ಗೃಹಲಕ್ಷ್ಮೀ ಹಣ ಬಂದಿಲ್ಲ ಅಂದ್ರೆ, ಹಣ ಯಾವಾಗ ಬರುತ್ತೆ? ಹಣ ಜಮಾವಣೆ ಬಗ್ಗೆ ಲಕ್ಷ್ಮೀ ಹೆಬಾಳ್ಕರ್ ಅವ್ರು ಹೇಳಿದ್ದೇನು?

ಕರ್ನಾಟಕ ರಾಜ್ಯದಂತ ಲಕ್ಷಾಂತರ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಅದರಲ್ಲಿ ಕೆಲವರಿಗೆ ಮಾತ್ರ ಹಣ ಬಂದಿದೆ ಆದರೆ ಇನ್ನು ಕೆಲವರಿಗೆ ಹಣ ಬಂದಿಲ್ಲ ಯಾಕೆ ಬಂದಿಲ್ಲ? ಏನು ತೊಂದರೆ? ಅಂತ ಇದೀಗ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದೆ. ಅಕ್ಕ ಪಕ್ಕದ ಮನೆಯಲ್ಲಿಯೇ ಒಬ್ಬರಿಗೆ ಹಣ ಬಂದಿದ್ರೆ ಮತ್ತೊಬ್ಬರಿಗೆ ಬಂದಿರೋದಿಲ್ಲ ಇದೆಲ್ಲಾ ನೋಡಿ ಹಣ ಬಾರದೆ ಇರೋರಿಗೆ ಒಂದು ರೀತಿಯ ಪಿಕಲಾಟ ಅಂತ ಹೇಳಬಹುದು. ಇನ್ನು ಹಣ ಬರದೇ ಇರೋದಕ್ಕೆ ಹಲವಾರು ಕಾರಣಗಳು ಇರತ್ತೆ. ನಿಮ್ಮ ಅರ್ಜಿ ಸಂಪೂರ್ಣವಾಗಿ ಸಲ್ಲಿಸಿರುವುದಿಲ್ಲ. ಇಲ್ಲ ಅಂದ್ರೆ ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರಲಿಲ್ಲ ಅಂದ್ರು ಹಣ ಬಂದಿರಲ್ಲ. ಆದ್ರೆ ಇದೆಲ್ಲವನ್ನು ಮೀರಿ ಇದೀಗ ಗೃಹಲಕ್ಷ್ಮೀ ಅದರಲ್ಲಿ ಯಾರಿಗೆ ಇನ್ನು ಮೊದಲ ಕಂತಿನ ಹಣ ಬಂದಿಲ್ವೋ ಅಂತವರಿಗೆ ಇದು ಭರ್ಜರಿ ಗುಡ್ ನ್ಯೂಸ್..

WhatsApp Group Join Now
Telegram Group Join Now

ಹೌದು ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಎರಡು ಸಾವಿರ ಹಣ ಎಲ್ಲರಿಗೂ ಬಂದು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಜಮಾ ಆಗುತ್ತೆ ಯಾರಿಗೂ ಕೂಡ ತಪ್ಪುವುದಿಲ್ಲ ಅನ್ನೋ ಈ ಮಾತನ್ನ ನಾನು ಹೇಳುತ್ತಿಲ್ಲ ಖುದ್ದಾಗಿ ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ. ಹಾಗಾದ್ರೆ ಯಾವಾಗ ಬರುತ್ತೆ, ಸಮಸ್ಯೆಗಳನ್ನ ಬಗೆಹರಿಸೋದು ಹೇಗೆ ನೋಡೋಣ ಬನ್ನಿ.

ಹೌದು ರಾಜ್ಯದಲ್ಲಿ ಸುಮಾರು 1.20 ಕೋಟಿ ಅರ್ಜಿಗಳಲ್ಲಿ ಸ್ವೀಕಾರ ಮಾಡಿದೆಯಾದರೂ 63 ಲಕ್ಷ ಮನೆಯೊಡತಿಯರ ಖಾತೆಗೆ ಮಾತ್ರ ಹಣ(amount) ಜಮೆ ಮಾಡಲಾಗಿದೆ. ಉಳಿದ ಮಹಿಳೆಯರ ಖಾತೆಗೆ ಹಣ ಜಮೆ ಮಾಡುವ ಕಾರ್ಯ ಈವರೆಗೂ ನಡೆಯುತ್ತಿದೆ. ಬಹಳ ಮುಖ್ಯವಾಗಿ ಬರೋಬ್ಬರಿ ಎರಡು ತಿಂಗಳಿಗೆ ನೀಡಬೇಕಾದ ಹಣವನ್ನು ಈಗಾಗಲೇ ಸರ್ಕಾರ ಬಿಡುಗಡೆ ಮಾಡಲಾಗಿದ್ದು, ಬ್ಯಾಂಕ್‌ನ ನಿಗಮಗಳಿಂದಾಗಿ ಇದು ತಡವಾಗುತ್ತಿದೆ. ಆದರೆ, ಇದು ಪ್ರತಿ ತಿಂಗಳು ಸಂಭವಿಸುವ ಸಮಸ್ಯೆ ಅಲ್ಲ. ಬದಲಾಗಿ ಮೊದಲ ಬಾರಿ ಮಾತ್ರ ಈ ಸಮಸ್ಯೆ ಉಂಟಾಗಲಿದೆ. ಉಳಿದ ತಿಂಗಳಿನಿಂದ ಎಲ್ಲಾ ಮಹಿಳೆಯರ ಖಾತೆಗೆ ಒಂದೇ ಬಾರಿಗೆ ಹಣ ಜಮೆ ಆಗಲಿದೆ.

ಜೊತೆಗೆ ತಾಂತ್ರಿಕ ಕಾರಣದಿಂದ 25 ಸಾವಿರ ಮನೆಯೊಡತಿಯರಿಗೆ ಹಣ ವರ್ಗಾವಣೆ ಮಾಡಲು ಸಾಧ್ಯವಾಗಿಲ್ಲ. ಉಳಿದಂತೆ ರೇಷನ್‌ ಕಾರ್ಡ್‌ನಲ್ಲಿ ಸಮಸ್ಯೆಗಳಿದ್ದರೆ ಅದನ್ನು ತಿದ್ದುಪಡಿ ಮಾಡಿಕೊಳ್ಳಲು ಸಹ ಸರ್ಕಾರ ಅನುಮತಿ ನೀಡಿದೆ. ಈ ಮೂಲಕ ಮನೆ ಯಜಮಾನಿ ಹೆಸರು ಮಹಿಳೆಯರದ್ದಾಗಿಲ್ಲದಿದ್ದರೆ ತಕ್ಷಣವೇ ಅದನ್ನು ಬದಲಾವಣೆ ಮಾಡಿ. ಈ ಮೂಲಕ ಗೃಹಲಕ್ಷ್ಮಿಯ ಹಣವನ್ನು ಪಡೆಯಲು ಅರ್ಜಿ ಸಲ್ಲಿಕೆ ಮಾಡಬೇಕು. ಅಲ್ದೇ ಬ್ಯಾಂಕ್ ಖಾತೆ ನಿಸ್ಕ್ರೀಯ ಆಗಿದ್ರು ಸಹ ಸಮಸ್ಯೆ ಉಂಟಾಗುತ್ತೆ ಅಂತ ಸಚಿವರೇ ಹೇಳಿದ್ದಾರೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಅರ್ಜಿ ಸಲ್ಲಿಸಿ ಹಣ ಖಾತೆಗೆ ಇನ್ನು ಬಂದಿಲ್ಲ ಅಂದ್ರೆ ಏನ್ ಮಾಡಬೇಕು

ಇನ್ನು ಈ ಎಲ್ಲಾ ಸಮಸ್ಯೆಗಳನ್ನು 15 ದಿನಗಳಲ್ಲಿ ಬಗೆಹರಿಸಿ ಎಲ್ಲಾ ಫಲಾನುಭವಿಗಳ ಖಾತೆಗಳಿಗೂ ಸಹ 2000 ಹಣವನ್ನು ಜಮಾ ಮಾಡೋದಾಗಿ ಲಕ್ಷ್ಮೀ ಹೆಬಾಳ್ಕರ್(Laxmi Hebbalkar) ತಿಳಿಸಿದ್ದಾರೆ. ಹೌದು ಇದು ಕಾಂಗ್ರೆಸ್ ಸರ್ಕಾರ ನೀಡಿರುವ ಭರವಸೆ ಹೀಗಾಗಿ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಹಣ ಜಮಾವಣೆಯಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಬಂದು ಸಮಸ್ಯೆಯನ್ನು ಬಗೆಹರಿಸಿ ಫಲಾನುಭವಿಗಳಿಗೆ ಹಣ ಸಿಗುವಂತೆ ಮಾಡುತ್ತಾರೆ. ಜೊತೆಗೆ ಹೊಸದಾಗಿ ಅರ್ಜಿ ಸಲ್ಲಿಸೋರಿಗೂ ಕೂಡ ಅವಕಾಶವನ್ನು ಮಾಡಿಕೊಡಲಾಗಿತ್ತು.

ಇದು ಕಾಂಗ್ರೆಸ್ ಸರ್ಕಾರದ ನಿರಂತರ ಯೋಜನೆಯಾಗಿರುತ್ತೆ ಯಾರು ಬೇಕಾದರೂ ಕೂಡ ಅರ್ಜಿಯನ್ನು ಸಲ್ಲಿಸಬಹುದು ಅವರು ಅರ್ಹರಾಗಿದ್ರೆ ಅಂತವರ ಖಾತೆಗೆ 2000 ಹಣವನ್ನು ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಮೂಲಕ ನಮ್ಮ ಸರ್ಕಾರದಿಂದ ನೀಡಲಾಗುತ್ತದೆ ಇದೊಂದು ನಿರಂತರವಾದ ಯೋಜನೆಯಾಗಿದೆ ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಹೀಗಾಗಿ ಯಾರು ಕೂಡ ಆತಂಕ ಪಡುವ ಅವಶ್ಯಕತೆ ಇಲ್ಲ. ಯಾರ್ಯಾರು ಅರ್ಜಿ ಸಲ್ಲಿಸಿ ಒಂದು ಸ್ಲಿಪ್ ಪಡೆದುಕೊಂಡಿರುತ್ತೀರೋ ಅವರ ಖಾತೆಗೂ ಕೂಡ 2000 ಹಣ ಪ್ರತಿ ತಿಂಗಳು ಕೂಡ ಬಂದು ಬೀಳ್ತದೆ ಅನ್ನೋದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೊಟ್ಟಿರತಕ್ಕಂತ ಭರವಸೆ ಅಂತಲೇ ಹೇಳಬಹುದು.

ಇದನ್ನೂ ಓದಿ: ಗಣೇಶ ಹಬ್ಬವನ್ನ ಯಾವ ಸಮಯದಲ್ಲಿ ಆಚರಿಸಬೇಕು; ಪಾಲಿಸಬೇಕಾದ ನಿಯಮಗಳೇನು? ಯಾವ ತಪ್ಪುಗಳನ್ನ ಮಾಡಬಾರದು?

ಇದನ್ನೂ ಓದಿ: ಹೆಂಡತಿ ಕಾಟಕ್ಕೆ ಮನನೊಂದು ಮೆಟ್ರೋ ಎಂಜಿನಿಯರ್ ಸೂಸೈಡ್; ಸಾವಿಗೂ ಮುನ್ನ ಪೊಲೀಸರಿಗೆ ಹೇಳಬೇಡಿ ಅಂದುದ್ಯಾಕೆ ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram