ಕಾಂಗ್ರೆಸ್ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಇಂದು ಆಡಳಿತದಲ್ಲಿ ಚುಕ್ಕಾಣಿ ಹಿಡಿದಿದೆ ಅಂದ್ರೆ ಅದರ ಹಿಂದೆ ಮಹಿಳೆಯರ ಶಕ್ತಿ ಹೆಚ್ಚಿದೆ. ಹೀಗಾಗಿ ಚುನಾವಣೆಗೂ ಮೊದಲೇ ಮಹಿಳೆಯರನ್ನ ಟಾರ್ಗೆಟ್ ಮಾಡಿದ್ದ ಕಾಂಗ್ರೆಸ್ ಮಹಿಳೆಯರ ಪರ ಸಾಕಷ್ಟು ಯೋಜನೆಗಳನ್ನ ರೂಪಿಸಿತ್ತು. ಅದರಲ್ಲೂ ಮುಖ್ಯವಾಗಿ ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸಲು ಕುಟುಂಬದ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ(Gruha Lakshmi Yojana) ಕೂಡ ಜಾರಿ ಮಾಡಿ ಕೆಲವರಿಗೆ ಮೊದಲ ಹಾಗೂ ಎರಡನೇ ಕಂತಿನ ಹಣವನ್ನು ನೀಡಲಾಗಿದೆ. ಆದರೆ ಈವರೆಗೆ ಅರ್ಜಿಸಲ್ಲಿಸಿದ ಸುಮಾರು 9,44,155 ಅರ್ಜಿದಾರರಿಗೆ ಹಣ ತಲುಪಿಲ್ಲ. ಇನ್ನು ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ಘೋಷಿಸಿದಂತೆ ಯುವನಿಧಿ ಯೋಜನೆ ಬಿಟ್ಟು ಉಳಿದ ನಾಲ್ಕು ಯೋಜನೆಗಳನ್ನ ಜಾರಿಗೆ ತಂದಿದೆ. ಅನ್ನಭಾಗ್ಯ ಯೋಜನೆಯಲ್ಲಿ(Anna bhagya scheme) ಅಕ್ಕಿ ಕೊರತೆಯಿಂದ 5 ಕೆಜಿ ಅಕ್ಕಿ ನೀಡಿ 5 ಕೆಜಿಗೆ ಹಣವನ್ನು ನೀಡುತ್ತಿದೆ. ಅದರಲ್ಲೂ ಕೆಲವೊಬ್ಬರಿಗೆ ಹಣ ತಲುಪುತ್ತಿಲ್ಲ. ಇದರ ಮಧ್ಯೆ ಗೃಹಲಕ್ಷ್ಮಿ ಯೋಜನೆಯಲ್ಲೂ ಗೊಂದಲ ಸೃಷ್ಟಿಯಾಗಿದೆ.
ಹೌದು ಅರ್ಜಿಸಲ್ಲಿಸಿರುವವರಲ್ಲಿ 3082 ಅರ್ಜಿದಾರರು ಮರಣ ಹೊಂದಿದ್ದರಿಂದ ಹೀಗಾಗಿ ಅವರನ್ನು ಅನರ್ಹಗೊಳಿಸಲಾಗಿದೆ. ಅಲ್ದೇ 1,59,356 ಅರ್ಜಿದಾರರ ಡೆಮೋ ದೃಢೀಕರಣ ವಿಫಲವಾಗಿದೆ. ಇದಕ್ಕೆ ಕಾರಣ ಫಲಾನುಭವಿಗಳ ಆಧಾರ್ ಹಾಗೂ ಬ್ಯಾಂಕ್ ಖಾತೆ ಹೆಸರಿನಲ್ಲಿ ವ್ಯತ್ಯಾಸವಾಗಿದೆ. ಈಗಾಗಲೇ ಅವುಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ ಅಂತ ಸಚಿವೆ ಲಕ್ಷ್ಮೀ ಹೆಬಾಳ್ಕರ್ ತಿಳಿಸಿದ್ದರು. ಇನ್ನು 5,96,268 ಫಲಾನುಭವಿಗಳ ಖಾತೆ ಆಧಾರ್ ಕಾರ್ಡ್ಗೆ ಲಿಂಕ್ ಆಗಿಲ್ಲ. ಆದರೆ 2,17,536 ಫಲಾನುಭವಿಗಳ ಬ್ಯಾಂಕ್ ಖಾತೆ ಆಧಾರ್ ನೊಂದಿಗೆ ಲಿಂಕ್ ಆಗಿದ್ದು, ಅವರಿಗೆ ಯೋಜನೆಯ ಹಣ ಹೋಗಿದೆ. ಉಳಿದ ಫಲಾನುಭವಿಗಳಿಗೂ ಸಿಡಿಪಿಒ ಮಾಹಿತಿ ನೀಡಿ ಆಧಾರ್ ಫೀಡ್ ಮಾಡಿಸಲು ಕ್ರಮ ವಹಿಸಲಾಗಿದೆ. ಸುಮಾರು 1,75,683 ಫಲಾನುಭವಿಗಳ ಹೆಸರು ಮತ್ತು ವಿಳಾಸದಲ್ಲಿ ವ್ಯತ್ಯಾಸವಾಗಿದೆ. ಬ್ಯಾಂಕ್ ಗಳ ಮೂಲಕ ಫಲಾನುಭವಿಗಳ ಇ-ಕೆವೈಸಿ(E-KYC) ಮಾಡಿಸಲು ಇಲಾಖೆ ಕ್ರಮ ವಹಿಸಿದ್ದೇವೆ ಅಂತ ಹೇಳಿದ್ರು ಆದ್ರೆ 3ತಿಂಗಳಾದ್ರೂ ಯೋಜನೆಯ ಮೊದಲ ಕಂತಿನ ಹಣವೇ ಇನ್ನು ಫಲಾನುಭವಿಗಳನ್ನ ತಲುಪಿಲ್ಲ ಹೀಗಾಗಿ ಮತ್ತೆ ಫಲಾನುಭವಿಗಳಿಗೆ ಈ ಕೆಲಸ ಮಾಡಿದ್ರೆ ಹಣ ಬರುತ್ತೆ ಅಂತ ಹೇಳ್ತಿದ್ದಾರೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆಯಲು ಹೇಳಿದ ಸಚಿವೆ
ಹೌದು ಯೋಜನೆಯ ಮೊದಲ ಕಂತಿನ ಹಣ 96 ಲಕ್ಷ ಜನರ ಖಾತೆ ಹಾಗೂ 2 ನೇ ಕಂತಿನ ಹಣ 63 ಲಕ್ಷ ಮಹಿಳೆಯರ ಖಾತೆಗೂ ವರ್ಗಾವಣೆ ಮಾಡಲಾಗಿದೆ. ಆದ್ರೆ ಇನ್ನುಳಿದಂತೆ ಬಹಳಷ್ಟು ಮಂದಿಗೆ ಯೋಜನೆಯ ಮೊದಲ ಕಂತಿನ ಹಣವೇ ಬಂದಿಲ್ಲ. ಹಾಗಾದ್ರೆ ಉಳಿದವರ ಖಾತೆಗೆ ಹಣ ಜಮಾ ಆಗಿಲ್ಲ ಯಾಕೆ ಹಾಗಾದರೆ ಆಗಿರುವ ಸಮಸ್ಯೆ ಏನು? ಯಾಕೆ ಹಣ ಬರುತ್ತಿಲ್ಲ ಅಂತ ಸಾಕಷ್ಟು ಮಂದಿ ತಲೆಕೆಡಿಸಿಕೊಂಡಿದ್ರು. ಹೌದು ಹಣ ಜಮಾ ಮಾಡುವಲ್ಲಿ ಸರ್ಕಾರದಲ್ಲೂ ಸಮಸ್ಯೆ ಎದುರಾಗಿದ್ದು, ತಾಂತ್ರಿಕ ದೋಷಗಳಿಂದ ಮಹಿಳೆಯರ ಖಾತೆಯನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇದಕ್ಕೆ ಪರಿಹಾರ ಕಂಡು ಕೊಂಡು ಮೂರು ಕಂತಿನ ಹಣ ಒಟ್ಟಿಗೆ ಹಾಕಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ಅಲ್ದೇ ಯಾರು ಪೋಸ್ಟ್ ಆಫೀಸ್ ಖಾತೆ(Post Office Account) ಹೊಂದಿರುತ್ತಾರೋ ಅಂತಹವರಿಗೆ ಕೂಡ ಯಾವುದೇ ತೊಂದರೆ ಆಗದಂತೆ ಗೃಹಲಕ್ಷ್ಮಿ 2 ನೇ ಕಂತಿನ ಹಣ ಸಂದಾಯವಾಗಿದೆ. ಹೀಗಾಗಿ ಮಹಿಳೆಯರು ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆಯುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ ನೀಡಿದ್ದು, ಇದುವರೆಗೆ ಯಾರಿಗೆ ಒಂದು ಕಂತಿನ ಹಣ ಕೂಡ ಜಮಾ ಆಗಿಲ್ಲ, ಅಂತಹವರಿಗೆ ನವೆಂಬರ್ 10 ರೊಳಗೆ ಮೂರು ಕಂತಿನ ಹಣ ಸಂದಾಯ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಇನ್ನು ಗೃಹಲಕ್ಷ್ಮಿ ಯೋಜನೆಯ(Gruha Lakshmi Yojana) ಅಡಿಯಲ್ಲಿ ಕುಟುಂಬದ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ.ಹಣವನ್ನು ಡಿಬಿಟಿ(DBT) ಮೂಲಕ ನೋಂದಾಯಿತ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ. ಹೀಗಾಗಿ ಖಾತೆ ಹೊಂದಿರುವ ಬ್ಯಾಂಕ್ಗಳಿಗೆ ಸಂಪರ್ಕಿಸಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ನೀಡಿ ಆಧಾರ್ ಜೋಡಣೆ ಮತ್ತು ಇ-ಕೆವೈಸಿ ಅಪ್ಡೇಟ್(E-KYC Update) ಮಾಡಿಸಿಕೊಳ್ಳುವುದು ಹಾಗೂ ಫಲಾನುಭವಿಗಳು ಆಧಾರ್ ಕಾರ್ಡ್, ಪಡಿತರ ಚೀಟಿಯನ್ವಯ ಹಾಗೂ ಪಾಸ್ಪುಸ್ತಕದಲ್ಲಿರುವ ಖಾತೆದಾರರ ಹೆಸರು ಹೊಂದಾಣಿಕೆ ಮಾಡಿಸಿಕೊಳ್ಳುವಂತೆ ಯೋಜನೆಯ ಸೌಲಭ್ಯವನ್ನು ಪಡೆಯುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ. ಜೊತೆಗೆ ನಿಮ್ಮ ಖಾತೆಗೆ ಆಧಾರ್ ಸೀಡಿಂಗ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ.
ಇನ್ನು ಬ್ಯಾಂಕಿನಲ್ಲಿ ನಿಮ್ಮ ಸಾಲ ಪಡೆದುಕೊಂಡ ಖಾತೆಯನ್ನು ಗೃಹಲಕ್ಷ್ಮಿ ಯೋಜನೆಗೂ ಕೊಟ್ಟಿದ್ದರೆ, ಹಣ ನಿಮ್ಮ ಸಾಲಕ್ಕೆ ಜಮಾ ಆಗಲು ಬಹುದು ಹೀಗಾಗಿ ಅದರ ಬಗ್ಗೆ ವಿಚಾರಿಸಿ, ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಆಗಿದೆಯಾ ಅಂತಾ ತಿಳಿದುಕೊಳ್ಳಿ ಇಲ್ಲವಾದರೆ ಸಮಸ್ಯೆ ಹೆಚ್ಚಾಗುತ್ತೆ ವಿನಃ ಹಣ ನಿಮ್ಮ ಖಾತೆ ಸೇರಲ್ಲ ಅಂತ ಸಚಿವೆ ಲಕ್ಷ್ಮೀ ಹೆಬಾಳ್ಕರ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಈ ಎಲ್ಲಾ ವಿಚಾರಗಳನ್ನ ಮತ್ತೊಮ್ಮೆ ಪರಿಶೀಲಿಸಿ ಇಲ್ಲ ಸರಿ ಇದ್ಯಾ ಇಲ್ವಾ ಅನ್ನೋದನ್ನ ಖಚಿತ ಪಡಿಸಿಕೊಳ್ಳೋದು ಅತ್ಯುತ್ತಮ ಅಂತ ಹೇಳಲಾಗಿದೆ.
ಇದನ್ನೂ ಓದಿ: ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಆಗಿ ರಾಯಲ್ ಎನ್ ಫೀಲ್ಡ್ ಬೈಕ್ ಕೊಟ್ಟ ಉದ್ಯಮಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram