ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ರಾಜ್ಯ ಸರ್ಕಾರದಿಂದ ರಾಜ್ಯದ ಎಲ್ಲಾ ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡುವ ಒಂದು ಯೋಜನೆಯಾಗಿದೆ. ಈ ಯೋಜನೆಡಿ, ರಾಜ್ಯದ ಪ್ರತಿ ಮನೆಯ ಯಜಮಾನಿಯ ಖಾತೆಗೆ 2,000 ರೂಪಾಯಿ ರಾಜ್ಯ ಸರ್ಕಾರವು ಜಮಾ ಮಾಡುತ್ತದೆ. ಈಗಾಗಲೇ 6 ಕಂತಿನ ಹಣವೂ ಜಮಾ ಆಗಿದ್ದು ಈಗ 7 ನೇ ಕಂತಿನ ಹಣವೂ ಈ ತಿಂಗಳ ಕೊನೆಯ ವಾರದ ಒಳಗೆ ಎಲ್ಲರಿಗೂ ಜಮಾ ಮಾಡುವುದಾಗಿ ರಾಜ್ಯ ಸರ್ಕಾರವು ತಿಳಿಸಿದೆ. ಆದರೆ ಏಷ್ಟು ಸಲ ಅರ್ಜಿ ಹಾಕಿದರು ಸಹ ಗೃಹ ಲಕ್ಷ್ಮಿ ಯೋಜನೆಯ ಹಣವೂ ಬಾರದೆ ಇದ್ದರೆ ನೀವು ಈಗಲೇ ಈ ಕೆಲಸವನ್ನು ಮಾಡಿ.
ಗೃಹ ಲಕ್ಷ್ಮೀ ಯೋಜನೆಯ ಹಣ ಬಾರದೆ ಇದ್ದರೆ ಏನು ಮಾಡಬೇಕು?
1) ಮರು ಅರ್ಜಿ ಸಲ್ಲಿಸಿ:- ಗೃಹ ಲಕ್ಷ್ಮಿ ಯೋಜನೆಯ ಹಣವೂ ಬಾರದೆ ಇರುವವರಿಗೆ ಮತ್ತೆ ಅರ್ಜಿ ಸಲ್ಲಿಸಲು ಇಲಾಖೆಯು ತಿಳಿಸಿದೆ. ಮತ್ತೆ ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗು ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಗ್ರಾಮ್ ಒನ್ ಸೇವಾ ಕೇಂದ್ರ ಅಥವಾ ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸಬಹುದು. ನೀವು ಅರ್ಜಿಯನ್ನು ಸಲ್ಲಿಸುವಾಗ ನಿಮ್ಮ ಎಲ್ಲಾ ದಾಖಲೆಗಳನ್ನು ತಪ್ಪಿಲ್ಲದಂತೆ ಸಲ್ಲಿಸಬೇಕು.
2) ಎನ್‌ಪಿಸಿ ಮ್ಯಾಪಿಂಗ್ ಮಾಡಿಸಬೇಕು:- ನಿಮ್ಮ ಆಧಾರ್ ಕಾರ್ಡ್ ಮತ್ತು ನಿಮ್ಮ ಬ್ಯಾಂಕ್ ಪಾಸ್ ಬುಕ್ ತೆಗೆದುಕೊಂಡು ನಿಮ್ಮ ಬ್ಯಾಂಕ್ ಗೆ ಹೋಗಿ ಎನ್‌ಪಿಸಿ ಮ್ಯಾಪಿಂಗ್ ಮಾಡಿಸಬೇಕು.
3) ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್: – ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಜೋಡಣೆ ಆಗಿದೆಯೇ ಇಲ್ಲವೇ ಎಂಬುದನ್ನು ಒಮ್ಮೆ ಪರಿಶೀಲಿಸಿ. ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದರೂ ಸಹ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ.
4) ನೀವು ಸಲ್ಲಿಸಿರುವ ಮಾಹಿತಿ ತಪ್ಪಾಗಿದೆಯೆ ಎಂದು ಪರಿಶೀಲಿಸಿ :- ಯೋಜನೆಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ಹೆಸರು ವಿಳಾಸ ಅಥವಾ ಮೊಬೈಲ್ ಸಂಖ್ಯೆ ಮಾಹಿತಿ ತಪ್ಪಾಗಿದ್ದರೆ ನಿಮ್ಮ ಅರ್ಜಿಯನ್ನು ತಿರಸ್ಕಾರ ಮಾಡಲಾಗುತ್ತದೆ. ಅದರಿಂದ ನೀವು ಅರ್ಜಿಯನ್ನು ಸಲ್ಲಿಸುವಾಗ ಎಲ್ಲಾ ಮಾಹಿತಿಯನ್ನು ಎರಡು ಮೂರು ಬಾರಿ check ಮಾಡಿ ಅರ್ಜಿ ಸಲ್ಲಿಸಿ. ಹೇಗೆ ನಿಮ್ಮ ಹೆಸರು ರೇಷನ್ ಕಾರ್ಡ್ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ನಲ್ಲಿ ಒಂದೇ ರೀತಿ ಇದೆಯೇ ಎಂದು ಪರಿಶೀಲನೆ ಮಾಡಿ. ನಿಮ್ಮ ಹೆಸರು ಮತ್ತು ವಿಳಾಸಗಳು ಒಂದೊಂದು ದಾಖಲೆಯಲ್ಲಿ ಒಂದೊಂದು ರೀತಿ ಇದ್ದರೂ ನಿಮ್ಮ ಅರ್ಜಿ ತಿರಸ್ಕಾರ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಹಿಳಾ ದಿನಾಚರಣೆ ಪ್ರಯುಕ್ತ LPG ಸಿಲಿಂಡರ್ ದರ ಇಳಿಕೆ ಮಾಡಿದ ಕೇಂದ್ರ ಸರ್ಕಾರ
ಗೃಹ ಲಕ್ಷ್ಮಿ ಯೋಜನೆ 6 ಕಂತಿನ ಹಣ ಒಮ್ಮೆಲೆ ಜಮಾ!
ಕೆಲವು ತಾಂತ್ರಿಕ ಸಮಸ್ಯೆಗಳು ಮತ್ತು ಸರಿಯಾದ ಮಾಹಿತಿಯ ಕೊರತೆಯಿಂದಾಗಿ ಜಮಾ ಆಗದಿದ್ದ ಹಣ ಈಗ ಒಮ್ಮೆಲೆ ವರ್ಗಾವಣೆಯಾಗಿದೆ. ಜನವರಿ ಕೊನೆಯ ವಾರದಲ್ಲಿ ಕೆಲವು ಮಹಿಳೆಯರಿಗೆ ಹಣ ಜಮಾ ಆಗಿದ್ದು, ಉಳಿದವರಿಗೆ ಮಾರ್ಚ್ ತಿಂಗಳೊಳಗೆ ₹10,000 ಒಂದೇ ಬಾರಿಗೆ ಜಮಾ ಆಗಲಿದೆ. ಮಾರ್ಚ್ ತಿಂಗಳ ಕೊನೆಯವರೆಗೂ ನಿಮ್ಮ ಖಾತೆಗೆ ಗೃಹ ಲಕ್ಷ್ಮಿ ಯೋಜನೆ ಹಣ ಜಮಾ ಆಗದಿದ್ದರೆ, ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಇಲಾಖೆಯ ಅಧಿಕೃತ ವೆಬ್ ಸೈಟ್‌ಗೆ ಭೇಟಿ ನೀಡಿ ದೂರು ಸಲ್ಲಿಸಿ.
ಇದನ್ನೂ ಓದಿ: ಉಜ್ವಲ ಫಲಾನುಭವಿಗಳಿಗೆ 300 ರೂ ಸಬ್ಸಿಡಿ ಹಾಗೂ ಯೋಜನೆಯನ್ನು 2025 ರ ವರೆಗೆ ವಿಸ್ತರಿಸಿದ ಕೇಂದ್ರ ಸರ್ಕಾರ