ಗೃಹಲಕ್ಷ್ಮಿ ಯೋಜನೆ ಶುರುವಾಗಿ ಸುಮಾರು ಮೂರು ತಿಂಗಳ ಕಳೆದಿದೆ. ಆದರೆ ಇನ್ನೂ ಕೂಡ ಹಲವು ಗೃಹಲಕ್ಷ್ಮಿಯರಿಗೆ ಹಣ ಬಂದು ತಲುಪಿಲ್ಲ ಇದರಿಂದ ಎಷ್ಟೋ ಮುನೆಯ ಗೃಹಲಕ್ಷ್ಮಿಯರು ರೊಚ್ಚಿಗೆದ್ದಿದ್ದಾರೆ. ಅಕ್ಕನಿಗೆ ಬಂತು ತಂಗಿಯರಿಗೆ ಬಂತು ಅಕ್ಕ ಪಕ್ಕದ ಮನೆಯವರಿಗೂ ಕೂಡ ಗ್ರಹಲಕ್ಷ್ಮಿ ಹಣ ಬಂತು ಆದರೆ ನಮಗೆ ಯಾಕೆ ಇನ್ನೂ ಬಂದಿಲ್ಲ ಎನ್ನುವ ಗೊಂದಲದಲ್ಲಿದ್ದಾರೆ. ಎಷ್ಟೇ ದಾಖಲಾತಿಗಳನ್ನು ಸರಿಮಾಡಿಸಿಕೊಂಡರೂ ಕೂಡ ಒಂದು ಕಂತಿನ ಗೃಹಲಕ್ಷ್ಮಿ ಹಣವು ಕೂಡ ಇನ್ನು ಜಮಾಾವಣೆ ಆಗಿಲ್ಲ. ಇಂತಹವರಿಗೆ ಅಂತಾನೆ ಸಿದ್ದರಾಮಯ್ಯ ಅವರು ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ.
ಇಲ್ಲಿ ತನಕ ಸುಮಾರು 1.17 ಕೋಟಿ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಗೆ ನೊಂದಣಿ ಮಾಡಿಸಿದ್ದಾರೆ ಅವರಲ್ಲಿ ಸುಮಾರು 1.10 ಕೋಟಿ ಮಹಿಳೆಯರಿಗೆ ಹಣ ತಲುಪಿದೆ ಇನ್ನು ಸುಮಾರು ಎರಡು ಲಕ್ಷ ಫಲಾನುಭವಿಗಳ ದಾಖಲಾತಿಯನ್ನು ಸರಿಪಡಿಸಲಾಗುತ್ತಿದೆ. ಅವರ ಸಮಸ್ಯೆ ಏನಿದೆ ಅಂತ ಅದನ್ನು ಬಗೆಹರಿಸುವ ಪ್ರಯತ್ನ ಮಾಡಲಾಗುತ್ತಿದೆ ಇದಕ್ಕೆ ಅಂತಾನೇ ಅಂಗನವಾಡಿ ಕಾರ್ಯಕರ್ತೆಯರನ್ನು ಸಹ ನೇಮಿಸಲಾಗಿದೆ ಅಂಗನವಾಡಿ ಕಾರ್ಯಕರ್ತೆಯರು ಫಲಾನುಭವಿಗಳನ್ನು ಬ್ಯಾಂಕಿಗೆ ಕರೆದುಕೊಂಡು ಹೋಗಿ ದಾಖಲಾತಿಗಳ ಸಮಸ್ಯೆಯನ್ನು ಸರಿಪಡಿಸುವಲ್ಲಿ ಸಹಾಯ ಮಾಡುತ್ತಿದ್ದಾರೆ.
ಹಲವರಿಗೆ ಬ್ಯಾಂಕ್ ಖಾತೆಯ ಸಮಸ್ಯೆಗಳಿದ್ದರೆ ಇನ್ನೂ ಕೆಲವರಿಗೆ ಆಧಾರ್ ಕಾರ್ಡ್ ಇನ್ನು ಬ್ಯಾಂಕ್ ಖಾತೆಗೆ ಲಿಂಕ್ ಆಗಿಲ್ಲ ಈ ರೀತಿಯಾಗಿ ಏನೇ ಸಮಸ್ಯೆ ಇದ್ದರೂ ಅದನ್ನು ಸರಿಪಡಿಸುವಂತಹ ಕೆಲಸವನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡುತ್ತಿದ್ದಾರೆ. ಏನೇ ಇರಲಿ ತಮ್ಮ ಮಾತಿನ ಪ್ರಕಾರ ಈ ಎಲ್ಲಾ ಫಲಾನುಭವಿಗಳಿಗೂ ಹಣವನ್ನು ವರ್ಗಾಯಿಸಬೇಕು ಎಂದು ಸರ್ಕಾರ ಬಹಳ ಶ್ರಮ ಪಡುತ್ತಿದೆ ಆದರೂ ಕೂಡ ಇನ್ನೂ ಹಲವಾರು ಖಾತೆಗೆ ಒಂದು ಕಂತಿನ ಹಣವು ಕೂಡ ಜಮಾ ಆಗಿಲ್ಲ ಇದರಿಂದ ಫಲಾನುಭವಿಗಳು ಸರ್ಕಾರದ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
“ಗೃಹಲಕ್ಷ್ಮಿ ಅದಾಲತ್ ಆಯೋಜನೆ”
ಕೆಲವರು ಸ್ಥಳವನ್ನು ಬಿಟ್ಟು ಹೋಗಿದ್ದಾರೆ ಅಂತಹವರಿಗಾಗಿ ಅಥವಾ ಇನ್ನು ದಾಖಲಾತಿಗಳ ಸಮಸ್ಯೆ ಇದ್ದಲ್ಲಿ ಅಂತಹವರ ಸಲುವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಅದಾಲತ್ ಆಯೋಜನೆಯನ್ನು ಸರ್ಕಾರ ನಿರ್ಮಿಸಿದೆ ಇದರ ಮೂಲಕ ಏನೇ ಸಮಸ್ಯೆ ಇದ್ದರೂ ಎಲ್ಲ ಸಮಸ್ಯೆಗಳು ಪರಿಹಾರವಾಗಿ ಫಲಾನುಭವಿಗಳಿಗೆ ಡಿಸೆಂಬರ್ ಮುಗಿಯುವುದರ ಒಳಗಾಗಿ ಹಣವು ವರ್ಗಾವಣೆಯಾಗಬೇಕು ಎಂದು ಸರ್ಕಾರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ. ಆಯೋಜನೆ ಮೂಲಕ ಫಲಾನುಭವಿಗಳು ತಮ್ಮ ಎಲ್ಲಾ ದಾಖಲಾತಿಗಳ ಸಮಸ್ಯೆಯನ್ನು ಸರಿಪಡಿಸಿಕೊಂಡು ಗ್ರಹಲಕ್ಷ್ಮಿ ಯೋಜನೆಯ ಮೂರು ಕಂತು ಹಣವನ್ನು ಕೂಡ ಒಟ್ಟಿಗೆ ಪಡೆಯಬಹುದಾಗಿದೆ.
ತಮ್ಮ ಮಾತಿನಂತೆ ಸರಕಾರ ನಡೆದುಕೊಳ್ಳಲು ಬಹಳಷ್ಟು ಪ್ರಯತ್ನಿಸುತ್ತಿದೆ ಗೃಹಲಕ್ಷ್ಮಿಯರಿಗೆ ಹಣವನ್ನು ತಲುಪಿಸಬೇಕು ಎನ್ನುವುದಕ್ಕೆ ಹಗಲು ರಾತ್ರಿ ಶ್ರಮಿಸುತ್ತಿದೆ ಸಮಸ್ಯೆ ನಿವಾರಣೆಗೆ ಹಲವಾರು ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಗ್ರಾಮ ಪಂಚಾಯತ ಅದಾಲತ್ ಯೋಜನೆಯ ಮೂಲಕ ಡಿಸೆಂಬರ್ ಮುಗಿಯುವುದರ ಒಳಗಾಗಿ ಸರ್ಕಾರವು ಫಲಾನುಭವಿಗಳಿಗೆ ಹಣವನ್ನು ವರ್ಗಾವಣೆ ಮಾಡುವ ಇಚ್ಛೆಯನ್ನು ಹೊಂದಿದೆ ಅದಕ್ಕಾಗಿ ಅಧಿಕಾರಿಗಳಿಗೆ ಮನವಿಯನ್ನು ಕೂಡ ಮಾಡಿದೆ ಸಮಯಕ್ಕೆ ಸರಿಯಾಗಿ ಅಧಿಕಾರಿಗಳನ್ನು ಸಂಪರ್ಕ ಮಾಡಿ ಸಮಸ್ಯೆಯನ್ನು ನಿರ್ವಹಿಸಿಕೊಳ್ಳಬೇಕು. ಸರಕಾರವನ್ನು ದೂಷಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಸರಕಾರವು ಜನರಿಗಾಗಿ ಹಗಲು ಇರುಳು ಶ್ರಮಿಸುತ್ತಿದೆ. ಫಲಾನುಭವಿಗಳು ಈಗ ಗ್ರಾಮ ಪಂಚಾಯತ್ ಅದಾಲತ್ ಆಯೋಜನೆಯ ಉಪಯೋಗವನ್ನು ಪಡೆದುಕೊಂಡು ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಇದರಿಂದ ನೀವು ಗೃಹಲಕ್ಷ್ಮಿ ಯೋಜನೆಯ ಮೂರು ಕಂತಿನ ಹಣವನ್ನು ಕೂಡ ಪಡೆಯಲು ಸಹಾಯವಾಗುತ್ತದೆ.
ಇದನ್ನೂ ಓದಿ: ಆರ್ ಬಿಐ ಜಾರಿಗೊಳಿಸಿದ 5 ಹೊಸ ನಿಯಮ; ಬ್ಯಾಂಕ್ ಗಳಿಗೆ ಶುರುವಾಗಲಿದೆ ಟೆನ್ಶನ್ ಗ್ರಾಹಕರಿಗೆ ಫುಲ್ ರಿಲೀಫ್
ಇದನ್ನೂ ಓದಿ: ಅತ್ಯಂತ ಕಡಿಮೆ ಬೆಲೆಯಲ್ಲಿ 115KM Range ನೀಡುವ ಹೊಸ ಎಥರ್ ಎಲೆಕ್ಟ್ರಿಕ್ ಸ್ಕೂಟರ್
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram