ಗೃಹಲಕ್ಷ್ಮೀ ಯೋಜನೆ ಈಗಾಗಲೇ ಯಶಸ್ವಿಯಾಗಿ ಜಾರಿಯಾಗಿದ್ದು, ಲಕ್ಷಾಂತರ ಮನೆ ಯಜಮಾನಿಯರ ಅಕೌಂಟ್‌ಗೆ ಮೊದಲ ತಿಂಗಳ 2 ಸಾವಿರ ರುಪಾಯಿ ಕಂತು ಪಾವತಿಯಾಗಿದೆ. ಇನ್ನೂ ಲಕ್ಷಾಂತರ ಜನ ತಾಂತ್ರಿಕ ದೋಷಗಳಿಂದಾಗಿ ಯೋಜನೆಯಿಂದ ವಂಚಿತರಾಗಿದ್ದು, ಎಲ್ಲರಿಗೂ ಹಣ ಸಿಗುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸೆಪ್ಟೆಂಬರ್ ತಿಂಗಳು ಕೊನೆಯಾಗಿದ್ದು ಅಕ್ಟೋಬರ್ ತಿಂಗಳು ಆರಂಭವಾಗಿರೋದ್ರಿಂದ ಎರಡನೇ ಕಂತಿನ ಹಣ ಬರೋದು ಯಾವಾಗ ಅಂತ ಮನೆಯೊಡತಿಯರು ಕಾಯುತ್ತಿದ್ದಾರೆ. ಅಲ್ಲದೇ ಈಗಾಗಲೇ ಮೊದಲ ಕಂತಿನ ಹಣ ಪಡೆದುಕೊಂಡಿರತಕ್ಕಂಥ ಗೃಹಿಣಿಯರು ನಮಗೆ ಯಾಕೆ ಎರಡನೇ ಕಂತಿನ ಹಣ ಬಂದಿಲ್ಲ ಅನ್ನೋ ಪ್ರಶ್ನೆಯನ್ನ ಮಾಡ್ತಾ ಇದ್ರೆ ಮತ್ತೊಂದು ಕಡೆ ನಮಗೆ ಮೊದಲ ಕಂತಿನ ಹಣವು ಬಂದಿಲ್ಲ ನಮ್ಮಲ್ಲಿ ಏನು ಸಮಸ್ಯೆ ಆಗಿದೆ ಅನ್ನೋದು ಗೊತ್ತಾಗ್ತಾ ಇಲ್ಲ. ನಾವು ಸಮಸ್ಯೆಯನ್ನು ತಿಳಿದುಕೊಳ್ಳೋದು ಹೇಗೆ? ಯಾರ ಬಳಿ ಕೇಳಬೇಕು ಅದನ್ನ ಬಗೆಹರಿಸಿಕೊಳ್ಳುವುದು ಹೇಗೆ ಸಾಕಷ್ಟು ಗೊಂದಲದಲ್ಲಿ ಗೃಹಿಣೀರು ಇದ್ದಾರೆ.
ಇದೀಗ ಈ ಎರಡನೇ ಕಂತಿನ ಹಣ ಬಿಡುಗಡೆಯ ದಿನಾಂಕ ಕೂಡ ನಿಗದಿಯಾಗಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಕುರಿತಂತೆ ಮಾಹಿತಿಯನ್ನು ನೀಡಿದ್ದಾರೆ ಅಲ್ಲದೆ ಮೊದಲ ಕಂತಿನ ಹಣ ಪಡೆಯದೇ ಇರಲು ಕಾರಣವೇನು ಅದರ ಜೊತೆಗೆ ಯಾರೆಲ್ಲಾ ಹಣ ಪಡೆಯಲು ಅನರ್ಹರಾಗಿದ್ದಾರೆ ಯಾವ ಕಾರಣಕ್ಕೆ ಅವರು ಅನರ್ಹರಾಗಿದ್ದಾರೆ ಅವರ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ ಅಂತ ಹೊಸ ಸಂದೇಶವನ್ನು ಇದೀಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವಾನ್ಸಿದ್ದಾರೆ ಹಾಗಾದ್ರೆ ಏನಿದು ಹೊಸ ಸುದ್ದಿ ನೋಡೋಣ ಬನ್ನಿ.,
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಎರಡನೇ ಕಂತಿನ ಹಣ ಯಾವಾಗ ನಿಮ್ಮ ಖಾತೆಗೆ ಬರಲಿದೆ
ಸ್ನೇಹಿತರೆ ಮೊದಲಿಗೆ ಇದೀಗ 2ನೇ ಕಂತಿನ ಹಣ ಯಾವಾಗ ಬರುತ್ತೆ ಅಂತ ಕಾಯ್ತಿರ್ತಕ್ಕಂತ ಗೃಹಿಣಿಯರಿಗೆ ಈ ಮಾಹಿತಿ ಬಹಳ ಉಪಯುಕ್ತ ಹಾಗೂ ಅಷ್ಟೇ ಖುಷಿಯ ವಿಚಾರ ಅಂತ ಹೇಳಬಹುದು ಹೌದು ಎರಡನೇ ಕಂತಿನ ಹಣ ಯಾವಾಗ ಬರುತ್ತೆ ಅಂತ ಕಾಯ್ತಿದಂತಹ ಗೃಹಿಣಿಯರಿಗೆ ಇದೀಗ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಶುಭ ಸುದ್ಧಿಅಂತನ ಕೊಟ್ಟಿದ್ದಾರೆ ಅದೇನಪ್ಪ ಅಂತ ಅಂದ್ರೆ ಎರಡನೇ ತಿಂಗಳ ಹಣ ಅಂದ್ರೆ ಎರಡನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ಯಂತೆ. ಹೌದು ಅಕ್ಟೋಬರ್ ತಿಂಗಳ 10ನೇ ತಾರೀಕಿನಿಂದ ಎಲ್ಲಾ ಅಂದ್ರೆ ಯಾರಿಗೆ ಮೊದಲ ಕಂತಿನ ಹಣ ಬಂದಿರ್ತದೋ ಅಂತಹ ಮಹಿಳೆಯರ ಖಾತೆಗೆ 2ನೇ ಕಂತಿನ ಹಣ ಜಮಾವಣೆ ಆಗಲಿದ್ಯಂತೆ.
ಹಾಗಾದ್ರೆ ಎಲ್ಲರಿಗೂ ಕೂಡ ಇದೇ ತಿಂಗಳು 10ನೇ ತಾರೀಕು ಹಣ ಜಮಾ ಆಗುತ್ತಾ ಅಂತ ಕೇಳಿದರೆ ಖಂಡಿತ ಇಲ್ಲ. ಹೌದು ಎಲ್ಲರಿಗೂ ಅಕ್ಟೋಬರ್ 10ನೇ ತಾರೀಕಿನೊಂದೆ ಈ ಒಂದು ಎರಡನೇ ಕಂತಿನ ಹಣ ಜಮಾವಣೆ ಆಗುವುದಿಲ್ಲ ಕಾರಣ ಇಷ್ಟೇ ಈಗಾಗಲೇ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಹೇಳಿರುವಂತೆ ಅವರು ಆರ್.ಬಿ.ಐ ಖಾತೆಗೆ ಹಣ ಜಮಾಾವಣೆ ಮಾಡಲು 15 ದಿನಗಳ ಗಡುವು ತೆಗೆದುಕೊಂಡಿದ್ಯಂತೆ. ಹೀಗಾಗಿ ಫಲಾನುಭವಿಗಳ ಖಾತೆಗೆ ಈ ಒಂದು ಹಣ ವರ್ಗಾವಣೆ ಆಗಬೇಕು ಅಂತ ಅಂದ್ರೆ ಕನಿಷ್ಠ ಪಕ್ಷ 15 ದಿನಗಳ ಕಾಲಾವಕಾಶ ಬೇಕು ಅಂತ ಹೇಳಿದ್ದಾರೆ ಅಂದ್ರೆ ಈ ಅಕ್ಟೋಬರ್ 10ನೇ ತಾರೀಖಿನಿಂದ ಹಿಡಿದು ಅಕ್ಟೋಬರ್ 25ನೇ ತಾರೀಕಿನ ಒಳಗಡೆ ಮೊದಲ ಕಂತಿನ ಹಣವನ್ನು ಪಡೆದಿರ್ತಕ್ಕಂತ ಫಲಾನುಭವಿಗಳ ಖಾತೆಗೆ 2ನೇ ಕಂತಿನ ಹಣ ವರ್ಗಾವಣೆ ಆಗುತ್ತೆ ಇದು ಪಕ್ಕಾ ಸುದ್ದಿ.
ಇದನ್ನೂ ಓದಿ: ಲಕ್ಷ, ಲಕ್ಷ ಸಾಲ ಮಾಡಿ ಹೆಂಡತಿಯನ್ನು ಓದಿಸಿದ ಗಂಡ, ಆಕೆ ಲವರ್ ಜೊತೆ ಎಸ್ಕೇಪ್
ಮೊದಲ ಕಂತಿನ ಹಣ ಬರೆದೆ ಇರೋರು ಏನ್ ಮಾಡಬೇಕು?
ಇನ್ನು ಮೊದಲ ಕಂತಿನ ಹಣವೇ ನಮಗೆ ಬಂದಿಲ್ಲ ಏನ್ ಸಮಸ್ಯೆ ಆಗಿದೆ ಅದನ್ನ ನಾವು ತಿಳಿದುಕೊಳ್ಳುವುದು ಹೇಗೆ ನಾವು ಮಾಡಬೇಕಾಗಿರೋದು ಏನು? ಈ ರೀತಿಯ ಪ್ರಶ್ನೆ ಕೇಳ್ತಕ್ಕಂಥ ಮಹಿಳೆಯರಿಗೂ ಕೂಡ ಗುಡ್ ನ್ಯೂಸ್ ಅಂತ ಹೇಳಬಹುದು. ಹೌದು ಈಗಾಗಲೇ ಸರ್ಕಾರ ಯಾರ್ಯಾರ ಖಾತೆಗೆ ಹಣ ಜಮಾವಣೆ ಆಗ್ಲಿಲ್ವೊ ಅಂದ್ರೆ ಸುಮಾರು 8ರಿಂದ 10 ಲಕ್ಷ ಫಲಾನುಭವಿಗಳ ಖಾತೆಗೆ ಇನ್ನೂ ಹಣ ಜಮಾಮಣಿ ಆಗಿಲ್ಲ ಅಂತವರು ಯಾಕೆ ಜಮಾವಣೆ ಆಗಿಲ್ಲ ಅನ್ನೋದನ್ನ ತಿಳಿದುಕೊಳ್ಳಬೇಕು ಅಂತ ಹೇಳಿದ್ರೆ ಸರ್ಕಾರ ಬಿಡುಗಡೆ ಮಾಡಿರ್ತಕ್ಕಂತ ಒಂದು ಲಿಸ್ಟ್ ಏನಿದೆ ಆದ್ರಲ್ಲಿ ನಿಮ್ಮ ಹೆಸರು ಇದೆಯಾ ಇಲ್ವಾ ಅನ್ನೋದನ್ನ ತಿಳ್ಕೊಳ್ಬೇಕು. ಅದು ಎಲ್ಲಿ ಸಿಗುತ್ತೆ ಅಂತ ಕೇಳಿದ್ರೆ ಈಗಾಗಲೇ ಆಶಾ ಕಾರ್ಯಕರ್ತೆಯರು ಇರಬಹುದು ಅಥವಾ ಅಂಗನವಾಡಿ ಕಾರ್ಯಕರ್ತೆಯರು ಇರಬಹುದು ಅವರ ಬಳಿ ಹೋಗಿ ನೀವು ಈ ರೀತಿ ವಿಚಾರಿಸಬೇಕಾಗುತ್ತದೆ ನಮಗೆ ಮೊದಲ ಕಂತಿನ ಹಣ ಬಂದಿಲ್ಲ ಈಗ ಸರ್ಕಾರ ಬಿಡುಗಡೆ ಮಾಡಿರತಕ್ಕಂತ ಲಿಸ್ಟ್ ಅಲ್ಲಿ ನಮ್ಮ ಹೆಸರು ಇದ್ಯಾ ಇಲ್ವಾ ಏನ್ ಸಮಸ್ಯೆ ಆಗಿದೆ ಚೆಕ್ ಮಾಡಿ ಅಂತ ಕೇಳಬೇಕು, ಅವರೇನಾದ್ರೂ ಇದರ ಬಗ್ಗೆ ನಮಗೆ ಮಾಹಿತಿ ಇಲ್ಲ ಅಂತ ಅಂದ್ರೆ ನೀವು ಸಿಡಿಪಿಓ ಆಫೀಸ್ ಗೆ ಹೋಗಬೇಕು.
ಈ ಒಂದು ಸಿಡಿಪಿಓ ಆಫೀಸ್ಗೆ ಹೋಗಿ ಅಲ್ಲಿ ವಿಚಾರ್ಸಿದ್ರೆ ಖಂಡಿತವಾಗಿಯೂ ಆ ಲಿಸ್ಟಲ್ಲಿ ನಿಮ್ಮ ಹೆಸರು ಇದ್ಯಾ ಇಲ್ವಾ ಅಂತ ಅವರು ನಿಮಗೆ ಮಾಹಿತಿಯನ್ನು ಒದಗಿಸುತ್ತಾರೆ. ಅದಾದ ನಂತರ ಯಾವುದು ಸರಿ ಇಲ್ವೋ ಆ ಮಾಹಿತಿನಾ ನೀವು ಸರಿ ಪಡಿಸಿಕೊಂಡು ಮತ್ತೆ ಅಪ್ಲಿಕೇಶನ್ ಹಾಕಬೇಕು. ಇನ್ನು ನೀವು ಆಗಸ್ಟ್ 15 ರ ಒಳಗೆ ಅಪ್ಲಿಕೇಷನ್ ಹಾಕಿದ್ರೆ ಎರಡು ಕಂತಿನ ಹಣ ಖಂಡಿತ ನಿಮಗೆ ಬರುತ್ತೆ. ಇಲ್ಲ ಆಗಸ್ಟ್ 15 ರ ನಂತರ ಅಪ್ಲಿಕೇಶನ್ ಹಾಕಿದ್ರೆ ಮೊದಲನೇ ಕಂತಿನ ಹಣ ಮಾತ್ರ ನಿಮ್ಮ ಕೈ ಸೇರುತ್ತೆ.
ಇದನ್ನೂ ಓದಿ: ದರ್ಶನ್ ಜೊತೆಗೆ ಮನಸ್ತಾಪ ಇರೋದನ್ನ ಒಪ್ಪಿಕೊಂಡ ದ್ರುವ; ಮಾತನಾಡಿ ಬಗೆಹರಿಸಿಕೊಳ್ಳೋಕೆ ನೋಡ್ತೀನಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram