ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ದೀಪಾವಳಿಗೆ ಬಂಪರ್ ಲಾಟರಿ 4000 ರೂಪಾಯಿ, ಹಾಗಾದ್ರೆ ಈ ಹಣ ಯಾರಿಗೆಲ್ಲಾ ಬರುತ್ತದೆ?

ಹೌದು ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯ(Gruha Lakshmi Scheme) ಅಡಿಯಲ್ಲಿ ಮಹಿಳೆಯರಿಗೆ ಅಂತ 4000 ವನ್ನು ಕೊಡಲಾಗುತ್ತಿದೆ ಎಂದು ಕೇಳಿ ಬರುತ್ತಿದೆ. ಮೊನ್ನೆ ನಡೆದ ವಿಧಾನ ಸಭೆಯ ಚರ್ಚೆಯಲ್ಲೂ ಕೂಡ ಈ ಸುದ್ದಿ ಬಂದಿದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಯ ಅಧಿಕಾರಿಗಳ ಬಳಿ ಚರ್ಚಿಸಿದ್ದಾರೆ ಹಾಗಾದರೆ ಈ ನಾಲ್ಕು ಸಾವಿರ ಹಣ ಎಲ್ಲಿಂದ ಬರುತ್ತೆ ಇದು ಯಾರಿಗೆ ಸಲ್ಲುತ್ತದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

WhatsApp Group Join Now
Telegram Group Join Now

ಅಷ್ಟೇ ಅಲ್ಲದೆ ಮೊದಲನೇ ಕಂತು ಹಾಗೂ ಎರಡನೇ ಕಂತಿನ ಹಣ ಇನ್ನು ಯಾರಿಗೆ ಬಂದಿಲ್ಲ ಇದರ ಬಗ್ಗೆಯೂ ಕೂಡ ಚರ್ಚೆ ನಡೆದಿದೆ ಸರಕಾರ ಈ ಹಣವನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡುತ್ತಿದೆ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಅಧಿಕಾರಿಗಳ ವಿರುದ್ಧ ಗುಡುಗಿದ್ದಾರೆ ಏಕೆಂದರೆ ಇನ್ನು ಕೂಡ ಹಲವು ಜನರಿಗೆ ಮೊದಲನೇ ಹಾಗೂ ಎರಡನೇ ಕಂತಿನ ಹಣ ಬಂದಿಲ್ಲ ಈ ವಿಚಾರ ನನ್ನವರೆಗೂ ಬಂದಿದೆ, ಆದಷ್ಟು ಇದನ್ನು ಸರಿಪಡಿಸುವ ವ್ಯವಸ್ಥೆಯನ್ನು ಮಾಡಿ ಆದಷ್ಟು ಬೇಗ ಯಾರ ಕೈಗೆ ಹಣ ಸಿಕ್ಕಿಲ್ಲವೋ ಅವರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಇನ್ನು ಮಹಿಳೆಯರಿಗೆ ನೀವು ದುಡ್ಡು ಬರುವ ದಾರಿಯನ್ನು ತಿಳಿಸಿಕೊಡಬೇಕು ಯಾವಾಗ ಬರುತ್ತೆ ಎಂಬುದರ ಬಗ್ಗೆ ವಿವರಣೆ ನೀಡಬೇಕು ಯಾವುದೇ ದೋಷವಿದ್ದರೂ ಕೂಡ ಅದನ್ನು ಸರಿಪಡಿಸಿ ಒಟ್ಟಿನಲ್ಲಿ ಮಹಿಳೆಯರಿಗೆ ದುಡ್ಡು ಕೈಗೆ ಸಿಗಬೇಕು ಯಾವುದೇ ತಾಂತ್ರಿಕ ದೋಷವಿರಲಿ ಏನೇ ಇರಲಿ ನೀವು ಮನೆ ಮನೆಗಳಿಗೆ ಹೋಗಿ ಸರಿಪಡಿಸಿಕೊಡಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಧಿಕಾರಿಗಳ ವಿರುದ್ಧ ಹೇಳಿದ್ದಾರೆ.

ಗೃಹಲಕ್ಷ್ಮಿಯ ಹಣ ಬಿಡುಗಡೆಯಾಗಿ ಆಗಲೇ ಎರಡು ತಿಂಗಳಿಗಿಂತ ಹೆಚ್ಚು ಕಾಲ ಕಳೆದಿದ್ದು ಇನ್ನು ಕೂಡ ಕೆಲವರಿಗೆ ಹಣ ತಲುಪಿಲ್ಲ ಹಣ ತಲುಪದೇ ಇದ್ದವರು ಸರ್ಕಾರಕ್ಕೆ ಸುಳ್ಳು ಸರ್ಕಾರ ಎಂದು ಬಯ್ಯುತ್ತಿದ್ದಾರೆ ಇದಕ್ಕೆ ಸರ್ಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಬಹಳಷ್ಟು ಶ್ರಮಿಸುತ್ತಿದ್ದಾರೆ. ನವೆಂಬರ್ 10ರೊಳಗಾಗಿ ಎರಡನೇ ಕಂತಿನ ಹಣವು ಬರಬೇಕು ಅದಕ್ಕಿಂತ ಹೆಚ್ಚು ತಡ ಮಾಡಬಾರದು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಮೊದಲನೇ ಹಾಗೂ ಎರಡನೇ ಕಂತಿನ 4ಸಾವಿರ ಹಣ ದೀಪಾವಳಿ ಹಬ್ಬಕ್ಕೆ ಬಿಡುಗಡೆ

ಹಾಗೆ ಯಾರಿಗೆ ಇನ್ನು ಗೃಹಲಕ್ಷ್ಮಿಯ ಹಣ ತಲುಪಿಲವೋ ಅವರೆಲ್ಲರಿಗೂ ಹಣ ಬೇಗ ತಲುಪುವ ವ್ಯವಸ್ಥೆಯಾಗಬೇಕು ಎಂದು ಹೇಳಿದ್ದಾರೆ ಅವರಿಗೆ ದೀಪಾವಳಿ ಹಬ್ಬದ ಒಳಗಡೆ ಒಟ್ಟು ಮೊದಲನೇ ಕಂತು ಹಾಗೂ ಎರಡನೇ ಕಂತು ಸೇರಿ 4000 ವರ್ಗಾವಣೆ ಮಾಡಬೇಕು ಇನ್ನು ಇದರಲ್ಲಿ ತಡವಾಗಬಾರದು ಎಂದು ಅಧಿಕಾರಿಗಳಿಗೆ ಗಟ್ಟಿಯಾಗಿ ಹೇಳಿದ್ದಾರೆ. ಯಾರ್ಯಾರಿಗೆ ಬಂದಿಲ್ಲ ಅವರೆಲ್ಲರಿಗೂ ಸೇರಿ ದೀಪಾವಳಿಯ ಸಮಯದಲ್ಲಿ ನಾವು ಗಿಫ್ಟ್ ರೂಪದ ಮೂಲಕ ಕೊಡುತ್ತಿದ್ದೇವೆ ಅಂತ ಸ್ಪಷ್ಟಪಡಿಸಿದ್ದಾರೆ.

ಜನರು ಕೇಳಿದ ಪ್ರಶ್ನೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ರೀತಿಯಾಗಿ ಉತ್ತರಿಸಿದ್ದಾರೆ ಗೃಹಲಕ್ಷ್ಮಿ ಯೋಜನೆಯಾಗಲಿ(Gruha Lakshmi Scheme) ಅನ್ನ ಭಾಗ್ಯ ಯೋಜನೆ ಯಾಗಲಿ ಸರ್ಕಾರದ ಯಾವುದೇ ಯೋಜನೆಯಾಗಲಿ ಅದು ಅರ್ಧಕ್ಕೆ ನಿಲ್ಲುವುದಿಲ್ಲ ಎಲ್ಲಿವರೆಗೆ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇರುತ್ತದೆಯೋ ಅಲ್ಲಿಯತನಕ ಯೋಜನೆಗಳು ನಡೆಯುತ್ತವೆ ಅದನ್ನು ನಾವು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟಪಡಿಸಿದ್ದಾರೆ.

ಕೆಲವು ಮಹಿಳೆಯರು ಗೃಹಲಕ್ಷ್ಮಿಯಿಂದ ಬಹಳಷ್ಟು ಬೇಸರಪಟ್ಟಿದ್ದಾರೆ ಈ ಯೋಜನೆಯ ಸುಳ್ಳು ಎಂಬ ವಿಚಾರವು ಅವರ ಮನಸ್ಸಿನಲ್ಲಿ ಹುಟ್ಟಿಕೊಂಡಿದೆ ಏಕೆಂದರೆ ಇನ್ನು ಕೆಲವರಿಗೆ ಗೃಹಲಕ್ಷ್ಮಿಯ ಹಣ ತಲುಪಿಲ್ಲ ಪ್ರತೀ ತಿಂಗಳ ತಾರೀಕು 30 ಆದರೂ ಕೂಡ ಗೃಹಲಕ್ಷ್ಮಿ ಹಣ ಖಾತೆಗೆ ಬರುವುದಿಲ್ಲ ಅದು ಮುಂದಿನ ತಿಂಗಳುಗಳವರೆಗೂ ಕೂಡ ಹೋಗುತ್ತದೆ ಆದ್ದರಿಂದ ಈ ಯೋಜನೆಯು ಎಷ್ಟು ದಿನ ನಡೆಯಲಿದೆ ಎಂಬ ಸಂಶಯ ಎಲ್ಲರಲ್ಲೂ ಎದುರಾಗಿದೆ. ಇದರ ಬಗ್ಗೆ ಯಾರಲ್ಲಿಯೂ ಉತ್ತರವಿಲ್ಲ ಎಲ್ಲರೂ ಕಾದು ನೋಡಬೇಕಿದೆ.

ಇದನ್ನೂ ಓದಿ: 2023 ದೀಪಾವಳಿ ಲಕ್ಷ್ಮಿ ಪೂಜೆಗೆ ಅದೃಷ್ಟದ ಸಮಯ; ಪೂಜೆ ಮಾಡುವ ವಿಧಾನ

ಇದನ್ನೂ ಓದಿ: ಅತಿ ಕಡಿಮೆ ಬೆಲೆಯಲ್ಲಿ ಹುಂಡೈ ಅಲ್ಕಾಜರ್, ಹೆಚ್ಚಿನ ಸುರಕ್ಷತಾ ಸೌಲಭ್ಯದೊಂದಿಗೆ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram