ಸಂಕ್ರಾಂತಿಗೆ ಭರ್ಜರಿ ಉಡುಗೊರೆ !! ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಐದನೇ ಕಂತಿನ ಹಣ ಇಂದೆ ಸಿಗಬಹುದು !!

Gruhalakshmi Anna Bhagya Scheme

ಸಂಕ್ರಾಂತಿಯ ಸಡಗರದ ಜೊತೆಗೆ ನಿಮಗೆ ಇದು ಒಂದು ಸಿಹಿ ಸುದ್ದಿ. ಸರ್ಕಾರದ ಮುಖ್ಯ ಯೋಜನೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ. ಬಡವರ ಮತ್ತು ಮಹಿಳೆಯರ ಸಹಾಯಕ್ಕೆ ಎಂದೇ ಈ ಯೋಜನೆ ಜಾರಿಯಾಗಿದೆ. ಸರ್ಕಾರದ 5 ಗ್ಯಾರೆಂಟಿ ಗಳಲ್ಲಿ ಬಹಳ ಮುಖ್ಯ ಇವೆರಡೂ ಯೋಜನೆಗಳು. ಯಾವುದೇ ಮಧ್ಯವರ್ತಿಗಳ ಕೈ ಗೆ ಹೋಗದೆ ನೇರವಾಗಿ ನಿಮ್ಮ ಖಾತೆಗೆ ಹಣವೂ ವರ್ಗಾವಣೆ ಆಗುತ್ತಿದೆ. ಈಗಾಗಲೇ ಕೆಲವರಿಗೆ ನಾಲ್ಕೂ ಹಂತದ ಹಣವೂ ವರ್ಗಾವಣೆ ಆಗಿದೆ. ಕೆಲವು ತಾಂತ್ರಿಕ ದೋಷಗಳಿಂದ ಕೆಲವರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ. ಹಾಗೆಯೇ ಕೆಲವರು ನೋಂದಣಿ ಮಾಡುವ ಸಮಯ ತಡವಾದ ಕಾರಣ ಒಂದು ಅಥವಾ ಎರಡನೇ ಕಂತಿನ ಹಣವೂ ಸಿಗಲಿಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಏನಿದು ಗೃಹಲಕ್ಷ್ಮಿ ಯೋಜನೆ?: ಮಹಿಳೆಯರ ಸಬಲಿಕರಣಕ್ಕೆ ಒತ್ತು ಕೊಟ್ಟು, ಮನೆಯ ಒಡತಿಗೆ ಪ್ರತಿ ತಿಂಗಳು ಆಕೆಯ ಖಾತೆಗೆ ನೇರವಾಗಿ 2,000 ರೂಪಾಯಿಗಳನ್ನು ನೀಡಿ ಆರ್ಥಿಕವಾಗಿ ಮಹಿಳೆಯರಿಗೆ ಸಹಾಯವಾಗಲಿ ಎಂಬ ಕಾರಣಕ್ಕೆ ಈ ಯೋಜನೆ ಜಾರಿಯಾಗಿದೆ. ಮನೆಯ ಮುಖ್ಯ ಸದಸ್ಯೆಗೆ ಹಣ ಸಿಗುತ್ತಿದೆ. ನಿಮ್ಮ ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿ ಎಂದು ನೋಂದಣಿ ಆಗಿದ್ದಲ್ಲಿ ನಿಮ್ಮ ಖಾತೆಗೆ ಹಣವೂ ವರ್ಗಾವಣೆ ಆಗುತ್ತದೆ. ಈಗಾಗಲೇ ನಾಲ್ಕು ಹಂತದ ಹಣ ವರ್ಗಾವಣೆ ಆಗಿದೆ. 

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಯಾರು?

ಅನ್ನಭಾಗ್ಯ ಯೋಜನೆಯ ಹಿಂದಿನ ಕಾಂಗ್ರೇಸ್ ಸರಕಾರದಲ್ಲಿ ಕೂಡಾ ಇತ್ತು. ಈಗ ಮತ್ತೆ ಅದೇ ಯೋಜನೆಯನ್ನು ಜಾರಿ ಮಾಡಿ ಹಸಿವು ಮುಕ್ತ ರಾಜ್ಯ ಮಾಡುವ ಕನಸಿನಲ್ಲಿ ಈ ಯೋಜನೆಯನ್ನು ಮತ್ತೆ ಜಾರಿ ಮಾಡಿದ್ದಾರೆ. ಈಗಾಗಲೇ 5 ಕೆ. ಜಿ ಅಕ್ಕಿ ಕೇಂದ್ರ ಸರಕಾರದಿಂದ ಸಿಗುತ್ತಿದೆ. ಅದರಂತೆಯೇ ಈಗ ರಾಜ್ಯ ಸರಕಾರ ಉಳಿದ 5 ಕೆ. ಜಿ ಅಕ್ಕಿಯನ್ನು ಜನರಿಗೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ದೇಶದಲ್ಲಿ ಈ ವರುಷ ಮಳೆಯು ಆಗದೆ ಇರುವುದರಿಂದ ಅಕ್ಕಿ ನೀಡಲು ಸಾಧ್ಯವಾಗದೆ ಅದರ ಬದಲು 5 ಕೆ. ಜಿ ಅಕ್ಕಿಯ ಹಣವನ್ನು ಹಸಿರು ಕಾರ್ಡ್ ಹೊಂದಿರುವ ಕುಟುಂಬಕ್ಕೆ ನೀಡುತ್ತಾ ಇದ್ದರೆ.

ನಿಮ್ಮ ಖಾತೆಗೆ ಹಣ ಬಾರದೆ ಇದ್ದರೆ ಹೀಗೆ ಮಾಡಿ :- ನೀವು ಈ ಎರಡು ಯೋಜನೆಗಳ ಫಲಾನುಭವಿ ಆಗಿದ್ದು ನಿಮ್ಮ ಖಾತೆಗೆ ಹಣ ಬಾರದೆ ಇದ್ದಲ್ಲಿ ಈಗಲೇ ನಿಮ್ಮ ಹತ್ತಿರದ ಬ್ಯಾಂಕ್ ಗೆ ಹೋಗಿ ನಿಮ್ಮ ಖಾತೆಗೆ ಇ ಕೆ ವೈ ಸಿ ( ekyc ) ಮಾಡಿಸಿ , ನಂತರ ಆನ್ಲೈನ್ ನಲ್ಲಿ ಸರಕಾರದ ಅಧಿಕೃತ ವೆಬ್ಸೈಟ್ ಗೆ ಹೋಗಿ ಮತ್ತೊಮ್ಮೆ ಅರ್ಜಿ ಹಾಕಿ.. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಇನ್ನೂ ಏಕೆ ಬಂದಿಲ್ಲ ಐದನೇ ಹಂತದ ಹಣ ? :-

ಈಗಾಗಲೇ ಕೆಲವರಿಗೆ ನಾಲ್ಕನೇ ಹಂತದ ಗೃಹಲಕ್ಷ್ಮಿ ಹಣವೂ ಬಂದಿದೆ. ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಈಗಾಗಲೇ 50% ಜನರಿಗೆ ಹಣವೂ ವರ್ಗಾವಣೆ ಆಗಿದೆ. ಜನವರಿ 14 ರಂದು ಸಹ ಕೆಲವು ಮಹಿಳೆಯರು. ಹಣವೂ ವರ್ಗಾವಣೆ ಆಗಿದೆ. ಸಂಕ್ರಾಂತಿ ಸರಕಾರಿ ರಜೆ ಇದ್ದರೂ ಈಗಾಗಲೇ ಸರಕಾರದಿಂದ money transfer(DBT) ಆಗಿರುವುದರಿಂದ ಆ ಹಣ ನಿಮ್ಮ ಖಾತೆಗೆ ಬರಲು ಒಂದೆರಡು ದಿನಗಳ ಸಮಯ ಬೇಕಾಗಿದೆ. ಅದಕ್ಕೆ ಪ್ರತೀ ದಿನವೂ ಒಂದಿಷ್ಟು ಖಾತೆಗಳಿಗೆ ಹಣ ಬರುತ್ತಾ ಇದೆ. ಇಂದು ಸಹ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣವೂ ಬರಬಹುದು… ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬೃಹತ್ 5000mAh ಬ್ಯಾಟರಿ ಮತ್ತು 512GB ಸ್ಟೋರೇಜ್ ನೊಂದಿಗೆ POCO ಇದೀಗ ಭಾರತೀಯ ಮಾರುಕಟ್ಟೆಯಲ್ಲಿ