ಗೃಹಲಕ್ಷ್ಮಿಯರಿಗೆ ಶಾಕ್ ನೀಡಿದ ರಾಜ್ಯ ಸರ್ಕಾರ; ಇಂತವರಿಗೆ ಸಿಗಲ್ಲ 2ಸಾವಿರ! ಯೋಜನೆಯಿಂದ ಹೊರಗಿಡಲಿದೆ ಸರ್ಕಾರ

Gruhalakshmi Scheme: 5 ಗ್ಯಾರಂಟಿಗಳನ್ನು ಜನರ ಮುಂದಿಟ್ಟು ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಸರ್ಕಾರ ಅಂದುಕೊಂಡಂತೆ ಒಂದೊಂದೇ ಯೋಜನೆಗಳನ್ನ ಜಾರಿಗೆ ತರುತ್ತಿದೆ. ಹೌದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ಕೊಟ್ಟ ಭರವಸೆಗಳನ್ನ ಈಡೇರಿಸಲು ಮುಂದಾಗಿದೆ. ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆಯಡಿ(Gruhalakshmi Scheme) ಮಹಿಳೆಯರಿಗೆ 2 ಸಾವಿರ ರೂಪಾಯಿ ನೀಡುವ ಕಾರ್ಯಕ್ರಮಕ್ಕೆ ಸಿಎಂ ಅಸ್ತು ಎಂದಿದ್ದಾರೆ. ಬಹು ನಿರೀಕ್ಷಿತ ಗೃಹಲಕ್ಷ್ಮಿ ಯೋಜನೆಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಹೌದು ಸಿಎಂ ಸಿದ್ದರಾಮಯ್ಯ ನೇತೃತದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಂಡು, ಗೃಹಲಕ್ಷ್ಮಿ ಯೋಜನೆಯನ್ವಯ ಪ್ರತಿ ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರೂಪಾಯಿ ಜಮೆ ಮಾಡುತ್ತಿದ್ದಾರೆ. ಆದ್ರೆ ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಗೃಹಲಕ್ಷ್ಮೀ ಯೋಜನೆಯ ನೋಂದಣಿಯಾಗಿದ್ದವರ ಪೈಕಿ 10 ಲಕ್ಷ ಮಹಿಳೆಯರಿಗೆ ಹಣ ವರ್ಗಾವಣೆಯಾಗಿಲ್ಲ. ಈ ಬಗ್ಗೆ ಸರ್ಕಾರ ಹೆಚ್ಚಿನ ನಿಗಾವಹಿಸುತ್ತಿಲ್ಲ. ಇತ್ತ ಆಸೆ ತೋರಿಸಿ ಕೈಕೊಟ್ಟ ಸರ್ಕಾರದ ವಿರುದ್ಧ ಮಹಿಳೆಯರು ಬೇಸರಗೊಂಡಿದ್ದಾರೆ. ಆದರೂ ಇಲ್ಲ ಎಲ್ಲರಿಗೂ ಹಣವನ್ನ ನೀಡುತ್ತೇವೆ ತಡವಾದರೂ ಹಣವನ್ನ ಹಾಕಿಯೇ ತಿರುತ್ತೇವೆ ಅಂತ ಹೇಳ್ತಿದ್ದ ರಾಜ್ಯ ಸರ್ಕಾರ ಇದೀಗ ಗೃಹಲಕ್ಷ್ಮಿಯರಿಗೆ ಮತ್ತೊಂದು ಶಾಕ್ ನೀಡಿದೆ ಅಂತಲೇ ಹೇಳಬಹುದು.

WhatsApp Group Join Now
Telegram Group Join Now

ಹೌದು ಅರ್ಜಿ ಹಾಕಿದ ಎಲ್ಲರಿಗೂ ಯೋಜನೆಯ ಲಾಭ ಸಿಗಲಿದೆ ಅಂತ ಹೇಳ್ತಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಅದರಲ್ಲೂ ಕೆಲವೊಂದಷ್ಟು ಮಹಿಳೆಯರನ್ನ ಯೋಜನೆಯಿಂದ ಹೊರಗಿಡುವ ಪ್ಲಾನ್ ಮಾಡಿದೆ. ಹಾಗಾದ್ರೆ ಯಾರನ್ನ ಹೊರಗಿದಲಿದೆ ಯಾಕೆ ಅಂತ ನೋಡ್ತಾ ಹೋಗೋಣ. ಹೌದು ಮಹಿಳೆಯರಿಗೆ 2000 ರೂಪಾಯಿ ಸಹಾಯಧನ ನೀಡುವ ಸಲುವಾಗಿ ಆರಂಭಿಸಿರುವ ಗೃಹಲಕ್ಷ್ಮಿ ಯೋಜನೆ ಕೆಲವೊಂದಿಷ್ಟು ಜನರಿಗೆ ತಾಂತ್ರಿಕ ಸಮಸ್ಯೆಯಿಂದ ಇನ್ನೂ ಸಂದಾಯವಾಗಿಲ್ಲ. ಇದರ ಮಧ್ಯೆ ಕೆಲವರಿಗೆ ಸಿಕ್ಕಿರುವ ಯೋಜನೆಯನ್ನು ಕಡಿತಗೊಳಿಸಲು ಸರ್ಕಾರವೇ ನಿರ್ಧರಿಸಿದೆ. ಹೌದು ಈಗಾಗಲೇ ತೆರಿಗೆ ಪಾವತಿ ಮಾಡುತ್ತಿರುವವರ ಮಹಿಳೆ, ಪತ್ನಿಯರಿಗೆ ಗೃಹಲಕ್ಷ್ಮಿ ಯೋಜನೆ ಅನ್ವಯಿಸಲ್ಲ ಎಂದು ಸರ್ಕಾರ ನಿರ್ಬಂಧ ಏರಿತ್ತು. ಆದರೂ ನಿಯಮ ಮೀರಿ ಲಕ್ಷಾಂತರ ಮಂದಿ ಅರ್ಜಿಸಲ್ಲಿಸಿದ್ದಾರೆ. ಇದೀಗ ಅಂತಹವರಿಗೆ ಸರ್ಕಾರ ಶಾಕ್ ಕೊಟ್ಟಿದೆ. ತೆರಿಗೆ ಪಾವತಿ ಮಾಡುವ ಮಹಿಳೆಯರು, ತೆರಿಗೆ ಪಾವತಿಸುವ ವ್ಯಕ್ತಿಗಳ ಪತ್ನಿಯರಿಂದ ಸುಮಾರು 50 ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿದೆ ಎನ್ನಲಾಗಿದೆ. 

ಸದ್ಯ ಈ ಎಲ್ಲಾ ಅರ್ಜಿಗಳನ್ನು ಸರ್ಕಾರ ತಿರಸ್ಕಾರ ಮಾಡಿದೆ. ಇನ್ನು ತೆರಿಗೆ ಪಾವತಿ ಜೊತೆಗೆ ಎಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳ ಅರ್ಜಿಗಳನ್ನು ತಿರಸ್ಕೃತಗೊಳಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಧಾರ ಮಾಡಿದೆ. ಸ್ವತಃ ಆದಾಯ ಮತ್ತು ತೆರಿಗೆ ಕಟ್ಟಿರುವ ಮಹಿಳೆಯರ ಅರ್ಜಿಗಳೂ ಕೂಡ ತಿರಸ್ಕೃತಗೊಂಡಿವೆ. ಅರ್ಜಿಗಳನ್ನ ಪರಿಶೀಲನೆ ಮಾಡಿದ ನಂತರ ಈ ವಿಚಾರ ಬೆಳಕಿಗೆ ಬಂದಿದೆ. ಪತಿಯ ಆದಾಯವು 7 ಲಕ್ಷಕ್ಕೂ ಅಧಿಕವಿದ್ದು ವಾರ್ಷಿಕ ತೆರಿಗೆ ಪಾವತಿಸುತ್ತಿದ್ದು, ಬ್ಯಾಂಕ್‌ ಖಾತೆ ಸಂಖ್ಯೆ ಹಾಗೂ ಪ್ಯಾನ್ ಕಾರ್ಡ್‌ನಲ್ಲಿ ಪರಿಶೀಲನೆ ನಡೆಸಿದಾಗ ತೆರಿಗೆ ಪಾವತಿ ಮಾಡುತ್ತಿರುವುದು ಗಮನಕ್ಕೆ ಬಂದ ಕೂಡಲೇ ಆ ಫಲಾನುಭವಿಗಳನ್ನ ಗೃಹಲಕ್ಷ್ಮಿ ಯೋಜನೆಯಿಂದ ಹೊರಗಿಡಲಾಗುತ್ತಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಗೃಹಲಕ್ಷ್ಮಿಯ ಹಣ ಇನ್ಮುಂದೆ ಬರಲ್ಲ

ಹೌದು ಯೋಜನೆಗೆ ಅರ್ಜಿ ಸಲ್ಲಿಸುವಾಗಲೇ ಸರ್ಕಾರ ಕೆಲವೊಂದಷ್ಟು ಕಂಡೀಷನ್ ಗಳನ್ನ ವಿಧಿಸಿತ್ತು. ಮಹಿಳೆಯರು ಅವರ ಪತಿ ತೆರಿಗೆ ಪಾವತಿಸುತ್ತಿದ್ದರೆ ಗೃಹಲಕ್ಷ್ಮೀ ಯೋಜನೆಯಡಿ ತಿಂಗಳಿಗೆ 2,000 ರೂ.ಗೆ ಪರಿಗಣಿಸಲಾಗುವುದಿಲ್ಲ ಎಂದು ಸರ್ಕಾರ ಈ ಹಿಂದೆ ನಿರ್ದಿಷ್ಟಪಡಿಸಿದೆ. ಅಲ್ದೇ ಯಜಮಾನಿಯ ಮಕ್ಕಳು ತೆರಿಗೆ ಪಾವತಿಸಿದರೆ ಆ ಕುಟುಂಬಕ್ಕೆ ಗೃಹಲಕ್ಷ್ಮೀ ಯೋಜನೆ(Gruhalakshmi Scheme) ಅನ್ವಯವಾಗುವುದಿಲ್ಲ. ಪತಿ, ಪತ್ನಿ ಇಬ್ಬರಲ್ಲಿ ಒಬ್ಬರು ತೆರಿಗೆ ಪಾವತಿಸಿದರೆ ಯೋಜನೆ ಅನ್ವಯಿಸಲ್ಲ ಅಂತ ಈ ಸಂಬಂಧ ಈಗಾಗಲೇ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಗಂಡಂದರು ತೆರಿಗೆ ಅಥವಾ ಜಿಎಸ್ ಟಿ ರಿಟರ್ನ್ಸ್ ಪಾವತಿದಾರರಾಗಿದ್ದರೆ ಅವರಿಗೆ ಗೃಹಲಕ್ಷ್ಮೀ ಯೋಜನೆಯಡಿ ನೀಡಲಾಗುವ ಮಾಸಿಕ 2 ಸಾವಿರ ರೂ. ಭತ್ಯೆಯನ್ನು ನೀಡದಿರುವ ಷರತ್ತನ್ನು ರಾಜ್ಯ ಸರ್ಕಾರ ಹೇರಿತ್ತು.

ಅಲ್ದೇ ಯಾವುದೇ ಗೃಹಿಣಿಯ ಮಕ್ಕಳು ತೆರಿಗೆದಾರರಾಗಿದ್ದರೆ ಅಥವಾ ಜಿಎಸ್ ಟಿ ರಿಟರ್ನ್ಸ್ ಸಲ್ಲಿಸುವವರಾಗಿದ್ದರೆ ಅಂಥ ತಾಯಂದಿರಿಗೆ ಮಾಸಿಕವಾಗಿ 2 ಸಾವಿರ ರೂಪಾಯಿ ನೀಡುವ ಯೋಜನೆ ಅನ್ವಯ ಮಾಡದಿರಲು ನಿರ್ಧರಿಸಲಾಗಿತ್ತು. ಆದರೂ ಕೆಲವೊಬ್ಬರು ಇಲ್ಲ ಸೌಲಭ್ಯಗಳಿದ್ರು ಯೋಜನೆಗೆ ಅರ್ಜಿ ಸಲ್ಲಿಸಿದ್ರೂ ಇದೀಗ ಇದೆಲ್ಲವನ್ನ ಪರಿಶೀಲನೆ ಮಾಡುವ ಸರ್ಕಾರ ಅಂತವರನ್ನ ಯೋಜನೆಯಿಂದ ಹೊರಗಿದಳು ನಿರ್ಧರಿಸಿದೆ. ಹೀಗಾಗಿ ಇನ್ಮುಂದೆ ತೆರಿಗೆ ಪಾವತಿ ಮಾಡುವ ಕುಟುಂಬದ ಮಹಿಳೆಗೆ 2ಸಾವಿರ ಹಣ ಬರೋದಿಲ್ಲ.

ಇದನ್ನೂ ಓದಿ: ಪದವಿಯಲ್ಲಿ ಓದುತ್ತಿರುವವರಿಗೆ ಸಿಹಿ ಸುದ್ದಿ, U-go ಸ್ಕಾಲರ್ಶಿಪ್ ಅಡಿಯಲ್ಲಿ 40,000 ದಿಂದ 60,000 ವರೆಗೆ ವಾರ್ಷಿಕ ವೇತನವನ್ನು ಪಡೆಯಿರಿ.

ಇದನ್ನೂ ಓದಿ: ಅನ್ನದಾತ ರೈತನಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ; 3ಲಕ್ಷದವರೆಗೆ ಅನ್ನದಾತನಿಗೆ ಸಿಗಲಿದೆ ಸಾಲ ಸೌಲಭ್ಯ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram