ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ವಾ.? ಹಾಗಾದ್ರೆ ಯಾಕೆ ಬಂದಿಲ್ಲ ನಿಮ್ಮ ಖಾತೆಗೆ ಅನ್ನೊದು ತಿಳಿದುಕೊಳ್ಳಬೇಕು. ಯೋಜನೆಯ ಹಣ ಬಂದಿಲ್ಲ ಅಂತ ಮಹಿಳೆಯರು ಟೆನ್ಶನ್ ಆಗೋ ಅಗತ್ಯ ಇಲ್ಲ. ಹಣ ಯಾಕೆ ಬಂದಿಲ್ಲ ಅನ್ನೋದು ಒಂದು ಸಲ ಈ ಸುದ್ದಿಯನ್ನು ನೋಡಿ. ಹೌದು ರಾಜ್ಯ ಸರ್ಕಾರದ 5ಗ್ಯಾರಂಟಿಗಳಲ್ಲಿ ಬಹಳ ಸದ್ದು ಮಾಡಿದ ಯೋಜನೆ ಅಂದ್ರೆ ಅದು ಗೃಹಲಕ್ಷ್ಮೀ ಯೋಜನೆ. ಮನೆಯ ಯಜಮಾನಿ ಮಹಿಳೆ ಖಾತೆಗೆ ಪ್ರತಿ ತಿಂಗಳು 2ಸಾವಿರ ರೂಪಾಯಿ ಜಮಾ ಮಾಡುವ ಯೋಜನೆ ಬಹಳ ಸದ್ದು ಮಾಡಿತ್ತು. ಕೊನೆಗೂ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಕ್ಕಿದ್ದು, ಮಹಿಳೆಯರಂತು ಫುಲ್ ಖುಷ್ ಆಗಿದ್ದಾರೆ. ಹೌದು ಮಹಿಳೆಯರಿಗೆ 2000 ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಗೆ ಮೈಸೂರಿನಲ್ಲಿ ಅಧಿಕೃತ ಚಾಲನೆ ಸಿಕ್ಕಿದೆ.
ಇನ್ನು ಈಗಾಗಲೇ ಕೆಲವೊಂದಷ್ಟು ಮಹಿಳೆಯರ ಖಾತೆಗೆ 2000 ರೂಪಾಯಿ ಹಣ ಜಮಾ ಆಗಿದೆ. ಆದ್ರೆ ಇನ್ನು ಕೆಲವರ ಖಾತೆಗೆ ಜಮಾ ಪ್ರಕ್ರಿಯೆ ನಡೆಯುತ್ತಿದೆ. ಅಲ್ದೇ ಸೆಪ್ಟೆಂಬರ್ 5 ರೊಳಗೆ ಎಲ್ಲಾ ಯಜಮಾನಿಯರ ಖಾತೆಗೆ ಹಣ ಜಮಾ ಆಗಬಹುದು ಅಂತ ಹೇಳಲಾಗುತ್ತು ಆದ್ರೆ ಸೆಪ್ಟೆಂಬರ್ 5 ಕಳೆದ್ರು ಇನ್ನು ಹಣ ಬಂದಿಲ್ಲ ಅಂತ ಗೃಹಲಕ್ಷ್ಮೀಯರು ಟೆನ್ಶನ್ ಆಗಿದ್ದಾರೆ. ಆದ್ರೆ ಚಿಂತಿಸುವ ಅಗತ್ಯ ಇಲ್ಲ ಯೋಜನೆಯ ಹಣ ಜಮಾವನೆ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮೀ ಹೆಬಾಳ್ಕರ್ ಇದೀಗ ಸ್ಪಷ್ಟನೆ ನೀಡಿದ್ದು ಈ ದಿನ ಹಣ ಬರೋದು ಪಕ್ಕ ಅಂತೇ.
ಇದನ್ನೂ ಓದಿ: ಈ ತಾಲ್ಲೂಕಿನ ಜನರಿಗೆ ಉಚಿತ ಅಕ್ಕಿ ಹಣ ಸಿಗೋದಿಲ್ಲ; ಈ ತಿಂಗಳಿಂದಲೇ ಇದು ಜಾರಿ!ಕಾರಣ ಏನ್ ಗೊತ್ತಾ?
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಅಂಗನವಾಡಿ ಕಾರ್ಯಕರ್ತೆಯರು ನೀವಿದ್ದಲಿಗೆ ಬಂದು ಸಮಸ್ಯೆ ಸರಿಪಡಿಸುತ್ತಾರೆ
ಇನ್ನೂ ನಮಗೆ ಹಣ ಬಂದಿಲ್ಲ ಅಂತ ಬೇಸರ ಮಾಡಿಕೊಂಡಿರುವವರು, 2000 ರೂಪಾಯಿ ಹಣ ಬರದೇ ಇರುವವರು ಆತಂಕ ಪಡುವ ಅಗತ್ಯವಿಲ್ಲ. ಯಾಕಂದ್ರೆ ಒಂದೇ ಬಾರಿಗೆ ಕೋಟ್ಯಾಂತರ ಮಹಿಳೆಯರಿಗೆ ಹಣ ಕಳುಹಿಸುತ್ತಿರುವುದರಿಂದ ಹಣ ಜಮಾ ಆಗಿರುವುದಿಲ್ಲ ಅಥವಾ ಇನ್ಯಾವುದೋ ತಾಂತ್ರಿಕ ತೊಂದರೆ ಕಾರಣ SMS ಬಂದಿರುವುದಿಲ್ಲ. ಅಲ್ದೇ ಕೆಲವೊಂದು ಮಾಹಿತಿ ಪ್ರಕಾರ ಈ ಯೋಜನೆಗೆ ನೋಂದಾಯಿಸಿಕೊಂಡಿದ್ದರೂ ಹಲವಾರು ಮಂದಿ ಈ ಯೋಜನೆಯಿಂದ ವಂಚಿತರಾಗುವ ಸಾಧ್ಯತೆ ಇದೆ.
ಹಾಗಾಗಿ ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ರಾಜ್ಯ ಸರ್ಕಾರ ಎಲ್ಲಾ ಮಹಿಳೆಯರ ಖಾತೆಗೆ ಹಣ ಜಮಾವಣಿಯನ್ನು ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು ಕೂಡ ಕೆಲವೊಂದು ತಾಂತ್ರಿಕ ತೊಂದರೆಯಿಂದಾಗಿ ಕೆಲವೊಂದಷ್ಟು ಜನ ಮಹಿಳೆಯರ ಖಾತೆಗೆ ಹಣ ಬಂದಿಲ್ಲ ಹೀಗಿರುವಾಗ ಅಂಗನವಾಡಿಯ ಕಾರ್ಯಕರ್ತರು ಎಲ್ಲಾ ಹಳ್ಳಿಗಳಲ್ಲಿ ಗ್ರಹಲಕ್ಷ್ಮಿಯರ ಮನೆಗಳಿಗೆ ಸ್ವತಹ ಅವರೇ ತೆರಳಿ ಮಾಹಿತಿಯನ್ನು ಪಡೆದುಕೊಂಡು ಯಾರಿಗೆ 2,000 ಹಣ ಬಂದಿಲ್ವೋ ಅಂತವರ ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡನ್ನು ಪರಿಶೀಲನೆ ನಡೆಸಿ ಹಣ ಯಾಕೆ ಬಂದಿಲ್ಲ ಅನ್ನೋದನ್ನ ಖುದ್ದಾಗಿ ಅವರೇ ಹೋಗಿ ತಿಳಿದುಕೊಂಡು ಬಂದು ನಂತರ ಹಣವನ್ನ ಜಮಾವಣೆ ಮಾಡುವುದಾಗಿ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆಯನ್ನು ನೀಡಿದ್ದಾರೆ.
ಹೌದು ಗೃಹಲಕ್ಷ್ಮಿ ಯೋಜನೆಗೆ ಎಲ್ಲಾ ನೋಂದಾಯಿಸಿಕೊಂಡಿರ್ತಕ್ಕಂತ ಗೃಹಲಕ್ಷ್ಮಿಯರಿಗೂ ಕೂಡ ಹಣವನ್ನು ನೀಡಲಿಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು ಈಗಾಗಲೇ ಸಾಕಷ್ಟು ಜನ ಮಹಿಳೆಯರ ಖಾತೆಗೆ ಹಣ ಜಮಾವಣಿಯಾಗಿದೆ ಕೆಲವೊಂದಷ್ಟು ಕಾರಣಗಳ ಜೊತೆಗೆ ತಾಂತ್ರಿಕ ದೋಷಗಳಿಂದ ಇನ್ನೊಂದಷ್ಟು ಜನ ಮಹಿಳೆಯರಿಗೆ ಹಣ ವರ್ಗಾವಣೆಯಾಗಿಲ್ಲ ಹೀಗಾಗಿ ಅಂಗನವಾಡಿ ಕಾರ್ಯಕರ್ತರು ಇದಲ್ಲವನ್ನ ಪರಿಶೀಲನೆ ನಡೆಸಿ ಇದೇ ಶನಿವಾರದ ಒಳಗಾಗಿ ಎಲ್ಲ ದಾಖಲಾತಿಗಳನ್ನು ಸರಿಪಡಿಸಿ ಉಳಿದಿರ್ತಕ್ಕಂತ ಮಹಿಳೆಯರ ಖಾತೆಗೆ 2000 ಹಣವನ್ನ ವರ್ಗಾವಣೆ ಮಾಡುತ್ತೇವೆ ಅಂತ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಧ್ಯಮದವರಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಹೌದು ಎಲ್ಲವೂ ಕೂಡ ಅಂದುಕೊಂಡಂತೆ ಆದರೆ ಎಲ್ಲಾ ಪ್ರೋಸೆಸ್ ಬೇಗ ಮುಗಿದರೆ ಇದೇ ಶನಿವಾರದ ಒಳಗಾಗಿ ಉಳಿದಿರ್ತಕ್ಕಂತ ಅಂದ್ರೆ ಹಣ ಯಾವ ಮಹಿಳೆಯರಿಗೆ ಬಂದಿಲ್ವೋ ಅಂತ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾವಣಿ ಆಗೋದು ಪಕ್ಕ ಅಂತ ಇದೀಗ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದು ಮಹಿಳೆಯರು ಚಿಂತೆ ಪಡುವ ಅಗತ್ಯ ಇಲ್ಲ ನಿಮಗೂ ಕೂಡ 2000 ಹಣ ಗೃಹಲಕ್ಷ್ಮಿ ಯೋಜನೆಯ ಮೂಲಕ ನಿಮ್ಮ ಬ್ಯಾಂಕ್ ಖಾತೆಯನ್ನು ಸೇರುತ್ತೆ ಹಾಗಾಗಿ ಶನಿವಾರದವರೆಗೂ ಕೂಡ ನೀವು ಕಾಯ್ಬಹುದು.
ಇದನ್ನೂ ಓದಿ: ಆಭರಣ ಪ್ರಿಯರಿಗೆ ಕಹಿ ಸುದ್ದಿ! ಏರಿಕೆ ಕಂಡ ಚಿನ್ನದ ಬೆಲೆ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram