ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು(Gruha Lakshmi Yojana) ಈಗಾಗಲೇ ಪ್ರಾರಂಭಿಸಿದ್ದು ಬಹುತೇಕ ರಾಜ್ಯದ ಗೃಹಿಣಿಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ನೊಂದಣಿ ಮಾಡಿಕೊಂಡಿದ್ದು ಈಗಾಗಲೇ ಮೊದಲ ಕಂತಿನ ಹಣವನ್ನು ಪಡೆದಿದ್ದಾರೆ ಹಾಗೂ ಎರಡನೇ ಕಂತಿನ ಹಣಕ್ಕೋಸ್ಕರ ಕಾಯುತ್ತಿದ್ದು ಇದೀಗ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ವರ್ಗಾವಣೆ ಮಾಡಿದ್ದು, ಒಂದಷ್ಟು ಮಹಿಳೆಯರ ಕೈಗೆ 2ನೇ ಕಂತಿನ ಹಣ ಸಿಕ್ಕಿದೆ. ಹೌದು ಈಗಾಗಲೇ ರಾಜ್ಯದ ಗೃಹಿಣಿಯರು ಮೊದಲ ಕಂತಿನ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ಪಡೆದಿದ್ದು ಬಹುತೇಕ ಗೃಹಿಣಿಯರು ಈವರೆಗೂ ಕೂಡ ತಮ್ಮ ಮೊದಲ ಕಂತಿನ ಹಣವನ್ನೇ ಪಡೆದಿಲ್ಲ. ಹೌದು ಬಹಳಷ್ಟು ಜನ ಎರಡನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದು ರಾಜ್ಯ ಸರ್ಕಾರ ಇದೀಗ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಬಿಡುಗಡೆ ಆಗಿದ್ದು ಕೇವಲ 20% ಮಹಿಳೆಯರ ಖಾತೆಗೆ ಮಾತ್ರ ಹಣ ಜಮೆ ಆಗಿದೆ. ಹಾಗಾದರೆ ಇನ್ನುಳಿದವರ ಕತೆ ಏನು? ಒಂದು ಕಂತಿನ ಹಣ ಪಡೆಯವದವರಿಗೆ ಹಣ ಬರೋದೇ ಇಲ್ವಾ ಅಂತ ಸಾಕಷ್ಟು ಮಂದಿ ಗೊಂದಲದಲ್ಲಿದ್ದಾರೆ.
ಹೌದು ಈ ಹಿಂದೆ ಸಚಿವೆ ಲಕ್ಷ್ಮೀ ಹೆಬಾಳ್ಕರ್ ಅವ್ರು ಅಕ್ಟೋಬರ್ 15 ರ ಮೇಲೆ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣವನ್ನು ಗೃಹಿಣಿಯ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ ತಿಳಿಸಿದ್ರು, ಅಲ್ದೇ ಒಂದು ವೇಳೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಬಂದಿಲ್ಲದಿದ್ದಲ್ಲಿ ನೀವು ಎರಡನೇ ಕಂತಿನ ಹಣ ಅಕ್ಟೋಬರ್ 15 ರ ಬಳಿಕ ಪಡೆಯಬಹುದು ಅಂದಿದ್ರು ಆದ್ರೆ ಅದ್ಯಾವುದು ಕೂಡ ಆಗಿಲ್ಲ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಮಹಿಳೆಯರಿಗಾಗಿ 2 ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲ ಸೌಲಭ್ಯ.
ಹಣ ಬಿಡುಗಡೆ ಆದ್ರೂ ಖಾತೆಗೆ ಯಾಕೆ ಬರುತ್ತಿಲ್ಲ ಗೊತ್ತಾ?
ಹೌದು ಈ ಹಿಂದೆ ಸರ್ಕಾರ ಗೃಹಿಣಿಯರು ಆಗಸ್ಟ್ 15 ರ ಒಳಗಾಗಿ ಗೃಹಲಕ್ಷ್ಮಿ ಯೋಜನೆಗೆ(Gruha Lakshmi Yojana) ಅರ್ಜಿ ಸಲ್ಲಿಸಿದ್ದಲ್ಲಿ ಮಾತ್ರವಷ್ಟೇ ಸೆಪ್ಟೆಂಬರ್ ತಿಂಗಳಿನಲ್ಲಿ ಮೊದಲ ಕಂತಿನ ಹಣ ಸಿಗಲಿದೆ ಒಂದು ವೇಳೆ ಆಗಸ್ಟ್ 15ರ ನಂತರ ಅರ್ಜಿ ಸಲ್ಲಿಸಿದ್ದಲ್ಲಿ ಮೊದಲ ಕಂತಿನ ಹಣ ಸಿಗದೇ ನೇರವಾಗಿ ಎರಡನೇ ಕಂತಿನ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಹಾಗಿಯೇ ಗೃಹಿಣಿಯ ಆಧಾರ್ ಕಾರ್ಡಿಗೆ ಕಡ್ಡಾಯವಾಗಿ ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕು ಒಂದು ವೇಳೆ ಲಿಂಕ್ ಆಗಿದ್ದರೆ ಈ ಕೂಡಲೇ ನಿಮ್ಮ ಹತ್ತಿರದ ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಲಿಂಕ್ ಮಾಡಿಸಿಕೊಳ್ಳಬಹುದು ಅಂತ ಹೇಳಿತ್ತು. ಜೊತೆಗೆ ಗೃಹಿಣಿಯ ರೇಷನ್ ಕಾರ್ಡ್(Ration Card) ಹಾಗೂ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿ ಒಂದೇ ಹೆಸರು ಇರತಕ್ಕದ್ದು ಒಂದು ವೇಳೆ ಹೆಸರು ಸರಿ ಇಲ್ಲದಿದ್ದಲ್ಲಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ ಇದಕ್ಕಾಗಿ ನೀವು ನಿಮ್ಮ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿರುವ ಹೆಸರು ಸರಿ ಇದೆಯಾ ಎಂದು ಪರಿಶೀಲಿಸಿಕೊಳ್ಳುವುದು ಸೂಕ್ತವಾಗಿದೆ ಅಂತ ಸಾಕಷ್ಟು ಬಾರಿ ಹೇಳಿತ್ತು.
ಆದ್ರೆ ಇದರಲ್ಲಿ ಎಲ್ಲ ಸರಿ ಇದ್ದು ಹಣ ಪಡೆಯದೇ ಇರುವ ಮಹಿಳೆಯರು ಇದ್ದು ನಮಗ್ಯಾಕೆ ಯೋಜನೆಯ ಲಾಭ ಸಿಕ್ಕಿಲ್ಲ ಅಂದಾಗ ಸರ್ಕಾರ ತಾಂತ್ರಿಕ ದೋಷದ ನೆಪವೊಡ್ಡಿ, ಸರ್ವರ್ ಸಮಸ್ಯೆ ಅಂತ ಹೇಳಿತ್ತು, ಅಲ್ದೇ ನಾವು ಈಗಾಗಲೇ ಹಣ ಬಿಡುಗಡೆ ಮಾಡಿದ್ದೀವಿ ಆರ್. ಬಿ. ಐ(RBI) ಹಣ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡಿದೆ ಅಂತ ಹೇಳುತ್ತಲೇ ಇದೀಗ ಕೇವಲ 20% ಫಲನುಭವಿಗಳಿಗೆ ಮಾತ್ರ ಹಣ ಬಿಡುಗಡೆ ಮಾಡಿದ್ದು ಮತ್ತೆ ಮಹಿಳೆಯರಲ್ಲಿ ಗುಸು ಗುಸು ಶುರುವಾಗಿದೆ.
ಹೌದು ಇದೀಗ ಕೇವಲ 20% ಜನರಿಗೆ ಮಾತ್ರ ಎರಡನೇ ಕಂತಿನ ಹಣ ಬಂದಿರೋದು ಸಹಜವಾಗಿ ಹಣ ಬರದೆ ಇರೋರಿಗೆ ಭಯ ಶುರುವಾಗಿದೆ ಅಂತಲೇ ಹೇಳಬಹುದು . ಯಾಕಂದ್ರೆ ಮೊದಲ ಕಂತಿನ ಹಣ ಪಡೆದ ಕೆಲವರಿಗಷ್ಟೇ ಎರಡನೇ ಕಂತಿನ ಹಣ ಬಂದಿದ್ದು ಉಳಿದ ಮಂದಿಗೆ ಎರಡನೇ ಕಂತಿನ ಹಣ ಬಂದಿಲ್ಲ. ಇದರ ಜೊತೆಗೆ ಮೊದಲ ಕಂತಿನ ಹಣವನ್ನು ಪಡೆಯದೆ ಇರೋರಿಗೂ ಕೂಡ ಹಣ ಬಂದಿಲ್ಲ ಹೀಗಾಗಿ ಎಲ್ಲರಲ್ಲೂ ಕೂಡ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು ನಮಗೆ ಮೊದಲನೇ ಕಂತಿನ ಹಣ ಬಂದಿದೆ ಆದರೆ ಎರಡನೇ ಕಂತಿನ ಹಣ ಯಾಕ್ ಬಂದಿಲ್ಲ ಅಂತ ಪ್ರಶ್ನೆ ಮಾಡ್ತಿದ್ರೆ, ಇನ್ನು ಕೆಲವರು ಎಲ್ಲಾ ಸರಿ ಇದ್ರೂ ಕೂಡ ನಮಗೆ ಮೊದಲನೇ ಕಂತಿನ ಹಣವೇ ಬಂದಿಲ್ಲ ನಾವೇನ್ ಮಾಡೋದು ಅಂತ ಕೇಳ್ತಾ ಇದ್ದಾರೆ.
ಆದ್ರೆ ಈಗಲೂ ಕೂಡ ಸರ್ಕಾರ ಅದೇ ರಾಗ ಅದೇ ಹಾಡು ಎಂಬಂತೆ ಎಲ್ಲರಿಗೂ ಕೂಡ ಹಣವನ್ನು ತಲುಪಿಸುತ್ತೇವೆ ಮೊದಲ ದಿನ ಒಂದಷ್ಟು ಜನರಿಗೆ ಎರಡನೇ ಕಂತಿನ ಹಣವನ್ನು ಹಾಕಿದ್ದೇವೆ ಇದೇ ರೀತಿ ಪ್ರೋಸೆಸ್ ಮುಂದುವರೆಯುತ್ತೆ, ನಾವು ಸಾಧ್ಯವಾದಷ್ಟು ಬೇಗನೆ ಎಲ್ಲವನ್ನ ಸರಿಪಡಿಸಿಕೊಳ್ಳೋದಕ್ಕೆ ಪ್ರಯತ್ನ ಪಡುತ್ತೇವೆ, ಎರಡನೇ ಕಂತಿನ ಹಣವನ್ನ ಎಲ್ಲರಿಗೂ ಕೂಡ ಹಾಕ್ತೇವೆ ಹಾಗೆಯೇ ಮೊದಲನೇ ಕಂತು ಹಾಗೂ ಎರಡನೇ ಕಂತಿನ ಹಣ ಯಾರಿಗ್ ಬಂದಿಲ್ವೋ? ಅಂತವರಿಗೆ ಎರಡು ಒಟ್ಟಿಗೆ ಸೇರಿ 4000 ಹಾಕುತ್ತೇವೆ ಅಂತ ಹೇಳಲಾಗ್ತಿದೆ.