ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ 2ತಿಂಗಳು ಮುಗಿದಿದ್ರು ಇನ್ನು ಸಾಕಷ್ಟು ಮಂದಿಗೆ ಯೋಜನೆಯ ಲಾಭ ಅನ್ನೋದೇ ಸಿಕ್ಕಿಲ್ಲ. ಹೌದು ಅರ್ಜಿ ಹಾಕಿದರೂ ಕೂಡ ಗೃಹಲಕ್ಷ್ಮೀ ಯೋಜನೆಯ ಹಣ ಕೆಲವರಿಗೆ ಇನ್ನು ಬಂದಿಲ್ಲ. ಯೋಜನೆಗೆ ಚಾಲನೆ ಕೊಟ್ಟು ಎರಡು ತಿಂಗಳಾಗುತ್ತಾ ಬಂತು. ನಮ್ಮ ಪಕ್ಕದ ಮನೆಯವರಿಗೆ ಬಂದಿದೆ, ನಮಗಿನ್ನೂ ಹಣ ಬಂದಿಲ್ಲ ಅಂತ ಸಾಕಷ್ಟು ಜನ ಯೋಚನೆ ಮಾಡ್ತಿದ್ದಾರೆ. ಹಾಗಾದ್ರೆ ಹಣ ಬಂದಿಲ್ಲ ಅಂದ್ರೆ ಏನು ಮಾಡಬೇಕು? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ. ಹೌದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದುವರೆಗೂ ಎಷ್ಟು ಅರ್ಹ ಫಲಾನುಭವಿಗಳಿಗೆ ಹಣ ಸಂದಾಯ ಮಾಡಿದೆ. ಅರ್ಜಿ ಹಾಕಿದ ಎಲ್ಲರಿಗೂ ಹಣ ಬಂದಿದೆಯಾ? ಮೊದಲ ಕಂತು ಹಣ ಬಂದಿದ್ದು ಎರಡನೇ ಕಂತಿನ ಹಣ ಯಾವಾಗ ಬರುತ್ತೆ. ಮೊದಲ ಕಂತಿನ ಹಣವೇ ಬಂದಿಲ್ಲ, ಹೀಗಾಗಿ ಅದು ಕೂಡ ಎರಡನೇ ಕಂತಿನ ಹಣದೊಂದಿಗೆ ಒಟ್ಟಿಗೆ ಬರುತ್ತಾ ಅನ್ನೋ ಪ್ರಶ್ನೆಗಳು ಸಮಾನ್ಯವಾಗಿ ಎಲ್ಲರನ್ನು ಕಾಡ್ತಿವೆ. ಹೌದು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಅನ್ನಭಾಗ್ಯ ಹೊರತು ಪಡಿಸಿದರೆ ಗೃಹಲಕ್ಷ್ಮೀ ಯೋಜನೆ ಬಹಳ ಸೌಂಡ್ ಮಾಡಿತ್ತು ಅಷ್ಟೇ ಪ್ರಮುಖ ಅನ್ನಿಸಿಕೊಂಡಿತ್ತು.
ಈಗಾಗ್ಲೇ ಈ ಯೋಜನೆಗೆ ಸುಮಾರು ಒಂದು ಕೋಟಿ 20 ಲಕ್ಷ ಜನರು ಅರ್ಹರಾಗುತ್ತಾರೆ ಅಂತ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದರು ಆದರೆ ಇದುವರೆಗೂ ಅರ್ಜಿಯನ್ನು ಹಾಕಿರುವವರ ಸಂಖ್ಯೆಯನ್ನು ನೋಡುವುದಾದರೆ ಸುಮಾರು ಒಂದು ಕೋಟಿ 15 ಲಕ್ಷ ಜನರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇನ್ನೂ 13 ಲಕ್ಷದಷ್ಟು ಜನರ ಅರ್ಜಿಯನ್ನೇ ಸಲ್ಲಿಕೆ ಮಾಡಿಲ್ಲಾ… ಆಗಸ್ಟ್ 30ರ ವೇಳೆಗೆ ಯೋಜನೆಗೆ ಸುಮಾರು ಒಂದು ಕೋಟಿ 10 ಲಕ್ಷ ಜನರು ಅರ್ಜಿ ಸಲ್ಲಿಕೆ ಮಾಡಿದ್ದರು. ಆಗಸ್ಟ್ 30 ವೇಳೆಗೆ ಅರ್ಜಿ ಸಲ್ಲಿಕೆ ಮಾಡಿದ್ದ ಒಂದು ಕೋಟಿ 10 ಲಕ್ಷ ಜನರಿಗೆ ಹಣ ಸಂದಾಯ ಮಾಡಲು ಸರ್ಕಾರ ನಿರ್ಧಾರ ಮಾಡಿತ್ತು. ಇದರಂತೆ ಇಲ್ಲಿವರೆಗೂ 92 ಲಕ್ಷ ಅರ್ಹ ಫಲಾನುಭವಿಗಳಿಗೆ ಯೋಜನೆ ಮೂಲಕ ಹಣ ತಲುಪಿದೆ.
ಇನ್ನೂ 18 ಲಕ್ಷದಷ್ಟು ಮನೆಯೊಡತಿಯರಿಗೆ ಇನ್ನೂ ಹಣ ಬಂದಿಲ್ಲ. 18 ಲಕ್ಷ ಅರ್ಜಿಗಳಲ್ಲಿ ಆಗಸ್ಟ್ ತಿಂಗಳಿನಲ್ಲಿ ಅರ್ಜಿ ಸಲ್ಲಿಕೆ ಮಾಡಿದವರು 8-9 ಲಕ್ಷ ಮಂದಿಗೆ ಅಗಸ್ಟ್ ತಿಂಗಳ ಹಣ ಸಂದಾಯ ಆಗಿಲ್ಲಾ. ಈ ಹಣ ಈ ತಿಂಗಳು ಕೂಡ ಜಮೆ ಆಗುವುದು ಅಷ್ಟಕ್ಕೇ ಅಷ್ಟೇ ಅಂತ ಹೇಳಲಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಏನಾಪ್ಪ ಅಂದ್ರೆ, ನೀವು ಅರ್ಜಿ ಸಲ್ಲಿಕೆ ಮಾಡುವಾಗ ನೀಡಿರುವ ಮಾಹಿತಿ, ಬ್ಯಾಂಕ್ ಖಾತೆ ಮಾಹಿತಿ ಹಾಗೂ ಆಧಾರ್ ಕಾರ್ಡ್ನಲ್ಲಿರುವ ಮಾಹಿತಿ. ಈ ಮೂರು ಕೂಡ ಒಂದೇ ಆಗಿರಬೇಕು. ಅಂದರೇ ನಿಮ್ಮ ಹೆಸರು, ಮನೆ ವಿಳಾಸ, ನಿಮ್ಮ ಹೆಸರಿಗೆ ಇನ್ಶಿಲ್ ಇದ್ದರೆ ಅದು ಕೂಡ ಸರಿಯಾಗಿ ಇರಬೇಕು. ಈ ಸಮಸ್ಯೆ ಇರುವ ಕಾರಣದಿಂದಲೇ ಇನ್ನೂ 8-9 ಲಕ್ಷ ಮಂದಿಗೆ ಹಣ ವರ್ಗಾವಣೆ ಆಗಿಲ್ಲ ಅಂತ ಇಲಾಖೆ ಮಾಹಿತಿಯನ್ನಾ ಸ್ಪಷ್ಟವಾಗಿ ನೀಡಿದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಫಲಾನುಭವಿಗಳಿಗಿದೆ ಮತ್ತೊಂದು ಗುಡ್ ನ್ಯೂಸ್!
ಹೌದು ಸುಮಾರು 6 ಲಕ್ಷ ಮಂದಿಗೆ ಬ್ಯಾಂಕ್ ಖಾತೆಯಲ್ಲಿರುವ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆ ಮಾಡುವ ವೇಳೆ ಇರುವ ಮಾಹಿತಿಯಲ್ಲಿ ಸಮಸ್ಯೆ ಇದೆಯಂತೆ. ಉದಾಹರಣೆ ಮನೆಯೊಡತಿಯ ಹೆಸರಿನಲ್ಲಿ 3-4 ಬ್ಯಾಂಕ್ ಖಾತೆಗಳಿರುತ್ತೆ. ಇದರಲ್ಲಿ ನಿಮ್ಮ ಆಧಾರ್ ಕಾರ್ಡ್ಗೆ ಯಾವ ಬ್ಯಾಂಕ್ ಲಿಂಕ್ ಆಗಿದೆ ಅಂತ ನೀವು ಚೆಕ್ ಮಾಡಿಕೊಳ್ಳಬೇಕು. ಬ್ಯಾಂಕ್ಗೆ ಭೇಟಿ ನೀಡಿ ನೀವು ಈ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಅಲ್ಲಿಯೂ ಮಾಹಿತಿ ಸಿಕ್ಕಿಲ್ಲ ಎಂದರೇ, ಮಹಿಳಾ ಮತ್ತು ಮಕ್ಕಳ ಇಲಾಖೆಯ ತಾಲೂಕು ಮಟ್ಟದ ಸಿಡಿಪಿಓ ಅಧಿಕಾರಿಯನ್ನು ಭೇಟಿ ಮಾಡಿ ಇದರ ಬಗ್ಗೆ ಸ್ಪಷ್ಟ ಮಾಹಿತಿಯನ್ನ ಪಡೆದುಕೊಳ್ಳಬಹುದು.
ಇನ್ನೂ ಈಕೆವೈಸಿ ಆಗಿರದ ಕಾರಣ 60 ಸಾವಿರ ಮಂದಿಗೆ ಹಣ ಹಾಕಲು ಸರ್ಕಾರ ಸಿದ್ಧವಾಗಿದ್ದರೂ ಹಣ ಹಾಕಲು ಸಾಧ್ಯವಾಗುತ್ತಿಲ್ಲಾ. ಆದ್ದರಿಂದ ನೀವು ಅಂಗನವಾಡಿ ಕಾರ್ಯಕರ್ತೆಯರ ಸಂಪರ್ಕ ಮಾಡಿ ಅವರ ನೆರವು ಪಡೆದುಕೊಳ್ಳಬೇಕು. ಯಾಕಂದ್ರೆ ಈ ಕಾರಣದಿಂದಾಗಿ ಸುಮಾರು ಮಂದಿಗೆ ಹಣ ವರ್ಗಾವಣೆ ಆಗಿಲ್ಲಾ.. ನಾವು ತಿಳಿಸಿದ ಈ ಎಲ್ಲಾ ಕಾರಣಗಳಿಂದ ಒಟ್ಟಾರೆ ಸುಮಾರು 9 ಲಕ್ಷ ಮಂದಿಗೆ ಹಣ ವರ್ಗಾವಣೆ ಆಗಿಲ್ಲಾ. ಸಿಡಿಪಿಓ ಅಧಿಕಾರಿಯನ್ನು ಭೇಟಿ ಮಾಡಿದ ವೇಳೆ ಅವರು ನಿಮ್ಮ ಖಾತೆಗೆ ಹಣ ಯಾಕೆ ಬಂದಿಲ್ಲ ಎಂದು ಚೆಕ್ ಮಾಡಿ ತಿಳಿಸುತ್ತಾರೆ. ಇದಕ್ಕೆ ಸಂಬಂಧಪಟ್ಟ ದಾಖಲೆ ಸಲ್ಲಿಕೆ ಮಾಡಿದರೆ ಸಮಸ್ಯೆ ಬಗೆ ಹರಿಯೋದರ ಜೊತೆಗೆ ನಿಮ್ಮ ಖಾತೆಗೆ ಯೋಜನೆಯ ಹಣ ಸಂದಾಯವಾಗುತ್ತೆ.
ಈ ತಾರೀಕಿನ ಒಳಗೆ ಎರಡನೇ ಕಂತಿನ ಹಣ ಜಮೆ ಆಗುತ್ತೆ?
ಇನ್ನು ಎರಡನೇ ಕಂತಿನ ಹಣ ಯಾವಾಗ ಅಂತ ಹಲವು ಮಂದಿ ಕಾಯುತ್ತಿದ್ದಾರೆ. ಇದರಲ್ಲಿ ನೀವು ಒಂದು ವಿಷಯವನ್ನ ಗಮನದಲ್ಲಿಟ್ಟುಕೊಳ್ಳಬೇಕು, ಮೊದಲಿಗೆ ನೀವು ಯಾವಾಗ ಅರ್ಜಿ ಸಲ್ಲಿಕೆ ಮಾಡುತ್ತೀರಿ ಆ ತಿಂಗಳಿನಿಂದ ಮಾತ್ರ ಹಣ ಸಂದಾಯ ಆಗುತ್ತೆ. ಆಗಸ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡದೆ ಸೆಪ್ಟೆಂಬರ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರೆ ಆ ತಿಂಗಳಿನಿಂದ ಮಾತ್ರ ಹಣ ಬರುತ್ತದೆ. ಆಗಸ್ಟ್ ತಿಂಗಳಿನಲ್ಲಿ ಅರ್ಜಿ ಸಲ್ಲಿಕೆ ಮಾಡಿ ಇನ್ನೂ ಹಣ ಬಂದಿಲ್ಲ ಎಂದಾದರೆ ಎರಡು ತಿಂಗಳ ಹಣ ಒಟ್ಟಿಗೆ ಕೊಡ್ತೀವಿ ಅಂತ ಸಚಿವೆ ಲಕ್ಷ್ಮೀ ಹೆಬಾಳ್ಕರ್ ಅವ್ರೆ ತಿಳಿಸಿದ್ದಾರೆ. ಇನ್ನು ರೇಷನ್ ಕಾರ್ಡ್ನಲ್ಲಿ ತಿದ್ದುಪಡಿ ಮಾಡಿಕೊಂಡು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿರುವವರಿಗೆ ಇನ್ನು ಹಣ ಬರೋದು 2-3 ತಿಂಗಳು ತಡವಾಗುತ್ತದೆ ಎಂದು ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮನೆ ಯಜಮಾನ ಹೆಸರು ಬದಲಾವಣೆ ಮಾಡಿದರೆ ಆ ಮಾಹಿತಿ ಇಲಾಖೆಯ ವೆಬ್ಸೈಟ್, ಆಯಾ ಇಲಾಖೆಯ ದತ್ತಾಂಶ, ಕುಟುಂಬ ತಂತ್ರಾಂಶ ಮತ್ತು ಇಗವರ್ನೆಸ್ನಲ್ಲೂ ಮಾಹಿತಿ ಆಪ್ಡೇಟ್ ಆಗಬೇಕು. ಈ ಪ್ರಕ್ರಿಯೆ ನಡೆಯಲು 2-3 ತಿಂಗಳು ಆಗೋದರಿಂದ ಕೆಲ ಸಮಯ ಕಾಯಬೇಕಾಗುತ್ತದೆ. ಇನ್ನು ಎರಡನೇ ಕಂತಿನ ಹಣ ಅಕ್ಟೋಬರ್ 10ರಿಂದ ಖಾತೆಗೆ ಜಮವಣೆ ಆಗೋ ಪ್ರಕ್ರಿಯೆ ಶುರು ಆಗುವ ನಿರೀಕ್ಷೆ ಇದೆ. ಅಕ್ಟೋಬರ್ 20ರ ವೇಳೆಗೆ ಎಲ್ಲರ ಖಾತೆಗೆ ಹಣ ಸಂದಾಯ ಆಗುವ ನಿರೀಕ್ಷೆ ಇದೆ ಅಂತ ಹೇಳಲಾಗುತ್ತಿದೆ. ಪ್ರಮುಖವಾಗಿ ಆದಾಯ ತೆರಿಗೆ ಪಾವತಿ ಮಾಡುವ ಮಹಿಳೆಯರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂತಿಲ್ಲ. ಜೊತೆಗೆ ಅರ್ಜಿ ಸಲ್ಲಿಸುವ ಮಹಿಳೆಯರ ಪತಿ ಆದಾಯ ತೆರಿಗೆ ಅಥವಾ ಜಿಎಸ್‌ಟಿ ಪಾವತಿದಾರರು ಆಗಿದ್ದರೆ, ಈ ಯೋಜನೆಯ ಲಾಭ ಸಿಗೋದಿಲ್ಲ ಅಂತ ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ನೀನು ತಮಿಳಿನವನು ಗೆಟ್ ಔಟ್ ಅಂದ್ರು; ನನ್ನ ಸಿನಿಮಾ ಬಗ್ಗೆ ನಂಗೆ ಮಾತನಾಡಲು ಬಿಡಲಿಲ್ಲ ಅಂತ ಕಣ್ಣೀರಿಟ್ಟ ನಟ
ಇದನ್ನೂ ಓದಿ: ನೀನೇ ಮೊದಲು ಎರಡನೆಯವನಲ್ಲ ಅಂದ್ರು ಅಭಿಷೇಕ್ ಪತ್ನಿ; ಫೋಟೋಗಳನ್ನ ಹಂಚಿಕೊಂಡು ಹುಟ್ಟುಹಬ್ಬದ ಶುಭಾಶಯಗಳು ಎಂದ ಅವಿವಾ
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp