ಫೆಬ್ರುವರಿ ತಿಂಗಳಿನ ಮೊದಲನೇ ಅಥವಾ ಎರಡನೇ ವಾರದಲ್ಲಿ ಗೃಹಲಕ್ಷ್ಮಿ ಯೋಜನೆಯ(Gruha Lakshmi Yojana) ಆರನೇ ಕಂತಿನ ಹಣ ಬಿಡುಗಡೆ ಆಗಲಿದ್ದು. ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಆಗಲೂ ಹಲವು ನಿಯಮಗಳನ್ನು ಜಾರಿಗೊಳಿಸಿದೆ. ಈಗ ಅದರ ಜೊತೆಗೆ ಮತ್ತೆ ಎರಡು ನಿಯಮಗಳು ಸೇರ್ಪಡೆ ಆಗಿವೆ. ಈ ಹೊಸ ನಿಯಮಗಳನ್ನು ಪಾಲಿಸದೆ ಇದ್ದರೆ ನಿಮಗೆ 2,000 ರೂಪಾಯಿ ಸಿಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೊಸದಾಗಿ ಜಾರಿಗೆ ಆಗಿರುವ ಎರಡು ಹೊಸ ನಿಯಮಗಳು ಏನು: ಮೊದಲನೇ ರೂಲ್ಸ್ ಎಂದರೆ ಹಳೆಯದಾದ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು. ಇಲ್ಲದೆ ಇದ್ದರೆ ನಿಮಗೆ ಹಣ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ. ಎರಡನೇ ರೂಲ್ಸ್ ಎಂದರೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರು ಮತ್ತು ವಿಳಾಸ ಹಾಗೂ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಹೆಸರು ಮತ್ತು ವಿಳಾಸ ಎರಡು ಒಂದೇ ಆಗಿರಬೇಕು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಆಧಾರ್ ಕಾರ್ಡ್ ಅಪ್ಡೇಟ್ ಬಗ್ಗೆ ಮಾಹಿತಿ:-
ಆಧಾರ್ ಕಾರ್ಡ್ ಮಾಡಿಸಿ 10 ವರ್ಷ ಆಗಿದ್ದರೆ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಎಂದು ಕೇಂದ್ರ ಸರ್ಕಾರ ಈಗಾಗಲೇ ತಿಳಿಸಿದೆ. ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಮಾರ್ಚ್ 14 ಕೊನೆಯ ದಿನವಾಗಿದೆ. ಮಾರ್ಚ್ 14 ರ ನಂತರ ನಿಮಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು 1,000 ರೂಪಾಯಿ ನೀಡಬೇಕು ಎಂದು ಇಲಾಖೆ ತಿಳಿಸಿದೆ. ಇದೇ ನಿಯಮವನ್ನು ಗೃಹಲಕ್ಷ್ಮಿ ಯೋಜನೆಗೆ ತಂದಿದ್ದರೆ. ಹಳೆಯ ಆಧಾರ್ ಕಾರ್ಡ್ ಯಾವುದೇ ರೀತಿಯ ಉಪಯೋಗ ಇಲ್ಲ. ಆಧಾರ್ ಕಾರ್ಡ್ ಕೆಳಗೆ issue date ಎಂಬುದಾಗಿ ಇರುತ್ತದೆ . ಅಲ್ಲಿ ನಿಮಗೆ ಆಧಾರ್ ಕಾರ್ಡ್ ನೀಡಿದ ದಿನಾಂಕ ಇರುತ್ತದೆ. ಅಲ್ಲಿ ಇರುವ ದಿನಾಂಕ 10 ವರ್ಷ ಹಳೆಯದು ಆಗಿದ್ದರೆ ಈಗಲೇ ನೀವು ಅಪ್ಡೇಟ್ ಮಾಡಿಸಬೇಕು. ಅಪ್ಡೇಟ್ ಮಾಡಿಸಲು ನೀವು ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಹೋಗಿ ನಿಮ್ಮ ಹಳೆಯ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಮತ್ತು ಗುರುತಿನ ಚೀಟಿಯನ್ನು ನೀಡಿ ಆಧಾರ್ ಅಪ್ಡೇಟ್ ಮಾಡಿಸಬೇಕು.
ಇನ್ನೂ ಆಧಾರ್ ಅಪ್ಡೇಟ್ ಆದ 15 ರಿಂದ 20 ದಿನಗಳ ಬಳಿಕ ನಿಮಗೆ ಗೃಹಲಕ್ಷ್ಮಿ ಯೋಜನೆಯ(Gruha Lakshmi Yojana) ಹಣವೂ ವರ್ಗಾವಣೆ ಆಗಲಿದೆ. ಪೆಂಡಿಂಗ್ ಇದ್ದರೂ ಮುಂದಿನ ಕಂತಿನ ಜೊತೆಗೆ ಹಣವೂ ಸಿಗಲಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಮಾತ್ರವಲ್ಲ ಸರ್ಕಾರದ ಯಾವುದೇ ಯೋಜನೆ ಸಿಗಬೇಕು ಎಂದರೆ ನೀವು ಆಧಾರ್ ಅಪ್ಡೇಟ್ ಮಾಡಿಸಬೇಕು.
ಇದನ್ನೂ ಓದಿ: UIDAI ಯಲ್ಲಿ 13 ಕನ್ಸಲ್ಟೆಂಟ್ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ಆಧಾರ್ ಮತ್ತು ಬ್ಯಾಂಕ್ ಖಾತೆಯ ಹೆಸರು ಮತ್ತು ವಿಳಾಸ ಒಂದೇ ಇರಬೇಕು
ಆಧಾರ್ ಕಾರ್ಡ್ ನಲ್ಲಿ ಒಂದು ಹೆಸರು ಕೊಟ್ಟು ನಿಮ್ಮ ಬ್ಯಾಂಕ್ ಖಾತೆಗೆ ಇನ್ನೊಂದು ಹೆಸರು ಕೊಟ್ಟಿದ್ದರೆ ನಿಮಗೆ ಹಣ ಬರುವುದಿಲ್ಲ. ನಿಯಮದ ಪ್ರಕಾರ ಉದಾಹರಣೆಗೆ ಆಧಾರ್ ಕಾರ್ಡ್ ನಲ್ಲಿ ಪ್ರತಿಭಾ b.s. ಎಂದು ಹೆಸರು ಇದ್ದರೆ ಬ್ಯಾಂಕ್ ಖಾತೆಯಲ್ಲಿ ಪ್ರತಿಭಾ ಎಂದು ಇದ್ದರೆ ನಿಮಗೆ ಹಣ ವರ್ಗಾವಣೆ ಆಗುವುದಿಲ್ಲ. ಅಂತೆಯೇ ನೀವು ಇರುವ ಮನೆಯ ವಿಳಾಸವು ಸಹ ಎರಡು ಕಡೆ ಒಂದೇ ಇರಬೇಕು. ಒಂದು ಬಡಾವಣೆಯ ಹೆಸರು ತಪ್ಪಿದ್ದರೂ ನಿಮಗೆ ಹಣ ವರ್ಗಾವಣೆ ಆಗುವುದಿಲ್ಲ. ಈಗಾಗಲೇ ಹಲವು ಬಾರಿ ಅರ್ಜಿ ಸಲ್ಲಿಸಿದರೂ ಹಣ ವರ್ಗಾವಣೆ ಆಗದೆ ಇದ್ದರೂ ಒಮ್ಮೆ ಬ್ಯಾಂಕ್ ಖಾತೆಗೆ ಹೋಗಿ ನಿಮ್ಮ ಹೆಸರು ಮತ್ತು ವಿಳಾಸವನ್ನು ಪರಿಶೀಲಿಸಿ. ಹಣ ಬರುತ್ತಿರುವವರು ಸಹ ಒಮ್ಮೆ ಪರಿಚಯಿಸಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ಇ- ಶ್ರಮ ಯೋಜನೆಯ ಅಸಂಘಟಿತ ಕಾರ್ಮಿಕರ ವಯೋಮಿತಿಯನ್ನು 59 ರಿಂದ 70 ವರ್ಷದವರೆಗೆ ವಿಸ್ತರಿಸಲಾಗಿದೆ