ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆ ಬಿಡುಗಡೆ; ಅರ್ಜಿ ಸಲ್ಲಿಸೋದು ಹೇಗೆ ಮತ್ತು ಎಲ್ಲಿ ಹಾಗೂ ಯಾವಾಗ?

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಘೋಷಿಸಿದ್ದ ಕಾಂಗ್ರೆಸ್ ಪಕ್ಷದ ಎರಡನೇ ಗ್ಯಾರಂಟಿ ಗೃಹಲಕ್ಷ್ಮೀ ಯೋಜನೆಯನ್ನು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯಡಿ ಮನೆಯ ಯಜಮಾನಿಗೆ 2000ರೂಪಾಯಿ ಸಹಾಯಧನ ನೀಡಲಾಗುತ್ತಿದ್ದು, ಲಾಭ ಪಡೆದುಕೊಳ್ಳಲು ಸರ್ಕಾರವು ಹಲವು ಷರತ್ತುಗಳನ್ನು ವಿಧಿಸಿದೆ. ಈಗಾಗಲೇ ಇದಕ್ಕೆ ಸಂಬಂಧ ಪಟ್ಟಂತೆ ಕೆಲ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಹೊರಡಿಸಿತ್ತು. ಇದೀಗ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದೆ. ಹೌದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗೃಹಲಕ್ಷ್ಮಿ ಯೋಜನೆ ಅರ್ಜಿ ನಮೂನೆ ಬಿಡುಗಡೆ ಮಾಡಲಾಗಿದ್ದು, ಹೌದು ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಎರಡನೇ ಗ್ಯಾರಂಟಿಯಾಗಿರುವ ಗೃಹ ಲಕ್ಷ್ಮೀ ಯೋಜನೆಯ ಕುರಿತು ಅಧಿಕೃತ ಆದೇಶ ಹೊರಬಿದ್ದ ಬೆನ್ನಲೇ ಇದೀಗ ಗೃಹಲಕ್ಷ್ಮೀ ಯೋಜನೆ ಅರ್ಜಿ ನಮೂನೆ ಬಿಡುಗಡೆಯಾಗಿದೆ. ಅರ್ಜಿಯಲ್ಲಿ ಏನೆಲ್ಲಾ ಇದೆ, ಅರ್ಜಿ ಸಲ್ಲಿಕೆ ಹೇಗೆ ಯಾವಾಗ, ಆಪ್ ಲೈನ್ ಲಿ ಅರ್ಜಿ ಸಲ್ಲಿಸೋದು ಹೇಗೆ ನೋಡೋಣ ಬನ್ನಿ.

WhatsApp Group Join Now
Telegram Group Join Now

ಇದನ್ನೂ ಓದಿ: ಚಿನ್ನ ಖರೀದಿ ಮಾಡುವವರಿಗೆ ಇಂದು ಶುಭದಿನ; ಇಲ್ಲಿದೆ ಇಂದಿನ ಚಿನ್ನದ ದರ

ಅರ್ಜಿಯಲ್ಲಿ ಏನೆಲ್ಲಾ ಇದೆ? ದಾಖಲೆಗಳು ಏನು ಬೇಕು?

ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ಮುಂದಾಗಿತ್ತು. ಇತ್ತೀಚೆಗೆ ನಡೆದ ಸಚಿವ ಸಂಪುಟದ ಅನುಮೋದನ ಪಡೆದುಕೊಂಡಿತ್ತು. ಸದ್ಯ ಸರ್ಕಾರ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಗಿರುವ ಗೃಹಲಕ್ಷ್ಮೀ’ ಅರ್ಜಿ ನಮೂನೆಯಲ್ಲಿ ಮೂವರ ಭಾವಚಿತ್ರವಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರ ಅರ್ಜಿ ನಮೂನೆಯಲ್ಲಿದೆ. ನಂತರ ಅರ್ಜಿ ನಮೂನೆಯಲ್ಲಿ ವಿವರವನ್ನ ನೋಡೋದಾದ್ರೆ ಅರ್ಜಿಯಲ್ಲಿ ಮೊದಲಿಗೆ ಮನೆಯ ಯಜಮಾನಿ ಹೆಸರು ವಿವರವನ್ನ ಕೇಳಲಾಗಿದೆ ಅಂದ್ರೆ ಆಧಾರ್ ಸಂಖ್ಯೆ, ಓಟರ್ ಐಡಿ, ಪಡಿತರ ಚೀಟಿ ಸಂಖ್ಯೆ ಹೀಗೆ ಕೆಲವೊಂದಷ್ಟು ಮಾಹಿತಿಗಳ ಜೊತೆಗೆ ಎರಡೆರಡು ಫೋನ್ ನಂಬರ್ ಅಂದ್ರೆ ಮನೆಯೊಡತಿಯ ಸಂಪರ್ಕ ಸಂಖ್ಯೆಯೊಂದಿಗೆ ಮತ್ತೊಂದು ನಂಬರ್, ಮನೆಯ ಯಜಮಾನಿಯಮ ಬ್ಯಾಂಕ್ ಪಾಸ್ ಬುಕ್ ವಿವರ ಅಂದ್ರೆ ಖಾತೆ ಸಂಖ್ಯೆ, IFSC ಕೋಡ್ ಬಗ್ಗೆ ಮಾಹಿತಿಯನ್ನು ಬಗ್ಗೆ ಪ್ರಶ್ನೆಗಳನ್ನ ಕೇಳಲಾಗಿದೆ. ಇದರ ಜೊತೆಗೆ ಮನೆ ಯಜಮಾನಿಯ ಪತಿಯ ದಾಖಲೆಗಳನ್ನು ಕೇಳಲಾಗಿರೋದು ಮತ್ತೊಂದು ವಿಶೇಷ. ಹೌದು ಪತಿಯ ಆಧಾರ್ ಕಾರ್ಡ್ ವೋಟರ್ ಐಡಿ ದಾಖಲೆ ಕೂಡ ಅರ್ಜಿ ಸಲ್ಲಿಕೆ ವೇಳೆ ಅಗತ್ಯವಾಗಿದೆ.ಜೊತೆಗೆ ಮನೆಯೊಡತಿಯ ಪತಿ ಯಾವುದೇ ಐಟಿ ಪಾವತಿ ಮಾಡುತ್ತಿಲ್ಲ ಅನ್ನೋದನ್ನ ದೃಡೀಕರಣ ಮಾಡುವುದು ಕೂಡ ಮುಖ್ಯವಾಗುತ್ತದೆ.

ಏನೆಲ್ಲಾ ಹೊಸ ಷರತ್ತುಗಳು ಬಂದಿದ್ದಾವೆ ನೋಡಿ

ಇನ್ನು ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಯಾರು ಅಂತ ನಮೂದಿಸಿರುವ ಮಹಿಳೆಯು ಈ ಯೋಜನೆ ಅರ್ಹ ಫಲಾನುಭವಿಯಾಗಿರುತ್ತಾರೆ.
ಅವರು ಅರ್ಜಿಯನ್ನ ಸಲ್ಲಿಸಬಹುದು. ಇನ್ನು ಒಂದೇ ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಒಬ್ಬ ಮಹಿಳೆಗೆ ಮಾತ್ರ ಅಂದ್ರೆ ಮನೆಯೊಡತಿಗೆ ಮಾತ್ರ ಈ ಯೋಜನೆ ಅನ್ವಯಿಸಲಿದೆ.ಈ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಯು ತನ್ನ ಬ್ಯಾಂಕ್‌ ಖಾತೆ ಮತ್ತು ಆಧಾರ ಕಾರ್ಡ್‌ ಗಳನ್ನು ಜೋಡಣೆ ಮಾಡಬೇಕು.ಇದು ಕಡ್ಡಾಯ ಇಲ್ಲವಾದಲ್ಲಿ ಹಣ ಬೇರೆಕಡೆ ಹೋಗುವ ಸಾಧ್ಯತೆಗಳು ಹೆಚ್ಚಿಗೆ ಇರುತ್ತದೆ. ಜೊತೆಗೆ ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ಪಾವತಿದಾರರಾಗಿದ್ದಲ್ಲಿ ಅಂತವರಿಗೆ ಯೋಜನೆಯ ಲಾಭ ಸಿಗುವುದಿಲ್ಲ.

ಅಲ್ಲದೇ ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಅಥವಾ ಅವರ ಮಗ ಜಿಎಸ್‌ಟಿ ರಿಟರ್ನ್ ಸಲ್ಲಿಸುವವರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗಿರುವುದಿಲ್ಲ. ಇದೆಲ್ಲವನ್ನ ದೃಢಕರಿಸಿದ ನಂತರ ಈ ಯೋಜನೆಯ ಫಲಾನುಭವಿಗಳು ಜೂನ್ 15 ರಿಂದ ಜುಲೈ 15 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆ ನಂತರ ಅಂದ್ರೆ ಜುಲೈ 15 ರ ನಂತರ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತದೆ. ಅದರಲ್ಲಿ ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್ 15 ರಂದು ಅವರ ಬ್ಯಾಂಕ್‌ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಇನ್ನು ಅರ್ಜಿದಾರರು ಸೇವಾ ಸಿಂಧು ಪೋರ್ಟಲ್‌ ಮೂಲಕವಾಗಲಿ ಅಥವಾ ಭೌತಿಕವಾಗಿಯಾಗಲಿ ಅಂದ್ರೆ ಆಫ್ ಲೈನ್ ಲ್ಲೂ ಕೂಡ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಇದನ್ನೂ ಓದಿ: ಅಭಿ ಹಾಗೂ ಅವಿವಾ ಮದುವೆಗೆ ಖರ್ಚಾಗಿದ್ದು ಎಷ್ಟು ಕೋಟಿ? ಮಾವನಿಂದ ಅಭಿಷೇಕ್ ಗೆ ಸಿಕ್ತು ಭರ್ಜರಿ ಗಿಫ್ಟ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram