ಗೃಹಲಕ್ಷ್ಮೀ ಯೋಜನೆಯ ಸಮಸ್ಯೆ ಕಗ್ಗಂಟಾಗಿ ಹೋಯ್ತಾ? ಯಾವಾಗ ಬರುತ್ತೆ ಹಣ ಅನ್ನೋರಿಗೆ ಲಕ್ಷ್ಮೀ ಹೆಬಾಳ್ಕರ್ ಹೇಳಿದ್ದೇನು ಗೊತ್ತಾ?

ಸ್ನೇಹಿತರೆ ಗೃಹಲಕ್ಷ್ಮಿ ಹಣ ಕೈ ಸೇರುತ್ತೆ ಅಂತ ಎಷ್ಟು ಉತ್ಸಾಹದಿಂದ ಗೃಹಿಣಿಯರು ಹೋಗಿ ಅರ್ಜಿ ಸಲ್ಲಿಸಿದ್ದರು, ಈಗ ಆ ಉತ್ಸಾಹ ಎಲ್ಲರಲ್ಲಿಯೂ ಕಾಣುತ್ತಿಲ್ಲ ಇದಕ್ಕೆ ಮುಖ್ಯವಾದ ಕಾರಣ ಗೃಹಲಕ್ಷ್ಮಿ ಯೋಜನೆ ಆರಂಭವಾಗಿ ಎರಡು ತಿಂಗಳು ಕಳೆದರೂ ಕೂಡ ಸಾಕಷ್ಟು ಜನರ ಖಾತೆಗೆ ಎರಡು ಸಾವಿರ ರೂಪಾಯಿಗಳ ವರ್ಗಾವಣೆ ಆಗಿಲ್ಲ. ಗೃಹಲಕ್ಷ್ಮಿ ಯೋಜನೆಯಡಿ, ಕರ್ನಾಟಕವು ಮಾಸಿಕ 2000ರೂಪಾಯಿ ತಮ್ಮ ಪಡಿತರ ಚೀಟಿಯಲ್ಲಿ ಪಟ್ಟಿ ಮಾಡಲಾದ ನೋಂದಾಯಿತ ಗೃಹಿಣಿಯರಿಗೆ 2000 ರೂ. ಮೊದಲ ಕಂತು ಸಿಗದವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮೊದಲ ಮತ್ತು ಎರಡನೇ ಕಂತುಗಳನ್ನು ಒಟ್ಟಿಗೆ ನೀಡುವುದಾಗಿ ಭರವಸೆ ನೀಡಿದ್ದು, ಒಟ್ಟು ರೂ. 4,000 ಖಾತೆಗೆ ಜಮೆ ಮಾಡುತ್ತೇವೆ ಅಂತ ಹೇಳಿದ್ರು, ಇದಲ್ಲದೆ, ಗೃಹಲಕ್ಷ್ಮಿ ಯೋಜನೆಗೆ(Gruhalakshmi Scheme) ಅರ್ಜಿ ಸಲ್ಲಿಸಲು ಇನ್ನೂ ಅವಕಾಶವಿದೆ. ಅರ್ಜಿದಾರರು ತಮ್ಮ ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ವಿವರಗಳು ಸರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು ಅಂತ ಹೇಳಿದ್ರು.

WhatsApp Group Join Now
Telegram Group Join Now

ಅಲ್ದೇ ಗೃಹಲಕ್ಷ್ಮಿ ಯೋಜನೆಗೆ(Gruhalakshmi Scheme) ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಅಂತಿಮಗೊಳಿಸಲಾಗಿಲ್ಲ.1.20 ಕೋಟಿ ಗೃಹಿಣಿಯರು ಅರ್ಜಿ ಸಲ್ಲಿಸಿದ್ದು ಈಗಾಗಲೇ 63 ಲಕ್ಷ ಗೃಹಿಣಿಯರ ಖಾತೆಗೆ ಹಣ ಹೋಗಿದೆ ಇನ್ನೂ ಶೇಕಡ 45ರಷ್ಟು ಅರ್ಜಿಗಳಿಗೆ ಹಣ ಬರಬೇಕಿದೆ. ಮುಂದಿನ ತಿಂಗಳಿನಿಂದ ಯಾವ ಸಮಸ್ಯೆಯೂ ಇರುವುದಿಲ್ಲ. ಮುಂದಿನ ತಿಂಗಳಿನಿಂದ ಪ್ರತಿ ತಿಂಗಳ ಹಣ 15ನೇ ತಾರೀಖಿನ ಒಳಗೆ ಖಾತೆಗೆ ನೇರವಾಗಿ ವರ್ಗಾವಣೆ ಆಗುತ್ತದೆ ಎಂದಿದ್ದರು ಅದ್ರೆ ಈ ತಿಂಗಳು ಮುಗಿಯುತ್ತ ಬಂದ್ರು ಕೂಡ ಇನ್ನು ಫಲನುಭವಿಗಳ ಖಾತೆಗೆ ಎರಡನೇ ಕಂತಿರಲಿ ಮೊದಲ್ನೇ ಕಂತಿನ ಹಣವೇ ಇನ್ನು 80ಲಕ್ಷ ಫಲನುಭವಿಗಳಿಗೆ ಸಿಕ್ಕಿಲ್ಲ. ಈ ವಿಚಾರವಾಗಿ ಲಕ್ಷ್ಮೀ ಹೆಬಾಳ್ಕರ್ ಮಾಧ್ಯಮದವರ ಜೊತೆ ಮಾತನಾಡಿದ್ದು ಕೆಲ ವಿಚಾರಗಳನ್ನ ಹಂಚಿಕೊಂಡಿದ್ದಾರೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಮೊದಲ ಕಂತು ಬರೆದೆ ಇರೋರಿಗೆ ಹಣ ಬರೋದೇ ಇಲ್ವಾ?

ಹೌದು ಈಗಾಗ್ಲೇ 1.20 ಕೋಟಿ ಗೃಹಿಣಿಯರು ಅರ್ಜಿ ಸಲ್ಲಿಸಿದ್ದು ಈಗಾಗಲೇ 63 ಲಕ್ಷ ಗೃಹಿಣಿಯರ ಖಾತೆಗೆ ಹಣ ಹೋಗಿದೆ ಇನ್ನೂ ಶೇಕಡ 45ರಷ್ಟು ಅರ್ಜಿ ಸಲ್ಲಿಸಿರುವ ಫಲನುಭವಿಗಳ ಖಾತೆಗೆ ಹಣ ಬರಬೇಕಿದೆ. ಮುಂದಿನ ತಿಂಗಳಿನಿಂದ ಯಾವ ಸಮಸ್ಯೆಯೂ ಇರುವುದಿಲ್ಲ. ಮುಂದಿನ ತಿಂಗಳಿನಿಂದ ಪ್ರತಿ ತಿಂಗಳ ಹಣ 15ನೇ ತಾರೀಖಿನ ಒಳಗೆ ಖಾತೆಗೆ ನೇರವಾಗಿ ವರ್ಗಾವಣೆ ಆಗುತ್ತದೆ ಎಂದಿದ್ದರು ಅದ್ರೆ ಹಣ ವರ್ಗಾವಣೆ ಇದುವರೆಗೂ ಆಗಿಲ್ಲ ಹೀಗಾಗಿ ಮಾಧ್ಯಮದವರು ಈ ಬಗ್ಗೆ ಪ್ರಶ್ನೆ ಮಾಡಿದ್ದು ಆಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬಾಳ್ಕರ್ ಮಾತನಾಡಿದ್ದು ಹೌದು ನಮ್ಮ ಇಲಾಖೆಯಿಂದ ಎಲ್ಲರಿಗೂ ಹಣವನ್ನ ಈಗಾಗ್ಲೇ ಹಾಕಿದ್ದೇವೆ ಆದರೆ ಬ್ಯಾಂಕ್ ನಲ್ಲಿ ತಾಂತ್ರಿಕ ಸಮಸ್ಯೆ ಆಗಿದೆ. ಹಣ ವರ್ಗಾವಣೆಯಲ್ಲಿ ತೊಂದ್ರೆಯಿಂದಾಗಿ ಕೆಲವೊಂದಷ್ಟು ಜನರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ. ಅಲ್ದೇ ಆಧಾರ್ ಕಾರ್ಡ್ ಸಮಸ್ಯೆ, ಬ್ಯಾಂಕ್ ಖಾತೆ ಸಮಸ್ಯೆ, ನೋಂದಣಿಯಲ್ಲಿ ಸಮಸ್ಯೆಗಳು ಹೆಸರುಗಳನ್ನೂ ಮುದ್ರಣದಲ್ಲಿ ಆಗಿರೋ ಸಮಸ್ಯೆಗಳು ಸಾಕಷ್ಟಗಿದ್ದು ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಯುತ್ತೆ ಎಂದಿದ್ದಾರೆ.

ಹೌದು ತಾಂತ್ರಿಕ ಕಾರಣದಿಂದ ಸುಮಾರು 25 ಸಾವಿರ ಗೃಹಿಣಿಯರಿಗೆ ಹಣ ವರ್ಗಾವಣೆ ಆಗಿಲ್ಲ. ರಾಜ್ಯದ 1.28 ಕೋಟಿ ಗೃಹಿಣಿಯರಲ್ಲಿ 1.20 ಕೋಟಿ ಅರ್ಜಿಗಳು ಮಾತ್ರ ಸಂದಾಯವಾಗಿವೆ. ಅವುಗಳಲ್ಲಿ 8 ಲಕ್ಷ ಜನರಿಗೆ ಹಣ ಬರುವುದು ಬಾಕಿ ಇದೆ. ಇವರಿಗೆ ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲವೋ ಅವರಿಗೆ ಯೋಜನೆಯ ಬಗ್ಗೆ ಅರ್ಥ ಮಾಡಿಸಲು ಹಾಗೂ ಈವರೆಗೆ ಯಾರಿಗೆ ಹಣ ಬಂದಿಲ್ಲವೋ ಅವರ ಖಾತೆಯಲ್ಲಿ ಏನು ಸಮಸ್ಯೆ ಇದೆ ಎಂಬುದನ್ನು ತಿಳಿದುಕೊಳ್ಳಲು ಸ್ಥಳೀಯ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರ ಸಹಾಯವನ್ನು ಪಡೆದುಕೊಳ್ಳಲಾಗುತ್ತದೆ. ಅವರನ್ನು ಮನೆ ಮನೆಗೆ ಕಳುಹಿಸಿ ಮಾಹಿತಿಯನ್ನು ಪಡೆದುಕೊಂಡು ಯಾರ ಖಾತೆಯಲ್ಲಿ ಸಮಸ್ಯೆ ಇದ್ದರೂ ಅವುಗಳನ್ನು ಪರಿಹರಿಸಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ, ಜೊತೆಗೆ ಸಹಾಯವಾಣಿ ಕರೆ ಸಂಖ್ಯೆಯನ್ನು ಕೂಡ ಕೊಡಲಾಗುತ್ತದೆ.

ಹಾಗಾಗಿ ಅದರ ಮೂಲಕ ಯಾವುದೇ ಮಾಹಿತಿ ಬೇಕಿದ್ದರೂ ತಿಳಿದುಕೊಳ್ಳಬಹುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಅಲ್ದೇ ಆಗಸ್ಟ್ 15ರ ಒಳಗೆ ಅರ್ಜಿ ಸಲ್ಲಿಸಿರುವವರಿಗೆ ಮಾತ್ರ 2ತಿಂಗಳ ಹಣ ಬರುತ್ತೆ ಅದರ ನಂತರ ಅರ್ಜಿ ಸಲ್ಲಿಸಿರುವವರಿಗೆ ಒಂದು ತಿಂಗಳ ಹಣ ಮಾತ್ರ ಬರುತ್ತೆ. ಸಮಸ್ಯೆಗಳನ್ನ ಬಗೆಹರಿಸುತ್ತೇವೆ ಯಾವುದೇ ಕಾರಣಕ್ಕೂ ಹಣ ನೀಡದೆ ಇರೋದಿಲಕ, ಯಾಕಂದ್ರೆ ಈಗಾಗಲೇ ನಾವು ಆರ್.ಬಿ.ಐ ನವರಿಗೆ ಹಣ ಹಾಕಿದ್ದೇವೆ. ಆದ್ರೆ ಸಮಸ್ಯೆಗಳಿರೋದ್ರಿಂದ 8ಲಕ್ಷ ಫಲಾನುಭವಿಗಳಿಗೆ ಹಣ ಸಂದಾಯವಾಗಿಲ್ಲ… ಅದ್ರೆ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯುತ್ತೆ ಎಂದಿದ್ದಾರೆ.

ಇದನ್ನೂ ಓದಿ: ನೋವಿನಿಂದ ಹೊರಬಂದ ವರ್ಷ ಕಾವೇರಿ; ಅಭಿಮಾನಿಗಳು ಕೇಳಿದ ಪ್ರಶ್ನೆ ವರ್ಷ ಕಾವೇರಿ ಕೊಟ್ಟ ಉತ್ತರವೇನು?

ಇದನ್ನೂ ಓದಿ: ತಮಿಳು ನಟನಿಗೆ ಕ್ಷಮೆಯಾಚಿಸಿದ ಪ್ರಕಾಶ್ ರಾಜ್; ಕನ್ನಡಿಗರ ಪರವಾಗಿ ಕ್ಷಮೆ ಕೇಳುತ್ತೀನಿ ಅಂದ ಪ್ರಕಾಶ್ ರಾಜ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram