ಕರ್ನಾಟಕ ರಾಜ್ಯದ ಐದು ಗ್ಯಾರಂಟಿ ಯೋಜನೆಗಲ್ಲಿ ಗೃಹ ಲಕ್ಷ್ಮೀ ಯೋಜನೆ(Gruhalakshmi Scheme) ಪ್ರಮುಖವಾದ ಯೋಜನೆ. ಜೊತೆಗೆ ಎಲ್ಲಾ ಮಹಿಳೆಯರಿಗೆ ಅತ್ಯಂತ ಪ್ರಿಯವಾದ ಯೋಜನೆಯಾಗಿದೆ. ಯಾಕೆಂದರೆ ಗೃಹ ಲಕ್ಷ್ಮೀ ಯೋಜನೆ ಅಡಿಯಲ್ಲಿ 2000 ಉಚಿತವಾಗಿ ಸಿಗುತ್ತಿದೆ. ಹೌದು ಗೃಹ ಲಕ್ಷ್ಮೀ ಯೋಜನೆ 2ತಿಂಗಳ ಹಣ ಈಗಾಗಲೇ ಬಿಡುಗಡೆಯಾಗಿದ್ದು 2ನೇ ತಿಂಗಳ 2 ಸಾವಿರ ರೂಪಾಯಿ ಹಣ ಕಳೆದ ತಿಂಗಳು ಬಿಡುಗಡೆಯಾಗಿತ್ತು. ಎಲ್ಲಾ ಮಹಿಳೆಯರ ಬ್ಯಾಂಕ್ ಅಕೌಂಟ್ ಸೇರಿತ್ತು. ಅದೇ ರೀತಿ ಇದೀಗ 3ನೇ ತಿಂಗಳ ಹಣ ಹಲವಾರು ಜಿಲ್ಲೆಯವರಿಗೆ ಬಿಡುಗಡೆಯಾಗಿದೆ. ಹೌದು ರಾಜ್ಯ ಸರ್ಕಾರ ಗೃಹ ಲಕ್ಷ್ಮೀ ಯೋಜನೆಯ 3ನೇ ಕಂತಿನ ಹಣ ಬಿಡುಗಡೆ ಮಾಡಿದೆ. ಈಗಾಗಲೇ ಸಪ್ಟೆಂಬರ್ 24 ನೇ ತಾರೀಖಿನಿಂದ ಜಿಲ್ಲಾ ವಾರು ಪ್ರಕಾರ ಎಲ್ಲಾ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಬಿಡುಗಡೆ ಮಾಡಿದೆ. ಹೌದು ಈ ಯೋಜನೆಗೆ ಒಂದು ಕೋಟಿಗಿಂತ ಜಾಸ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಅದರಲ್ಲಿ 80 ಲಕ್ಷ ಜನರಿಗೆ ಮಾತ್ರ ಮೊದಲ ಕಂತಿನ ಹಣ ಬಿಡುಗಡೆಯಾಗಿತ್ತು. ಹೀಗಾಗಿ 3ನೇ ಕಂತಿನ ಗೃಹ ಲಕ್ಷ್ಮಿ ಯೋಜನೆಯ ಹಣಕ್ಕಾಗಿ ಈ ತಿಂಗಳು ಕಾಯುತ್ತಿದ್ದ ಮಹಿಳೆಯರಿಗೆ ಸಂತಸದ ಸುದ್ದಿ. ಅಂತಲೇ ಹೇಳಬಹುದು.
ಗೃಹ ಲಕ್ಷ್ಮೀ 3ನೇ ಕಂತಿನ ಹಣವನ್ನ ಈಗಾಗ್ಲೇ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಈ ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿರೋದ್ರಿಂದ ಗೃಹಲಕ್ಷ್ಮಿಯರು ಕಾಯುತ್ತಿದ್ದೂ, ಒಂದಷ್ಟು ಜನರಿಗೆ ಈಗಾಗ್ಲೇ 3ನೇ ಕಂತಿನ ಹಣ ಜಮಾವಣೆ ಆಗಿದೆ ಅನ್ನೋ ಅಪ್ಡೇಟ್ಸ್ ಇದೆ. ಇಷ್ಟು ದಿನ ಗೃಹ ಲಕ್ಷ್ಮಿ ಹಣಕ್ಕಾಗಿ ಕಾದು ಕೂತಿದ್ದ ಎಲ್ಲಾ ಮಹಿಳೆಯರಿಗೆ ಈಗ ಸಂತಸದ ಸುದ್ದಿ ಬಂದಿದೆ. ಹಾಗಾದರೆ ಯಾರ ಅಕೌಂಟಿಗೆ 2000 ರೂ ಬಂದಿದೆ. ಸ್ಟೇಟಸ್ ಅನ್ನು ಎಲ್ಲಿ ಚೆಕ್ ಮಾಡಬೇಕು, ಹಣ ಬಂದಿಲ್ಲವಾದರೆ ಏನು ಮಾಡಬೇಕು, ಸಂಪೂರ್ಣವಾದ ಮಾಹಿತಿಯನ್ನು ನೋಡ್ತಾ ಹೋಗೋಣ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: ಮಹಿಳೆಯರಿಗೆ ಸಿಹಿಸುದ್ದಿ: ಇನ್ನುಂದೆ ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ತೋರಿಸಿದರೆ ಸಾಕು ಪ್ರಯಾಣಿಸಲು ಅವಕಾಶ
ಹಣ ಬಂದಿಲ್ಲ ಅನ್ನೋರು ಏನ್ ಮಾಡಬೇಕು ಗೊತ್ತಾ?
ಹೌದು ನಿಮ್ಮೆಲ್ಲರಿಗೂ ಗೊತ್ತಿರುವಂತೆ 8 ಲಕ್ಷಕ್ಕಿಂತ ಜಾಸ್ತಿ ಮಂದಿ ಮಹಿಳೆಯರ ಖಾತೆಗೆ ಮೊದಲ ಕಂತಿನ ಹಣವೇ ಇನ್ನು ಬಿಡುಗಡೆಯಾಗಿಲ್ಲ. ಇದಕ್ಕೂ ನಾನಾ ಕಾರಣಗಳನ್ನ ಹೀಗಾಗ್ಲೇ ಸರ್ಕಾರ ನೀಡಿದ್ದು ಇದರ ಮಧ್ಯೆ ಇದೀಗ 3ನೇ ಕಂತಿನ ಹಣ ಬೆರಳೆಣಿಕೆಯಷ್ಟು ಜನರ ಖಾತೆಗೆ ಜಮೆ ಆಗಿದೆ ಅಂತ ಹೇಳಲಾಗುತ್ತಿದ್ದು, ಪ್ರಾಯೋಗಿಕವಾಗಿ ಸ್ವಲ್ಪ ಜನರ ಖಾತೆ ಹಣವನ್ನ ಜಮೆ ಮಾಡಲಾಗಿದ್ಯಂತೆ. ಇನ್ನು ಮುಖ್ಯವಾಗಿ ಸಾಕಷ್ಟು ಜನರ ಖಾತೆಗೆ ಯಾಕೆ ಹಣ ಜಮಾವಣೆ ಆಗಿಲ್ಲ ಅನ್ನೋದನ್ನ ನೋಡೋದಾದ್ರೆ, ಅದರಲ್ಲಿ ಮುಖ್ಯವಾಗಿ. ಮಹಿಳೆಯರ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡನ್ನು ಲಿಂಕ್ ಆಗಿಲ್ಲ. ಅದರ ಜೊತೆಗೆ ರೇಷನ್ ಕಾರ್ಡ್ ನಲ್ಲಿ ಮಹಿಳೆಯರ ಹೆಸರು ಮೊದಲ ಸ್ಥಾನದಲ್ಲಿ ಇರಬೇಕು ಅಂದರೆ ಯಜಮಾನಿಯಾಗಿರಬೇಕು. ಉಳಿದವರಿಗೆ ನಾನಾ ಟೆಕ್ನಿಕಲ್ ಕಾರಣದಿಂದ ಬ್ಯಾಂಕ್ ಇಕೆವೈಸಿ(E-KYC) ಪ್ರಾಬ್ಲಮ್ ಇಂದ ಹಣ ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಎರಡು ತಿಂಗಳ ಹಣ ಈ ತಿಂಗಳು ನಿಮ್ಮ ಖಾತೆಗೆ ಬಿಡುಗಡೆಯಾಗಲಿದೆ, ಚಿಂತೆ ಮಾಡುವ ಅಗತ್ಯವಿಲ್ಲವೆಂದು ಸಚಿವರು ತಿಳಿಸಿದ್ದಾರೆ. ಅದರ ಜೊತೆಗೆ ಪ್ರಾಯೋಗಿಕವಾಗಿ ಒಂದಷ್ಟು ಫಲಾನುಭವಿಗಳ ಖಾತೆಗೆ 3ನೇ ಕಂತಿನ ಹಣವನ್ನ ಹಾಕಲಾಗಿದೆ.
ಹೌದು ಹಲವಾರು ಮಹಿಳೆಯರ ಹೆಸರು ರೇಷನ್ ಕಾರ್ಡ್(Ration Card) ನಲ್ಲಿ ಯಜಮಾನಿ ಸ್ಥಾನದಲ್ಲಿಲ್ಲ. ಹಾಗಾಗಿ ರೇಷನ್ ಕಾರ್ಡ್ ನಲ್ಲಿ ಗಂಡನ ಹೆಸರು ಯಜಮಾನಿ ಸ್ಥಾನದಲ್ಲಿದ್ದರೆ ಅದನ್ನು ತಿದ್ದುಪಡಿ ಮಾಡಿ ಮಹಿಳೆಯ ಹೆಸರು ಯಜಮಾನಿ ಸ್ಥಾನದಲ್ಲಿ ಇರುವ ಹಾಗೆ ತಿದ್ದುಪಡಿ ಮಾಡಿಸಬೇಕು. ಇದರ ಜೊತೆಗೆ ಹಲವಾರು ಇತರೆ ಕಾರಣಗಳನ್ನು ಸರ್ಕಾರ ನೀಡಿದೆ. ರೇಷನ್ ಕಾರ್ಡ್ eKYC ಆಗಿದ್ಯಾ ಅಂತ ಚೆಕ್ ಮಾಡಿ ಆಗಿಲ್ಲದಿದ್ದರೆ ಆಧಾರ್ ಕಾರ್ಡ್ ಸೀಡಿಂಗ್ ಆಗದೇ ಇರುವುದು. ಮತ್ತು ರೇಷನ್ ಕಾರ್ಡ್ ಅಪ್ಡೇಟ್ ಆಗದೇ ಇರುವುದು ಕೂಡ ಗೃಹಲಕ್ಷ್ಮಿ ಯೋಜನೆ ಹಣ ಬಾರದೇ ಇರಲು ಮುಖ್ಯ ಕಾರಣವಾಗಿದೆ. ಜೊತೆಗೆ ರೇಷನ್ ಕಾರ್ಡ್ ನಲ್ಲಿ ಆಧಾರ್ ಕಾರ್ಡ್ ನಲ್ಲಿ ಮತ್ತು ಬ್ಯಾಂಕ್ ಅಕೌಂಟ್ ನಲ್ಲಿ ಮಹಿಳೆಯ ಹೆಸರಿನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಇರುವುದು ಕೂಡ ಇದಕ್ಕೆ ಕಾರಣವಾಗಿದೆ.
ಯಾರ ಹೆಸರು ಮ್ಯಾಚ್ ಆಗುತ್ತಿಲ್ಲವೋ ಅವರಿಗೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ಇದೆಲ್ಲವನ ಚೆಕ್ ಮಾಡಿಕೊಂಡ್ರೆ ಒಳಿತಾಗುತ್ತೆ ಅನ್ನೋದು ಸಂಬಂಧಪಟ್ಟ ಇಲಾಖೆಯ ವಾದ. ಜೊತೆಗೆ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ 2000 ರೂಪಾಯಿಯನ್ನ ಜಿಲ್ಲಾವಾರು ಪ್ರಕಾರ ಹಣವನ್ನ ಹಾಕಲಾಗಿತ್ತು. ಇದೀಗ ಅದೇ ರೀತಿ 3ನೇ ಕಂತಿನ ಹಣವನ್ನ ಕೂಡ ಹಾಕಲಾಗುತ್ತೆ. ಈಗಾಗ್ಲೇ ಸರ್ಕಾರ ಬ್ಯಾಂಕ್ ಗೆ ಹಣವನ್ನ ವರ್ಗಾವಣೆ ಮಾಡಿದ್ದು ಬ್ಯಾಂಕ್ ವತಿಯಿಂದ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗುತ್ತೆ. ಅದು ಕೂಡ ಈ ತಿಂಗಳ 15ನೇ ತಾರೀಖಿನ ನಂತರ ಅಂತ ಹೇಳಲಾಗುತ್ತಿದೆ.
ಇದನ್ನೂ ಓದಿ: ದೀಪಾವಳಿ ಹಬ್ಬದ ದಿನ ಚಿನ್ನದ ಬೆಲೆಯಲ್ಲಿ ಇಳಿಕೆ! ಚಿನ್ನ, ಬೆಳ್ಳಿಯ ದರ ಎಷ್ಟಾಗಿದೆ ನೋಡಿ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram