇಲ್ಲ ಎಲ್ಲರಿಗೂ ಕೂಡ ಎಲ್ಲಾ ಕಂತಿನ ಹಣ ತಲ್ಪಿಸುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡುತ್ತೇವೆ ಈ ತಿಂಗಳ 20 ನೇ ತಾರೀಖಿನ ಒಳಗಡೆ ಸಾಧ್ಯವಾದಷ್ಟು ಫಲಾನುಭವಿಗಳ ಖಾತೆಗೆ ಹಣವನ್ನು ಜಮಾವಣೆ ಮಾಡುತ್ತೇವೆ ಸಾಧ್ಯವಾಗದಿದ್ದಲ್ಲಿ ಒಂದೆರಡು ದಿನಗಳ ಕಾಲಾವಕಾಶದಲ್ಲಿ ಎಲ್ಲವನ್ನು ಸರಿ ಮಾಡಿ ಈ ತಿಂಗಳೊಳಗೆ ಫಲಾನುಭವಿಗಳ ಖಾತೆಗೆ ಮೂರನೇ ಕಂತಿನ ಹಣ ಜಮಾವಣೆಯಾಗುವ ರೀತಿ ನೋಡಿಕೊಳ್ಳುತ್ತೇವೆ ಅಂತ ಹೇಳಲಾಗಿದೆ.
ಇದರ ಜೊತೆಗೆ ಇನ್ನೂ ಒಂದನೇ ಕಂತಿನ ಹಣವನ್ನು ಪಡೆಯದೇ ಇರತಕ್ಕಂತ ಯೋಜನೆ ಫಲಾನುಭವಿಗಳಿಗೆ ಒಟ್ಟಿಗೆ ಮೂರು ಕಂತಿನ ಹಣವನ್ನು ಕೂಡ ಜಮಾವಣೆ ಮಾಡಲಾಗುತ್ತೆ ಅಂತ ಹೇಳಲಾಗುತ್ತದೆ. ಹೀಗಾಗಿ ಉಳಿದಿರುವ ಎರಡು ದಿನಗಳೊಳಗೆ ಒಂದಷ್ಟು ಜನರ ಖಾತೆಗೆ ಹಣ ಬರಬಹುದು ಇನ್ನುಳಿದವರ ಖಾತೆಗೆ ಈ ವಾರದ ಒಳಗಡೆ ಹಣ ಜಮಾಮಣೆ ಆಗುತ್ತೆ ಅಂತ ಹೇಳಲಾಗುತ್ತಿದೆ. ಹೀಗಾಗಿ ಯಾರು ಕೂಡ ಭಯ ಪಡುವ ಅಗತ್ಯವಿಲ್ಲ ಎಲ್ಲರ ಖಾತೆಗೂ ಕೂಡ ಯೋಚನೆಯ ಹಣ ಜಮಾವಣೆ ಆಗೇ ಆಗುತ್ತೆ ಅನ್ನೋ ಭರವಸೆಯನ್ನ ಸಂಬಂಧಪಟ್ಟ ಇಲಾಖೆಯವರು ನೀಡಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಆಸಕ್ತರಿಗೆ ಉದ್ಯೋಗವಕಾಶ; ಆಯ್ಕೆಯಾದ ಅಭ್ಯರ್ಥಿಗಳಿಗೆ 63ಸಾವಿರದವರೆಗೆ ಸಂಬಳ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram