ಗೃಹಲಕ್ಷ್ಮೀ ಹಣ ಯಾವಾಗ ಬರುತ್ತೆ? ತಿಂಗಳಲ್ಲಿ ಯಾವ ದಿನ ಯಜಮಾನಿ ಖಾತೆಗೆ ಹಣ ಜಮೆ ಆಗುತ್ತೆ?

ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಬಹುನಿರೀಕ್ಷಿತ ಗೃಹಲಕ್ಷ್ಮೀ ಯೋಜನೆಗೆ ಆಗಸ್ಟ್ 30ರ ಬುಧವಾರ ಅಂದ್ರೆ ಇಂದು ಚಾಲನೆ ಸಿಕ್ಕಿದೆ. ಹೌದು ಏಕಕಾಲದಲ್ಲಿ ರಾಜ್ಯಾದ್ಯಂತ ಯೋಜನೆಗೆ ಚಾಲನೆ ದೊರೆಯತ್ತಿದ್ದು, ಪ್ರತಿಯೊಂದು ಜಿಲ್ಲೆ ತಾಲೂಕು ಹೋಬಳಿ ಮಟ್ಟದಲ್ಲೂ ಕೂಡ ಭಾಗ್ಯಲಕ್ಷ್ಮಿ ಯೋಜನೆಗೆ ಚಾಲನೆ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದೆ. ಹೌದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಆಗಸ್ಟ್ 27ಕ್ಕೆ ನೂರು ದಿನ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಅಂದ್ರೆ ಈ ವಾರದಲ್ಲೇ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಬೇಕು ಅಂತ ನಿರ್ಧರಿಸಿ ಈಗಾಗಲೇ ಎಲ್ಲೇ ಕಡೆ ಚಾಲನೆ ಕಾರ್ಯಕ್ರಮಗಳು ನಡೆದಿವೆ.

WhatsApp Group Join Now
Telegram Group Join Now

ಹೌದು ಸರ್ಕಾರದ ಪ್ರಕಾರ ಗೃಹಲಕ್ಷ್ಮಿ ಯೋಜನೆಗೆ ರಾಜ್ಯಾದ್ಯಂತ 1.28 ಕೋಟಿ ಫಲಾನುಭವಿಗಳಿದ್ದಾರೆ. ಈ ಪೈಕಿ ಈಗಾಗಲೇ 1.10 ಕೋಟಿಗೂ ಅಧಿಕ ಮಹಿಳೆಯರು ಯೋಜನೆಗೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆಗಸ್ಟ್ ತಿಂಗಳಿಂದಲೇ ಮನೆಯ ಯಜಮಾನಿಗೆ ಹಣ ಸಂದಾಯವಾಗಿದೆ. ಅಂದರೆ, ಆಗಸ್ಟ್ 30ರ ಇಂದು ಯೋಜನೆಗೆ ಚಾಲನೆ ನೀಡಿದ ಕೂಡಲೇ ಫಲಾನುಭವಿಗಳ ಖಾತೆಗೆ 2000 ರೂಪಾಯಿ ಹಣ ಸಂದಾಯವಾಗಿದೆ. ಹಾಗಾದ್ರೆ ಪ್ರತಿ ತಿಂಗಳ ಹಣ ಯಾವಾಗ ಬರುತ್ತೆ? ಎಷ್ಟನೇ ತಾರೀಖುನೊಂದು ಬರುತ್ತೆ ಅಂತ ನೋಡೋಣ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಹೌದು ಕರ್ನಾಟಕ ಸರ್ಕಾರವು ಇಂದು ಎಐಸಿಸಿ ಅಧ್ಯಕ್ಷ ಎಂ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ರಾಜ್ಯದ ಒಂದು ಕೋಟಿಗೂ ಹೆಚ್ಚು ಮಹಿಳೆಯರಿಗೆ ಮಾಸಿಕ 2,000 ರೂಪಾಯಿಗಳ ಆರ್ಥಿಕ ನೆರವು ನೀಡುವ ಯೋಜನೆಯನ್ನು ಪ್ರಾರಂಭಿಸಿದೆ. ಈ ಸಮಾರಂಭದಲ್ಲಿ ಸುಮಾರು ಒಂದು ಲಕ್ಷ ಜನರು ಸೇರಿದ್ದರು. ಇನ್ನು ಮಲ್ಲಿಕಾರ್ಜುನ ಖರ್ಗೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಯೋಜನೆಗೆ ಚಾಲನೆ ನೀಡಿದ್ದಾರೆ.

ಇನ್ನು ಈ ಕಾರ್ಯಕ್ರಮವನ್ನು ಮಹಾನಗರಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ್ ನ ವಾರ್ಡ್ ಮಟ್ಟದಲ್ಲಿ ಹಾಗೂ ಪ್ರತಿಯೊಂದು ಗ್ರಾಮ ಪಂಚಾಯತ್ ಮಟ್ಟದಲ್ಲಿ ಎಲ್.ಇ.ಡಿ ಅಥವಾ ಪ್ರೊಜೆಕ್ಟರ್ ಪರದೆಯ ಮೂಲಕ ಮಹಿಳೆಯರು ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಒಟ್ಟಿನಲ್ಲಿ ಸಾಕಷ್ಟು ಹರಸಾಹಸಗಳ ಮಧ್ಯೆ ಗೃಹಲಕ್ಷ್ಮೀ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಆದ್ರೆ ಈಗ ಎಲ್ಲ ಮಹಿಳೆಯರನ್ನ ಕಾಡುತ್ತಿರುವ ಪ್ರಶ್ನೆ ಏನಪ್ಪಾ ಅಂದ್ರೆ ಪ್ರತಿ ತಿಂಗಳು ಯಾವಾಗ ನಮ್ಮ ಖಾತೆಗೆ ಹಣ ಬರುತ್ತೆ? ಈ ತಿಂಗಳು 30ನೇ ತಾರೀಖು ಹಣ ಹಾಕಿದ್ದಾರಲ್ಲ ಪ್ರತಿ ತಿಂಗಳು ಇದೆ ತಾರೀಖುನಂದು ಹಣ ಬರುತ್ತಾ ಅಥವಾ ಬೇರೆ ದಿನ ಬರುತ್ತಾ? ಬೇರೆ ದಿನ ಅಂದ್ರೆ ಯಾವಾಗ? ಯಾವ ತಾರೀಖು ಬರುತ್ತೆ ಅನ್ನೋ ಗೊಂದಲ ಇದ್ದೆ ಇರುತ್ತೆ.

ಇದನ್ನೂ ಓದಿ: ಅಭಿಮಾನಿರ ಆಸೆ ಈಡೇರಿಸಿದ ದರ್ಶನ್, ಮನೆಗೆ ಕರೆಸಿ ಸನ್ಮಾನ ಮಾಡಿದ ಡಿಬಾಸ್

ಯಾವ ತಾರೀಖು ಗೃಹಲಕ್ಷ್ಮಿಯರಿಗೆ ಹಣ ಬರುತ್ತೆ?

ಈಗಾಗಲೇ ಯೋಜನೆಗೆ ಚಾಲನೆ ಸಿಕ್ಕಿರೋದ್ರಿಂದ ಎಲ್ಲ ಮನೆಯೊಡತಿಯಾರಿಗೂ ಖುಷಿ ಹೆಚ್ಚಾಗಿದೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತೇವೆ ಅಂತ ಹೇಳಿದ್ದ ಮಾತನ್ನ ಉಳಿಸಿಕೊಂಡಿದೆ. ಹೌದು ಪ್ರತಿ ತಿಂಗಳು 2ಸಾವಿರ ಹಾಕುವ ಮೂಲಕ ಇದೀಗ ಮಹಿಳೆಯರ ನಂಬಿಕೆ ಉಳಿಸಿಕೊಂಡಿದೆ. ಇನ್ನು ಇದೀಗ ಮಹಿಳೆಯರಿಗೆ ಖುಷಿಯ ನಡುವೆ ಗೊಂದಲ ಸೃಷ್ಟಿಯಾಗಿದೆ. ಪ್ರತಿ ತಿಂಗಳು ಯಾವ ತಾರೀಖಿನಿಂದ ಹಣ ಬರುತ್ತೆ? ಅಂತ ಈಗ ಮಹಿಳೆಯರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಅಲ್ದೇ ಈ ದಿನ ಅಥವಾ ಈ ತಾರೀಖು ಬಂದ್ರೆ ಚೆನ್ನಾಗಿರುತ್ತೆ ಅನ್ನೋ ಲೆಕ್ಕಾಚಾರದಲ್ಲೂ ಕೂಡ ಮಹಿಳೆಯರು ಇದ್ದಾರೆ.

ಹೌದು ಸದ್ಯ ಈ ಗೊಂದಲಕ್ಕೂ ಇದೀಗ ಉತ್ತರ ಸಿಕ್ಕಿದ್ದು ಪ್ರತಿ ತಿಂಗಳು 5 ಅಥವಾ 6 ನೆ ತಾರೀಖಿನೊಂದು ಮನೆಯೊಡತಿಯ ಖಾತೆಗೆ ಹಣ ಜಮೆ ಆಗುತ್ತೆ ಅಂತ ಹೇಳಲಾಗ್ತಿದೆ. ಅಂದ್ರೆ ಪ್ರತಿ ತಿಂಗಳು ಕೆಲ್ಸಕ್ಕೆ ಹೋಗುವ ಉದ್ಯೋಗಸ್ಥರಿಗೆ ಹೇಗೆ ಸಂಬಳ ಬರುತ್ತೋ ಆಗೇ ಮನೆಯೊಡತಿಯ ಖಾತೆಗೆ ಪ್ರತಿ ತಿಂಗಳು 5ಅಥವಾ 6ನೆ ತಾರೀಖು ಹಣ ಬಂದು ಜಮೆ ಆಗುತ್ತೆ. ಹಾಗಾದ್ರೆ ಆಗಸ್ಟ್ ತಿಂಗಳು 30ನೆ ತಾರೀಖು ಹಣ ಜಮೆ ಆಗಿದ್ಯಾ ಅಗಾದ್ರೆ ಸೆಪ್ಟೆಂಬರ್ ತಿಂಗಳು 5ಅಥವಾ 6ನೆ ತಾರೀಖು ಮತ್ತೆ 2ಸಾವಿರ ಹಣ ಹಾಕ್ತಾರಾ ಅಂದ್ರೆ ಇದು ಕನ್ಫರ್ಮ್ ಇಲ್ಲ.. ಸಾಧ್ಯವಾಗೋದು ಕೂಡ ಡೌಟ್. ಅಕ್ಟೋಬರ್ ತಿಂಗಳಿನಿಂದ ಪ್ರತಿ ತಿಂಗಳು 5ಅಥವಾ 6ನೇ ತಾರೀಖಿನೊಂದು ಹಣ ಬರೋದು ಕನ್ಫರ್ಮ್ ಅಂತ ಹೇಳಲಾಗ್ತಿದೆ.

ಇದನ್ನೂ ಓದಿ: ತಾಳಿ ಕಟ್ಟುವಾಗ ಮದುವೆ ಇಷ್ಟ ಇಲ್ಲ ಎಂದ ಯುವತಿ! ಅಷ್ಟಕ್ಕೂ ಆಗಿದ್ದೇನು? ಮದುವೆ ನಿಲ್ಲಲ್ಲು ಕಾರಣ ಏನ್ ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram