ಗೃಹಲಕ್ಷ್ಮೀ ಯೋಜನೆಗೆ ಮೂರು ಕಡೆ ಅರ್ಜಿ ಸಲ್ಲಿಸಬಹುದು; ಪತಿ ಸಾವಾಗಿದ್ರೆ ಅಂತಹ ಮಹಿಳೆಯರು ಏನ್ ಮಾಡ್ಬೇಕು?

ಕರ್ನಾಟಕ ಸರ್ಕಾರ ಪ್ರತಿ ಮನೆಯ ಯಜಮಾನಿಗೆ ಮಾಸಿಕ 2,000 ರೂ. ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದೆ. ಜೂನ್‌ 15ರಿಂದ ಯೋಜನೆಗೆ ಅರ್ಜಿ ಸಲ್ಲಿಕೆಯೂ ಆರಂಭವಾಗಲಿದ್ದು, ಆಗಸ್ಟ್‌ 15ರ ಬಳಿಕ ಯೋಜನೆಗೆ ಚಾಲನೆ ಸಿಗಲಿದೆ. ಹೌದು ಚುನಾವಣೆ ವೇಳೆ ಘೋಷಿಸಿದಂತೆ ಕಾಂಗ್ರೆಸ್‌ ಪಕ್ಷ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಹೀಗಾಗಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2,000 ರೂಪಾಯಿ ನೀಡುವ ನೀಡುವ ಯೋಜನೆ ಇದಾಗಿದ್ದು, ಆಗಸ್ಟ್‌ 15ರ ಬಳಿಕ ಜಾರಿಯಾಗಲಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಯೋಜನೆಗೆ ಒಪ್ಪಿಗೆ ಸಿಕ್ಕಿದ್ದು, ಜೂನ್‌ 15 ರಿಂದ ಯೋಜನೆಗೆ ಅರ್ಜಿ ಸಲ್ಲಿಕೆ ಕೂಡ ಪ್ರಾರಂಭವಾಗಲಿದೆ. ಆದರೆ ಕೆಲವರಲ್ಲಿ ಅರ್ಜಿ ಎಲ್ಲಿ ಸಲ್ಲಿಸಬೇಕು, ಕೇವಲ ಆನ್ಲೈನ್ ಲಿ ಮಾತ್ರ ಅರ್ಜಿ ಸಲ್ಲಿಸೋಕೆ ಅವಕಾಶ ಇದ್ಯಾ? ಅಥವಾ ಆಫ್ ಲೈನಲ್ಲೂ ಅರ್ಜಿ ಸಲ್ಲಿಸಬಹುದಾ? ಸಲ್ಲಿಸಬಹುದು ಅಂದ್ರೆ ಅರ್ಜಿ ಎಲ್ಲಿ ಸಿಗುತ್ತೆ, ಭರ್ತಿ ಮಾಡಿದ ನಂತರ ಯಾರಿಗೆ ನೀಡಬೇಕು, ಪತಿ ಮರಣದ ನಂತರ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲವಾ ಅಥವಾ ಪತಿಗೆ ಸಂಬಂದಿಸಿದ ಮಾಹಿತಿ ಸ್ಥಳವಾಕಾಶದಲ್ಲಿ ಏನನ್ನ ಭರ್ತಿ ಮಾಡಬೇಕು ಹೀಗೆ ಸಾಕಷ್ಟು ಗೊಂದಲಗಳಿದ್ದು ಅವುಗಳನ್ನ ಬಗೆಹರಿಸುವ ಸಣ್ಣ ಮಾಹಿತಿ ನಿಮಗಾಗಿ.

WhatsApp Group Join Now
Telegram Group Join Now

ಇನ್ನು ಕುಟುಂಬದ ಎಲ್ಲ ಮಹಿಳೆಯರಿಗೂ ಈ ಯೋಜನೆ ಅನ್ವಯ ಆಗಲ್ಲ. ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದರೆ ಒಬ್ಬರಿಗೆ ಮಾತ್ರ ಗೃಹಲಕ್ಷ್ಮೀ ಯೋಜನೆ ಅನ್ವಯವಾಗುತ್ತದೆ. ಅಂದ್ರೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆ ಮಾತ್ರ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಯಾಗಲು ಅರ್ಹರಾಗಿರುತ್ತಾರೆ. ಇಂತವರಿಗೆ ಮಾಸಿಕ 2,000 ರೂಪಾಯಿ ನೀಡುವ ಯೋಜನೆಯೇ ಗೃಹಲಕ್ಷ್ಮೀ ಯೋಜನೆ. ಇನ್ನು ಚುನಾವಣೆಗೂ ಮುನ್ನ ಕಾಂಗ್ರೆಸ್‌ ಘೋಷಿಸಿದ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಈಗ ಅಧಿಕಾರಕ್ಕೆ ಬಂದ ಹಿನ್ನೆಲೆ ಕಾಂಗ್ರೆಸ್‌ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರುತ್ತಿದೆ. ಹೌದು, ಗೃಹಲಕ್ಷ್ಮೀ ಯೋಜನೆಯಡಿ 2,000 ರೂಪಾಯಿ ಪಡೆಯಲು ಎಪಿಎಲ್‌, ಬಿಪಿಎಲ್‌, ಅಂತ್ಯೋದಯ ಕಾರ್ಡ್‌ ಸೇರಿ ಯಾವುದಾದರೂ ಒಂದು ಇರಲೇಬೇಕು. ಇಲ್ಲದಿದ್ದರೆ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ಅಭಿ ಹಾಗೂ ಅವಿವಾ ಮದುವೆಗೆ ಖರ್ಚಾಗಿದ್ದು ಎಷ್ಟು ಕೋಟಿ? ಮಾವನಿಂದ ಅಭಿಷೇಕ್ ಗೆ ಸಿಕ್ತು ಭರ್ಜರಿ ಗಿಫ್ಟ್

ಪತಿ ಮರಣದ ನಂತರ ಯೋಜನೆಯ ಲಾಭಗಳು ಸಿಗೋದಿಲ್ವ?

ಇನ್ನು ಗೃಹಲಕ್ಷ್ಮೀ ಯೋಜನೆಗೆ ನಿಮ್ಮೆಲ್ಲರಿಗೂ ಗೊತ್ತಿರುವಂತೆ ಸರ್ಕಾರದ ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಭೌತಿಕವಾಗಿಯಾದರೂ ಅರ್ಜಿ ಸಲ್ಲಿಸಬಹುದು. ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಭೌತಿಕವಾಗಿ ಅಂದ್ರೆ ಆಫ್ ಲೈನ್ ಮೂಲಕವು ಅರ್ಜಿ ಸಲ್ಲಿಸುವ ಸೌಲಭ್ಯ ಇದೆ. ಈಗಾಗಿ ನಿಮ್ಮ ಆಯ್ಕೆಯ ಅನುಸಾರ ನೀವು ಯೋಜನೆಗೆ ಅರ್ಜಿಯನ್ನ ಸಲ್ಲಿಸಬಹುದು. ಇನ್ನು ಯೋಜನೆಯ ಲಾಭ ಪಡೆಯಲು ಬಯಸುವ ಮಹಿಳೆಯ ಪತಿ ಮರಣ ಹೊಂದಿದ್ರೆ ಅಂತಹ ಸಮಯದಲ್ಲಿ ಏನು ಮಾಡಬೇಕು? ಅರ್ಜಿ ಸಲ್ಲಿಸೋಕೆ ಆಗೋದಿಲ್ವಾ ಅನ್ನೋ ಗೊಂದಲಗಳು ಇರುತ್ತೆ ಆದ್ರೆ ಆತಂಕ ಪಡುವ ಅವಶ್ಯಕತೆ ಇಲ್ಲ. ಪತಿ ಇಲ್ಲದವರು ಕೂಡ ಯೋಜನೆಯ ಲಾಭ ಪಡಿಯಬಹುದು. ಹಾಗಾದ್ರೆ ಪತಿಗೆ ಸಂಬಂಧಿಸಿದ ವಿಚಾರಗಳಲ್ಲಿ ಯಾವ ಮಾಹಿತಿ ಕೊಡಬೇಕು ಅನ್ನುವ ಪ್ರಶ್ನೆ ಕೂಡ ಬರಬಹುದು. ಅಂತಹ ಸಂದರ್ಭದಲ್ಲಿ ಮಹಿಳೆಯೂ ಮೃತ ಗಂಡ ಮಾಹಿತಿಯನ್ನ ಅಂದ್ರೆ ಮೃತರ ಆಧಾರ್ ನಂಬರ್ ಇದ್ರೆ ಕೊಡಬಹುದು ಇಲ್ಲವಾದಲ್ಲಿ. ಪತಿಯ ಮರಣದ ಕುರಿತು ಬರೆದು, ಮರಣ ಪ್ರಮಾಣ ಪತ್ರ ಇದ್ರೆ ಕೊಡಬಹುದು. ಇನ್ನು ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿಯನ್ನ ಸಲ್ಲಿಸಿರೋರನ್ನ ಸದ್ಯಕ್ಕೆ ಯೋಜನೆಯಿಂದ ಹೊರಗಿಡಲಾಗಿದ್ದು, ಮುಂದಿನ ದಿನಗಳಲ್ಲಿ ಇದರ ಬಗ್ಗೆ ಗಮನಹರಿಸೋದಾಗಿ ಶಾಸಕಿ ಲಕ್ಷ್ಮೀ ಹೆಬಾಳ್ಕರ್ ತಿಳಿಸಿದ್ದಾರೆ. ಅಂದ್ರೆ ಹೊಸ ಕಾರ್ಡಿಗೆ ಅರ್ಜಿ ಸಲ್ಲಿಸಿರುವವರಿಗೆ ಗೃಹಲಕ್ಷ್ಮೀ ಯೋಜನೆಯ ಲಾಭ ಸಿಗುವುದಿಲ್ಲ.

ಇದನ್ನೂ ಓದಿ: ಅಮ್ಮ ಅಪ್ಪನಿಗೆ ಇನ್ನೂ ಹೂ ಹಾಕ್ಬೇಕು ಮೇಘನಾ ರಾಜ್ ಮತ್ತು ಮಗನ ಭಾವುಕ ಕ್ಷಣ..

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram