Gruha lakshmi Yojana: ಗೃಹಲಕ್ಷ್ಮಿ ಚಾಲನೆಯಾಗಿ ಎರಡು ತಿಂಗಳಗಳು ಸಂಪೂರ್ಣವಾಗಿ ಕಳೆದಿವೆ. ಗೃಹಲಕ್ಷ್ಮಿಯರು ಎರಡು ತಿಂಗಳುಗಳ ಮೊತ್ತವನ್ನು ಕೆಲವರು ಸಂಪೂರ್ಣವಾಗಿ ಪಡೆದಿದ್ದಾರೆ. ಆದರೆ ಇನ್ನೂ ಹಲವರಿಗೆ ಇದು ಸಿಕ್ಕಿಲ್ಲವಾಗಿದ್ದು, ಗೃಹಲಕ್ಷ್ಮಿಗಾಗಿ ಮಹಿಳೆಯರು ಪರದಾಡುತ್ತಿದ್ದಾರೆ. ಆದ್ದರಿಂದ ಸರ್ಕಾರ ಇವರೆಲ್ಲರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಅರ್ಜಿ ಸಲ್ಲಿಸಿದ ಒಟ್ಟು 1.8 ಕೋಟಿ ಮಹಿಳೆಯರಲ್ಲಿ ಸುಮಾರು ಒಂದು ಕೋಟಿ ಮಹಿಳೆಯರು ಗೃಹಲಕ್ಷ್ಮಿ ಹಣದ ಮೊತ್ತವನ್ನು ಸಂಪೂರ್ಣವಾಗಿ ಪಡೆದಿದ್ದಾರೆ. ಆದರೆ ಸುಮಾರು 9 ಲಕ್ಷ ಮಹಿಳೆಯರಿಗೆ ಇನ್ನೂ ಹಣ ತಲುಪಿಲ್ಲ. ಇದರಿಂದ ಮಹಿಳೆಯರು ಸರ್ಕಾರದ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಸುಳ್ಳು ಸರ್ಕಾರ ಎಂದು ಸರ್ಕಾರಕ್ಕೆ ಬಯ್ಯುತ್ತಿದ್ದಾರೆ.
ಆದರೆ ಇಲ್ಲಿ ಸರಕಾರದ ದೋಷ ಯಾವುದು ಇಲ್ಲ ಸರ್ಕಾರ ಮಹಿಳೆಯರ ಸದೃಢೀಕರಣ ಕೇಂದ್ರ ನಿರ್ಮಿಸಲಾದ ಈ ಗೃಹಲಕ್ಷ್ಮಿ ಯೋಜನೆಯಲ್ಲಿ(Gruha lakshmi Yojana) ಮಹಿಳೆಯರ ಸಬಲೀಕರಣಕ್ಕೆ ಸಂಪೂರ್ಣವಾಗಿ ಶ್ರಮಿಸುತ್ತಿದೆ ಆದರೆ ಕೆಲವೊಂದು ತಾಂತ್ರಿಕ ದೋಷಗಳಾಗಿರಬಹುದು ಅಥವಾ ಮನೆಯ ಯಜಮಾನರು ದಾಖಲಾತಿಗಳನ್ನ ಸರಿಯಾಗಿ ನೀಡದೆ ಇದ್ದುದರಿಂದಲೂ ಸಹ ಕೆಲವರ ಬ್ಯಾಂಕ್ ಖಾತೆಗೆ ಹಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಬೇಸತ್ತ ಮಹಿಳೆಯರು ಸರ್ಕಾರವನ್ನು ದೂಷಿಸುತ್ತಿದ್ದಾರೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ APL-BPL ಕಾರ್ಡ್ ಇಬ್ಬರಿಗೂ ಮತ್ತೊಂದು ಸಿಹಿ ಸುದ್ದಿ!
ಹಾಗಾದರೆ ಸರ್ಕಾರ ಕೊಟ್ಟ ಸಿಹಿ ಸುದ್ದಿ ಏನು?
ಇದನ್ನರಿತ ಸರ್ಕಾರವು ಮಹಿಳೆಯರಿಗೆ ಇನ್ನೂ ಹಲವು ರೀತಿಯಲ್ಲಿ ಗೃಹಲಕ್ಷ್ಮಿ ಹಣ ತಲುಪುವಂತೆ ಶ್ರಮಿಸುತ್ತಿದೆ ಎಲ್ಲ ದಾಖಲಾತಿಗಳನ್ನು ಸರಿಪಡಿಸಿಕೊಳ್ಳುವಂತೆ ಸಾಕಷ್ಟು ಅವಕಾಶವನ್ನು ಕೂಡ ನೀಡುತ್ತಿದೆ. ಯಾರ ಖಾತೆಗೆ ಹಣ ಬಂದಿಲ್ಲವೋ ಅಂಥವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಹಿ ಸುದ್ದಿಯನ್ನು ನೀಡಿದ್ದಾರೆ. ನಿಮ್ಮ ಹತ್ತಿರವಿರುವ ಅಂಚೆ ಕಚೇರಿಯಲ್ಲಿ ಖಾತೆಯೊಂದನ್ನು ತೆರೆದು ಆ ಮೂಲಕವೂ ಸಹ ನೀವು ಗೃಹಲಕ್ಷ್ಮಿ ಹಣವನ್ನು ಪಡೆಯಬಹುದಾಗಿದೆ. ಈ ರೀತಿಯಲ್ಲಿ ಸರಕಾರವು ಮಹಿಳೆಯರ ಬೆಂಬಲಕ್ಕೆ ಇನ್ನೊಂದು ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
ಹೌದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮೀಡಿಯಾದೊಂದಿಗೆ ಮಾತನಾಡಿ, ಈ ಸಿಹಿ ಸುದ್ದಿಯನ್ನು ಜನತೆಗೆ ತಲುಪಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತರು ಪ್ರತಿ ಮನೆಮನೆಗೂ ಹೋಗಿ ಮನೆಯ ಯಜಮಾನಿಯರ ನೆರವಿಗೆ ನೆರಳಾಗಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಮನೆಗೂ ತೆರಳುವುದರ ಮೂಲಕ ಮನೆಯ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ತಿಳುವಳಿಕೆಯನ್ನು ನೀಡಿ ಅವರ ದಾಖಲಾತಿಗಳನ್ನು ಸರಿಪಡಿಸಿಕೊಳ್ಳುವಲ್ಲಿ ಸಹಾಯಕ್ಕೆ ನಿಂತಿದ್ದಾರೆ.
ಇನ್ನು ಮಹಿಳೆಯರ ಬ್ಯಾಂಕ್ ಖಾತೆಯ ಸಮಸ್ಯೆಗಳಿದ್ದರೆ ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆದು ಗೃಹಲಕ್ಷ್ಮಿ ಹಣವನ್ನು ಪಡೆಯಬಹುದಾಗಿದೆ. ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಡಿ(Gruha lakshmi Yojana) ಪ್ರತಿ ತಿಂಗಳವೂ 2500 ಕೋಟಿಯನ್ನು ಮೀಸಲಿಟ್ಟಿದ್ದು, ಪ್ರತಿ ಮಹಿಳೆಯರಿಗೂ ತಲುಪಿಸುವ ವ್ಯವಸ್ಥೆಯನ್ನು ಮಾಡುತ್ತಿದೆ. ಪ್ರತಿ ತಿಂಗಳು ತಲಾ 2000 ರೂಪಾಯಿಯಂತೆ ಯಜಮಾನಿಯರಿಗೆ ಹಣ ವರ್ಗಾವಣೆಯಾಗುತ್ತಿದ್ದು, ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ. ಏಕೆಂದರೆ 1.8 ಕೋಟಿ ಮಹಿಳೆಯರಿಗೆ ತಲುಪಿಸುವ ವ್ಯವಸ್ಥೆಯಾಗಿದ್ದು ಏಕಕಾಲಕ್ಕೆ ಎಲ್ಲರ ಖಾತೆಗೂ ಕೂಡ ಹಣವನ್ನು ವರ್ಗಾವಣೆ (amount transfer) ಮಾಡಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಒಂದೆರಡು ದಿನ ವಿಳಂಬವಾದರೂ ಸಹ ಖಂಡಿತವಾಗಿ ಎಲ್ಲರ ಖಾತೆಗೂ ಹಣ ವರ್ಗಾವಣೆಯಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ನವೆಂಬರ್ ತಿಂಗಳಿನಲ್ಲಿ ಈ ನಾಲ್ಕು ಗ್ರಹಗಳ ಸಂಚಾರದಿಂದ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram