ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದ ಗ್ಯಾರಂಟಿಗಳಲ್ಲಿ ಸಖತ್ ಸೌಂಡ್ ಮಾಡಿದ್ದು, ಹಾಗೆಯೇ 90% ರಷ್ಟು ಮಹಿಳೆಯರು ಕಾಂಗ್ರೆಸ್ ಪರ ವಾಲಲು ಕಾರಣ ಗೃಹಲಕ್ಷ್ಮೀ ಯೋಜನೆ. ಪ್ರತಿತಿಂಗಳು ಮನೆಯೊಡತಿ ಖಾತೆಗೆ 2000ರೂಪಾಯಿ ಹಣವನ್ನ ಹಾಕುವ ಯೋಜನೆ. ಇನ್ನು ಹೆಣ್ಣುಮಕ್ಕಳು ಆರ್ಥಿಕವಾಗಿ ತೊಂದರೆ ಅನುಭವಿಸಬಾರದು ಎಂದು ಈ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ. ಸದ್ಯ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಸಹ ಈಗಾಗಲೇ ಶುರುವಾಗಿದೆ. ಹಲವು ಸಮಸ್ಯೆಗಳ ಮಧ್ಯೆಯು ರಾಜ್ಯದ ಸುಮಾರು 80 ಲಕ್ಷಕ್ಕಿಂತ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ತಮ್ಮ ಖಾತೆಗೆ ಹಣ ಯಾವಾಗ ಬರುತ್ತದೆ ಎಂದು ಕಾದು ಕುಳಿತಿದ್ದಾರೆ. ಇನ್ನು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಹಾಗೆ ಹೊಸ ಹೊಸ ಅಪ್ಡೇಟ್ ಗಳು ಹೊರಬರುತ್ತಲೇ ಇದೆ.
ಹೌದು ರಾಜ್ಯದ ಎಲ್ಲಾ ಹೆಣ್ಣುಮಕ್ಕಳಿಗೆ ವಿಶೇಷವಾಗಿ ಜಾರಿಗೆ ಬಂದಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ಎಲ್ಲಾ ಹೆಣ್ಣುಮಕ್ಕಳ ಬ್ಯಾಂಕ್ ಖಾತೆಗೆ 2000 ರೂಪಾಯಿ ಹಣ ಜಮೆ ಆಗುವುದಾಗಿ ಸರ್ಕಾರ ತಿಳಿಸಿತ್ತು. ಹೀಗಿರುವಾಗ ಅಪ್ಲಿಕೇಶನ್ ಹಾಕಿರುವ ಎಲ್ಲಾ ಹೆಂಗಸರ ಮನಸ್ಸಲ್ಲಿ ಈಗಿರುವ ಪ್ರಶ್ನೆ ಒಂದೇ ಅದೇನಂದ್ರೆ ಗೃಹಲಕ್ಷ್ಮಿ ಯೋಜನೆಯ ಹಣ ತಮ್ಮ ಬ್ಯಾಂಕ್ ಖಾತೆಗೆ ಯಾವಾಗ ಬರುತ್ತೆ ಅಂತ. ಸದ್ಯ ಈ ಪ್ರಶ್ನೆಗೂ ಉತ್ತರ ಸಿಕ್ಕಿದ್ದು ದಿನಾಂಕ ಕೂಡ ನಿಗಧಿ ಮಾಡಿ ಮನೆಯೊಡತಿಯ ಖಾತೆಗೆ ಹಣ ಹಾಕಲು ಸದ್ಯ ಸಂಬಂಧಪಟ್ಟ ಇಲಾಖೆಯವರು ಎಲ್ಲ ಸಿದ್ಧತೆಯನ್ನ ಮಾಡಿಕೊಂಡಿದ್ದಾರೆ.
ಕರ್ನಾಟಕದಲ್ಲಿ ವಿಧಾನಸಭ ಚುನಾವಣೆಯ ರಂಗು ಕಾವೇರಿತ್ತು ಕಾರಣ ಕಾಂಗ್ರೆಸ್ ಸರ್ಕಾರದ 5ಗ್ಯಾರಂಟಿಗಳು. ಅದರಲ್ಲೂ ಮನೆಯನ್ನು ನಡೆಸಿಕೊಂಡು ಹೋಗುವ ಗೃಹಲಕ್ಷ್ಮಿಯರಿಗಾಗಿ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಮನೆಯೊಡತಿಯರ ಖಾತೆಗೆ ಪ್ರತಿ ತಿಂಗಳು 2000 ರೂಪಾಯಿ ಜಮೆ ಮಾಡಿ ಆರ್ಥಿಕವಾಗಿ ಸಹಾಯ ಮಾಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಅಲ್ದೇ ಆ ಮಹಿಳೆಯರಿಗೆ ತೊಂದರೆ ಆಗದ ಹಾಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯಬೇಕು ಎಂದು ಸುಲಭ ವಿಧಾನವನ್ನು ತಿಳಿಸಲಾಗಿತ್ತು. ಗೃಹಲಕ್ಷ್ಮೀ ಯೋಜನೆಯ ಲಾಭವನ್ನು ಬಿಪಿಎಲ್ ಕಾರ್ಡ್, ಎಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಇರುವ ಯಾವ ಮಹಿಳೆ ಆದರೂ ಪಡೆಯಬಹುರದು. ಆದರೆ ತೆರಿಗೆ ಮತ್ತು GST ಕಟ್ಟುವ ಕುಟುಂಬಕ್ಕೆ ಈ ಯೋಜನೆ ಫಲ ಸಿಗುವುದಿಲ್ಲ ಅಂತ ಸ್ಪಷ್ಟವಾಗಿ ಹೇಳಿ ಅರ್ಜಿ ಸಲ್ಲಿಕೆಯನ್ನ ಪ್ರಾರಂಭ ಮಾಡಲಾಯಿತು.
ಇದನ್ನೂ ಓದಿ: ಗೃಹಲಕ್ಷ್ಮೀ ಅರ್ಜಿ ಹಾಕಲು ಇನ್ನೂ ಮುಂದೆ ಯಾವುದೇ ಚಿಂತೆ ಬೇಡ; ಮನೆಯಿಂದಲೇ ಅರ್ಜಿ ಹಾಕಬಹುದು, ಹೇಗೆ ನೋಡಿ?
ಯೋಜನೆಯ ಹಣ ಯಾವಾಗ ಫಲಾನುಭವಿಗಳನ್ನ ತಲುಪುತ್ತೆ ಗೊತ್ತಾ?
ಜುಲೈ 21ರಂದು ಸಿಎಂ ಸಿದ್ದರಾಮಯ್ಯ ಅವರಿಂದ ಈ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿತ್ತು, ಈ ಯೋಜನೆಯಿಂದ ರಾಜ್ಯದ 12.8 ಮಿಲಿಯನ್ ಕುಟುಂಬದ ಗೃಹಲಕ್ಷ್ಮಿಯರಿಗೆ ಈ ಲಾಭ ಸಿಗುತ್ತದೆ ಅಂತ ಹೇಳಾಲಾಗಿತ್ತು. ಅದರಂತೆ ಇದೀಗ 80ಲಕ್ಷಕ್ಕಿಂತ ಅಧಿಕ ಮಹಿಳೆಯರು ಗೃಹಲಕ್ಷ್ಮೀ ಯೋಜನೆಗೆ ಸದ್ಯ ಅರ್ಜಿಯನ್ನ ಸಲ್ಲಿಸಿದ್ದು, ಯೋಜನೆಯ ಲಾಭದ ನಿರೀಕ್ಷೆಯಲ್ಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಆಗಸ್ಟ್ 17ರಂದು ಈ ಯೋಜನೆಯ ಫಲ ಗೃಹಲಕ್ಷ್ಮಿಯರನ್ನ ತಲುಪುತ್ತೆ, ಆಗಸ್ಟ್ 17ರಂದೇ ಯೋಜನೆಯ ಲಾಭ ಪಡೆಯಬಹುದು ಅಂತ ಹೇಳಲಾಗ್ತಿದೆ. ಸದ್ಯ ಈಗಲೂ ಕೂಡ ಸಾಕಷ್ಟು ಮಹಿಳೆಯರು ಅರ್ಜಿ ಸಲ್ಲಿಸುತ್ತಿದ್ದಾರೆ.
ಹೀಗಾಗಿ ಇವರಿಗೆಲ್ಲಾ ಸ್ವಾತಂತ್ರ್ಯ ದಿನಾಚರಣೆಯ ಸಮಯಕ್ಕೆ ಅಂದರೆ ಆಗಸ್ಟ್ 15ರ ವೇಳೆಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀಡುವುದಕ್ಕೆ ಸರ್ಕಾರ ನಿರ್ಧಾರ ಮಾಡಿ, ಅದಕ್ಕಾಗಿ ಸಿದ್ಧತೆಗಳನ್ನು ನಡೆಸುತ್ತಿದೆ. ಇನ್ನು ಖಾತೆಗೆ ಯಾವಾಗ ಹಣ ಬರುತ್ತದೆ ಎಂದು ಹೇಳುವುದಾದ್ರೆ ದಿನಾಂಕ ಆಗಸ್ಟ್ 16, 17 ನೇ ತಾರೀಖು ಜಮಾ ಆಗಬಹುದು ಅನ್ನೋ ನಿರೀಕ್ಷೆಯಿದೆ. ಒಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲ ನಿಮ್ಮ ಕೈಗೆ ಬರಲು ಸ್ವಲ್ಪ ಸಮಯ ಅಷ್ಟೇ ಬಾಕಿ ಉಳಿದಿದೆ ಅಂತಲೇ ಹೇಳಬಹುದು. ಆದ್ರೆ ಯೋಜನೆಯ ಲಾಭ ಪಡೆಯಲು ಗೃಹಲಕ್ಷ್ಮಿಯರನ್ನ ಯಾವ ರೀತಿ ಆಯ್ಕೆ ಮಾಡಿಕೊಳ್ಳುತ್ತಾರೆ ಅನ್ನೋದು ಸದ್ಯದ ಕುತೂಹಲ ಅಂತ ಹೇಳಬಹುದು.
ಇದನ್ನೂ ಓದಿ: ಒಳ್ಳೆ ಕೆಲಸಕ್ಕೆ ಹೋಗ್ತಿದ್ರೆ ಮರೆಯದೆ ಈ ಕೆಲಸ ಮಾಡಿ; ಇದನ್ನ ತಿಂದು ಮನೆಯಿಂದ ಹೊರಬಂದ್ರೆ ಅದೃಷ್ಟ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram