ಆರನೇ ಕಂತಿನ ಗೃಹಲಕ್ಷ್ಮಿ ಹಣವೂ ಈಗಾಗಲೇ ಹಲವರಿಗೆ ಜಮಾ ಆಗಿದೆ. ಈಗಾಗಲೇ ಕೆಲವು ಜಿಲ್ಲೆಗಳಿಗೆ ಹಣವೂ ಜಮಾ ಆಗಿದೆ. ಆದರೆ ಈಗಲೂ ಸಹ ಫಲಾನುಭವಿಗಳಿಗೆ ಒಂದು ಕಂತಿನ ಹಣ ಬರಲಿಲ್ಲ ಎಂದು ದೂರು ನೀಡುತ್ತಿದ್ದಾರೆ. ಹಾಗಾದರೆ ಯಾರಿಗೆ ಗೃಹ ಲಕ್ಷ್ಮಿ ಆರನೇ ಕಂತಿನ ಹಣ ಬರಲಿಲ್ಲ ಹಾಗೂ ಈಗಾಗಲೇ ಹಣ ಬಂದಿರುವ ಜಿಲ್ಲೆಗಳ ಬಗ್ಗೆ ಮಾಹಿತಿಯನ್ನು ತಿಳಿಯೋಣ.
ಗೃಹಲಕ್ಷ್ಮಿ ಯೋಜನೆಯ ಆರನೇ ಕಂತಿನ ಹಣ ಜಮಾ ಆಗಿದೆ:-
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ಮೈಸೂರು ನಗರ ಮತ್ತು ಮೈಸೂರು ಗ್ರಾಮಾಂತರ ಮಾಹಿತಿ ಸಿಕ್ಕಿದೆ. ಬಾಗಲಕೋಟೆ ಫಲಾನುಭವಿಗಳಿಗೆ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಈಗಾಗಲೇ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ಇದೆ. ಈ ಹಿಂದೆ ಕೇವಲ 20,000 ಖಾತೆಗಳಿಗೆ ಜಮಾ ಆಗುತ್ತಿತ್ತು ಆದರೆ ಈಗ ದಿನಕ್ಕೆ ಒಂದು ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ಒಮ್ಮೆಲೆ ಹಣ ಜಮಾ ಆಗಲಿದೆ. ಹಂತ ಹಂತವಾಗಿ ಈ ತಿಂಗಳ 25 ನೆ ತಾರೀಖಿನ ಒಳಗೆ ಎಲ್ಲಾ ಜಿಲ್ಲೆಯ ಫಲಾನುಭವಿಗಳಿಗೆ ಗೃಹ ಲಕ್ಷ್ಮಿ ಯೋಜನೆಯ ಹಣವೂ ಜಮಾ ಆಗಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೊಸದಾಗಿ ಅಪ್ಲಿಕೇಶನ್ ಹಾಕಿರುವ ಫಲಾನುಭವಿಗೆ ಸಹ ಹಣ ಜಮಾ ಆಗುತ್ತಿದೆ:- ಹೊಸದಾಗಿ ಅಪ್ಲಿಕೇಶನ್ ಹಾಕಿದವರಿಗೆ ಈಗ ಆರನೇ ಕಂತಿನ ಹಣವೂ ಜಮಾ ಆಗಿದೆ. ನೀವು ಈ ಮಾಹಿತಿಯನ್ನು ಪಡೆಯಲು ಪ್ಲೇ ಸ್ಟೋರ್ ಗೆ ಹೋಗಿ dbt ಆ್ಯಪ್ download ಮಾಡಿ ನಿಮ್ಮ ಆಧಾರ್ ನಂಬರ್ ಮತ್ತು password ಹಾಕಿ ನಿಮ್ಮ ಖಾತೆಯ ಬಗ್ಗೆ ಪೂರ್ಣ ಮಾಹಿತಿಯನ್ನು ಪಡೆಯಬಹುದು ಅಥವಾ ನಿಮ್ಮ ಬ್ಯಾಂಕ್ ಖಾತೆಯನ್ನು ಸಹ check ಮಾಡಿ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಎರಡು ಮೂರು ನಾಲ್ಕನೇ ಕಂತಿನ ಹಣವೂ ಬಾರದೆ ಇದ್ದರೆ ಅನುಸರಿಸಬೇಕಾದ ಮಾರ್ಗ:- ಗೃಹಲಕ್ಷ್ಮಿ ಯೋಜನೆಯ ಹಣವೂ ಬಾರದೆ ಇದ್ದರೆ ನಿಮ್ಮ ಹತ್ತಿರದ ಬ್ಯಾಂಕ್ ಖಾತೆಗೆ ಹೋಗಿ ಪರಿಶೀಲನೆ ಮಾಡಿ ಇಲ್ಲವೇ ನಿಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನಲ್ಲಿನ ಹೆಸರು ಹಾಗೂ ನೀವು ನೀಡಿರುವ ಮಾಹಿತಿಯನ್ನ check ಮಾಡಿ. ಹಾಗೂ ನಿಮ್ಮ ಆಧಾರ್ ಕಾರ್ಡ್ ಹತ್ತು ವರ್ಷಕ್ಕೂ ಹಳೆಯದಾದರೆ ಅಪ್ಡೇಟ್ ಮಾಡಿ. ಇಲ್ಲವೇ ನಿಮ್ಮ ಖಾತೆ ಮತ್ತು ಆಧಾರ್ ಕಾರ್ಡ್ ಹೆಸರು ಒಂದೇ ರೀತಿಯಲ್ಲಿ ಇದೆಯೇ ಅಥವಾ ಇಲ್ಲವೇ ಎಂಬುದು ತಿಳಿಯಿರಿ. ಹಾಗೂ ನೀವು ಟ್ಯಾಕ್ಸ್ ಪೇ ಮಾಡದೆ ಇದ್ದರೂ ನಿಮ್ಮ. ಅರ್ಜಿ ರಿಜೆಕ್ಟ್ ಆಗಿದ್ದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗೆ ಭೇಟಿ ನೀಡಿ. ಇಲ್ಲವೇ ನಿಮ್ಮ ಆಧಾರ್ ಸೀಡಿಂಗ್ ಆಗದೆ ಇದ್ದರೆ ಆಧಾರ್ ಸೀಡಿಂಗ್ ಮಾಡಿಸಿ.
ಒಂದು ಕಂತಿನ ಹಣ ಬಾರದೆ ಇದ್ದವರು NPCI ಮ್ಯಾಪಿಂಗ್ ಮಾಡಿಸಿ:- ಗೃಹ ಲಕ್ಷ್ಮಿ ಹಣದ ಒಂದು ಕಂತಿನ ಹಣ ಬರೆದೆ ಇದ್ದರೆ ನೀವು ಅರ್ಜಿ ಹಾಕುವಾಗ ಸಲ್ಲಿಸಿದ ಬ್ಯಾಂಕ್ ಖಾತೆ ಹೊಂದಿರುವ ಬ್ಯಾಂಕ್ ಗೆ ಹೋಗಿ ನೀವು NPCI ಮ್ಯಾಪಿಂಗ್ ಮಾಡಿಸಲು ಸಾಧ್ಯವಾಗುತ್ತದೆ ಅಥವಾ ನಿಮ್ಮ ಹತ್ತಿರದ ಇ-ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರ, ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ನೀವು NPCI ಮ್ಯಾಪಿಂಗ್ ಮಾಡಿಸಬಹುದು. ಒಮ್ಮೆ NPCI ಮ್ಯಾಪಿಂಗ್ ಮಾಡಿಸಿದರೆ ನಿಮಗೆ ಒಟ್ಟಿಗೆ 6 ಕಂತಿನ ಹಣವೂ ನಿಮಗೆ ಜಮಾ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಒಂದು ಕೋಟಿ ಮನೆಗಳಿಗೆ 300 ಯುನಿಟ್ ಉಚಿತ ವಿದ್ಯುತ್, ಪ್ರಧಾನಿ ಘೋಷಣೆ
ಇದನ್ನೂ ಓದಿ: ರೀಲ್ಸ್ ಮಾಡುವವರಿಗೆ ಸರ್ಕಾರದಿಂದ ಸಿಹಿಸುದ್ದಿ; 50 ಸಾವಿರ ನಗದು ಬಹುಮಾನ ಗೆಲ್ಲಿ