ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್; ಬಿಡುಗಡೆಗೆ ಸಿದ್ಧವಾಗಿದೆ 2ನೇ ಕಂತಿನ ಹಣ

ರಾಜ್ಯದಲ್ಲಿ ಸರ್ಕಾರ ಚುನಾವಣೆಗೂ ಮುನ್ನ ಘೋಷಿಸಿದಂತೆ ಯುವನಿಧಿ ಯೋಜನೆ ಬಿಟ್ಟು ಉಳಿದ ನಾಲ್ಕು ಯೋಜನೆಗಳನ್ನ ಜಾರಿಗೆ ತಂದಿದೆ. ಅದರಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸಲು ಕುಟುಂಬದ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನಗೆ ಕೂಡ ಜಾರಿ ಮಾಡಿ ಮೊದಲ ಕಂತಿನ ಹಣವನ್ನು ನೀಡಲಾಗಿದೆ. ಹೌದು ಕಾಂಗ್ರೆಸ್ ಸರಕಾರದ ಮುಖ್ಯ ಯೋಜನೆಯಲ್ಲಿ ಗೃಹಲಕ್ಷ್ಮಿ ಯೋಜನೆಯು ಒಂದಾಗಿದ್ದು ಈಗಾಗಲೇ ಈ ಯೋಜನೆಯ ಮೂಲಕ ಮಹಿಳೆಯರ ಖಾತೆಗೆ ಎರಡು ಸಾವಿರ ರೂಪಾಯಿ ಹಣ ನೀಡುವುದಾಗಿ ಕಾಂಗ್ರೆಸ್ ಸರಕಾರ ಭರವಸೆ ನೀಡಿದೆ, ಈಗಾಗಲೇ 1.13 ಕೋಟಿ ಗೃಹಿಣಿಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ಈ ಹಿಂದೆ ಪ್ರತೀ ತಿಂಗಳ 26ನೇ ತಾರೀಖು ಗೃಹಲಕ್ಷ್ಮೀ ಹಣ ಖಾತೆಗೆ ಬೀಳಲಿದೆ ಎಂದು ಸರಕಾರ ಹೇಳಿತ್ತು. ಹೀಗಾಗಿ ಸೆಪ್ಟೆಂಬರ್ 30ರೊಳಗೆ 2ನೇ ಕಂತು ಜಮಾ ಆಗಬೇಕಿತ್ತು. ಅದರೆ ಇಲ್ಲಿಯವರೆಗೂ ಎರಡನೇ ಕಂತಿನ ಹಣ ಜಮೆ ಯಾಗಿಲ್ಲ.

WhatsApp Group Join Now
Telegram Group Join Now

ಹೌದು ಗೃಹಲಕ್ಷ್ಮಿ ಯೋಜನೆಗೆ(Gruhalakshmi Scheme) ನೋಂದಣಿ ಇನ್ನು ಕೆಲವು ಮಹಿಳೆಯರು ಮಾಡಿಲ್ಲ, ಯಾಕಂದ್ರೆ ಕೆಲವರು ಹೊಸ ರೇಷನ್ ಕಾರ್ಡ್ ಗೆ ಇನ್ನಷ್ಟೆ ಅರ್ಜಿ ಸಲ್ಲಿಸಬೇಕಿದೆ, ಮನೆ ಯಾಜಮಾನಿಯರು ಇನ್ನೂ ಈ ವಿಚಾರಕ್ಕೆ ಪರದಾಟ ನಡೆಸುತ್ತಿದ್ದರೆ ಮತ್ತೊಂದೆಡೆ ಇ-ಕೆವೈಸಿ ಸರಿ ಇದ್ದರೂ ಕೆಲವು ಫ‌ಲಾನುಭವಿಗಳಿಗೆ ಮೊದಲ ಕಂತಿನ ಹಣವೇ ಬಂದಿಲ್ಲ, ಯಾಕಂದ್ರೆ ಎಲ್ಲ ಮಹಿಳೆಯರ ಖಾತೆಗೂ ಒಮ್ಮೆಲೆ ಡಿಬಿಟಿ ಮೂಲಕ ಹಣ ಜಮೆ ಮಾಡಲು ಸಾಧ್ಯವಾಗುವುದಿಲ್ಲ, ಹಾಗಾಗಿ ಹಣ ಜಮೆ ಯಾಗಲು ಸಮಯ ತೆಗೆದು ಕೊಳ್ಳುತ್ತದೆ ಅಂತ ಸರ್ಕಾರ ಇಷ್ಟು ದಿನ ಸಾಬುಬು ಹೇಳುತ್ತಾ ಬಂದಿತ್ತು ಆದ್ರೆ ಕೊನೆಗೂ 2ನೇ ಕಂತಿನ ಹಣ ಜಮೆ ಮಾಡಲು ಸಮಯ ಫಿಕ್ಸ್ ಆಗಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಇದನ್ನೂ ಓದಿ: ಇಸ್ರೇಲ್ ನಲ್ಲಿ ಯುದ್ಧ ಏರಿಕೆ ಕಂಡ ಚಿನ್ನದ ಬೆಲೆ! ಹೀಗಿದೆ ನೋಡಿ ಇಂದಿನ ಚಿನ್ನ, ಬೆಳ್ಳಿಯ ದರ ಎಷ್ಟಾಗಿದೆ ನೋಡಿ?

ಯಾವಾಗ ಯೋಜನೆಯ ಹಣ ಖಾತೆಗೆ ಜಮೆ ಆಗುತ್ತೆ ಗೊತ್ತಾ?

ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) 2ನೇ ಕಂತಿನ ಹಣ ಜಮೆ ಕುರಿತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದು ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಿ ಹಣವನ್ನು ವರ್ಗಾವಣೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇನ್ನೊಂದೆಡೆಯಲ್ಲಿ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಕೂಡ ಇದನ್ನೇ ಹೇಳಿದ್ದಾರೆ. ಹೌದು ರಾಜ್ಯ ಸರಕಾರ ಗೃಹಲಕ್ಷ್ಮೀ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಿದ್ದತೆ ಮಾಡಿಕೊಂಡಿದೆ. ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ತಾಂತ್ರಿಕ ದೋಷವನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮವನ್ನು ಕೈಗೊಳ್ಳಲಾಗುತ್ತದೆ ಅಂತ ಸ್ಪಷ್ಟನೆ ನೀಡಲಾಗಿದೆ.

ಇನ್ನು ಪ್ರಮುಖವಾಗಿ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಆಗದ ಸಮಸ್ಯೆಯ ಹಿನ್ನೆಲೆಯಲ್ಲಿ ಹಣ ವರ್ಗಾವಣೆ ಆಗಿಲ್ಲ ಅಂತಾ ಸರಕಾರ ಹೇಳಿದೆ. ಇದೀಗ ಗೃಹಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಹಣ ಯಾವಾಗ ವರ್ಗಾವಣೆ ಆಗಲಿದೆ ಅನ್ನೋದಕ್ಕೆ ಉತ್ತರ ಸಿಕ್ಕಿದೆ. ಹೌದು ಅಕ್ಟೋಬರ್ 2ನೇ ವಾರದಲ್ಲಿ ಗೃಹ ಲಕ್ಷ್ಮಿ ಯೋಜನೆ ಹಣ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ಮೊದಲ ಕಂತಿನ ಹಣ ಸಿಗದ ಮಹಿಳೆಯರು ತಮ್ಮ ಪಡಿತರ ಚೀಟಿ, ಬ್ಯಾಂಕ್‌ ಖಾತೆ ಹಾಗೂ ಆಧಾರ್‌ ಕಾರ್ಡ್‌ನಲ್ಲಿ ಇರುವ ಲೋಪದೋಷ ಸರಿ ಪಡಿಸಿಕೊಂಡು ಹಣ ಪಡೆಯಲು ಅವಕಾಶವಿದೆ ಅಂತ ಕೂಡ ಇದೀಗ ಸರ್ಕಾರ ತಿಳಿಸಿದೆ.

ಸ್ನೇಹಿತರೆ ನಿಮ್ಮೆಲ್ಲರಿಗೂ ಗೊತ್ತಿರುವಂತೆ ಈಗಾಗಲೇ ಗೃಹಲಕ್ಷ್ಮೀ ಯೋಜನೆಯ ಮೂಲಕ ಕರ್ನಾಟಕ ರಾಜ್ಯದ ಕೋಟ್ಯಾಂತರ ಮಹಿಳೆಯರ ಬ್ಯಾಂಕ್‌ ಖಾತೆಗೆ ಪ್ರತೀ ತಿಂಗಳು 2000 ರೂಪಾಯಿ ಹಣವನ್ನು ಜಮೆ ಮಾಡಲಾಗುತ್ತದೆ ಅಂತ ಸರ್ಕಾರ ಹೇಳಿತ್ತು ಅದರಂತೆ ಈಗಾಗಲೇ ಮೊದಲ ಕಂತಿನ ಹಣವನ್ನು ಸೆಪ್ಟೆಂಬರ್‌ ತಿಂಗಳಿನಲ್ಲಿ ವರ್ಗಾವಣೆ ಮಾಡಲಾಗಿದೆ. ಇನ್ನು ರಾಜ್ಯ ಸರಕಾರ ಈ ನಡುವಲ್ಲೇ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಗುಡ್‌ನ್ಯೂಸ್‌ ಕೊಟ್ಟಿದೆ ಅಂತ ಹೇಳಬಹುದು. ಬಹಳ ದಿನಗಳಿಂದ ಸಾಕಷ್ಟು ಫಲಾನುಭವಿಗಳು ಕಾಯ್ತಿದ್ರು 2ನೇ ಕಂತಿನ ಹಣ ಯಾವಾಗ ಬರುತ್ತೆ ಅಂತ ಇದೀಗ ಗೃಹಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಹಣವನ್ನು ಬಿಡುಗಡೆ ಮಾಡುವುದಾಗಿ ಘೋಷಣೆಯನ್ನು ಮಾಡಿದೆ.

ಇದಕ್ಕೆ ಬೇಕಾದ ಸಿದ್ದತೆಗಳನ್ನು ಸಂಬಂಧಪಟ್ಟವರು ಮಾಡಿಕೊಂಡಿದ್ದಾರೆ ಅಂತ ಹೇಳಲಾಗ್ತಿದೆ. ಇನ್ನು ಕರ್ನಾಟಕ ರಾಜ್ಯದಲ್ಲಿ 1.26 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಪೈಕಿ 1.10 ಕೋಟಿ ಮಹಿಳೆಯ ಖಾತೆಗಳಿಗೆ ಇನ್ನೂ 2000 ರೂಪಾಯಿ ಜಮೆ ಆಗಿರಲಿಲ್ಲ. ಅಲ್ಲದೇ ರಾಜ್ಯದಲ್ಲಿನ ಸುಮಾರು 16 ಲಕ್ಷ ಜನರಿಗೆ ತಾಂತ್ರಿಕ ಕಾರಣದ ಹಿನ್ನೆಲೆಯಲ್ಲಿ ಹಣ ವರ್ಗಾವಣೆ ಆಗಿಲ್ಲ. ಇನ್ನು ಆಗಸ್ಟ್‌ ತಿಂಗಳ ಹಣ ಇನ್ನೂ‌ ಕೂಡ ಕೆಲವು ಮಹಿಳೆಯರ ಖಾತೆಗೆ ಜಮೆ ಯಾಗಿಲ್ಲ, ಅದರೆ ಇದೇ ತಿಂಗಳ ಅಂದರೆ, ಅಕ್ಟೋಬರ್ ಹದಿನೈದರ ನಂತರ ಒಂದು ಮತ್ತು ಎರಡನೇ ಕಂತಿನ ಹಣ ಒಟ್ಟಿಗೆ ಜಮೆ ಯಾಗಲಿದೆ ಎನ್ನಲಾಗುತ್ತಿದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram