ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣದ ಬಿಡುಗಡೆ ಆಗುವ ಮೊದಲೇ ಮೂರು ಬಂಪರ್ ಸುದ್ದಿ ನೀಡುತ್ತಿದೆ ರಾಜ್ಯ ಸರ್ಕಾರ..

Gruhalakshmi Scheme

ರಾಜ್ಯ ಸರ್ಕಾರದ ಪ್ರತಿಷ್ಠಿತ ಯೋಜನೆ ಗೃಹ ಲಕ್ಷ್ಮಿ ಯೋಜನೆ(Gruhalakshmi Scheme) ಈಗಾಗಲೇ ಆರನೇ ಕಂತಿನ ಹಣವೂ ಬಿಡುಗಡೆ ಆಗಿದೆ. ಮುಂದಿನ ಮಾರ್ಚ್ ತಿಂಗಳಲ್ಲಿ ಗೃಹ ಲಕ್ಷ್ಮಿ ಯೋಜನೆಯ ಏಳನೇ ಕಂತಿನ ಹಣವೂ ಬಿಡುಗಡೆ ಆಗುತ್ತದೆ. ಆದರೆ ಈಗ ಕೆಲವು ಜನರಿಗೆ ಇನ್ನೂ ಆರನೇ ಕಂತಿನ ಹಣವೂ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಅದಕ್ಕೂ ಸರ್ಕಾರ ಸ್ಪಷ್ಟನೆ ನೀಡಿದೆ. ಹಾಗಾದರೆ ಆರನೇ ಕಂತಿನ ಹಣ ಬಾರದೆ ಏನು ಮಾಡಬೇಕು ಹಾಗೂ ಏಳನೇ ಕಂತಿನ ಹಣದ ಜೊತೆ ಮೂರು ಗುಡ್ ನ್ಯೂಸ್ ಗಳು ಏನೇನು ಎಂದು ನೋಡೋಣ.

WhatsApp Group Join Now
Telegram Group Join Now

ಈಗಾಗಲೇ ಫೆಬ್ರುವರಿ ಮೊದಲನೇ ವಾರದಲ್ಲಿಯೇ ಗೃಹ ಲಕ್ಷ್ಮಿ ಆರನೇ ಕಂತಿನ ಹಣವೂ ಬಿಡುಗಡೆ ಆದರೂ ಸಹ ಇನ್ನೂ ಕೆಲವರ ಖಾತೆಗೆ ಹಣವೂ ಬಂದಿಲ್ಲ. ಇದಕ್ಕೆ ಕಾರಣ ಏನೆಂದರೆ ಆರನೇ ಕಂತಿನ ಹಣವೂ ಈಗಾಗಲೇ ಬಿಡುಗಡೆ ಆಗಿದೆ ಆದರೆ ಒಮ್ಮೆಲೆ ಎಲ್ಲರ ಖಾತೆಗೆ ಹಣವನ್ನು ಟ್ರಾನ್ಸ್ಫರ್ ಮಾಡುತ್ತಿಲ್ಲ. ದಿನಕ್ಕೆ ಕೇವಲ 20,000 ಫಲಾನುಭವಿಗಳಿಗೆ ಮಾತ್ರ ಹಣ ಟ್ರಾನ್ಸ್ಫರ್ ಆಗುತ್ತಿದೆ. ಆದರಿಂದ ಕೆಲವರಿಗೆ ಇನ್ನೂ ಹಣ ಬಂದಿಲ್ಲ. ನಿಮ್ಮ ಗೃಹಲಕ್ಷ್ಮಿ ಹಣವೂ ಫೆಬ್ರುವರಿ 29 ರ ತನಕವೂ ಬರುವ ಸಾಧ್ಯತೆ ಇದೆ. 5 ಕಂತಿನ ವರೆಗೆ ಹಣ ಬಂದಿದ್ದು ಆರನೇ ಕಂತಿನ ಹಣ ಬರಲಿಲ್ಲ ಏನಾದರೂ ಟೆಕ್ನಿಕಲ್ issue ಇಂದ ಹಣ ಬಾರದೆ ಇರಬಹುದೇ ಮತ್ತೆ E-kyc ಮಾಡಿಸಬೇಕಾ ಎಂಬಲ್ಲ ಗೊಂದಲ ಇದ್ದರೆ ದಯವಿಟ್ಟು ಈ ತಿಂಗಳ ಕೊನೆಯ ವರೆಗೂ ಕಾಯಿರಿ. ಇಂದೇ ನಿಮ್ಮ ಖಾತೆಗೆ ಹಣ ಜಮಾ ಆಗಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರ ಹೇಳಿರುವ ಮೂರು ಗುಡ್ ನ್ಯೂಸ್ ಏನು?

ರಾಜ್ಯ ಸರ್ಕಾರವು ಫೆಬ್ರುವರಿ ಎಂಟನೇ ತಾರಿಖಿನಂದು ಜನಸ್ಪಂದನ ಕಾರ್ಯಕ್ರಮವನ್ನ ವಿಧಾನ ಸೌಧದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಗೃಹ ಲಕ್ಷ್ಮಿ ಯೋಜನೆಯ(Gruhalakshmi Scheme) ಹಣ ಬಾರದೆ ಇರುವುದು ಹಾಗೂ ಅರ್ಜಿ ತಿರಸ್ಕಾರ ಗೊಂಡ ಬಗ್ಗೆ ಹಾಗೂ ಒಂದು ಕಂತಿನ ಹಣ ಬಂದು ಉಳಿದ ಕಂತಿನ ಹಣ ಬಾರದೆ ಇರುವ ಬಗ್ಗೆ ಅನ್ನಭಾಗ್ಯ ಹಣ ಬಾರದೆ ಇರುವ ಬಗ್ಗೆ ಸರ್ಕಾರಕ್ಕೆ ನೇರವಾಗಿ ಮನವಿ ಸಲ್ಲಿಸಲೂ ಏರ್ಪಡಿಸಿದ ಕಾರ್ಯಕ್ರಮ ಇದಾಗಿತ್ತು. ಅಲ್ಲಿ ಸಿದ್ದರಾಮಯ್ಯ ಅವರೇ ಹಲವಾರು ಜನರ ಮನವಿಯನ್ನು ಕೇಳಿ ಅಲ್ಲಿಯೇ ಕೆಲವು ಜನರ ಸಮಸ್ಯೆಗೆ ಪರಿಹಾರ ಕೊಡಿಸಿದರು. ಗೃಹ ಲಕ್ಷ್ಮಿ ಯೋಜನೆಯ ಹಣ ಬಾರದೆ ಇರುವವರ ಬಳಿ ಅಲ್ಲಿಯೇ ಹೊಸದಾಗಿ ಅರ್ಜಿಯನ್ನು ಪಡೆದುಕೊಳ್ಳಲಾಗಿದೆ. ಅಂತವರಿಗೆ ಮೊದಲನೇ ಕಂತಿನಿಂದ ಏಳನೇ ಕಂತಿನ ವರೆಗೆ ಒಟ್ಟಿಗೆ ಹಣ ಬಿಡುಗಡೆ ಆಗುತ್ತದೆ ಎಂದು ತಿಳಿಸಿದರು.

ಹಾಗೆ ಎರಡನೇ ಗುಡ್ ನ್ಯೂಸ್ ಏನೆಂದರೆ ಕೆಲವು ಜನರಿಗೆ tax pay ಮಾಡದೆ ಇದ್ದರೂ ಇನ್ನೂ ಹಣ ಬಂದಿಲ್ಲ. ಒಂದು ಕಂತಿನ ಹಣ ಬಂದು ನಂತರ ಉಳಿದ ಕಂತಿನ ಹಣವೂ ಬರಲಿಲ್ಲ. ಅಂತವರು ವೆಬ್ಸೈಟ್ ಗೆ ಹೋಗಿ ಸ್ಟೇಟಸ್ ಚೆಕ್ ಮಾಡಬೇಕು. ಅಲ್ಲಿ ಹಣ ಬಾರದಿರುವ ಬಗ್ಗೆ ಮಾಹಿತಿ ಇರುತ್ತದೆ. ಕೆಲವು ತಾಂತ್ರಿಕ ದೋಷಗಳಿಂದ ಹಣ ಬಾರದೆ ಇದ್ದಾರೆ ಮುಂದಿನ ಕಂತಿನಲ್ಲಿ ಹಣ ಬರುತ್ತದೆ. tax pay ಮಾಡದವರಿಗೆ ಮಾತ್ರ ಮುಂದಿನ ತಿಂಗಳಿನಿಂದ ಹಣ ಬರುತ್ತದೆ. tax ಪೇ ಮಾಡುತ್ತಾ ಇದ್ದಾರೆ ಹಣವೂ ಬರುವುದಿಲ್ಲ. ಮೂರನೇ ಗುಡ್ ನ್ಯೂಸ್ ಎಂದರೆ ಈಗ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರು ಹೊಸ ರೇಷನ್ ಕಾರ್ಡ್ ಪಡೆದ ಬಳಿಕ ಅರ್ಜಿ ಸಲ್ಲಿಸಿದ್ದರೆ ಅಂತವರಿಗೆ ಏಳನೇ ಕಂತಿನಿಂದ ನಿರಂತರವಾಗಿ ಪ್ರತಿ ತಿಂಗಳು ಹಣ ಬರುತ್ತದೆ.

ಇದನ್ನೂ ಓದಿ: ಯುವಕ-ಯುವತಿಯರೇ ಗಮನಿಸಿ; BMTC ವತಿಯಿಂದ ಉಚಿತ ಡ್ರೈವಿಂಗ್ ತರಬೇತಿ..; ಇಲ್ಲಿ ನೋಡಿ ಸಂಪೂರ್ಣ ಮಾಹಿತಿ

ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಎಲ್ಲಾ ಆನ್ಲೈನ್ ಮಳಿಗೆಗಳಲ್ಲಿ ಸಿಗಲಿದೆ ಭಾರತ್ ಬ್ರಾಂಡ್ ಅಕ್ಕಿ.