ಮಹಿಳೆಯರು ಕಾತುರದಿಂದ ಕಾಯುತ್ತಿದ್ದ ಕಾಂಗ್ರೆಸ್ನ 4ನೇ ಗ್ಯಾರಂಟಿ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಗೆ ಮೈಸೂರಿನಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯ ಚಾಲನೆ ನೀಡಿದರು. ಚುನಾವಣೆಯ ಮುಂಚೆ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ಘೋಷಿಸಿತ್ತು. ಅದರಂತೆ ಕಾಂಗ್ರೆಸ್ ಪಕ್ಷ ಕೊಟ್ಟ ಮಾತನ್ನು ಈಡೇರಿಸಿದೆ. ಕಾರ್ಯಕ್ರಮದಲ್ಲಿ ಡಿಜಿಟಲ್ ಬಟನ್ ಒತ್ತುವ ಮೂಲಕ ಮನೆಯ ಯಜಮಾನಿಯ ಖಾತೆಗೆ ಹಣ ಸಂದಾನ ಆಗಿದೆ. ಪ್ರತಿ ತಿಂಗಳು 2 ಸಾವಿರ ಹಣ ಜಮೆ ಆಗಿದೆ. ಇದು ನಮ್ಮ ಹಾಗೂ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಭರವಸೆ. ನಾವು ಹೇಳಿದಂತೆ ರಾಜ್ಯದ ಹೆಣ್ಣು ಮಕ್ಕಳು ಉಚಿತವಾಗಿ ಶಕ್ತಿ ಯೋಜನೆ ಜಾರಿಯಾಗಿದೆ. ಮಹಿಳೆಯರೀಗ ಉಚಿತವಾಗಿ ಸಂಚರಿಸುತ್ತಿದ್ದಾರೆ. ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡಲಾಗುತ್ತಿದೆ.
ಗೃಹ ಜ್ಯೋತಿಯಡಿ 200 ಯುನಿಟ್ ವಿದ್ಯುತ್ ನೀಡಲಾಗುತ್ತಿದೆ. ಐದು ಗ್ಯಾರಂಟಿಗಳ ಪೈಕಿ 4 ಗ್ಯಾರಂಟಿಗಳು ಈ ಮೂಲಕ ಈಡೇರಿದ ಆಗೇ ಆಗಿದೆ. ಕೇವಲ ಮೈಸೂರು ಮಾತ್ರವಲ್ಲ ಇನ್ನು ಅದೇ ರೀತಿಯಾಗಿ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಸಚಿವರು ಮಹತ್ವಾಕಾಂಕ್ಷೆಯ ಯೋಜನೆಯನ್ನು ಉದ್ಘಾಟಿಸಿದ್ದಾರೆ. ಇನ್ನು ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಕೊಟ್ಟ ಭರವಸೆಯನ್ನ ಕಾಂಗ್ರೆಸ್ ಸರ್ಕಾರ ಈಡೇರಿಸಿದೆ. ಹಾಗಾದ್ರೆ ಎಲ್ಲ ಗೃಹ ಲಕ್ಷ್ಮೀಯರಿಗೂ ಯೋಜನೆಯ ಲಾಭ ಸಿಕ್ಕಿದ್ಯಾ ಅರ್ಜಿ ಹಾಕಿದ ಎಲ್ಲರ ಖಾತೆಗೂ ಹಣ ಬಂದಿದ್ಯ? ಹಣ ಬಂದಿಲ್ಲ ಅಂದ್ರೆ ಏನ್ ಮಾಡ್ಬೇಕು ನೋಡೋಣ
ಇದನ್ನೂ ಓದಿ: ಗೃಹಲಕ್ಷ್ಮೀ ಹಣ ಯಾವಾಗ ಬರುತ್ತೆ? ತಿಂಗಳಲ್ಲಿ ಯಾವ ದಿನ ಯಜಮಾನಿ ಖಾತೆಗೆ ಹಣ ಜಮೆ ಆಗುತ್ತೆ?
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಫಲನುಭಾವಿ ಖಾತೆಗೆ ಹಣ ಜಮೆ ಆಗಿಲ್ಲ ಅಂದ್ರೆ ಏನ್ ಅರ್ಥ?
ಇನ್ನು ಮೊದಲಿಗೆ ಹಣ ಬಂದಿದ್ಯ ಇಲ್ವಾ ಅಂತ ತಿಳಿದುಕೊಳ್ಳುವುದು ಹೇಗೆ ಅಂತ ನೋಡೋದಾದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಾಗ ನೀವು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅನ್ನು ನೀಡಿರುತ್ತೀರಿ, ಆದ್ದರಿಂದ ನಿಮ್ಮ ಫೋನಿಗೆ ಎಸ್ಎಂಎಸ್ ಬರುತ್ತದೆ. ಅದನ್ನು ನೀವು ಚೆಕ್ ಮಾಡಿ ನೋಡಿ. ಒಂದು ವೇಳೆ ಎಸ್ಎಂಎಸ್ ಬರದಿದ್ದಲ್ಲಿ, ಆನ್ಲೈನ್ ಬ್ಯಾಂಕಿಂಗ್ ಮೂಲಕ ನೀವು ಚೆಕ್ ಮಾಡಬಹುದು. ಆನ್ಲೈನ್ ಲಿ ಮೊಬೈಲ್ ಮೂಲಕ ನೋಡಬಹುದು ಇಲ್ಲವೇ ನೇರವಾಗಿ ಬ್ಯಾಂಕ್ ಲಿ ಹೋಗಿ ಪಾಸ್ ಬುಕ್ ಎಂಟ್ರಿ ಮಾಡಸಿ ನೋಡುದ್ರು ಗೊತ್ತಾಗುತ್ತೆ. ಇನ್ನು ಗೃಹಲಕ್ಷ್ಮಿ ಯೋಜನೆಯ ನೋಂದಣಿ ಸ್ಥಿತಿ ಪರಿಶೀಲನೆ ಮಾಡುವ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ 2 ಸಾವಿರ ನಂಬರ್ ಅನ್ನು ನೀಡಿರುತ್ತೀರಿ, ಆದ್ದರಿಂದ ನಿಮ್ಮ ಫೋನಿಗೆ ಎಸ್ಎಂಸ್ ರೂಪಾಯಿ ಜಮಾ ಆಗುವುದೇ ಎಂದು ಖಚಿತಪಡಿಸಿಕೊಳ್ಳಬಹುದು. ಇದ್ಯಾವುದು ಆಗಿಲ್ಲ ಅಂದ್ರೆ ಎಲ್ಲಾದರೂ ಅರ್ಜಿ ಸಲ್ಲಿಕೆ ತಪ್ಪಾಗಿದ್ದಲ್ಲಿ ಅಥವಾ ಇನ್ನೂ ಪ್ರಕ್ರಿಯೆ ಆಗದೆ ಇದ್ದರೆ ನಿಮ್ಮ ಖಾತೆಗೆ 2 ಸಾವಿರ ರೂಪಾಯಿ ಬರುವುದಿಲ್ಲ.
ಇನ್ನು 50 ಲಕ್ಷ ಜನರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗುವ ಪ್ರಕ್ರಿಯೆ ಪ್ರಾರಂಭವಾಗಿದೆ. ಡಿಜಿಟಲ್ ಬಟನ್ ಅನ್ನು ಒತ್ತುವುದರ ಮೂಲಕ ಚಾಲನೆಯನ್ನು ನೀಡಲಾಗಿದೆ. ಇದೇ ಸಮಯದಲ್ಲಿ ಎಲ್ಲಾ ಮಹಿಳೆಯರ ಖಾತೆಗೆ ಹಣವು ಜಮಾ ಆಗುತ್ತಿದೆ. ಹಣ ಜಮಾ ಆದ ತಕ್ಷಣ ನಿಮಗೊಂದು ಎಸ್ಎಂಎಸ್ ಬರುತ್ತದೆ. ಆ SMS ನಲ್ಲಿ ನಿಮಗೆ ಅಭಿನಂದನೆಗಳನ್ನು ತಿಳಿಸಲಾಗುತ್ತದೆ. ಮುಂದುವರೆದು, ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ ನಂಬರನ್ನು ಅನುಮೋದಿಸಲಾಗಿದೆ ಎಂದು ಮೆಸೇಜ್ ಬರುತ್ತದೆ.
ಇದ್ಯಾವುದು ಆಗಿಲ್ಲ ಅಂದ್ರೆ ಹಣ ಬರೋದು ತಡ ಆಗಬಹುದು. ಹೀಗಾಗಿ ಹಣ ಬಂದಿಲ್ಲ ಅನ್ನೋರು ರಿಜಿಸ್ಟರ್ ಆಗಿರೋ ಮೊಬೈಲ್ ನಂಬರ್ ಇಂದ 8147500500 ಈ ನಂಬರ್ ಗೆ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಮೇಸಜ್ ಮಾಡಬೇಕು. ಆಗ ಗೃಹಲಕ್ಷ್ಮಿ ಯೋಜನೆಯ ಸಂಖ್ಯೆಯ ಒಂದು ಮೆಸೇಜ್ ಬರುತ್ತೆ. ನಂತರ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮವನೇ ಮಾಡಲಾಗುವುದು ಅಂತ ಮತ್ತೊಂದು ಮೆಸೇಜ್ ಬರುತ್ತೆ. ಮೆಸೇಜ್ ಬಂದಿಲ್ಲ ಅಂದ್ರೆ ಒಂದು ವಾರದ ವರೆಗೆ ಕಾದು ನೋಡಿ… ಆಗಿಲ್ಲ ಹಣ ಬಂದಿಲ್ಲ ಅಂದ್ರೆ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿ ಏನಾದ್ರು ತಪ್ಪಿದ್ಯಾ ಅಂತ ಪರಿಶೀಲಿಸಿ ಅದಾದ ನಂತರ ಅರ್ಜಿ ಸಲ್ಲಿಸಿದ ಸ್ಥಳಕ್ಕೆ ಹೋಗಿ ಹೀಗೆ ಹಣ ಬಂದಿಲ ಅಂತ ಹೇಳುದ್ರೆ ಒಂದು ಫಾರ್ಮ್ ಕೊಡ್ತಾರೆ ಅದನ್ನು ಭರ್ತಿ ಮಾಡಿಕೊಟ್ಟು ಬಂದ್ರೆ ನಂತರದ ದಿನಗಳಲ್ಲಿ ನಿಮಗೆ ಹಣ ಬರುತ್ತೆ.
ಇದನ್ನೂ ಓದಿ: ಸ್ಯಾಂಡಲ್ ವುಡ್ ನಟ ನಟಿಯರ ರಕ್ಷ ಬಂಧನ ಹೇಗಿತ್ತು ನೋಡಿ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram