Gruha Lakshmi: ಕರ್ನಾಟಕದ ನೂತನ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಗೃಹಲಕ್ಷ್ಮೀ ಯೋಜನೆಯ ಕುರಿತು ಮಹತ್ತರ ಮಾಹಿತಿಯನ್ನ ಕೊಟ್ಟಿದ್ದಾರೆ. ಅದರಲ್ಲಿ ಮುಖ್ಯವಾಗಿ ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಮನೆ ಯಾಜಮಾನಿ ಖಾತೆಗೆ 2000 ಹಣ ಹಾಕುವ ಕುರಿತು ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದ್ದು, ಮನೆಯ ಒಡತಿ ಯಾರು? ಅರ್ಜಿ ಸಲ್ಲಿಸಲು ಯಾರು ಅರ್ಹರು ಮತ್ತು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನ ನಿಗಧಿಪಡಿಸಿ ಹೊಸ ಮಾಹಿತಿಯನ್ನು ಹೊರ ಹಾಕಿದ್ದಾರೆ.ಹಾಗಾದ್ರೆ ನಿಯಮಗಳೇನು.?ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು.? ಯಾವಾಗ ಅರ್ಜಿ ಸಲ್ಲಿಸಬೇಕು ಎಂಬುದನ್ನು ಸಂಪೂರ್ಣ ಮಾಹಿತಿಯನ್ನು ನೋಡೋಣ.
ಹೌದು ಗೃಹಲಕ್ಷ್ಮೀ ಯೋಜನೆಗೆ ಆಗಷ್ಟ್ 15ರಂದು ಚಾಲನೆ ನೀಡಲು ನಿರ್ಧರಿಸುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮೀ ಯೋಜನೆಗೆ ಜೂನ್15ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿದ್ದು ಕೆಲವೊಂದು ಷರತ್ತುಗಳನ್ನ ಹಾಕಿದೆ. ಹೌದು
ಗೃಹ ಲಕ್ಷ್ಮೀ ಯೋಜನೆಯನ್ನು ಸ್ವಲ್ಪ ತಡವಾಗಿ ಜಾರಿಗೆ ತರಲು ರಾಜ್ಯ ಸರಕಾರ ತೀರ್ಮಾನಿಸಿದ್ದು, ಆಗಸ್ಟ್ 15ರಂದು ಚಾಲನೆ ನೀಡಲು ಉದ್ದೇಶಿಸಿದೆ.. ತಾಂತ್ರಿಕ ಕಾರಣಗಳಿಂದ ಜೂನ್‌ನಲ್ಲಿ ಕೊಡಲು ಸಾಧ್ಯವಾಗುತ್ತಿಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ..
ಇಂದು ನಡೆದ ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರೆ ಅವ್ರು ಸಭೆಯ ವಿವರಗಳನ್ನು ನೀಡಿದ್ದು, ಚುನಾವಣೆ ಸಂದರ್ಭದಲ್ಲಿ ಘೋಷಿಸಿದಂತೆ ಮನೆ ಯಜಮಾನಿಗೆ 2,000 ರೂ. ನೀಡಲಿದ್ದೇವೆ ಎಂದು ಹೇಳಿದ್ದು, ಜಾರಿಯ ವಿವರಗಳನ್ನು ನೀಡಿದ್ದಾರೆ.
ಇದಕ್ಕಾಗಿ ಮನೆ ಯಜಮಾನಿಯು ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಒದಗಿಸಬೇಕಾಗುತ್ತದೆ. ಹಾಗೂ ಯೋಜನೆಗಾಗಿ ಅರ್ಜಿ ಸಲ್ಲಿಸಬೇಕು. ಅಲ್ಲದೇ ಮನೆ ಯಜಮಾನಿ ಯಾರು ಎನ್ನುವುದನ್ನು ಮನೆಯವರೇ ತೀರ್ಮಾನಿಸಬೇಕಾಗುತ್ತದೆ. ನಂತರ ಮನೆ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಜಮಾ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ..
ಇದನ್ನೂ ಓದಿ: ಅಂಬಿ ಮನೆಯಲ್ಲಿ ಅಭಿ ಮದುವೆ ಸಂಭ್ರಮ, ಅರಿಶಿಣ ಶಾಸ್ತ್ರದಲ್ಲಿ ಅಂಬಿ ಪುತ್ರನ ಮಸ್ತ್ ಲುಕ್ ಹೇಗಿತ್ತು ಗೊತ್ತಾ?
ಜೂನ್ 15ರಿಂದ ಜುಲೈ 15ರವರೆಗೂ ಅರ್ಜಿ ಸಲ್ಲಿಸಬಹುದು
ಇನ್ನು ಗೃಹಲಕ್ಷ್ಮೀ(Gruha Lakshmi) ಯೋಜನೆಗೆ ಜೂನ್ 15 ರಿಂದ ಜುಲೈ 15 ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಹೌದು ಜೂನ್ 15 ರಿಂದ ಜುಲೈ 15 ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು ಈ ಅವಧಿಯಲ್ಲಿ ಅರ್ಜಿದಾರರು ಅಂದರೆ ಮನೆಯ ಯಜಮಾನಿ ಯಾರು ಅಂತ ನಿರ್ಧರಿಸಲ್ಪಡುವರೋ ಅಂತವರ ಬ್ಯಾಂಕ್ ಖಾತೆ ವಿವರ, ಆಧಾರ್ ಕಾರ್ಡ್ ವಿವರ ಹಾಗೂ ರೇಷನ್ ಕಾರ್ಡು ತೆಗೆದುಕೊಂಡು ಹೋಗಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಇನ್ನು ನಂತರದಲ್ಲಿ ಅಂದ್ರೆ ಜುಲೈ 15 ರಿಂದ ಆಗಸ್ಟ್ 15ರ ವರೆಗೂ ಅರ್ಜಿಗಳ ಪರಿಶೀಲನೆ ಮಾಡಲಾಗುತ್ತದೆ.. ಹೌದು ಮನೆ ಯಜಮಾನಿಯರು ಸಲ್ಲಿಸಿದ ಅರ್ಜಿಯನ್ನು ಸಂಬಂಧ ಪಟ್ಟ ಇಲಾಖೆಯವರು ಪರಿಶೀಲನೆ ನಡೆಸಲಿದ್ದು, ಅರ್ಹ ಫಲಾನುಭವಿಗಳನ್ನ ಗುರುತಿಸಿ ಅವ್ರ ಖಾತೆಗೆ ಹಣ ಹಾಕುವ ಸಿದ್ಧತೆಗಳನ್ನ ಮಾಡಿಕೊಳ್ಳಲಿದ್ದಾರೆ. ಇದರ ಜೊತೆಗೆ ಮಹಿಳೆಯರು 2 ಸಾವಿರ ರೂಪಾಯಿ ಪಡೆಯಲು ಷರತ್ತುಗಳನ್ನ ಹಾಕುತ್ತಾರೆ ಅಂತ ಇ ಮೊದಲು ಹೇಳಲಾಗಿತ್ತು ಆದರೆ ಸಿದ್ದರಾಮಯ್ಯನವರು ಈಗ ಯಾವುದೇ ಶರತ್ತುಗಳನ್ನ ಘೋಷಿಸಿಲ್ಲ.
ಹೌದು ಮೊದಲಿಗೆ ಎಲ್ಲರಿಗೂ ಈ ಯೋಜನೆ ಅನ್ವಯವಾಗಲಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದು, ಬಿಪಿಎಲ್-ಎಪಿಎಲ್ ಯಾವುದೇ ಭೇದಭಾವ ಇರುವುದಿಲ್ಲ ಎಲ್ಲರು ಅರ್ಜಿ ಸಲ್ಲಿಸಬಹುದು ಅಂತ ಸ್ಪಷ್ಟವಾಗಿ ಹೇಳಿದ್ದಾರೆ. ಎರಡನೇಯದಾಗಿ ಅರ್ಜಿ ಸಲ್ಲಿಸಲು ಆಫ್‌ಲೈನ್, ಆನ್‌ಲೈನ್ ಎರಡರಲ್ಲೂ ಅವಕಾಶ ನೀಡಲಾಗುವುದು. ಇದಕ್ಕಾಗಿ ಸಾಫ್ಟ್‌ವೇರ್ ತಯಾರು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹಲಕ್ಷ್ಮೀ ಯೋಜನೆಯ ಅನುಷ್ಠಾನದ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಕೈಗೆ ಬಂದ ತುತ್ತನ್ನ ಬಾಯಿಗೆ ಬರದೇ ಆಗೇ ಮಾಡೋದೇ ಕಾಂಗ್ರೆಸ್ ನವರ ಬುದ್ದಿ ಅಂತ ಹೇಳುತ್ತಿದ್ದವರ ಬಾಯಿ ಮುಚ್ಚಿಸಲು ಇದೀಗ ಮನೆಯ ಒಬ್ಬ ಮಹಿಳೆಗೆ ಮಾತ್ರ ಅನ್ನೋ ಷರತ್ತು ಬಿಟ್ಟರೆ ಬೇರೆ ಯಾವುದೇ ಷರತ್ತುಗಳಿಲ್ಲದೆ ಯೋಜನೆಯ ಅನುಷ್ಠಾನ ಸಿದ್ದರಾಗಿರೋದು ಸ್ವಲ್ಪ ಖುಷಿಯ ವಿಚಾರವೇ ಸರಿ.
ಇದನ್ನೂ ಓದಿ: ಜನರ ಮಧ್ಯೆ ಇದ್ದು ಕೆಲಸ ಮಾಡ್ತಿದ್ರು ಟೀಕೆ ಟಿಪ್ಪಣಿ, ಶಾಸಕ ಪ್ರದೀಪ್ ಈಶ್ವರ್ ಜನಸೇವೆ ಸಹಿಸುತ್ತಿಲ್ಲ ಯಾಕೆ ಕೆಲವರು.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram